ನಯನತಾರ ಲೈಫ್ ಸ್ಟೋರಿಯಲ್ಲಿ ಉಪೇಂದ್ರ; ಆ ಸೀಕ್ರೆಟ್ ಕೂಡ ರಿವೀಲ್

ತಮಿಳು ನಟ ನಯನತಾರ ಕನ್ನಡ ಸಿನಿರಸಿಕರಿಗೂ ಪರಿಚಿತ. ಕಳೆದ ವರ್ಷ ನಯನ್ ಬಾಲಿವುಡ್ ಅಂಗಳಕ್ಕೂ ಜಿಗಿದಿದ್ದಾರೆ. ಮದುವೆ ಬಳಿಕ ಕೂಡ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಎರಡು ವರ್ಷದ ಹಿಂದೆ ನಿರ್ದೇಶಕ ವಿಘ್ನೇಶ್ ಶಿವನ್ ಜೊತೆಗೆ ನಯನತಾರ ಹಸೆಮಣೆ ಏರಿದ್ದರು.

ನಯನ್-ವಿಕ್ಕಿ ದಂಪತಿ ಬಾಡಿಗೆ ತಾಯ್ತನದ ಮೂಲಕ ಅವಳಿ ಗಂಡುಮಕ್ಕಳನ್ನು ಪಡೆದಿದ್ದಾರೆ. ಮಕ್ಕಳ ಲಾಲನೆ ಪಾಲನೆ ಜೊತೆಗೆ ಆಕೆ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಕನ್ನಡದ 'ಟಾಕ್ಸಿಕ್' ಚಿತ್ರದಲ್ಲಿ ಯಶ್ ಸಹೋದರಿ ಪಾತ್ರದಲ್ಲಿ ನಯನ್ ಬಣ್ಣ ಹಚ್ಚಿದ್ದಾರೆ. ಬೆಂಗಳೂರಿನಲ್ಲಿ ನಡೆದ ಮೊದಲ ಶೆಡ್ಯೂಲ್ ಚಿತ್ರೀಕರಣದಲ್ಲಿ ಕೂಡ ಆಕೆ ಕಾಣಿಸಿಕೊಂಡಿದ್ದರು.

Kannada actor Upendra joins Nayanthara Beyond the Fairy Tale Documentary trailer

ಅಂದಹಾಗೆ ನಯನತಾರಾ ಹಾಗೂ ವಿಘ್ನೇಶ್ ಶಿವನ್ ಮದುವೆ ಸುಂದರ ಕ್ಷಣಗಳನ್ನು ಡಾಕ್ಯುಮೆಂಟರಿ ರೂಪದಲ್ಲಿ ನೆಟ್‌ಫ್ಲಿಕ್ಸ್ ಅಭಿಮಾನಿಗಳ ಮುಂದೆ ತರ್ತಿದೆ. ಅದಕ್ಕಾಗಿ ಭಾರೀ ಮೊತ್ತದ ಹಣ ನೀಡಿ ರೈಟ್ಸ್ ಕೊಂಡುಕೊಂಡಿರುವುದು ಗೊತ್ತೇಯಿದೆ. 'ನಯನತಾರ: ಬಿಯಾಂಡ್ ದಿ ಫೇಯರಿ ಟೇಲ್' ಹೆಸರಿನ ಈ ಡಾಕ್ಯೂಮೆಂಟರಿ ಇದೀಗ ಸ್ಟ್ರೀಮಿಂಗ್‌ಗೆ ಸಜ್ಜಾಗುತ್ತಿದೆ.

