ಈ ವಾರ 'ಕಾಟೇರ' ಜೊತೆ ಇನ್ನು ಯಾವೆಲ್ಲಾ ಸಿನಿಮಾ, ವೆಬ್ ಸೀರಿಸ್ ಓಟಿಟಿಗೆ ಬರ್ತಿವೆ ಗೊತ್ತಾ?

ಈ ವಾರ ಸೂಪರ್ ಹಿಟ್ ಓಟಿಟಿ ವೀಕೆಂಡ್ ಎಂದೇ ಹೇಳಬಹುದು. ಕಳೆದೊಂದು ತಿಂಗಳಲ್ಲಿ ಬಂದು ಬ್ಲಾಕ್‌ಬಸ್ಟರ್ ಸಿನಿಮಾಗಳೆಲ್ಲಾ ಈ ವಾರವೇ ತೆರೆಗೆ ಬರ್ತಿದೆ. ಯಾವುದನ್ನು ನೋಡುವುಡು ಯಾವುದನ್ನು ಬಿಡುವುದು ಎಂದು ಕನ್‌ಫ್ಯೂಸ್ ಆಗುವ ಮಟ್ಟಿಗೆ ಈ ವಾರ ಸಿನಿಮಾ, ವೆಬ್‌ ಸೀರಿಸ್ ಓಟಿಟಿಗೆ ಬರ್ತಿದೆ.

ಕೆಲವೊಮ್ಮೆ ದೊಡ್ಡ ಸಿನಿಮಾಗಳಿಲ್ಲದೇ ಓಟಿಟಿ ವೀಕ್ಷಕರಿಗೆ ವೀಕೆಂಡ್ ಬೋರ್ ಎನಿಸಿಬಿಡುತ್ತದೆ. ಆದರೆ ಈ ವಾರ ಎಲ್ಲ ಎಲ್ಲಾ ಹಿಟ್ ಸಿನಿಮಾಗಳೇ ಬರುತ್ತಿರುವುದು ವಿಶೇಷ. ಕನ್ನಡದಲ್ಲಿ 'ಕಾಟೇರ' ಸಿನಿಮಾ ಶುಕ್ರವಾರ ಜೀ5ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ಅದೇ ದಿನ ಮಹೇಶ್ ಬಾಬು ನಟನೆಯ ಗುಂಟೂರು ಖಾರಂ, ತಮಿಳಿನ 'ಕ್ಯಾಪ್ಟನ್ ಮಿಲ್ಲರ್' ಸಿನಿಮಾಗಳು ಸ್ಟ್ರೀಮಿಂಗ್‌ಗೆ ಸಿದ್ಧವಾಗಿವೆ.

Kaatera to Guntur Kaaram; New OTT releases this week

'ಕಾಟೇರ' ಜೊತೆಗೆ ಈ ವಾರ ಅಭಿಷೇಕ್ ಅಂಬರೀಶ್ ನಟನೆಯ 'ಬ್ಯಾಡ್ ಮ್ಯಾನರ್ಸ್' ಕೂಡ ಸ್ಟ್ರೀಮಿಂಗ್ ಆಗುವ ಸಾಧ್ಯತೆಯಿದೆ. ಈ ಬಗ್ಗೆ ಈಗಾಗಲೇ ಸುಳಿವು ಸಿಗುತ್ತಿದೆ. ಅಮೇಜಾನ್ ಪ್ರೈಂನಲ್ಲಿ ಫೆಬ್ರವರಿ 9ಕ್ಕೆ ಸೂರಿ ನಿರ್ದೇಶನದಲ್ಲಿ ಈ ಕ್ರೈಂ ಥ್ರಿಲ್ಲರ್ ರಿಲೀಸ್ ಆಗುವ ಬಗ್ಗೆ ಚರ್ಚೆ ನಡೀತಿದೆ.

ಜೀ-5

1. ಕಾಟೇರ

ಡಿಸೆಂಬರ್ 29ಕ್ಕೆ ತೆರೆಗಪ್ಪಳಿಸಿದ್ದ 'ಕಾಟೇರ' ಸಿನಿಮಾ ಓಟಿಟಿ ಎಂಟ್ರಿಗೆ ದಿನಗಣನೆ ಶುರುವಾಗಿದೆ. ಶುಕ್ರವಾರ ಜೀ5ನಲ್ಲಿ ಸಿನಿಮಾ ಬರಲಿದೆ. ತರುಣ್ ಸುಧೀರ್ ನಿರ್ದೇಶನದ ಈ ಆಕ್ಷನ್ ಎಂಟರ್‌ಟೈನರ್ 200 ಕೋಟಿ ರೂ.ಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿ ದಾಖಲೆ ಬರೆದಿದೆ. ಕನ್ನಡ ಚಿತ್ರರಂಗದಲ್ಲಿ ಸಿನಿಮಾ ಹಲವು ದಾಖಲೆಗಳನ್ನು ನಿರ್ಮಿಸಿದೆ.

