ಮದುವೆಗೆ ಎಕ್ಸ್‌ಪೈರಿ ಡೇಟ್ ;ಕಾಜೋಲ್-ಅಜಯ್ ದೇವಗನ್ ದಾಂಪತ್ಯದಲ್ಲಿ ಬಿರುಕು?ಡಿವೋರ್ಸ್‌ಗೆ ಅರ್ಜಿ ಸಲ್ಲಿಸುವಂತೆ ಸಲಹೆ
ದುಡ್ಡು ಎಲ್ಲಿ ಹೆಚ್ಚಿರುತ್ತೆ ಅಲ್ಲಿ ಪ್ರೀತಿ ಕಡಿಮೆ ಇರುತ್ತೆ ಎನ್ನುವ ಮಾತನ್ನು ಹಲವರು ಹೇಳುತ್ತಾರೆ. ಕೆಲವರ ಬದುಕಿನಲ್ಲಿ ದುಡ್ಡು..ಆಸ್ತಿ.. ಐಶ್ವರ್ಯ.. ಹೆಚ್ಚಾದಂತೆ ನೆಮ್ಮದಿ ನಿಧಾನವಾಗಿ ಮಾಯವಾಗುತ್ತೆ. ಚಿತ್ರರಂಗದಲ್ಲಿಯಂತೂ ಇದಕ್ಕೆ ಹತ್ತು ಹಲವು ಉದಾಹರಣೆಗಳು ಕೂಡ ಇವೆ. ಇಲ್ಲಿ ಶ್ರೀಮಂತರೆಂದು ಕರೆಸಿಕೊಳ್ಳುವ ಅನೇಕರ ಬದುಕಿನಲ್ಲಿ ಪ್ರೀತಿ ಮರಿಚೀಕೆಯಾಗಿರುತ್ತೆ. ಯಾರು ಯಾವ ಉದ್ದೇಶಕ್ಕೆ ಲವ್ ಮಾಡ್ತಾರೆ....
ಆ ನಂತರ ಯಾಕೆ ಮದುವೆಯಾಗ್ತಾರೆ.. ಎನ್ನುವುದು ಅವರವರಿಗೆ ಗೊತ್ತಾದರೂ ಬದಲಾದ ಈ ಕಾಲದಲ್ಲಿ ಪ್ರೀತಿ ಮತ್ತು ಮದುವೆ ಎರಡು ಅರ್ಥಗಳನ್ನು ಕಳೆದುಕೊಳ್ಳುತ್ತಿವೆ. ಇದಕ್ಕೆ ಕೈಗನ್ನಡಿ ಎಂಬಂತೆ ಕಳೆದ ಎರಡು ಮೂರು ವರ್ಷಗಳಲ್ಲಿ ಕೇವಲ ಸಾರ್ವಜನಿಕ ವಲಯದಲ್ಲಿ ಮಾತ್ರ ಅಲ್ಲ, ಚಿತ್ರರಂಗದಲ್ಲಿ ಕೂಡ ಹಲವರ ದಾಂಪತ್ಯ ಜೀವನ ಮುರಿದು ಬಿದ್ದಿದೆ.

ಮತ್ತೂ ಕೆಲವರ ಬದುಕಿನಲ್ಲಿ ಭಿನ್ನಾಭಿಪ್ರಾಯಗಳು ಮನೆ ಮಾಡಿವೆ. ಸಮಾಜಕ್ಕೆ ಹೆದರಿ, ನೋಡಿದವರು ಏನಂತಾರೆ ..? ಎಂಬ ಭಯದಲ್ಲಿ ಹಲವರು ನಾಲ್ಕು ಗೋಡೆಗಳ ನಡುವೆ ತಮ್ಮ ಮನಸ್ತಾಪ ಹೂತು ಹಾಕಿ ಮುಖವಾಡದ ಬದುಕು ಬದುಕುತ್ತಿದ್ದಾರೆ. ಹೊರಗಡೆ ಆದರ್ಶ ದಂಪತಿಗಳಂತೆ ಫೋಸ್ ನೀಡಿ ಮನೆಯೊಳಗೆ ಕಣ್ಣೀರು ಹಾಕುತ್ತಾರೆ. ಈ ಸಾಲಿನಲ್ಲಿ ಕಾಜೋಲ್ ಇದ್ದಾರಾ..? ಗೊತ್ತಿಲ್ಲ. ಆದರೆ.. ಸದ್ಯ ಕಾಜೋಲ್ ಮಾತನಾಡಿರುವ ಮಾತು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ನಾಂದಿಯನ್ನು ಹಾಡಿದೆ. ಟ್ರೋಲಿಗರ ಪಾಲಿಗೆ ಕಾಜೋಲ್ ಮಾತು ಮತ್ತೊಮ್ಮೆ ಆಹಾರವೂ ಆಗಿದೆ.
