'ಕಾಟೇರ' ಓಟಿಟಿ ರೆಸ್ಪಾನ್ಸ್; ಛೇ ಥಿಯೇಟರ್‌ನಲ್ಲಿ ಮಿಸ್ ಮಾಡ್ಕೊಂಡೆ, ಸ್ಮಾಲ್ ಸ್ಕ್ರೀನ್‌ನಲ್ಲೂ ಗೂಸ್‌ಬಂಪ್ಸ್
ತರುಣ್ ಸುಧೀರ್ ನಿರ್ದೇಶನದ 'ಕಾಟೇರ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿದ್ದು ಗೊತ್ತೇಯಿದೆ. ಇದೀಗ ಓಟಿಟಿಗೆ ಬಂದು ಮತ್ತೆ ಸುದ್ದಿಯಲ್ಲಿದೆ. ಈಗಾಗಲೇ ಥಿಯೇಟರ್‌ಗಳಲ್ಲಿ ಸಿನಿಮಾ ನೋಡಿದವರು, ನೋಡದವರು ಓಟಿಟಿಯಲ್ಲಿ ನೋಡಿ ಮೆಚ್ಚಿಕೊಳ್ಳುತ್ತಿದ್ದಾರೆ. ಕೆಲವರು ಛೇ 'ಕಾಟೇರ'ನನ್ನು ಥಿಯೇಟರ್‌ನಲ್ಲೇ ನೋಡಬೇಕಿತ್ತು ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಡಿಸೆಂಬರ್ 29ಕ್ಕೆ ಬಿಡುಗಡೆಯಾಗಿದ್ದ 'ಕಾಟೇರ' ಸಿನಿಮಾ 50 ದಿನ ಪೂರೈಸುವ ಮುನ್ನ ಓಟಿಟಿಗೆ ಬಂದಿದೆ. ಜೀ5ನಲ್ಲಿ ಸ್ಟ್ರೀಮಿಂಗ್ ಆಗುತ್ತಿದ್ದು ಟ್ರೆಂಡಿಂಗ್‌ನಲ್ಲಿ ಸದ್ದು ಮಾಡುತ್ತಿದೆ. ದರ್ಶನ್ ಅಭಿಮಾನಿಗಳಂತೂ ಮತ್ತೆ ಸಿನಿಮಾ ನೋಡಿ ಎಂಜಾಯ್ ಮಾಡುತ್ತಿದ್ದಾರೆ. ಚಿತ್ರದಲ್ಲಿ ತಮಗಿಷ್ಟವಾದ ಸನ್ನಿವೇಶ, ಡೈಲಾಗ್ಸ್, ದರ್ಶನ್ ಪರ್ಫಾರ್ಮೆನ್ಸ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ವಿಡಿಯೋಗಳನ್ನು ಶೇರ್ ಮಾಡುತ್ತಿದ್ದಾರೆ.

ಟ್ವಿಟ್ಟರ್‌ನಲ್ಲಿ ನೆಟ್ಟಿಗರು ಸಿನಿಮಾ ನೋಡಿ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಬಹಳ ದೊಡ್ಡಮಟ್ಟದಲ್ಲಿ ಚರ್ಚೆ ಹುಟ್ಟು ಹಾಕಿದ ಕನ್ನಡ ಸಿನಿಮಾ 'ಕಾಟೇರ'. ಹಾಗಾಗಿ ಇತರೆ ನಟರ ಅಭಿಮಾನಿಗಳು ಓಟಿಟಿಯಲ್ಲಿ ಸಿನಿಮಾ ನೋಡುತ್ತಿದ್ದಾರೆ. ಪರಭಾಷಿಕರು ಇಷ್ಟೆಲ್ಲಾ ಸದ್ದು ಮಾಡಿದ ಕನ್ನಡ ಸಿನಿಮಾದಲ್ಲಿ ಅಂತಾದ್ದೇನಿದೆ ಎಂದು ಸಿನಿಮಾ ವೀಕ್ಷಿಸುತ್ತಿದ್ದಾರೆ. ಇನ್ನು ಓಟಿಟಿ ಸ್ಟ್ರೀಮಿಂಗ್‌ಗಾಗಿ ಕಾಯುತ್ತಿದ್ದವರು ಸಹ ಈಗ ಸಿನಿಮಾ ನೋಡಿ ಟ್ವೀಟ್ ಮಾಡುತ್ತಿದ್ದಾರೆ. ಓಟಿಟಿಯಲ್ಲಿ ಸಿನಿಮಾ ವೀಕ್ಷಿಸಿದವರ ಅಭಿಪ್ರಾಯಗಳು ಮುಂದೆ ಓದಿ.
