Perusu Movie: ಅಡಲ್ಟ್ ಕಾಮಿಡಿ ಸಿನಿಮಾ 'ಪೆರುಸು' ಓಟಿಟಿಗೆ ಬಂದಿದೆ; ಕನ್ನಡದಲ್ಲೇ ನೋಡಿ

ಪ್ರತಿ ವಾರ ಓಟಿಟಿಗೆ ಸಾಕಷ್ಟು ಇಂಟ್ರೆಸ್ಟಿಂಗ್ ಸಿನಿಮಾಗಳು ಬರುತ್ತವೆ. ಇತ್ತೀಚೆಗೆ ಬೇರೆ ಭಾಷೆಯ ಚಿತ್ರಗಳು ಕನ್ನಡಕ್ಕೆ ಹೆಚ್ಚು ಹೆಚ್ಚು ಡಬ್ ಆಗುತ್ತಿವೆ. ಚಿತ್ರಮಂದಿರದಲ್ಲಿ ಸದ್ದು ಮಾಡದಿದ್ದರೂ ಓಟಿಟಿಯಲ್ಲಿ ಹೆಚ್ಚು ವೀಕ್ಷಕರನ್ನು ತಲುಪುತ್ತಿದೆ.

ತಮಿಳಿನ ಅಡಲ್ಟ್ ಕಾಮೆಡಿ ಸಿನಿಮಾ 'ಪೆರುಸು' ಸದ್ಯ ಕನ್ನಡದಲ್ಲೇ ವೀಕ್ಷಣೆಗೆ ಲಭ್ಯವಿದೆ. ಇತ್ತೀಚೆಗೆ ಸಿನಿಮಾ ಓಟಿಟಿಗೆ ಎಂಟ್ರಿ ಕೊಟ್ಟಿದೆ. ಮಾರ್ಚ್ 14ಕ್ಕೆ ಈ ಬ್ಲ್ಯಾಕ್ ಕಾಮೆಡಿ ಸಿನಿಮಾ ತೆರೆಗೆ ಬಂದಿತ್ತು. ಆದರೆ ದೊಡ್ಡಮಟ್ಟದಲ್ಲಿ ರೆಸ್ಪಾನ್ಸ್ ಸಿಕ್ಕಿರಲಿಲ್ಲ. ಆದರೆ ಚಿತ್ರದ ಕೆಲ ಪ್ರೋಮೊಗಳು ವೈರಲ್ ಆಗಿತ್ತು. ಹಾಗಾಗಿ ಸಿನಿರಸಿಕರು ಓಟಿಟಿ ಸ್ಟ್ರೀಮಿಂಗ್‌ಗಾಗಿ ಕಾಯುತ್ತಿದ್ದರು.

Kannada Dubbed black comedy film Perusu now streaming on OTT

ಇಳಂಗೋ ರಾಮ್ ನಿರ್ದೇಶನದ ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿ ವೈಭವ್, ಸುನಿಲ್ ರೆಡ್ಡಿ, ಚಾಂದನಿ ತಮಿಳರಸನ್, ಬಾಲ ಶರವಣನ್, ಕರುಣಾಕರನ್, ಮುನೀಶ್‌ಕಾಂತ್ ನಟಿಸಿದ್ದಾರೆ. ಸಿಂಪಲ್ ಕಥೆಯನ್ನು ಹಾಸ್ಯದ ಲೇಪನದೊಂದಿಗೆ ಕಟ್ಟಿಕೊಡುವ ಪ್ರಯತ್ನ ಮಾಡಲಾಗಿದೆ. ಓಟಿಟಿಯಲ್ಲಿ ಸಿನಿಮಾ ನೋಡುತ್ತಿರುವವರು ಎಂಜಾಯ್ ಮಾಡುತ್ತಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದು ಕೆಲವರು ಸಿನಿಮಾ ಚೆನ್ನಾಗಿಲ್ಲ ಎಂದು ಹೇಳುತ್ತಿದ್ದಾರೆ. ಅಷ್ಟಕ್ಕೂ ಕಥೆ ಏನು? ಸಿನಿಮಾ ಹೇಗಿದೆ? ಮುಂದೆ ಓದಿ.

