Kabzaa : ಚಂದ್ರು 'ಕಬ್ಜ' OTT ರಿಲೀಸ್ ಡೇಟ್ ಫಿಕ್ಸ್? ಎಲ್ಲಿ, ಯಾವಾಗ ನೋಡಬಹುದು ಅರ್ಕೇಶ್ವರನ ಆರ್ಭಟ?

ಒಂದ್ಕಡೆ ಥಿಯೇಟರ್‌ಗಳಲ್ಲಿ 'ಕಬ್ಜ' ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಮತ್ತೊಂದು ಕಡೆ ಸಿನಿಮಾ ಓಟಿಟಿ ರಿಲೀಸ್ ಡೇಟ್ ಬಂದಿದೆ. ಬಹುಕೋಟಿ ವೆಚ್ಚದಲ್ಲಿ ಆರ್‌.ಚಂದ್ರು ಈ ಗ್ಯಾಂಗ್‌ಸ್ಟರ್ ಡ್ರಾಮಾ ಸಿನಿಮಾ ಕಟ್ಟಿಕೊಟ್ಟಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ ಅರ್ಕೇಶ್ವರನಾಗಿ ಅಬ್ಬರಿಸಿದ್ದು ಕಿಚ್ಚ ಸುದೀಪ್ ಹಾಗೂ ಶಿವಣ್ಣ ಕೂಡ ಸ್ಪೆಷಲ್ ರೋಲ್‌ಗಳಲ್ಲಿ ದರ್ಶನ ಕೊಟ್ಟಿದ್ದಾರೆ. ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದ ಸಂಭ್ರಮದಲ್ಲಿ 'ಕಬ್ಜ' ಸಿನಿಮಾ ತೆರೆಗಪ್ಪಳಿಸಿತ್ತು.

ಮೊದಲ ದಿನವೇ ವಿಶ್ವದಾದ್ಯಂತ 54 ಕೋಟಿ ರೂ. ಕಲೆಕ್ಷನ್ ಮಾಡಿದ್ದ ಸಿನಿಮಾ 2 ದಿನಕ್ಕೆ 100 ಕೋಟಿ ಕ್ಲಬ್ ಸೇರಿತ್ತು. ಬಹಳ ಹಿಂದೆ ಸೆಟ್ಟೇರಿದ್ದ 'ಕಬ್ಜ' ಸಿನಿಮಾ ಕೊರೊನಾ ಹಾವಳಿಯಿಂದ ರಿಲೀಸ್ ಆಗೋದು ತಡವಾಗಿತ್ತು. ಏಕಕಾಲಕ್ಕೆ 5 ಭಾಷೆಗಳಲ್ಲಿ ಬಹಳ ದೊಡ್ಡದಾಗಿ 'ಕಬ್ಜ' ಸಿನಿಮಾ ರಿಲೀಸ್ ಆಗಿತ್ತು. 2 ಶೇಡ್‌ಗಳಿರೋ ಪಾತ್ರದಲ್ಲಿ ಉಪೇಂದ್ರ ಅಬ್ಬರಿಸಿದ್ದಾರೆ. ಇನ್ನು ಭಾರ್ಗವ್ ಭಕ್ಷಿ ಆಗಿ ಸುದೀಪ್ ಸಿನಿಮಾ ಕಥೆ ನಿರೂಪಣೆ ಮಾಡುತ್ತಾ ಹೋಗಿದ್ದಾರೆ. ಕ್ಲೈಮ್ಯಾಕ್ಸ್‌ನಲ್ಲಿ ಸಿದ್ದಾಂಥ್ ಆಗಿ ಶಿವಣ್ಣ ಎಂಟ್ರಿ ಸಖತ್ ಕಿಕ್ ಕೊಡ್ತಿದೆ.

Kabzaa OTT Release Date; Upendra Starrer To Premiere in Amazon Prime Video From April 14

'ಕಬ್ಜ' ಸಿನಿಮಾ ಏಪ್ರಿಲ್ 14ಕ್ಕೆ ಅಮೇಜಾನ್ ಪ್ರೈಮ್‌ಗೆ ಬರ್ತಿದೆ ಎನ್ನುವ ಗುಸುಗುಸು ಶುರುವಾಗಿದೆ. ಥಿಯೇಟರ್‌ನಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಸಿನಿಮಾ ಇಷ್ಟು ಬೇಗ ಓಟಿಟಿಗೆ ಬರುತ್ತಾ? ಎನ್ನುವ ಅಚ್ಚರಿ ಕೂಡ ಮೂಡಿದೆ. 'ಕಬ್ಜ' ಚಿತ್ರದಲ್ಲಿ ಬಹುಭಾಷಾ ನಟಿ ಶ್ರೀಯಾ ಶರಣ್ ನಾಯಕಿಯಾಗಿ ಮಿಂಚಿದ್ದಾರೆ. ಮುರಳಿ ಶರ್ಮಾ, ನವಾಬ್ ಶಾ, ಸುನೀಲ್ ಪುರಾಣಿಕ್, ಕೋಟಾ ಶ್ರೀನಿವಾಸ್ ರಾವ್, ಪೋಸಾನಿ ಕೃಷ್ಣ ಮುರಳಿ ಸೇರಿದಂತೆ ದೊಡ್ಡ ತಾರಾಗಣವಿದೆ.

