twitter
    For Quick Alerts
    ALLOW NOTIFICATIONS  
    For Daily Alerts

    ಜಯಲಲಿತಾ ಕುರಿತ ಚಿತ್ರ ಅಮೆಜಾನ್, ನೆಟ್ ಫ್ಲಿಕ್ಸ್ ಎರಡಕ್ಕೂ ಸೇಲ್: ನಿರ್ಮಾಪಕರು ಸೇಫ್

    |

    ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಕುರಿತಾಗಿ ತಯಾರಾಗಿರುವ 'ತಲೈವಿ' ಚಿತ್ರ ಚಿತ್ರಮಂದಿರದಲ್ಲಿ ಬಿಡುಗಡೆಯಾಗುವ ಮೊದಲೇ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ತೆರೆ ಕಾಣುವ ಸಾಧ್ಯತೆ ಇದೆ.

    ನಟಿಯಾಗಿ ಮತ್ತು ರಾಜಕಾರಣಿಯಾಗಿ ಜೆ. ಜಯಲಲಿತಾ ಬೆಳೆದ ಬಗೆ ಅವರ ಜೀವನದ ಕುರಿತು 'ತಲೈವಿ' ಬೆಳಕು ಚೆಲ್ಲುವ ಸಿನಿಮಾ. ಬಾಲಿವುಡ್ ನಟಿ ಕಂಗನಾ ರಣಾವತ್ ಈ ಬಯೋಪಿಕ್‌ನಲ್ಲಿ ಜಯಲಲಿತಾ ಪಾತ್ರ ನಿರ್ವಹಿಸಿದ್ದಾರೆ. ಲಾಕ್ ಡೌನ್ ಆರಂಭಕ್ಕೆ ಮುನ್ನವೇ ಚಿತ್ರೀಕರಣ ಮುಗಿದಿತ್ತು. ಹೀಗಾಗಿ ಈ ವೇಳೆಗೆ ಸಿನಿಮಾ ಬಿಡುಗಡೆಯಾಗಬೇಕಿತ್ತು. ಆದರೆ ಅದು ಮುಂದಕ್ಕೆ ಹೋಗಿದೆ.

    ತಮಿಳು ನಾಡಿನ ಜನರು ಮತ್ತು ಜಯಲಲಿತಾ ಅಭಿಮಾನಿಗಳಲ್ಲಿ ಈ ಚಿತ್ರ ಹೇಗೆ ಮೂಡಿದೆ ಎಂಬ ಕುತೂಹಲ ಹೆಚ್ಚಿದೆ. ಹಾಗೆಯೇ ಕಂಗನಾ ರಣಾವತ್, ಜಯಲಲಿತಾ ಪಾತ್ರಕ್ಕೆ ತಮ್ಮನ್ನು ಹೇಗೆ ಒಗ್ಗಿಸಿಕೊಂಡಿದ್ದಾರೆ ಎಂಬುದು ಬಾಲಿವುಡ್‌ಗೂ ಕುತೂಹಲ ಮೂಡಿಸಿದೆ. ಮುಂದೆ ಓದಿ..

    ಎರಡು ಒಟಿಟಿಗೆ ಮಾರಾಟ

    ಎರಡು ಒಟಿಟಿಗೆ ಮಾರಾಟ

    ಈ ನಡುವೆ ಚಿತ್ರತಂಡದಿಂದ ಮತ್ತೊಂದು ಮಾಹಿತಿ ಹೊರಬಂದಿದ್ದು, ಈ ಸಿನಿಮಾ ಒಟಿಟಿಗೆ ಮಾರಾಟವಾಗಿದೆ. ಅಮೆಜಾನ್ ಪ್ರೈಮ್ ಹಾಗೂ ನೆಟ್ ಫ್ಲಿಕ್ಸ್ ಎರಡಕ್ಕೂ 'ತಲೈವಿ' ಮಾರಾಟವಾಗಿದೆ. ಒಂದು ಒಟಿಟಿಗೆ ಮಾತ್ರ ಚಿತ್ರದೊಂದು ಮಾರಾಟವಾಗಲು ಸಾಧ್ಯ. ಇದು ಹೇಗೆ ಎರಡು ಒಟಿಟಿಗಳಿಗೆ ಮಾರಾಟವಾಗಿದೆ ಎಂದು ಅಚ್ಚರಿಯಾಗಬಹುದು.

