ಎರಡು ಹೊಸ ಕನ್ನಡ ಚಿತ್ರಗಳು ಓಟಿಟಿಗೆ ಬಂತು; ವೀಕೆಂಡ್ ಮನೆಯಲ್ಲೇ ಸಿನಿಮಾ ನೋಡಿ

ಈ ವಾರ ಕನ್ನಡದ ಯಾವುದೇ ದೊಡ್ಡ ಸಿನಿಮಾ ತೆರೆಗೆ ಬರ್ತಿಲ್ಲ. ತೆಲುಗಿನ 'ಪುಷ್ಪ'-2 ಸಿನಿಮಾ ಕನ್ನಡಕ್ಕೆ ಡಬ್ ಆಗಿ ಬಂದಿದೆ. ಡಬ್ಬಿಂಗ್ ಗುಣಮಟ್ಟ ಚೆನ್ನಾಗಿರುವುದರಿಂದ ಕನ್ನಡದಲ್ಲೇ ಸಿನಿಮಾ ನೋಡಬಹುದು. ಇನ್ನುಳಿದಂತೆ ಈ ವಾರ ಓಟಿಟಿಗೆ ಎರಡು ಕನ್ನಡ ಚಿತ್ರಗಳು ಬಂದಿವೆ.

ಕನ್ನಡ ಸಿನಿಮಾ ಹಾಗೂ ವೆಬ್‌ ಸೀರಿಸ್‌ಗಳು ಓಟಿಟಿಗೆ ಬರೋದು ಕಷ್ಟ ಎನ್ನುವಂತಾಗಿದೆ. ಇತ್ತೀಚೆಗೆ 'ಬಘೀರ' ಹಾಗೂ 'ಮಾರ್ಟಿನ್' ಚಿತ್ರಗಳು ಆ ಬರ ನೀಗಿಸಿದ್ದವು. ಎರಡೂ ಚಿತ್ರಗಳಿಗೆ ಒಳ್ಳೆ ರೆಸ್ಪಾನ್ಸ್ ಸಿಕ್ತಿದೆ. ತೆಲುಗಿನ 'ಲಕ್ಕಿ ಭಾಸ್ಕರ್' ಸಿನಿಮಾ ಕನ್ನಡಕ್ಕೆ ಡಬ್ ಆಗಿ ಕಳೆದ ವಾರ ಸ್ಟ್ರೀಮಿಂಗ್ ಆಗಿತ್ತು. ಆ ಚಿತ್ರಕ್ಕೂ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು.

Kannada Science fiction Murphy and comedy horror film matinee streaming on ott Now

ಈ ವಾರ ಒಂದಲ್ಲ ಎರಡು ಕನ್ನಡ ಸಿನಿಮಾಗಳು ಓಟಿಟಿಗೆ ಬಂದಿವೆ. ಬಹಳ ಹಿಂದೆ ರಿಲೀಸ್ ಆಗಿದ್ದ ನೀನಾಸಂ ಸತೀಶ್ ಹಾಗೂ ರಚಿತಾ ರಾಮ್ ನಟನೆಯ 'ಮ್ಯಾಟ್ನಿ' ಸಿನಿಮಾ ದಿಢೀರನೆ ಈಗ ಸ್ಟ್ರೀಮಿಂಗ್ ಆರಂಭಿಸಿದೆ. ಅಕ್ಟೋಬರ್ 18ಕ್ಕೆ ತೆರೆಗೆ ಬಂದಿದ್ದ 'ಮರ್ಫಿ' ಚಿತ್ರವೂ ರಿಲೀಸ್ ಆಗಿದೆ. ಈ ವಾರ ಮನೆಯಲ್ಲೇ ಕನ್ನಡ ಸಿನಿರಸಿಕರು ಈ 2 ಸಿನಿಮಾ ನೋಡಿ ಎಂಜಾಯ್ ಮಾಡಿದೆ.

ಮನೋಹರ್ ಕಾಂಪಳ್ಳಿ ನಿರ್ದೇಶನದ ಕಾಮಿಡಿ ಹಾರರ್ ಸಿನಿಮಾ 'ಮ್ಯಾಟ್ನಿ' ಇದೀಗ ಸನ್‌ನೆಕ್ಸ್ಟ್‌ನಲ್ಲಿ ವೀಕ್ಷಣೆಗೆ ಲಭ್ಯವಿದೆ. ಇದೇ ವರ್ಷ ಏಪ್ರಿಲ್ 5ರಂದು ಈ ಸಿನಿಮಾ ತೆರೆಗೆ ಬಂದಿತ್ತು. ಅದಿತಿ ಪ್ರಭುದೇವ ಹಾಗೂ ನಾಗಭೂಷಣ್ ಕೂಡ ತಾರಾಗಣದಲ್ಲಿದ್ದಾರೆ. ಚಿತ್ರಕ್ಕೆ ದೊಡ್ಡದಾಗಿ ರೆಸ್ಪಾನ್ಸ್ ಸಿಕ್ಕಿರಲಿಲ್ಲ. ಇದೀಗ ಮನೆಯಲ್ಲೇ ಸಿನಿಮಾ ನೋಡಬಹುದು.

