Aadhya Anand,: ಫ್ರೈಡೇ ನೈಟ್ ಪ್ಲ್ಯಾನ್ ಮೂಲಕ ಮತ್ತೆ ಪ್ರೇಕ್ಷಕರ ಮನಗೆದ್ದ ಕನ್ನಡತಿ ಆಧ್ಯಾ ಆನಂದ್

ಕನ್ನಡದ ನಟ, ನಟಿಯರು ಬಾಲಿವುಡ್‌ನಲ್ಲಿ ಮಿಂಚುವುದು ಹೊಸದೇನಲ್ಲ. ಅದರಲ್ಲೂ ಕರಾವಳಿ ಭಾಗದವರೇ ಹೆಚ್ಚು. ಆದರೆ, ಈಗ ಉತ್ತರ ಕನ್ನಡ ಮೂಲದ ಪ್ರತಿಭೆಯೊಂದು ಬಾಲಿವುಡ್‌ನಲ್ಲಿ ಸದ್ದು ಮಾಡುತ್ತಿದೆ. ಅವರೇ ಮಡಿಕೇರಿಯ ಯುವನಟಿ ಆಧ್ಯಾ ಆನಂದ್.

ನೆಟ್‌ಫ್ಲಿಕ್ಸ್ ವೇದಿಕೆಯಲ್ಲಿ ಬಿಡುಗಡೆಯಾಗಿರುವ ಬಾಲಿವುಡ್ ನಟ ದಿವಂಗತ ಇರ್ಫಾನ್ ಖಾನ್ ಪುತ್ರ ಬಾಬಿಲ್ ಖಾನ್, ಜೂಹಿ ಚಾವ್ಲಾ ನಟನೆಯ 'ಫ್ರೈಡೇ ನೈಟ್ ಪ್ಲ್ಯಾನ್' ಚಿತ್ರದಲ್ಲಿ ಮತ್ತೊಬ್ಬ ಯುವ ನಟಿ ಗಮನ ಸೆಳೆಯುತ್ತಿದ್ದಾರೆ. ಅವರೇ ಕನ್ನಡತಿ ಆಧ್ಯಾ ಆನಂದ್. ಈ ಹಿಂದೆ 'ಇಂಡಿಯನ್ ಕ್ರಶ್' ಎಂದು ಕರೆಸಿಕೊಂಡಿದ್ದ ಕನ್ನಡದ ಹುಡುಗಿ ಆದ್ಯಾ ಆನಂದ್ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

kannadathi-aadhya-anand

ಟಾಪ್ 1 ಸ್ಥಾನದಲ್ಲಿದೆ ಫ್ರೈಡೇ ನೈಟ್ ಪ್ಲ್ಯಾನ್

ಕಳೆದ ವಾರವಷ್ಟೇ ಬಿಡುಗಡೆಯಾದ ಫ್ರೈಡೇ ನೈಟ್ ಪ್ಲ್ಯಾನ್ ಸಿನಿಮಾ ನೆಟ್‌ಫ್ಲಿಕ್ಸ್ ವೇದಿಕೆಯಲ್ಲಿ ಅಗ್ರ ಸ್ಥಾನದಲ್ಲಿದ್ದು, ಕನ್ನಡತಿ ಆಧ್ಯಾ ಆನಂದ್ ಅವರ ಅದ್ಭುತ ನಟನೆ ಕೂಡ ಸಿನಿಮಾದ ಯಶಸ್ಸಿಗೆ ಕಾರಣವಾಗಿದೆ. ಇದರಲ್ಲಿ ನಿತ್ಯಾ ಎಂಬ ಪಾತ್ರದಲ್ಲಿ ಆಧ್ಯಾ ಕಾಣಿಸಿಕೊಂಡಿದ್ದಾರೆ.

ಪ್ರಿಯಾ ನಾಯಕ ಹಾಗೂ ಆನಂದ್ ನಾಯಕ ಅವರ ಮಗಳು ಆಧ್ಯಾ ಆನಂದ್ ಮಡಿಕೇರಿಯಲ್ಲಿ 2 ನವೆಂಬರ್ 2007 ರಂದು ಹುಟ್ಟಿ, ಸಿಂಗಾಪುರದಲ್ಲಿ ಬೆಳೆದಿದ್ದಾರೆ. ನಟಿ, ಮಾಡೆಲ್, ಡ್ಯಾನ್ಸರ್ ಆಗಿ ಭಾರತೀಯ ಸಿನಿಮಾ ರಂಗದಲ್ಲಿ ಮಿಂಚುತ್ತಿದ್ದಾರೆ. ಅವರಿಗೆ ಅನನ್ಯ ಆನಂದ್ ಎಂಬ ಸಹೋದರಿ ಇದ್ದಾರೆ. 2016 ರಲ್ಲಿ ಸಿಂಗಾಪುರ ಮೂಲದ ಚಲನಚಿತ್ರ ಎ ಯೆಲ್ಲೋ ಬರ್ಡ್‌ ಸಿನಿಮಾದೊಂದಿಗೆ ನಟಿಯಾಗಿ ತಮ್ಮ ವೃತ್ತಿಜೀವನ ಆರಂಭಿಸಿದರು. ಇದು 2016 ರ ಕ್ಯಾನೆಸ್ ಚಲನಚಿತ್ರೋತ್ಸವದಲ್ಲಿ ಪ್ರದರ್ಶಿಸಲಾಯಿತು.