ಸಿನಿಮಾ ಕಥೆ

ಕುಟುಂಬವೊಂದರ ಹಿರಿಯ ವ್ಯಕ್ತಿ ದಿಢೀರನೆ ಕೊನೆಯುಸಿರೆಳೆಯುತ್ತಾನೆ. ಬಳಿಕ ಒಂದು ಶಾಕಿಂಗ್ ವಿಚಾರ ಗೊತ್ತಾಗುತ್ತದೆ. ಅದನ್ನು ಮುಚ್ಚಿಟ್ಟು ಶವದ ಅಂತ್ಯಕ್ರಿಯೆ ಮಾಡಲು ಮಕ್ಕಳು, ಹೆಂಡತಿ, ಸೊಸೆ ಎಲ್ಲರೂ ಏನೆಲ್ಲಾ ಸರ್ಕಸ್ ಮಾಡುತ್ತಾರೆ. ಈ ವಿಚಾರ ಮನೆಯ ಪ್ರತಿಯೊಬ್ಬರಿಗೂ ಗೊತ್ತಾದಾಗ ಏನೆಲ್ಲಾ ಆಗುತ್ತದೆ ಎನ್ನುವುದು ಇನ್ನುಳಿದ ಕಥೆ.

Kannada Dubbed black comedy film Perusu now streaming on OTT

ಸಿನಿಮಾ ಹೇಗಿದೆ?

ಒಂದು ವಿಚಿತ್ರ ಸನ್ನಿವೇಶದ ಸುತ್ತಾ 'ಪೆರುಸು' ಸಿನಿಮಾ ಕಥೆ ಸುತ್ತುತ್ತದೆ. ಇಂತಾದೊಂದು ಪಾಯಿಂಟ್ ಸುತ್ತಾ ಸಿನಿಮಾ ಮಾಡಬಹುದು ಎಂದು ನಿರ್ದೇಶಕರಿಗ ಹೇಗೆ ಹೊಳೆಯಿತು ಎಂದು ಸಾಕಷ್ಟು ಜನ ಕೇಳುತ್ತಿದ್ದಾರೆ. ಇನ್ನು ನಗಿಸೋಕೆ ಕಾಮಿಡಿ ಟೈಮಿಂಗ್ ಬಹಳ ಮುಖ್ಯ. ಚಿತ್ರದಲ್ಲಿ ನಟಿಸಿರುವ ಪ್ರತಿಯೊಬ್ಬರು ಆ ವಿಚಾರದಲ್ಲಿ ನಿರಾಸೆ ಮೂಡಿಸುವುದಿಲ್ಲ. ಲಾಜಿಕ್ ಹುಡುಕದೇ ಕಾಮಿಡಿ ಎಂಜಾಯ್ ಮಾಡುವವರಿಗೆ ಸಿನಿಮಾ ಇಷ್ಟವಾಗುತ್ತದೆ.

ಕುಡುಕ ಮಗನಾಗಿ ವೈಭವ್ ಹಾಗೂ ಜವಾಬ್ದಾರಿಯುವ ಮಗನಾಗಿ ಸುನಿಲ್ ರೆಡ್ಡಿ ಅಭಿನಯ ಚಿತ್ರದ ಹೈಲೆಟ್. ಸಾಮಾನ್ಯವಾಗಿ ಯಾವುದೇ ಮನೆಯಲ್ಲಿ ಸಾವು ಸಂಭವಿಸಿದರೆ ವಿಷಾರ ಮನೆ ಮಾಡುತ್ತದೆ. ಆದರೆ ವಿಚಿತ್ರ ಸನ್ನಿವೇಶ ನಿರ್ಮಾಣವಾಗಿ ಮನೆಯಲ್ಲಿ ಸಮಸ್ಯೆ ಎದುರಾಗುತ್ತದೆ. ಅದನ್ನು ಬಗೆಹರಿಸಲು ಕುಟುಂಬ ಸದಸ್ಯರ ಪೇಚಾಟವೇ ನೋಡುವುದಕ್ಕೆ ಮಜಾ ಕೊಡುತ್ತದೆ.