ಡಾಕ್ಯುಮೆಂಟರಿಯಲ್ಲಿ ನಯನತಾರ ಮದುವೆ ಮಾತ್ರವಲ್ಲ ಆಕೆಯ ವೈಯಕ್ತಿಕ ಜೀವನದ ಸಾಕಷ್ಟು ವಿಚಾರಗಳನ್ನು ತೆರೆದಿಡಲಾಗುತ್ತಿದೆ. ಅದಕ್ಕೆ ಸಂಬಂಧಿಸಿದ ಟ್ರೈಲರ್ ಇದೀಗ ರಿಲೀಸ್ ಆಗಿದೆ. ನಿರ್ದೇಶಕ ಗೌತಮ್ ವಾಸುದೇವ್ ಮೆನನ್ ಈ ಡಾಕ್ಯೂಮೆಂಟರಿ ಕಟ್ಟಿಕೊಟ್ಟಿದ್ದಾರೆ. ವಿಕ್ಕಿ-ನಯನ್ ಅದ್ಧೂರಿ ಮದುವೆಯ ಜೊತೆ ಜೊತೆಗೆ ಆಕೆ ಬಗ್ಗೆ ಸಾಕಷ್ಟು ಜನ ಸೆಲೆಬ್ರೆಟಿಗಳು ಇದರಲ್ಲಿ ಮಾತನಾಡಿರುವುದನ್ನು ನೋಡಬಹುದು. ಸ್ವತಃ ನಯನತಾರ ಹಾಗೂ ವಿಘ್ನೇಶ್ ತಮ್ಮ ವೈಯಕ್ತಿಕ, ಸಿನಿಮಾ, ಪ್ರೀತಿಯ ಕಥೆಯನ್ನು ಹೇಳುತ್ತಾ ಸಾಗುತ್ತಾರೆ.

ಉಪೇಂದ್ರ ನಿರ್ದೇಶಿಸಿ ನಟಿಸಿದ್ದ 'ಸೂಪರ್' ಚಿತ್ರದಲ್ಲಿ ನಯನತಾರ ನಾಯಕಿಯಾಗಿ ನಟಿಸಿದ್ದರು. ಇಂದಿರಾ ಆಗಿ ಆಕೆಯ ನಟನೆ ಕನ್ನಡ ಸಿನಿರಸಿಕರಿಗೆ ಇಷ್ಟವಾಗಿತ್ತು. ಸದ್ಯ ನಯನತಾರಾ ಲೈಫ್‌ಸ್ಟೋರಿ ಡಾಕ್ಯುಮೆಂಟರಿಯಲ್ಲಿ ನಟ, ನಿರ್ದೇಶಕ ಉಪೇಂದ್ರ ಕೂಡ ಮಾತನಾಡಿದ್ದಾರೆ. "ಎಲ್ಲರೂ ಆಕೆಯನ್ನು ಲೇಡಿ ಸೂಪರ್ ಸ್ಟಾರ್ ಎನ್ನುತ್ತಾರೆ" ಎನ್ನುವ ಉಪೇಂದ್ರ ಮಾತಿನೊಂದಿಗೆ 'ನಯನತಾರ: ಬಿಯಾಂಡ್ ದಿ ಫೇಯರಿ ಟೇಲ್' ಡಾಕ್ಯುಮೆಂಟರಿ ಟ್ರೈಲರ್ ಶುರುವಾಗುತ್ತದೆ.

Kannada actor Upendra joins Nayanthara Beyond the Fairy Tale Documentary trailer

ತಾಪ್ಸಿ ಪನ್ನು, ರಾಣಾ ದಗ್ಗುಬಾಟಿ, ರಾಧಿಕಾ ಶರತ್‌ಕುಮಾರ್, ನಾಗಾರ್ಜುನ ಸೇರಿದಂತೆ ಹಲವರು ನಯನತಾರ ಬಗ್ಗೆ ಡಾಕ್ಯುಮೆಂಟರಿಯಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ನಯನತಾರ ತಮ್ಮ ರಿಲೇಷನ್‌ಶಿಪ್‌ಗಳ ಬಗ್ಗೆಯೂ ಮಾತನಾಡಿರುವಂತೆ ಕಾಣುತ್ತದೆ. ಜೊತೆಗೆ ತಮ್ಮ ಬಗ್ಗೆ ಸುಳ್ಳು ವದಂತಿಗಳನ್ನು ಬಂದಾಗ ಅದನ್ನು ಹೇಗೆ ಎದುರಿಸಿದೆ ಎನ್ನುವುದನ್ನು ಹೇಳಿಕೊಂಡಿದ್ದಾರೆ.