ಥಿಯೇಟರ್‌ನಲ್ಲಿ ಮಿಸ್ ಮಾಡ್ಕೊಂಡೆ
ಕಳೆದ 10 ವರ್ಷಗಳಲ್ಲಿ ದರ್ಶನ್ ನಟಿಸಿದ ಸಿನಿಮಾಗಳಲ್ಲಿ 'ಕಾಟೇರ' ಒಳ್ಳೆ ಸಿನಿಮಾ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ. ಚಿತ್ರವನ್ನು ಥಿಯೇಟರ್‌ನಲ್ಲಿ ನೋಡದ್ದಕ್ಕೆ ವಿಷಾದವಿದೆ. ಡಿ ಬಾಸ್, ಅಬ್ಬಬ್ಬಾ ನಿಜಕ್ಕೂ ರಾಕ್ಷಸ. ಆಕ್ಷನ್ ಸೀನ್ಸ್ ಇಂಟೆನ್ಸ್ ಆಗಿದೆ. ನನಗೆ ಕನ್ನಡ ಅರ್ಥವಾಗ್ತಿಲ್ಲ. ಆದರೂ ಥಿಯೇಟರ್‌ನಲ್ಲಿ ಸಿನಿಮಾ ನೋಡಬೇಕಿತ್ತು. ಖಂಡಿತ ದರ್ಶನ್ ಮುಂದಿನ ಸಿನಿಮಾ ಥಿಯೇಟರ್‌ನಲ್ಲಿ ನೋಡ್ತೀನಿ. ಆಕ್ಷನ್ ಪ್ಯಾಕ್ಡ್ ಸೀಕ್ವೆನ್ಸ್ ಹಾಗೂ ಕುತೂಹಲಭರಿತ ಸ್ಟೋರಿಲೈನ್ ಸಿನಿಮಾ ನೋಡಲೇಬೇಕು ಎನ್ನುವಂತೆ ಮಾಡುತ್ತದೆ. ತರುಣ್ ನಿರ್ದೇಶನ ಚೆನ್ನಾಗಿದೆ, ಆತನ ಮುಂದಿನ ಸಿನಿಮಾಗಳಿಗೆ ಕಾಯುತ್ತಿದ್ದೇನೆ. 'ರಾಬರ್ಟ್' ಸಹ ಇಷ್ಟವಾಗಿತ್ತು. ಎಂದು ನೆಟ್ಟಿಗರೊಬ್ಬರು ಬರೆದುಕೊಂಡಿದ್ದಾರೆ.
ಸ್ಮಾಲ್ ಸ್ಕ್ರೀನ್‌ನಲ್ಲೂ ಗೂಸ್‌ಬಂಪ್ಸ್
ಥಿಯೇಟರ್‌ನಲ್ಲಿ ಈಗಾಗಲೇ ನೋಡಿದ್ದರೂ ಓಟಿಟಿಯಲ್ಲಿ 'ಕಾಟೇರ' ಸಿನಿಮಾ ಮತ್ತೆ ಇಷ್ಟವಾಯಿತು. ಸ್ಮಾಲ್ ಸ್ಕ್ರೀನ್‌ನಲ್ಲೂ ಅದೇ ಎಮೋಷನ್ ಹಾಗೂ ಗೂಸ್‌ಬಂಪ್ಸ್. ದರ್ಶನ್ ಸರ್ ನಟಿಸಿಲ್ಲ ಪಾತ್ರದಲ್ಲಿ ಜೀವಿಸಿದ್ದಾರೆ. ಅವರನ್ನು ಬಿಟ್ಟು ಮತ್ಯಾರನ್ನು ಈ ಪಾತ್ರದಲ್ಲಿ ಊಹಿಸಿಕೊಳ್ಳಲು ಸಾಧ್ಯವಿಲ್ಲ" ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.

