For Quick Alerts
  ALLOW NOTIFICATIONS  
  For Daily Alerts

  ಅಮೆಜಾನ್ ಪ್ರೈಂನಲ್ಲಿ ನೇರ ಬಿಡುಗಡೆ ಆಗುತ್ತಿದೆ ಹೊಸ ಕನ್ನಡ ಸಿನಿಮಾ

  |

  ಅಮೆಜಾನ್, ನೆಟ್‌ಫ್ಲಿಕ್ಸ್‌ ನಂಥಹಾ ಒಟಿಟಿಗಳು ಕನ್ನಡ ಸಿನಿಮಾಗಳ ಬಗ್ಗೆ ದೊಡ್ಡ ಅಸಡ್ಡೆ ಹೊಂದಿವೆ ಎಂಬ ಮಾತುಗಳು ಕೇಳಿಬರುತ್ತಿರುವ ಸಮಯದಲ್ಲಿಯೇ ಹೊಸ ಕನ್ನಡ ಸಿನಿಮಾವೊಂದು ನೇರವಾಗಿ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಕಾಣುತ್ತಿದೆ.

  ಪವನ್ ಕುಮಾರ್ ಸ್ಟುಡಿಯೋಸ್ ಚಲನಚಿತ್ರ ಮತ್ತು ರಾಕೆಟ್ ಸೈನ್ಸ್ ಎಂಟರ್‌ಟೈನ್‌ಮೆಂಟ್ ಪ್ರೊಡಕ್ಷನ್‌ನಿಂದ ನಿರ್ಮಾಣವಾಗಿರುವ, ನಾಗಭೂಷಣ್ ನಟಿಸಿರುವ ಕನ್ನಡ ಸಿನಿಮಾ 'ಇಕ್ಕಟ್' ಅಮೆಜಾನ್ ಪ್ರೈಂನಲ್ಲಿ ಜುಲೈ 21 ಕ್ಕೆ ಬಿಡುಗಡೆ ಆಗುತ್ತಿದೆ.

  ವಿಚ್ಛೇಧನ ಬಯಸಿರುವ ದಂಪತಿಗಳು ಕೊರೊನಾ ಲಾಕ್‌ಡೌನ್‌ನಿಂದಾಗಿ ಒಂದೇ ಮನೆಯಲ್ಲಿ ಉಳಿವಂತಾಗುವುದು ಹಾಗೂ ಆ ಮನೆಗೆ ಅಗಂತುಕರ ಆಗಮನದ ಕತೆಯನ್ನು ಈ ಸಿನಿಮಾ ಹೊಂದಿದೆ. ಇಡೀಯ ಸಿನಿಮಾವನ್ನು ಬಹುತೇಕ ಒಂದು ಮನೆಯಲ್ಲಿ ಚಿತ್ರೀಕರಣ ಮಾಡಲಾಗಿದೆ.

  ನಾಗಭೂಷಣ ಹಾಗೂ ಭೂಮಿ ಶೆಟ್ಟಿ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಜೊತೆಗೆ RJ ವಿಕಿ, ಸುಂದರ್ ವೀಣಾ, ಆನಂದ್ ನಿನಾಸಮ್ ಮತ್ತು ನವೀನ್ ಚೆಥಾನ ಸಹ ಸಿನಿಮಾದಲ್ಲಿದ್ದಾರೆ. ಈ ಸಿನಿಮಾವನ್ನು ಇಶಾಮ್ ಮತ್ತು ಹಸೀನ್ ಖಾನ್ ನಿರ್ದೇಶನ ಹಾಗೂ ಸಂಕಲನ ಮಾಡಿದ್ದಾರೆ.

  ಮಾರ್ಚ್ 24 ರಂದು ಇದೇ 'ಇಕ್ಕಟ್' ಸಿನಿಮಾದ ಟ್ರೇಲರ್ ಬಿಡುಗಡೆ ಆಗಿತ್ತು, ಟ್ರೇಲರ್‌ಗೆ ಒಳ್ಳೆಯ ಪ್ರತಿಕ್ರಿಯೆಗಳು ಸಹ ಬಂದಿದ್ದವು. ಈ ಸಿನಿಮಾಕ್ಕೆ 'ಲೂಸಿಯಾ' ಖ್ಯಾತಿಯ ಪವನ್ ಕುಮಾರ್ ಅವರ ಪಿಕೆ ಸ್ಟುಡಿಯೋಸ್‌ನ ಬೆಂಬಲ ಇದೆ.

  English summary
  Kannada movie Ikkat releasing on Amazon prime on July 21. Movie directed by Esham and Haseen Khan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X