    'ಗಾಡ್‌ಮ್ಯಾನ್' ಮೇಲೆ ಬ್ರಾಹ್ಮಣ ಸಮುದಾಯ ಸಿಟ್ಟು: ಬಿಡುಗಡೆಗೆ ತಡೆ'ಗಾಡ್‌ಮ್ಯಾನ್' ಮೇಲೆ ಬ್ರಾಹ್ಮಣ ಸಮುದಾಯ ಸಿಟ್ಟು: ಬಿಡುಗಡೆಗೆ ತಡೆ

    55 ಕೋಟಿಗೆ ಮಾರಾಟ

    55 ಕೋಟಿಗೆ ಮಾರಾಟ

    ಅಮೆಜಾನ್ ಪ್ರೈಮ್ ತಮಿಳು ಅವತರಣಿಕೆಯ ಹಕ್ಕನ್ನು ಖರೀದಿಸಿದ್ದರೆ, ನೆಟ್ ಫ್ಲಿಕ್ಸ್ ಹಿಂದಿ ಅವತರಣಿಕೆಯ ಹಕ್ಕನ್ನು ಖರೀದಿಸಿದೆಯಂತೆ. ಇದರಿಂದ ನಿರ್ಮಾಪಕರಿಗೆ ಭರ್ಜರಿ ಲಾಭವಾಗಿದೆ. ಎರಡು ಭಾಷೆಗಳ ಹಕ್ಕನ್ನು ಪ್ರತ್ಯೇಕ ಮಾರಾಟ ಮಾಡುವುದರಿಂದ ನಿರ್ಮಾಪಕರು 55 ಕೋಟಿ ರೂ. ಗಳಿಸಿದ್ದಾರಂತೆ.

    ನಾಲ್ಕು ವರ್ಷ ಕಳೆದರೂ 'ಗೋಧಿ ಬಣ್ಣ...' ಚಿತ್ರಕ್ಕೆ ಅನ್ಯಾಯ: ನಿರ್ದೇಶಕ ಹೇಮಂತ್ ಬೇಸರನಾಲ್ಕು ವರ್ಷ ಕಳೆದರೂ 'ಗೋಧಿ ಬಣ್ಣ...' ಚಿತ್ರಕ್ಕೆ ಅನ್ಯಾಯ: ನಿರ್ದೇಶಕ ಹೇಮಂತ್ ಬೇಸರ

    ಚಿತ್ರಮಂದಿರದಲ್ಲಿ ಬಿಡುಗಡೆ

    ಚಿತ್ರಮಂದಿರದಲ್ಲಿ ಬಿಡುಗಡೆ

    ಈ ಮೂಲಕ 'ತಲೈವಿ' ಚಿತ್ರದ ನಿರ್ಮಾಪಕರು ಸೇಫ್ ಹಂತದಲ್ಲಿದ್ದಾರೆ. ಹಾಗೆಂದು ಇದು ಒಟಿಟಿಯಲ್ಲಿ ಪ್ರೇಕ್ಷಕರಿಗೆ ಕೂಡಲೇ ಲಭ್ಯವಾಗುವುದಿಲ್ಲ. ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ನಂತರವೇ ಒಟಿಟಿಯಲ್ಲಿ ಪ್ರಸಾರವಾಗಲಿವೆ.

    ಸೆಕ್ಸ್ ದೃಶ್ಯಗಳ ಮೂಲಕ ಸೇನೆಗೆ ಅವಮಾನ: ಏಕ್ತಾ ಕಪೂರ್ ವಿರುದ್ಧ ದೂರುಸೆಕ್ಸ್ ದೃಶ್ಯಗಳ ಮೂಲಕ ಸೇನೆಗೆ ಅವಮಾನ: ಏಕ್ತಾ ಕಪೂರ್ ವಿರುದ್ಧ ದೂರು

    ದೊಡ್ಡ ಬಜೆಟ್ ಚಿತ್ರ- ಕಂಗನಾ

    ದೊಡ್ಡ ಬಜೆಟ್ ಚಿತ್ರ- ಕಂಗನಾ

    'ಎಲ್ಲ ಸಿನಿಮಾಗಳನ್ನೂ ನೇರವಾಗಿ ಒಟಿಟಿಯಲ್ಲಿ ಬಿಡುಗಡೆ ಮಾಡುವುದು ಸರಿಯಲ್ಲ. ಹಾಗೆ ಬಿಡುಗಡೆ ಮಾಡಬೇಕೋ ಅಥವಾ ಬೇಡವೋ ಎನ್ನುವುದು ಚಿತ್ರದ ಕಥೆಯನ್ನು ಅವಲಂಬಿಸಿರುತ್ತದೆ. ಇದು ದೊಡ್ಡ ಬಜೆಟ್ ಚಿತ್ರ. ಹೀಗಾಗಿ ಒಟಿಟಿ ಮಾರಾಟವಾದ ಕಾರಣಕ್ಕೆ ಡಿಜಿಟಲ್ ವೇದಿಕೆಯಲ್ಲಿ ಮಾತ್ರವೇ ಬಿಡುಗಡೆ ಮಾಡಲು ಸಾಧ್ಯವಿಲ್ಲ. ಮೊದಲು ಚಿತ್ರಮಂದಿರದಲ್ಲಿ ಬಿಡುಗಡೆಯಾಗಬೇಕು' ಎಂದು ಕಂಗನಾ ಹೇಳಿದ್ದಾರೆ.

    English summary
    Bollywood actor Kangana Ranaut said, her Thalaivi movie sold to Netflix and Amazon Prime for Rs 55 crore.
    Saturday, June 6, 2020, 9:58
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X