ಅಮೇಜಾನ್ ಪ್ರೈಮ್‌ನಲ್ಲಿ ಮತ್ತೆ ರಿಲೀಸ್ ಆಗುತ್ತಿದೆ 'ಜಿಲ್ಕ'

ಲಾಕ್‌ಡೌನ್ ನಂತರ ಸಿನಿಮಾ ಥಿಯೇಟರ್‌ಗಳಿಗೆ ಸರ್ಕಾರ ಇನ್ನೂ 100 ಪರ್ಸೆಂಟ್ ಅವಕಾಶ ನೀಡಿಲ್ಲ. ಆದ್ದರಿಂದ ಯಾವ ಹೊಸ ಸಿನಿಮಾಗಳೂ ಬಿಡುಗಡೆಯಾಗುತ್ತಿಲ್ಲ ಎನ್ನುವ ಸಿನಿಪ್ರಿಯರಿಗೆ ಸಿಹಿ ಸುದ್ಧಿಯೆನೆಂದರೆ, ಇದೇ 10ನೇ ತಾರೀಕು ಅಂದರೆ ಗಣೇಶ ಚತುರ್ಥಿಯ ದಿನ ಅಮೆಜಾನ್ ಪ್ರೈಮ್ ಮತ್ತು ನಮ್ಮ ಫ್ಲೆಕ್ಸ್ ಓಟಿಟಿ ಫ್ಲಾಟ್‌ಫಾರ್ಮ್‌ನಲ್ಲಿ 'ಜಿಲ್ಕ' ಎನ್ನುವ ಅಪ್ಪಟ ಕನ್ನಡ ಸಿನಿಮಾ ಪ್ರೀಮಿಯರ್ ಆಗ್ತಿದೆ.

ಜಿಲ್ಕ ಅಪ್ಪಟ ಹಾಸ್ಯ, ಭಾವನಾತ್ಮಕ ಮತ್ತು ಇವತ್ತಿನ ಯಂಗ್ ಜನರೇಷನ್ನಿಗೆ ಒಪ್ಪುವಂತಹ ಮನರಂಜನೆಯ ಚಿತ್ರವಾಗಿದೆ.

ಔಟ್ ಅಂಡ್ ಔಟ್ ಯೂತ್ ಸಿನಿಮಾ. ಇಂದಿನ ಯುವ ಜನಾಂಗಕ್ಕೆ ಸ್ಕೂಲ್, ಕಾಲೇಜ್ ಲೈಫ್ ಹಾಗೂ ಜೀವನದ ಪಾಠ ಪರಿಚಯ ಮಾಡುವ ಸಿನಿಮಾ. ಹಿರಿಯರ ಜನರೇಷನ್ ಗೂ ಇಂದಿನ ಜನರೇಷನ್ ನಡುವಿನ ಅಂತರವನ್ನು ತಿಳಿಸುವ ಚಿತ್ರ.

ಕವೀಶ್ ಶೆಟ್ಟಿ ಎನ್ನುವ ಉಡುಪಿ ಮೂಲದ ಯುವ ನಟ ತನ್ನದೇ ನಿರ್ಮಾಣ ಸಂಸ್ಥೆಯ ಅಡಿಯಲ್ಲಿ ಈ ಚಿತ್ರದ ಮೂಲಕ ಉದಯೋನ್ಮುಖ ನಾಯಕ ಮತ್ತು ನಿರ್ದೇಶಕನಾಗಿ ಪರಿಚಯ ಆಗ್ತಿದ್ದಾರೆ. ಈ ಚಿತ್ರದಲ್ಲಿ ಎರಡು ತಲೆಮಾರುಗಳಲ್ಲಿ ಮನುಷ್ಯನ ಸಂಬಂಧ ಮತ್ತು ಭಾವನೆಗಳಲ್ಲಿ ಉಂಟಾದ ಬದಲಾವಣೆ ಮತ್ತು ಅದರ ಪ್ರಭಾವಗಳನ್ನು ತುಂಬಾ ಸೊಗಸಾಗಿ ಚಿತ್ರಿಸಲಾಗಿದೆ.

Kannada Movie Jilka Will premiere in amazon prime video on september 10th

ಅಲ್ಲದೆ, ಕವೀಶ್ ಶೆಟ್ಟಿ ಪಾತ್ರಕ್ಕೆ ಸಹಜತೆಯನ್ನು ಒದಗಿಸುವ ಕಾರಣಕ್ಕೆ ಆಯಾಯ ಕಾಲಘಟ್ಟಕ್ಕೆ ತಕ್ಕಂತೆ ನಾಯಕನ ದೈಹಿಕ ತೂಕವನ್ನು 52, 68 ಮತ್ತು 78 ಕೆಜಿಯಷ್ಟು ತೂಕವನ್ನು ಪಾತ್ರದ ವಯಸ್ಸಿಗೆ ತಕ್ಕಂತೆ ಶ್ರಮವಹಿಸಿ ಏರಿಳಿತಗೊಳಿಸಿ ನಟಿಸಿರುವುದು ವಿಶೇಷವಾಗಿ ಎದ್ದು ಕಾಣುತ್ತದೆ. ಈ ರೀತಿಯ ಬಾಡಿ ಟಾನ್ಸ್ಮಿಷನ್ ಪ್ರಯತ್ನ ಇತ್ತೀಚಿನ ದಿನಗಳಲ್ಲಿ ಹೊಸತು. ಹಾಗೆಯೇ ಈ ಚಿತ್ರದಲ್ಲಿ ಪ್ರಿಯಾ ಹೆಗ್ಡೆ, ಲಕ್ಷ್ಯ ಶೆಟ್ಟಿ, ಗೋಪಿಕಾ ದಿನೇಶ್ ಮುಂತಾದವರು ನಟಿಸಿದ್ದಾರೆ.

ಲಾಕ್‌ಡೌನ್‌ಗೂ ಮುನ್ನ ಥಿಯೇಟರ್‌ನಲ್ಲಿ ಬಿಡುಗಡೆಯಾಗಿ ಜನಮೆಚ್ಚುಗೆ ಪಡೆದಿದ್ದ ಈ ಚಿತ್ರ ಲಾಕ್ಡೌನ್ ಕಾರಣದಿಂದ ಹೆಚ್ಚಿನ ಸಿನಿಮಾ ಪ್ರಿಯರಿಗೆ ನೋಡುವ ಅವಕಾಶ ಸಿಕ್ಕಿರಲಿಲ್ಲ, ಇದೀಗ, ಅಮೆಜಾನ್ ಪ್ರೈಮ್ ಮತ್ತು ನಮ್ಮ ಫ್ಲೆಕ್ಸ್ ಮೂಲಕ ಪ್ರೇಕ್ಷಕರ ಮುಂದೆ ಬರ್ತಿದೆ.

More from Filmibeat

English summary
Kannada Movie Jilka set to premiere in amazon prime video on september 10th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X