ಅಮೇಜಾನ್ ಪ್ರೈಂ

1. ಕ್ಯಾಪ್ಟನ್ ಮಿಲ್ಲರ್

ಸಂಕ್ರಾಂತಿ ಸಂಭ್ರಮದಲ್ಲಿ ಬಂದಿದ್ದ 'ಕ್ಯಾಪ್ಟನ್ ಮಿಲ್ಲರ್' ಸಿನಿಮಾ ಅಮೇಜಾನ್‌ ಪ್ರೈಂನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಫೆಬ್ರವರಿ 9ಕ್ಕೆ ಸಿನಿಮಾ ಓಟಿಟಿಯಲ್ಲಿ ಸಿನಿಮಾ ನೋಡಲು ಸಿನಿರಸಿಕರು ಕಾಯುತ್ತಿದ್ದಾರೆ. ಈ ಚಿತ್ರದಲ್ಲಿ ಧನುಷ್ ಜೊತೆ ಕನ್ನಡ ನಟ ಶಿವರಾಜ್‌ಕುಮಾರ್ ಕೂಡ ನಟಿಸಿದ್ದಾರೆ. ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದ ಸಿನಿಮಾ 100 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿತ್ತು.

Kaatera to Guntur Kaaram; New OTT releases this week

ನೆಟ್‌ಫ್ಲಿಕ್ಸ್

1. ಗುಂಟೂರು ಖಾರಂ

ಮಹೇಶ್ ಬಾಬು ನಟನೆಯ ತೆಲುಗಿನ 'ಗುಂಟೂರು ಖಾರಂ' ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ರಿಲೀಸ್ ಆಗ್ತಿದೆ. ಜನವರಿ 12ಕ್ಕೆ ಬಿಡುಗಡೆಯಾಗಿದ್ದ ಸಿನಿಮಾ ತಿಂಗಳಿಗೂ ಮುನ್ನ ಓಟಿಟಿಗೆ ಬರುತ್ತಿರುವುದು ವಿಶೇಷ. ಥಿಯೇಟರ್‌ಗಳಲ್ಲಿ ಚಿತ್ರಕ್ಕೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಸಿಕ್ಕಿತ್ತು. ತ್ರಿವಿಕ್ರಮ್ ನಿರ್ದೇಶನದ ಚಿತ್ರದಲ್ಲಿ ಶ್ರೀಲೀಲಾ ನಾಯಕಿಯಾಗಿ ಮಿಂಚಿದ್ದಾರೆ. ಚಿತ್ರ ಕನ್ನಡಕ್ಕೂ ಡಬ್ ಆಗಿ ಸ್ಟ್ರೀಮಿಂಗ್ ಆಗಲಿದೆ.

2. ಡೀ ಆಂಡ್ ಫ್ರೆಂಡ್ಸ್ ಇನ್ ಓಜ್ - ಫೆಬ್ರವರಿ 5

3. ಮಾಂಕ್ ಸೀಸನ್- ಫೆಬ್ರವರಿ 05

4. ಮೈ ವೈಫ್ ಅಂಡ್ ಕಿಡ್ಸ್ ಸೀಸನ್ಸ್- ಫೆಬ್ರವರಿ 5

5. ಲೂಜ್: ದಿ ಲೈಟ್ ಆಫ್ ಹಾರ್ಟ್ - ಫೆಬ್ರವರಿ 7

6. ರೈಲ್: ದಿ ಲಾಸ್ಟ್ ಪ್ರೊಫೆಟ್- ಫೆಬ್ರವರಿ 07

7. ಲವ್ ನೆವರ್ ಲೈಸ್ ಪೋಲೆಂಡ್- ಸೀಸನ್ 2 - ಪಾರ್ಟ್ 2 - ಫೆಬ್ರವರಿ 07

8. ವನ್ ಡೇ- ಫೆಬ್ರವರಿ 08

9. ಭಕ್ಷಕ್- ಫೆಬ್ರವರಿ 09

10. ಲವರ್ ಸ್ಟಾಕರ್ ಕಿಲ್ಲರ್ - ಫೆಬ್ರವರಿ 9

11. ಆಶಸ್- ಫೆಬ್ರವರಿ 9

12. ಎ ಕಿಲ್ಲರ್ ಪ್ಯಾಡಾಕ್ಸ್ - ಫೆಬ್ರವರಿ 9

13. ಆಲ್ಫಾ ಮೇಲ್ಸ್ -ಸೀಜನ್ 2 - ಫೆಬ್ರವರಿ 9

14. ಹಾರಿಬಲ್ ಬ್ಯಾಸೆಸ್ - ಫೆಬ್ರವರಿ 10

15. ಬ್ಲಾಕ್‌ಲಿಸ್ಟ್ ಸೀಸನ್- 10- ಫೆಬ್ರವರಿ 11

16. ದಿ ರೀ-ಎಡ್ಯುಕೇಷನ್ ಆಫ್ ಮೋಲಿ ಸಿಂಗರ್- ಫೆಬ್ರವರಿ 5

ಡಿಸ್ನಿ ಪ್ಲಸ್ ಹಾಟ್‌ಸ್ಟರ್

1. ಆರ್ಯ; ದಿ ಫೈನಲ್ ವಾರ್- ಸೀಸನ್-3; ಫೆಬ್ರವರಿ 9

More from Filmibeat

English summary
OTT Movie Releases This Week: From kaatera, guntur karaam, captain miller- Must-Watch Movies This Weekend;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X