ಅಡಲ್ಟ್ ಕಾಮೆಡಿ ಇಷ್ಟಪಡುವವರಿಗೆ 'ಪೆರುಸು' ಸಿನಿಮಾ ರುಚಿಸಬಹುದು. ಆದರೆ ಮಾಮೂಲಿ ಹಾಸ್ಯ ಕೇಳುವವರಿಗೆ ಇದು ಬೇಸರ ಹುಟ್ಟಿಸಬಹುದು. ಎಲ್ಲೂ ಅಶ್ಲೀಲ ಎನಿಸದಂತೆ ಸಿನಿಮಾ ಕಟ್ಟಿಕೊಡುವ ಪ್ರಯತ್ನ ಮಾಡಲಾಗಿದೆ. ಆದರೂ ಮನೆಮಂದಿ ಜೊತೆ ಕೂತು ಈ ಸಿನಿಮಾ ನೋಡಲು ಕಸಿವಿಸಿ ಎನಿಸಬಹುದು. ಈಗಾಗಲೇ ಸಿನಿಮಾ ನೋಡಿದ ಕೆಲವರು ಇದೇ ವಾದವನ್ನು ಮುಂದಿಡುತ್ತಿದ್ದಾರೆ. ಸತ್ಯ ತಿಲಕಂ ಛಾಯಾಗ್ರಹಣ, ಅರುಣ್ ರಾಜ್ ಸಂಗೀತ ಚಿತ್ರದಲ್ಲಿದೆ.

ನೆಟ್‌ಫ್ಲಿಕ್ಸ್‌ನಲ್ಲಿ ಸದ್ಯ 'ಪೆರುಸು' ಸಿನಿಮಾ ಸ್ಟ್ರೀಮಿಂಗ್ ಆಗುತ್ತಿದೆ. ತಮಿಳು ಚಿತ್ರವನ್ನು ಕನ್ನಡ, ತೆಲುಗು ಹಾಗೂ ಮಲಯಾಳಂ ಆಡಿಯೋದಲ್ಲಿ ವೀಕ್ಷಿಸಬಹುದು. ಅಡಲ್ಟ್ ಕಾಮಿಡಿ ಸಿನಿಮಾಗಳು ಇತ್ತೀಚೆಗೆ ಬಹಳ ಕಮ್ಮಿ ಆಗಿದೆ. ಆಗೊಮ್ಮೆ ಈಗೊಮ್ಮೆ ಇಂತಹ ಪ್ರಯತ್ನ ನಡೆಯುತ್ತದೆ. ಸದ್ಯ 'ಪೆರುಸು' ಸಿನಿಮಾ ಓಟಿಟಿ ವೀಕ್ಷಕರನ್ನು ರಂಜಿಸುತ್ತಿದೆ. ಸ್ಟೋನ್ ಬೆಂಚ್ ಫಿಲ್ಮ್ಸ್,
ಬವೇಜಾ ಸ್ಟುಡಿಯೋಸ್ ಹಾಗೂ ಎಂಬರ್ಲೈಟ್ ಸ್ಟುಡಿಯೋ ಸಂಸ್ಥೆಗಳು ಒಟ್ಟಾಗಿ ಸಿನಿಮಾ ನಿರ್ಮಾಣ ಮಾಡಿವೆ.

More from Filmibeat

English summary
Black comedy film Perusu Review in Kannada, Movie now released in Ott,
Read more about: tamil kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X