ವಿಘ್ನೇಶ್- ನಯನ್ ತಮ್ಮ ಲವ್‌ಸ್ಟೋರಿಯನ್ನು ಬಿಚ್ಚಿಟ್ಟಿದ್ದಾರೆ. ವಿಘ್ನೇಶ್ ನಿರ್ದೇಶನದ 'ನಾನುಂ ರೌಡಿತಾನ್' ಚಿತ್ರದಲ್ಲಿ ನಯನ್ ನಟಿಸಿದ್ದರು. ಅದೇ ಸಮಯದಲ್ಲಿ ಇಬ್ಬರ ನಡುವೆ ಲವ್ವಾಗಿತ್ತು. ಆ ಚಿತ್ರದ ಕೊನೆ ಶೆಡ್ಯೂಲ್‌ವರೆಗೂ ನಮ್ಮಿಬ್ಬರ ರಿಲೇಷನ್‌ಶಿಪ್ ಬಗ್ಗೆ ಯಾರಿಗೂ ಗೊತ್ತಿರಲಿಲ್ಲ ಎಂದು ವಿಘ್ನೇಶ್ ಹೇಳಿದ್ದಾರೆ. ರಜನಿಕಾಂತ್, ಶಾರುಖ್ ಖಾನ್, ಮಣಿರತ್ನಂ ಸೇರಿ ಖ್ಯಾತನಾಮರು ವಿಕ್ಕಿ-ನಯನ್ ಮದುವೆಗೆ ಸಾಕ್ಷಿಯಾಗಿದ್ದ ಸುಂದರ ಕ್ಷಣಗಳು ಡಾಕ್ಯುಮೆಂಟರಿಯಲ್ಲಿ ನೋಡಬಹುದು.

ವಿಘ್ನೇಶ್‌ ಶಿವನ್‌ಗೂ ಮುನ್ನ ನಯನತಾರ ನಟರಾದ ಸಿಂಬು ಹಾಗೂ ಪ್ರಭುದೇವಾ ಜೊತೆ ಪ್ರೀತಿಲಿ ಬಿದ್ದಿದ್ದರು. ಈ ವಿಚಾರ ಗುಟ್ಟಾಗಿ ಏನು ಉಳಿದಿಲ್ಲ. ಸದ್ಯ ಡಾಕ್ಯುಮೆಂಟರಿಯಲ್ಲಿ ನಯನ್ ಅವರಿಬ್ಬರ ಬಗ್ಗೆ ಏನೆಲ್ಲಾ ಮಾತನಾಡುತ್ತಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ. ರಿಲೇಶನ್‌ಶಿಪ್ ಬಗ್ಗೆ ಆಕೆ ಮಾತನಾಡಿರುವ ಬಗ್ಗೆ ಟ್ರೈಲರ್‌ನಲ್ಲಿ ಸುಳಿವು ಸಿಗುತ್ತಿದೆ. ನವೆಂಬರ್ 18ಕ್ಕೆ 'ನಯನತಾರ: ಬಿಯಾಂಡ್ ದಿ ಫೇಯರಿ ಟೇಲ್' ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ.

2022ರ ಜೂನ್ 9ರಂದು ಚೆನ್ನೈ, ಮಹಾಬಲಿಪುರಂನಲ್ಲಿರುವ ಖಾಸಗಿ ರೆಸಾರ್ಟ್‌ನಲ್ಲಿ ನಯನ್-ವಿಘ್ನೇಶ್ ಮದುವೆ ನಡೆದಿತ್ತು. ಕೆಂಪು ಬಣ್ಣದ ಸೀರೆಯಲ್ಲಿ ಮದುಮಗಳಾಗಿ ನಯನ್ ಕಂಗೊಳಿಸಿದ್ದರು.

More from Filmibeat

English summary
Nayanthara: Beyond The Fairy Tale Documentary Trailer released. Documentary will release on Netflix on November 18;
Read more about: upendra nayanthara ott
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X