ಕನ್ನಡದ ಬೆಲ್ ಬಾಟಮ್ ಸಿನಿಮಾ ತೆಲುಗು ಒಟಿಟಿಗೆ

2019 ರಲ್ಲಿ ಬಿಡುಗಡೆ ಆಗಿದ್ದ ಕನ್ನಡದ ಹಿಟ್ ಸಿನಿಮಾ ಬೆಲ್ ಬಾಟಮ್. ರಿಷಬ್ ಶೆಟ್ಟಿ-ಹರಿಪ್ರಿಯಾ ಮುಖ್ಯ ಭೂಮಿಕೆಯಲ್ಲಿದ್ದ ಈ ಸಿನಿಮಾ ವಿಮರ್ಶಿಕರಿಂದಲೂ ಮೆಚ್ಚುಗೆ ಪಡೆದಿತ್ತು.

ಟಿವಿಗಳಲ್ಲಿ ಕೆಲವು ಭಾರಿ ಪ್ರಸಾರ ಆಗಿರುವ ಈ ಸಿನಿಮಾ ಇದೀಗ, ತೆಲುಗು ಪ್ರೇಕ್ಷಕರನ್ನು ರಂಜಿಸಲೆಂದು ತೆಲುಗಿನ ಒಟಿಟಿ 'ಆಹಾ'ಗೆ ಹೋಗಿದೆ.

ಹೌದು, ಬೆಲ್ ಬಾಟಮ್ ಸಿನಿಮಾ ತೆಲುಗಿನ 'ಆಹಾ' ಒಟಿಟಿಯಲ್ಲಿ ಪ್ರಸಾರವಾಗಲಿದೆ. ಆಹಾ ಒಟಿಟಿಯು ಸಂಪೂರ್ಣ ತೆಲುಗು ಒಟಿಟಿಯಾಗಿದ್ದು, ತೆಲುಗಿನ ಹೊರತಾಗಿ ಬೇರೆ ಕಂಟೆಂಟ್ ಅನ್ನು ಪ್ರದರ್ಶಿಸುವುದಿಲ್ಲ. ಈಗ ಬೆಲ್ ಬಾಟಮ್ ತೆಲುಗು ಆವೃತ್ತಿಯು ಆಹಾ ದಲ್ಲಿ ಪ್ರಸಾರವಾಗಲಿದೆ.

Kannada Bell Bottom Movie Will Stream In Telugu OTT

ಜಯತೀರ್ಥ ನಿರ್ದೇಶಿಸಿದ್ದ ಈ ಸಿನಿಮಾಕ್ಕೆ ಟಿಕೆ ದಯಾನಂದ ಕತೆ ಬರೆದಿದ್ದರು. ಹಾಸ್ಯಮಯ ಥ್ರಿಲ್ಲರ್ ಕತೆಯಾಗಿದ್ದ ಬೆಲ್ ಬಾಟಂ ಎಲ್ಲ ವಯೋಮಾನದವರನ್ನು ಸೆಳೆದು ಸದಬಿರುಚಿಯ ಸಿನಿಮಾ ಎನಿಸಿಕೊಂಡಿತ್ತು. ಸಿನಿಮಾದಲ್ಲಿನ ಭಿನ್ನ-ಭಿನ್ನ ಪಾತ್ರಗಳು ಜನರನ್ನು ಸೆಳೆದಿದ್ದವು. ಅಚ್ಯುತ್ ಕುಮಾರ್, ಯೋಗರಾಜ್ ಭಟ್, ಶಿವಮಣಿ ಇನ್ನೂ ಹಲವರು ಸಿನಿಮಾದಲ್ಲಿ ಪಾತ್ರವಹಿಸಿದ್ದರು.

Recommended Video

ಮಂಡ್ಯದಲ್ಲೂ ನಡೆದೇ ಹೋಯ್ತು ಅಮಾನವೀಯ ಘಟನೆ | Filmibeat Kannada

ಇದೀಗ ಬೆಲ್ ಬಾಟಂ ಸಿನಿಮಾದ ಎರಡನೇಯ ಭಾಗವೂ ತಯಾರಾಗುತ್ತಿದೆ. ಜಯತೀರ್ಥ ಅವರೇ ಎರಡನೇ ಭಾಗದ ನಿರ್ದೇಶನವನ್ನೂ ಮಾಡಲಿದ್ದಾರೆ. ಮೊದಲ ಸಿನಿಮಾದಲ್ಲಿದ್ದ ಬಹುತೇಕ ಪಾತ್ರವರ್ಗ ಬೆಲ್‌ ಬಾಟಂ2 ನಲ್ಲಿಯೂ ಮುಂದುವರೆಯುತ್ತದೆ ಎನ್ನಲಾಗುತ್ತಿದೆ.

More from Filmibeat

English summary
Kannada Bell Bottom movie will stream in Telugu OTT Aha. Movie directed by Jayatheertha, Rishab Shetty-Haripriya were in the lead role.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X