Kalki 2898 AD OTT; ಪ್ರಭಾಸ್ 'ಕಲ್ಕಿ' ಡಿಜಿಟಲ್ ಸ್ಟ್ರೀಮಿಂಗ್ ಎಲ್ಲಿ? ಯಾವಾಗ?

ವೈಜಯಂತಿ ಮೂವೀಸ್ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ 'ಕಲ್ಕಿ 2898 AD' ಸಿನಿಮಾ ತೆರೆಗಪ್ಪಳಿಸಿದೆ. ನಾಗ್ ಅಶ್ವಿನ್ ತೆರೆಮೇಲೆ ಮ್ಯಾಜಿಕ್ ಮಾಡಿದ್ದು ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಗಿದೆ. ಬಹಳ ಅದ್ಧೂರಿಯಾಗಿ ಸಿನಿಮಾ ಮೂಡಿ ಬಂದಿದ್ದು ಕಣ್ಣಿಗೆ ಹಬ್ಬ ಎನ್ನುವಂತಿದೆ. ಒಂದಷ್ಟು ಮೈನಸ್ ಅಂಶಗಳು ಚಿತ್ರದಲ್ಲಿವೆ.

2 ಸಿನಿಮಾಗಳನ್ನು ನಿರ್ದೇಶಿಸಿದ್ದ ನಾಗ್‌ ಅಶ್ವಿನ್‌ಗೆ 500 ಕೋಟಿ ರೂ. ಪ್ರಾಜೆಕ್ಟ್- K ಸಿಕ್ಕಾಗ ಹಲವರು ಹುಬ್ಬೇರಿಸಿದ್ದರು. ಆದರೆ ತೆರೆಮೇಲೆ ಸಿನಿಮಾ ನೋಡಿದಾಗ ಆತನ ಪ್ರತಿಭೆ ಗೊತ್ತಾಗುತ್ತದೆ. ಇನ್ನು ಪ್ರಭಾಸ್ ಹಾಗೂ ಅಮಿತಾಬ್ ಪೈಪೋಟಿಗೆ ಬಿದ್ದು ನಟಿಸಿದ್ದಾರೆ. ಕೆಲವೆಡೆ ಬಿಗ್‌ಬಿ ಹೈಲೆಟ್ ಆಗಿ ಬಿಟ್ಟಿದ್ದಾರೆ. ಇನ್ನು ಗ್ರಾಫಿಕ್ಸ್, ಕ್ಯಾಮರಾ ವರ್ಕ್‌ ಎಲ್ಲವೂ ಅದ್ಭುತ ಎಂದೇ ಹೇಳಬೇಕು. ಕ್ಲಿಷ್ಟವಾದ ಸ್ಕ್ರೀನ್‌ಪ್ಲೇ, ಚಿತ್ರದ ಕಾಲಾವಧಿ, ಕೆಲ ದೃಶ್ಯಗಳನ್ನು ಇಂಟರ್‌ಕಟ್ ಮಾಡಿರುವ ರೀತಿ, ಮ್ಯೂಸಿಕ್ ಕೈ ಕೊಟ್ಟಿದೆ.

Kalki 2898 Ad OTT Release Date When And Where To Watch prabhas Starrer On OTT

ಸಣ್ಣಪುಟ್ಟ ತಪ್ಪುಗಳನ್ನು ಹೊರತುಪಡಿಸಿ ಸಿನಿಮಾ ಪ್ರೇಕ್ಷಕರನ್ನು ರಂಜಿಸುವಲ್ಲಿ ಭಾಗಶಃ ಗೆದ್ದಿದೆ. ದೊಡ್ಡಮಟ್ಟದಲ್ಲಿ ಬಾಕ್ಸಾಫೀಸ್ ಶೇಕ್ ಮಾಡುತ್ತಾ? ಎನ್ನುವುದನ್ನು ಕಾದು ನೋಡಬೇಕಿದೆ. ಆದರೆ ನಿರ್ಮಾಪಕರಿಗೆ ನಷ್ಟವಂತೂ ಆಗಲ್ಲ ಎಂದು ಕೆಲವರು ಲೆಕ್ಕಚಾರ ಹಾಕುತ್ತಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ 5 ಭಾಷೆಗಳಲ್ಲಿ 'ಕಲ್ಕಿ 2898 AD' ಸಿನಿಮಾ ತೆರೆಗಪ್ಪಳಿಸಿದೆ. ಭರ್ಜರಿ ಓಪನಿಂಗ್ ಸಿಗುವ ನಿರೀಕ್ಷೆಯಿದೆ.