ಹಾರರ್ ಸಿನಿಮಾಗಳಲ್ಲಿ ಒಂದು ಬಂಗಲೆ, ಅಲ್ಲಿ ದುಷ್ಟ ಶಕ್ತಿಗಳ ಕಾಟ, ಕೊನೆಗೆ ನಾಯಕ ಅದನ್ನು ಭೇದಿಸುವುದು ಇಂತಹ ಕಥೆಗಳೇ ಇರುತ್ತದೆ. 'ಮ್ಯಾಟ್ನಿ' ಚಿತ್ರದಲ್ಲೂ ಅದೇ ರೀತಿಯ ಕಥೆ ಇದೆ. ಅದನ್ನು ಬಹಳ ಸೊಗಸಾಗಿ ಕಟ್ಟಿಕೊಡುವ ಪ್ರಯತ್ನ ನಡೆದಿತ್ತು. ಹಾಸ್ಯದ ಜೊತೆ ಜೊತೆಗೆ ಇಲ್ಲಿ ಭಯಪಡಿಸುವ ರಂಜಿಸಿದ್ದಾರೆ.

Kannada Science fiction Murphy and comedy horror film matinee streaming on ott Now

ಇತ್ತೀಚೆಗೆ ಬಿಡುಗಡೆಯಾದ 'ಮರ್ಫಿ' ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. ಸಿನಿಮಾ ನೋಡಿದವರು ಮೆಚ್ಚಿ ಕೊಂಡಾಡಿದ್ದರು. ಆದರೆ ದೊಡ್ಡಮಟ್ಟದಲ್ಲಿ ಸಿನಿಮಾ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಸೆಳೆಯಲಿದೆ. ಬಿಎಸ್‌ಪಿ ವರ್ಮಾ ನಿರ್ದೇಶನದ ಈ ಸೈನ್ಸ್ ಫಿಕ್ಷನ್ ಚಿತ್ರದಲ್ಲಿ ಪ್ರಭು ಮುಂಡ್ಕರ್, ರೋಶಿನಿ ಪ್ರಕಾಶ್ ನಟಿಸಿದ್ದಾರೆ.

ಎರಡು ಕಾಲಘಟ್ಟದ ಕತೆ 'ಮರ್ಫಿ' ಚಿತ್ರದಲ್ಲಿದೆ. ರೇಡಿಯೋವೊಂದು ಚಿತ್ರದಲ್ಲಿ ಮುಖ್ಯ ಪಾತ್ರ ವಹಿಸಿದೆ. ಗೋವಾದಲ್ಲಿ 2017ರಲ್ಲಿ ಚಿತ್ರದ ಕಥೆ ಶುರುವಾಗುತ್ತದೆ. ನಾಯಕ ಡೇವಿಡ್ ಮರ್ಫಿ ಜೀವನದ ಆಗುಹೋಗುಗಳು ಚಿತ್ರದಲ್ಲಿದೆ. ಈ ನಡುವೆ ಆತನಿಗೆ ಸಿಕ್ಕ ಹಳೇ ರೇಡಿಯೋವೊಂದ ಕಥೆಗೆ ತಿರುವು ಕೊಡುತ್ತದೆ. ಅಲ್ಲಿಂದ ಕತೆ 20 ವರ್ಷ ಹಿಂದಕ್ಕೆ ಕರೆದುಕೊಂಡು ಹೋಗುತ್ತದೆ.

ಟೈಮ್ ಟ್ರಾವೆಲ್ ಕಾನ್ಸೆಪ್ಟ್‌ನಲ್ಲಿ ಕಥೆ ಸಾಗುತ್ತದೆ. ಮುಂದೆ ಡೇವಿಡ್ ಮರ್ಫಿ ಫ್ಯಾಮಿಲಿಯ ಹಿಂದಿನ ತಲೆಮಾಡುಗಳ ಕತೆ ತೆರೆದುಕೊಳ್ಳುತ್ತದೆ. ಚಿತ್ರಕ್ಕೆ ನಾಯಕ ಪ್ರಭು ಮುಂಡ್ಕರ್ ಕೂಡ ಬರಹಗಾರರಾಗಿ ಕೆಲಸ ಮಾಡಿದ್ದಾರೆ. ಒಂದಷ್ಟು ಲಾಜಿಕ್‌ಗಳನ್ನು ಪಕ್ಕಕ್ಕಿಟ್ಟು ನೋಡಿದರೆ ಸಿನಿಮಾ ಒಳ್ಳೆ ಅನುಭವ ನೀಡುತ್ತದೆ.

ಒಂದು ಟೈಮ್ ಟ್ರಾವೆಲ್ ಕಾನ್ಸೆಪ್ಟ್ ಸಿನಿಮಾ. ಮತ್ತೊಂದು ಹಾರರ್ ಕಾಮಿಡಿ ಎಂಟರ್‌ಟೈನರ್. ಓಟಿಟಿ ವೀಕ್ಷಕರಿಗೆ ಇದಕ್ಕಿಂತೆ ಇನ್ನೇನು ಬೇಕು. ವೀಕೆಂಡ್ ಮನೆಯಲ್ಲೇ ಕೂತು ಎರಡು ಸಿನಿಮಾಗಳನ್ನು ನೋಡಿ. ಅಂದಹಾಗೆ 'ಮ್ಯಾಟ್ನಿ' ಅಮೇಜಾನ್ ಪ್ರೈಂ ವೀಡಿಯೋದಲ್ಲಿ ರಿಲೀಸ್ ಆಗಿದೆ. ನೀನಾಸಂ ಸತೀಶ್ ಹಾಗೂ ರಚಿತಾ ನಟಿಸಿದ ಎರಡನೇ ಸಿನಿಮಾ 'ಮ್ಯಾಟ್ನಿ'. ಇತ್ತೀಚೆಗೆ ಇವರಿಬ್ಬರ 3ನೇ ಸಿನಿಮಾ 'ಅಯೋಗ್ಯ' ಸೀಕ್ವೆಲ್ ಘೋಷಣೆ ಆಗಿದೆ.

More from Filmibeat

English summary
Two Interesting Kannada Movies start ott Streaming this week;
Read more about: filmibeat original ott sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X