kannadathi-aadhya-anand

2021ರ ಮಾರ್ಚ್‌ನಲ್ಲಿ ನೆಟ್‌ಫ್ಲಿಕ್ಸ್ ನಲ್ಲಿ ಬಿಡುಗಡೆಯಾಗಿದ್ದ 'ಬಾಂಬೆ ಬೇಗಮ್ಸ್' ವೆಬ್ ಸಿರೀಸ್‌ನಲ್ಲಿ ಶಾಯ್ ಇರಾನಿ ಎಂಬ ಪಾತ್ರಧಾರಿಯಾಗಿ ಕಾಣಿಸಿಕೊಂಡಿದ್ದರು. ಬಾಂಬೆ ಬೇಗಮ್ಸ್ ನಲ್ಲಿನ ನಟನೆಗೆ ಪ್ರೇಕ್ಷಕರು ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದರು. ನಂತರ 2022ರಲ್ಲಿ ಭಾರತೀಯ ಸೇನೆಗೆ ಸಂಬಂಧಿಸಿದ 'ಬ್ರೇವ್‌ಹಾರ್ಟ್, ಹುಲು ಎಂಬ ಸಿರೀಸ್‌ನಲ್ಲಿ ಕಾಣಿಸಿಕೊಂಡಿದ್ದರು.

ಫ್ರೈಡೇ ನೈಟ್ ಪ್ಲ್ಯಾನ್

ಅಮೆಜಾನ್ ಮಿನಿ ಟಿವಿಯಲ್ಲಿ ಬಿಡುಗಡೆಯಾದ 'Crushed' ಸಿರೀಸ್ ಮೂಲಕ ಪಡ್ಡೆ ಹುಡುಗರ ಮನಗೆದ್ದು 'ಇಂಡಿಯನ್ ಕ್ರಶ್' ಎಂಬ ಬಿರುದನ್ನು ಆಧ್ಯಾ ಪಡೆದುಕೊಂಡಿದ್ದಾರೆ. ಇದಾದ ನಂತರ ಸೆಪ್ಟಂಬರ್ 1ರಂದು ಬಿಡುಗಡೆಯಾದ 'ಫ್ರೈಡೇ ನೈಟ್ ಪ್ಲ್ಯಾನ್' ಸಿನಿಮಾದಲ್ಲಿ ನಿತ್ಯಾ ಸಭರ್ವಾಲ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಎಕ್ಸೆಲ್ ಎಂಟರ್‌ಟೈನ್‌ಮೆಂಟ್ ಅಡಿಯಲ್ಲಿ ಫರ್ಹಾನ್ ಅಖ್ತರ್ ಮತ್ತು ರಿತೇಶ್ ಸಿಧ್ವಾನಿ, ಕಾಸಿಮ್ ಜಗ್ಮಗಿಯಾ ಒಟ್ಟಾಗಿ ನಿರ್ಮಿಸಿರುವ 'ಫ್ರೈಡೇ ನೈಟ್ ಪ್ಲ್ಯಾನ್' ಸಿನಿಮಾಗೆ ವತ್ಸಲ್ ನೀಲಕಂಠನ್ ಆಕ್ಷನ್ ಕಟ್ ಹೇಳಿದ್ದಾರೆ. ನಟ ಬಾಬಿಲ್ ಖಾನ್‌ ಮತ್ತು ಆಧ್ಯಾ ಕೆಮಿಸ್ಟ್ರಿಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ.

ಕನ್ನಡತಿ ಆದ್ಯಾ ಕೇವಲ ಸಿನಿ ರಂಗದಲ್ಲಷ್ಟೇ ಅಲ್ಲದೇ, ಸೋನಿ ಟಿವಿಯ ಸೂಪರ್ ಡ್ಯಾನ್ಸ್ ಸಿಂಗಾಪುರ ಸ್ಪರ್ಧೆಯ ವಿಜೇತೆಯಾಗಿದ್ದಾರೆ. ಚಿಕ್ಕವಯಸ್ಸಿನಿಂದ ನಟನೆಯಲ್ಲಿ ತೊಡಗಿಸಿಕೊಂಡಿರುವ ಇವರು ಹಲವಾರು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಪ್ರಶಸ್ತಿ ವಿಜೇತ ಕಿರುತೆರೆ ಧಾರಾವಾಹಿಗಳಲ್ಲೂ ಕಾಣಿಸಿಕೊಂಡಿದ್ದಾರೆ.

ಇನ್ನು, ಕೋರ್ನೆಟೊ, ರೆಸಾರ್ಟ್ಸ್ ವರ್ಲ್ಡ್ ಸೆಂಟೋಸಾ, ಸೆನ್ಸೋಡೈನ್, ಟಿವಿಎಸ್ ಜ್ಯುಪಿಟರ್‌ನಂಥ ಹಲವು ಕಂಪನಿಗಳ ಜಾಹೀರಾತುಗಳಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ಸಿಂಗಾಪುರದ ಸಿಂಗ್ಟೆಲ್‌ನಿಂದ 2018ರಲ್ಲಿ ಯುವ ಸಾಧಕಿ ಪ್ರಶಸ್ತಿ ಮತ್ತು ಸಿಂಗಾಪುರ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಕನ್ನಡ ಸಾಂಸ್ಕೃತಿಕ ಹಬ್ಬದಲ್ಲಿ 'ಸಿಂಗಾರ ಪುರಸ್ಕಾರಕ್ಕೆ' ಭಾಜನರಾಗಿದ್ದಾರೆ.

More from Filmibeat

English summary
Kannadathi Aadhya Anand gain audience attention again in Friday night plan.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X