ಹೌದು, ಅಸಲಿಗೆ ಕಾಜೋಲ್ ಮತ್ತು ಟ್ವಿಂಕಲ್ ಖನ್ನಾ ''ಅಮೆಜಾನ್ ಪ್ರೈಂ''ಗೆ ಕಾರ್ಯಕ್ರಮವೊಂದನ್ನು ನಡೆಸಿಕೊಡ್ತಿದ್ದಾರೆ. ಈ ಕಾರ್ಯಕ್ರಮದ ಹೆಸರು ''ಟೂ ಮಚ್ ವಿತ್ ಕಾಜೋಲ್ ಅಂಡ್ ಟ್ವಿಂಕಲ್''. ಕರಣ್ ಜೋಹರ್ ಅವರ ''ಕಾಫಿ ವಿತ್ ಕರಣ್'' ಕಾರ್ಯಕ್ರಮವನ್ನು ಮೀರಿಸುವಂತೆ ಈ ಕಾರ್ಯಕ್ರಮದಲ್ಲಿ ಕಾಜೋಲ್ ಮತ್ತು ಟ್ವಿಂಕಲ್ ತಮ್ಮ ಅತಿಥಿಗಳಿಗೆ ಪ್ರಶ್ನೆ ಕೇಳುತ್ತಿದ್ದಾರೆ. ಮುಜುಗರಕ್ಕೀಡು ಮಾಡುತ್ತಿದ್ದಾರೆ. ಇದೇ ಸಮಯದಲ್ಲಿ ತಮ್ಮ ಮರ್ಯಾದೆಯನ್ನು ತಾವೇ ತೆಗೆದುಕೊಳ್ಳುತ್ತಿದ್ದಾರೆ. ಇದಕ್ಕೆ ಇತ್ತೀಚೆನ ಸಂಚಿಕೆ ಮತ್ತೊಂದು ಉದಾಹರಣೆ.
ಹೌದು, ಕತ್ರೀನಾ ಕೈಫ್ ಗಂಡ ವಿಕ್ಕಿ ಕೌಶಲ್ ಮತ್ತು ನಾಯಕಿ ಕೃತಿ ಸನೋನ್ ಇತ್ತೀಚೆಗೆ ಕಾಜೋಲ್ ಮತ್ತು ಟ್ವಿಂಕಲ್ ಖನ್ನಾ ಅವರ ಕಾರ್ಯಕ್ರಮಕ್ಕೆ ಬಂದಿದ್ದರು. ಮನ ಬಿಚ್ಚಿ ಮಾತನಾಡಿದರು. ಇದೇ ಸಮಯದಲ್ಲಿ ಮದುವೆಯ ಕುರಿತು ವಿಕ್ಕಿ ಕೌಶಲ್ ಅವರಿಗೆ ಟ್ವಿಂಕಲ್ ಖನ್ನಾ ಪ್ರಶ್ನೆಕೇಳಿದರು. ಎಲ್ಲಾ ವಸ್ತುಗಳಿಗೆ ಇರುವಂತೆ ಮದುವೆಗೆ ಕೂಡ ಎಕ್ಸ್‌ಪೈರಿ ಡೇಟ್ ಇರಬೇಕಿತ್ತಾ..? ಸಂಬಂಧ ನವೀಕರಣ (Renewal ) ಮಾಡುವ ಆಯ್ಕೆ ಇರಬೇಕಿತ್ತಾ..? ಎಂದು ಕೇಳಿದರು.

ವಿಕ್ಕಿ ಕೌಶಲ್ ಮತ್ತು ಕೃತಿ ಸನೋನ್ ಈ ಪ್ರಶ್ನೆಗೆ ಇಲ್ಲ ಎಂದು ಹೇಳಿದರು. ಖುದ್ದು ಟ್ವಿಂಕಲ್ ಖನ್ನಾ ಕೂಡ ಎಕ್ಸ್‌ಪೈರಿ ಡೇಟ್ ಎಲ್ಲಾ ಬೇಡ ಎಂದು ಹೇಳಿದರು. ಆದರೆ.. ಕಾಜೋಲ್ ಮಾತ್ರ ಎಕ್ಸ್‌ಪೈರಿ ಡೇಟ್ ಇರಬೇಕು ಎಂದು ಹೇಳಿದರು. ಇದಕ್ಕೆ ಟ್ವಿಂಕಲ್ ಖನ್ನಾ ಅದು ಮದುವೆ , ವಾಷಿಂಗ್ ಮಷಿನ್ ಅಲ್ಲ ಎಂದು ಹೇಳಿದರು.