ಎಲಿವೇಷನ್ಸ್ ಸೀನ್ಸ್ ಸೂಪರ್
ದರ್ಶನ್‌ಗೆ ಹೇಳಿ ಮಾಡಿಸಿದ ಸಿನಿಮಾ 'ಕಾಟೇರ'. ಅವರ ಉತ್ತಮ ಸಿನಿಮಾ ಎನ್ನಬಹುದು. ಸಮಾಜದಲ್ಲಿರುವ ಸಾಮಾಜಿಕ ಶ್ರೇಣೀಕರಣ ಮತ್ತು ಅದರ ವಿರುದ್ಧ ಬಲವಾದ ಸಂದೇಶ ಚಿತ್ರದಲ್ಲಿದೆ. ನಾಯಕಿ ಪ್ರಬುದ್ಧವಾಗಿ ಕಾಣಲ್ಲ. ಮೇಕಪ್ ವಿಭಾಗ ಚೆನ್ನಾಗಿಲ್ಲ. ಎಲಿವೇಷನ್ಸ್ ಸೀನ್ಸ್, ಡೈಲಾಗ್ಸ್ ಮತ್ತು ಬಿಜಿಎಂ ಅಭಿಮಾನಿಗಳಿಗೆ ಇಷ್ಟವಾಗುತ್ತದೆ ಎಂದು ಅಕ್ಷಯ್ ಎಂಬುವವರು ಬರೆದುಕೊಂಡಿದ್ದಾರೆ.
ಬಹಳ ಒಳ್ಳೆಯ ಸಿನಿಮಾ
'ಕಾಟೇರ' ರೇಟಿಂಗ್ 3.5. ದರ್ಶನ್‌ಗೆ ಬಹಳ ಉತ್ತಮವಾದ ಸಿನಿಮಾ. ಬಿಜಿಎಂ, ಛಾಯಾಗ್ರಹಣ ಹಾಗೂ ನಿರ್ದೇಶಕ ಅದ್ಭುತ. ಪ್ರೀ ಇಂಟರ್‌ವಲ್ ಸೀನ್ ಚೆನ್ನಾಗಿದೆ. ನಾಯಕಿ ಆಯ್ಕೆ ಸರಿಯಿಲ್ಲ. ಕ್ಲೈಮ್ಯಾಕ್ಸ್ ಇನ್ನು ಚೆನ್ನಾಗಿ ಮಾಡಬಹುದಿತ್ತು ಎನ್ನುವುದು ಮತ್ತೊಬ್ಬ ನೆಟ್ಟಿಗನ ಅಭಿಪ್ರಾಯ.
ಸಂಭಾಷಣೆ ಸೂಪರ್
'ಕಾಟೇರ' ಊಟ ಮಾಡುತ್ತಾ ಅಕ್ಕನ ಜೊತೆ ಮಾತನಾಡುವ ಸನ್ನಿವೇಶ ಹಂಚಿಕೊಂಡು "ಕಲೆ ಎಂದರೆ ಸಮಾಜದ ಪ್ರತಿಬಿಂಬವಿದ್ದಂತೆ. ಜಾತಿಯ ಕ್ರೂರ ಚಕ್ರವ್ಯೂಹದಲ್ಲಿ ಸಿಲುಕಿ ನೊಂದವರ ಜೀವನವನ್ನು ಸಿನಿಮಾ ಮಾಡಿ ಇಡೀ ಜಗತ್ತಿಗೆ ತೋರಿಸಿದ್ದಕ್ಕಾಗಿ ನಿಮಗೆಲ್ಲ ಹೃದಯದ ಧನ್ಯವಾದಗಳು. ಮನಸ್ಸನ್ನು ಅಲುಗಾಡಿಸುವಂತಹ ದೃಶ್ಯ. ಜೈ ಕಾಟೇರ. ಸಂಭಾಷಣೆ ಸೂಪರ್" ಎಂದು ಮಂಜುನಾಥ್ ಎಂಬುವವರು ಟ್ವೀಟ್ ಮಾಡಿದ್ದಾರೆ.


Click it and Unblock the Notifications