'ಕಲ್ಕಿ 2898 AD' ಸಿನಿಮಾ ಓಟಿಟಿ ಸ್ಟ್ರೀಮಿಂಗ್ ಯಾವಾಗ ಎನ್ನುವ ಚರ್ಚೆ ಕೂಡ ಶುರುವಾಗಿದೆ. ಎರಡು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗುತ್ತದೆ ಎಂದು ಹಿಂದೆ ಹೇಳಲಾಗಿತ್ತು. ಆದರೆ ಅಮೇಜಾನ್ ಪ್ರೈಂ ಸಂಸ್ಥೆಗೆ ಚಿತ್ರದ ಓಟಿಟಿ ರೈಟ್ಸ್ ಬಿಕರಿಯಾಗಿದೆ. ಅದು ಇದೀಗ ಸ್ಪಷ್ಟವಾಗಿದೆ. ಸಾಮಾನ್ಯವಾಗಿ ಯಾವುದೇ ಸಿನಿಮಾ ತೆರೆಕಂಡು 49 ದಿನಗಳ ಬಳಿಕ ಓಟಿಟಿಗೆ ಬರುತ್ತದೆ. ಆ ಲೆಕ್ಕದಲ್ಲಿ ಆಗಸ್ಟ್ 15ರ ವೇಳೆಗೆ ಪ್ರೈಂ ವೀಡಿಯೋದಲ್ಲಿ 'ಕಲ್ಕಿ 2898 AD' ಚಿತ್ರ ವೀಕ್ಷಣೆಗೆ ಸಿಗಲಿದೆ.

ಪುರಾಣಗಳನ್ನು ಆಧರಿಸಿ ನಾಗ್ ಅಶ್ವಿನ್ ಒಂದು ಕಾಲ್ಪನಿಕ ಕಥೆಯನ್ನು ಕಟ್ಟಿ ಸಿನಿಮಾ ಮಾಡಿದ್ದಾರೆ. ಕುರುಕ್ಷೇತ್ರ ಯುದ್ಧದ ಕೊನೆಯಲ್ಲಿ ಶುರುವಾಗುವ 'ಕಲ್ಕಿ 2898 AD' ಕಥೆ ಬಳಿಕ 6000 ಮುಂದಕ್ಕೆ ಕರೆದುಕೊಂಡು ಹೋಗುತ್ತದೆ. ಭೂಮಿ ಬಹುತೇಕ ಅಂತ್ಯವಾಗುವ ಸಮಯ ಅದು. ಯಂತ್ರಯುಗ. ಆಗ ಅಧರ್ಮ ಹೆಚ್ಚಾಗಿ ಧರ್ಮ ಸ್ಥಾಪನೆಗಾಗಿ ಮತ್ತೆ ಶ್ರೀಕೃಷ್ಣ ಕಲ್ಕಿ ಅವತಾರದಲ್ಲಿ ಜನಿಸುತ್ತಾನೆ ಎಂದು ಚಿತ್ರದಲ್ಲಿ ಹೇಳಲಾಗಿದೆ.

Kalki 2898 Ad OTT Release Date When And Where To Watch prabhas Starrer On OTT

ವಿಜಯ್ ದೇವರಕೊಂಡ, ದುಲ್ಕರ್ ಸಲ್ಮಾನ್, ರಾಜಮೌಳಿ, ಮೃಣಾಲ್ ಠಾಕೂರ್, ರಾಮ್‌ ಗೋಪಾಲ್ ವರ್ಮಾ ಸೇರಿದಂತೆ ಸಾಕಷ್ಟು ಜನ ಚಿತ್ರದ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅದು ಪ್ರೇಕ್ಷಕರಿಗೆ ಮಜಾ ಕೊಡುತ್ತದೆ. ಆದರೆ ಯಾವ ಯಾವ ಪಾತ್ರ ಎನ್ನುವುದನ್ನು ಮಾತ್ರ ತೆರೆಮೇಲೆ ನೋಡಬೇಕು. ಚಿತ್ರದಲ್ಲಿ ಪ್ರಭಾಸ್ ಭೈರವನಾಗಿ ಮಾತ್ರವಲ್ಲ, ಕರ್ಣನಾಗಿಯೂ ಕಾಣಿಸಿಕೊಂಡಿದ್ದಾರೆ. ಸೀಕ್ವೆಲ್‌ನಲ್ಲಿ ಕರ್ಣನಾಗಿ ಯಂಗ್ ರೆಬಲ್ ಸ್ಟಾರ್ ಆರ್ಭಟ ಮತ್ತಷ್ಟು ನೋಡಬಹುದು.

'ಕಲ್ಕಿ 2898 AD' ಚಿತ್ರದ ಅಡ್ವಾನ್ಸ್ ಬುಕ್ಕಿಂಗ್‌ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ದೇಶ ವಿದೇಶಗಳಲ್ಲಿ ಬುಕ್ಕಿಂಗ್ ಚೆನ್ನಾಗಿತ್ತು. ಹಾಗಾಗಿ ಮೊದಲ ದಿನವೇ ಭಾರೀ ಓಪನಿಂಗ್ ನಿರೀಕ್ಷಿಸಲಾಗುತ್ತಿದೆ. ಮೊದಲ ದಿನವೇ 100 ಕೋಟಿ ರೂ. ಹೆಚ್ಚು ಗಳಿಕೆ ಮಾಡುವ ಸಾಧ್ಯತೆಯಿದೆ.

More from Filmibeat

English summary
Nag ashwin's Kalki 2898 Ad OTT partner Revealed;
Read more about: filmibeat news prabhas ott
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X