ಆಗ ತಮ್ಮ ವಾದ ಮಂಡಿಸಿದ ಕಾಜೋಲ್ ಸರಿಯಾದ ಸಮಯದಲ್ಲಿ ಸರಿಯಾದ ವ್ಯಕ್ತಿಯನ್ನು ಮದುವೆಯಾಗಿದ್ದೇವೆ ಎನ್ನುವ ವಿಚಾರ ಯಾರಿಗೆ ಗೊತ್ತು..? ಹೇಗೆ ಗೊತ್ತು..? ಎಕ್ಸ್‌ಪೈರಿ ದಿನಾಂಕ ಇದ್ದರೆ ದೀರ್ಘಕಾಲದ ನೋವು ಅನುಭವಿಸುವ ಪ್ರಮೇಯವೇ ಬರುವುದಿಲ್ಲ ಎಂದು ಹೇಳಿದ ಕಾಜೋಲ್ ನವೀಕರಣದ ಆಯ್ಕೆ ಇದ್ದರೆ ಜನರು ಮತ್ತೊಮ್ಮೆ ತಮ್ಮ ಸಂಬಂಧದ ಕುರಿತು ಯೋಚನೆ ಮಾಡಬಹುದು ಮುಂದುವರೆಯಬಹುದು ಎಂದು ಹೇಳಿದರು.
ಮುಂದುವರೆದು ಹಣದ ಮಹತ್ವದ ಕುರಿತು ಚರ್ಚೆ ಮಾಡಲಾಯ್ತು. ಹಣದಿಂದ ಸಂತೋಷ ಖರೀದಿ ಮಾಡಲು ಸಾಧ್ಯವಾ..? ಎನ್ನುವ ಪ್ರಶ್ನೆ ಕೇಳಲಾಯ್ತು. ಟ್ವಿಂಕಲ್ ಖನ್ನಾ ಮತ್ತು ವಿಕ್ಕಿ ಕೌಶಲ್ ಈ ಪ್ರಶ್ನೆಗೆ ಹೌದು ಎಂದು ಹೇಳಿದರೆ ಕಾಜೋಲ್ ಹಣ ಎಷ್ಟೇ ಇದ್ದರೂ ಅದರಿಂದ ಸಂತೋಷ ಸಿಗುವುದಿಲ್ಲ ಎಂದು ಹೇಳಿದರು. ನಿಜವಾದ ಸಂತೋಷದಿಂದ ಅತಿಯಾದ ಹಣ ನಮ್ಮನ್ನು ದೂರ ಮಾಡುತ್ತೆ ಎಂದು ಹೇಳಿದರು.
ಸದ್ಯ ಕಾಜೋಲ್ ಆಡಿರುವ ಈ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಮುನ್ನುಡಿ ಬರೆದಿವೆ. ಹಲವರು ನಿಮ್ಮ ವೈವಾಹಿಕ ಬದುಕು ಹಳಿ ತಪ್ಪಿದೆ ಎನ್ನುವುದಕ್ಕೆ ನೀವು ಆಡಿರುವ ಈ ಮಾತುಗಳೇ ಸಾಕ್ಷಿ ಎಂದು ಹೇಳುತ್ತಿದ್ದಾರೆ. ಸಂಬಂಧದಲ್ಲಿ ನೆಮ್ಮದಿ ಖುಷಿ ಇಲ್ಲ ಅಂದರೆ ಅಜಯ್ ದೇವಗನ್‌ಗೆ ವಿಚ್ಛೇದನ ನೀಡಿ ಹೊರ ಬನ್ನಿ ಎಂದು ಕೆಲವರು ಹೇಳುತ್ತಿದ್ದಾರೆ. ಮತ್ತೂ ಕೆಲವರು ಸ್ವಾಭಿಮಾನದ ಕೊರತೆ.. ಹಣದ ಮೇಲೀನ ವ್ಯಾಮೋಹ.. ಡಿವೋರ್ಸ್ ನೀಡದಂತೆ ಇವರನ್ನು ತಡೆಯುತ್ತಿವೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಸುಮ್ಮನೆ ಯಾಕಿಷ್ಟು ಕಷ್ಟ ಪಡ್ತಿದ್ದೀರಾ ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿ ಎಂಬ ಸಲಹೆಯನ್ನು ಕೂಡ ನೀಡುತ್ತಿದ್ದಾರೆ.


Click it and Unblock the Notifications











