ಕನ್ನಡದ ನೆಟ್‌ಫ್ಲಿಕ್ಸ್ ಬಿಡುಗಡೆ: ಒಂದು ರೂಪಾಯಿಗೆ ಸಿನಿಮಾ!
ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಂ ಮಾದರಿ ಓಟಿಟಿಗಳು ಕಡಿಮೆ ಸಮಯದಲ್ಲಿ ದೊಡ್ಡ ಮಟ್ಟದ ವೀಕ್ಷಕರನ್ನು ಆಕರ್ಷಿಸಿಕೊಂಡಿವೆ. ಸಿನಿಮಾ ಉದ್ಯಮವನ್ನೂ ಮೀರಿ ಬೆಳೆದಿವೆ ಈ ಓಟಿಟಿಗಳು.
Recommended Video
ಇಂಥಹಾ ಸಂದರ್ಭದಲ್ಲಿಯೇ ಕನ್ನಡಕ್ಕಾಗಿ ಪ್ರತ್ಯೇಕ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಂ ಮಾದರಿಯ ಓಟಿಟಿ ಯನ್ನು ಸ್ಥಾಪಿಸುವ ಚರ್ಚೆ ಜೋರಾಗಿಯೇ ನಡೆಯುತ್ತಿತ್ತು, ಆದರೆ ಅಚಾನಕ್ಕಾಗಿ ಕನ್ನಡಕ್ಕಾಗಿ ಪ್ರತ್ಯೇಕ ನೆಟ್‌ಫ್ಲಿಕ್ಸ್ ಮಾದರಿಯ ಓಟಿಟಿ ಆರಂಭವಾಗಿಯೇ ಬಿಟ್ಟಿದೆ.
ಹೌದು, ಕನ್ನಡದ್ದೆ ಪ್ರತ್ಯೇಕ ಓಟಿಟಿ ಪ್ರಾರಂಭವಾಗಿದೆ. ಓಟಿಟಿ ಗೆ 'ನಮ್ಮ ಫ್ಲಿಕ್ಸ್' ಎಂದು ಹೆಸರಿಟ್ಟು, ನೆಟ್‌ಫ್ಲಿಕ್ಸ್ ನ ಕನ್ನಡ ಮಾದರಿ ಎಂಬುದನ್ನು ಒತ್ತಿ ಹೇಳಲಾಗಿದೆ.

'ನಮ್ಮ ಫ್ಲಿಕ್ಸ್' ಲೋಕಾರ್ಪಣೆ ಮಾಡಿದ ಉಪೇಂದ್ರ
ರಾಜ್‌ಕುಮಾರ್ ಹುಟ್ಟುಹಬ್ಬದ ದಿನದಂದು ನಟ, ನಿರ್ದೇಶಕ, ರಾಜಕಾರಣಿ ಉಪೇಂದ್ರ ಅವರು 'ನಮ್ಮ ಫ್ಲಿಕ್ಸ್' ಅನ್ನು ಬಿಡುಗಡೆ ಮಾಡಿದ್ದಾರೆ. 'ನಮ್ಮ ಫ್ಲಿಕ್ಸ್' ಆಪ್ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಲಭ್ಯವಿದೆ. ಮುಂದೆ ಆಪಲ್ ಸ್ಟೋರ್ ನಲ್ಲೂ ಲಭ್ಯವಾಗುತ್ತದೆ ಎಂದಿದೆ ತಂಡ.

ಅನ್ವಿಟಾನ್ ಎಂಟರ್‌ಟೇನ್‌ಮೆಂಟ್ ನಿಂದ ಆಪ್
ಕನ್ನಡದ ಯುವಕರ ತಂಡವೊಂದು ಅನ್ವಿಟಾನ್ ಎಂಟರ್‌ಟೇನ್‌ಮೆಂಟ್ ಹೆಸರಿನಲ್ಲಿ ಈ ಆಪ್ ಅಭಿವೃದ್ಧಿಪಡಿಸಿದ್ದು, ನೆಟ್‌ಫ್ಲಿಕ್ಸ್ ಮಾದರಿಯಲ್ಲಿ ದೊಡ್ಡ ಮೊತ್ತದ ಸಬ್‌ಸ್ಕ್ರಿಪ್ಷನ್ ಚಾರ್ಜ್ ಬದಲಿಗೆ, ಅತ್ಯಂತ ಕಡಿಮೆ ಮೊತ್ತದ ಸಬ್‌ಕ್ರಿಪ್ಷನ್ ಚಾರ್ಜ್ ಇಡಲಾಗಿದೆ.

ಕಡಿಮೆ ದರದ ಸಬ್‌ಸ್ಕ್ರಿಪ್ಷನ್ ಚಾರ್ಜ್
'ನಮ್ಮ ಫ್ಲಿಕ್ಸ್' ನಲ್ಲಿ ಕನ್ನಡ ಸಿನಿಮಾಗಳನ್ನು ನೋಡಲು ವರ್ಷವೊಂದಕ್ಕೆ ಕೇವಲ 399 ರೂ ನೀಡಬೇಕಾಗಿದೆ. ಇದರ ಹೊರತಾಗಿ, ವಾರದ, ತಿಂಗಳ ಪ್ಲ್ಯಾನ್‌ಗಳು ಸಹ ಲಭ್ಯವಿದ್ದು, ವಾರಕ್ಕೆ 19 ತಿಂಗಳಿಗೆ 49 ರೂಪಾಯಿಯ ಪ್ಲ್ಯಾನ್‌ಗಳು ಸಹ ಲಭ್ಯವಿದೆ. ವರ್ಷದ ಪ್ಲ್ಯಾನ್ ಕೊಂಡದದ್ದಾದಲಿ ದಿನಕ್ಕೆ ಸರಾಸರಿ ಒಂದು ರೂಪಾಯಿಗೆ ಸಿನಿಮಾ ನೋಡಿದಂತಾಗುತ್ತದೆ.

ಪವನ್ ಕುಮಾರ್ ಪ್ರಯತ್ನ ಆರಂಭಿಸಿದ್ದರು
ಕನ್ನಡಕ್ಕೊಂದು ಪ್ರತ್ಯೇಕ ಓಟಿಟಿ ನಿರ್ಮಿಸುವ ಬಗ್ಗೆ ಲೂಸಿಯಾ ಖ್ಯಾತಿಯ ನಿರ್ದೇಶಕ ಪವನ್ ಸಹ ಪ್ರಯತ್ನ ಆರಂಭಿಸಿದ್ದರು. ಪ್ರಯತ್ನ ಇನ್ನೂ ಚರ್ಚೆಯ ಹಂತದಲ್ಲಿತ್ತು, ಆದರೆ ಅಷ್ಟರಲ್ಲಾಗಲೆ ಯುವಕರ ತಂಡ ಪ್ರತ್ಯೇಕ ಓಟಿಟಿ ನಿರ್ಮಿಸಿಯಾಗಿದೆ.


Click it and Unblock the Notifications