'ಕಬ್ಜ' ಸಿನಿಮಾ ಕತೆ ಏನು ಅಂತ ನೋಡುವುದಾದರೆ ಭಾರತಕ್ಕೆ ಸ್ವಾತಂತ್ರ್ಯ ಸಿಗುವುದಕ್ಕು ಮುನ್ನ ಅರ್ಕೇಶ್ವರನ ಕಥೆ ಶುರುವಾಗುತ್ತದೆ. ಆತನ ತಂದೆ ಸ್ವಾತಂತ್ರ್ಯ ಹೋರಾಟಗಾರ. ಉತ್ತರ ಭಾರತದಲ್ಲಿ ನೆಲೆಸಿದ್ದ ಅರ್ಕೇಶ್ವರನ ತಂದೆ ಬ್ರಿಟಿಷರ ಕುತಂತ್ರಕ್ಕೆ ಬಲಿಯಾಗಬೇಕಾಗುತ್ತೆ. ಇಡೀ ಊರೇ ನಾಶವಾಗುತ್ತೆ. ಅಲ್ಲಿಂದ ಆತನ ಪತ್ನಿ ಮಕ್ಕಳಾದ ಅರ್ಕೇಶ್ವರ ಹಾಗೂ ಸಂಕೇಶ್ವರರನ್ನು ಕರೆದುಕೊಂಡು ದಕ್ಷಿಣ ಭಾರತದ ಅಮರಾಪುರಕ್ಕೆ ಬರ್ತಾಳೆ. ಬೆಳೆದು ದೊಡ್ಡವನಾದ ಅರ್ಕೇಶ್ವರ ವಾಯುಸೇನೆ ತರಬೇತಿ ಪಡೆದು ಕೆಲಸಕ್ಕೆ ಸೇರುವ ಮುನ್ನ ಊರಿನಲ್ಲಿ ಅಣ್ಣನ ಕೊಲೆಯಾಗುತ್ತದೆ. ಅದಕ್ಕೆ ಪ್ರತಿಕಾರ ತೀರಿಸಿಕೊಳ್ಳಲು ಹೊರಡುವ ಅರ್ಕೇಶ್ವರ ಇಡೀ ಭೂಗತಲೋಕವನ್ನು 'ಕಬ್ಜ' ಮಾಡಿಕೊಳ್ಳುವ ಕಥೆ ಚಿತ್ರದಲ್ಲಿದೆ.

ಪೊಲೀಸ್ ಆಫೀಸರ್ ಭಾರ್ಗವ್ ಭಕ್ಷಿ ಪಾತ್ರದಲ್ಲಿ ಕಿಚ್ಚ ಸುದೀಪ್ ಕಾಣಿಸಿಕೊಂಡಿದ್ದು ಬೇಸ್ ವಾಯ್ಸ್‌ನಿಂದ ಕಿಕ್ ಕೊಡ್ತಾರೆ. ಎಜೆ ಶೆಟ್ಟಿ ಸಿನಿಮಾಟೋಗ್ರಫಿ ಅಂತೂ ಕಣ್ಣಿಗೆ ಹಬ್ಬ. ರವಿ ಬಸ್ರೂರು ಮ್ಯೂಸಿಕ್ ಗ್ಯಾಂಗ್‌ಸ್ಟರ್ ಡ್ರಾಮಾಗೆ ಬೇಕಾದ ಮೂಡ್ ಕ್ರಿಯೇಟ್ ಮಾಡಿದೆ. ಶಿವಕುಮಾರ್ ಹಾಕಿರುವ ಸೆಟ್‌ಗಳು ಒಂದಕ್ಕಿಂತ ಒಂದು ಸಖತ್‌ ಆಗಿದೆ. ಬಹಳ ಅದ್ಧೂರಿಯಾಗಿ ಸಿನಿಮಾ ಮೂಡಿ ಬಂದಿದೆ. 'ಕಬ್ಜ' ಫಸ್ಟ್ ಪಾರ್ಟ್ ಹಿಟ್ ಆಗಿದ್ದು ಕಥೆಯನ್ನು ಮುಂದುವರೆಸೋದಾಗಿ ಈಗಾಗಲೇ ಆರ್‌. ಚಂದ್ರು ಘೋಷಿಸಿದ್ದಾರೆ.

Kabzaa OTT Release Date; Upendra Starrer To Premiere in Amazon Prime Video From April 14

'ಕಬ್ಜ'- 2 ಸಿನಿಮಾ ಕೂಡ ಭಾರೀ ನಿರೀಕ್ಷೆ ಮೂಡಿಸಿದೆ. ಬಾಲಿವುಡ್ ಸ್ಟಾರ್ ನಟರೊಬ್ಬರು ಸಿನಿಮಾದಲ್ಲಿ ನಟಿಸ್ತಾರೆ ಎನ್ನಲಾಗ್ತಿದೆ. ಈ ವರ್ಷವೇ ಸೀಕ್ವೆಲ್ ಕೂಡ ಸೆಟ್ಟೇರುವ ಸಾಧ್ಯತೆಯಿದೆ. ಮುಂದಿವ ವರ್ಷ 'ಕಬ್ಜ' ಮುಂದುವರೆದ ಕಥೆ ತೆರೆಗೆ ಬರುವ ಸಾಧ್ಯತೆಯಿದೆ.

More from Filmibeat

English summary
Kabzaa OTT Release Date; Upendra Starrer To Premiere in Amazon Prime Video From April 14. R Chandru Directed Film hit the theatres on Friday, March 17. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X