ಅಂತರಾಷ್ಟ್ರೀಯ ಪ್ರೇಕ್ಷಕರನ್ನು ಸೆಳೆಯಲಿದೆ 'ಕಾಂತಾರ': ವಿದೇಶಿ ಭಾಷೆಗೆ ಡಬ್

ರಿಷಬ್ ಶೆಟ್ಟಿ ನಿರ್ದೇಸಿಸಿ, ನಟಿಸಿರುವ 'ಕಾಂತಾರ' ಸಿನಿಮಾ ಹೊಸ ಎತ್ತರಗಳನ್ನು ಏರುತ್ತಿದೆ. ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ದಾಖಲೆಯ ಗಳಿಗೆ, ಜನಪ್ರೀತಿ ಗಳಿಸಿದ 'ಕಾಂತಾರ' ಅದೇ ಮೋಡಿಯನ್ನು ಒಟಿಟಿಗಳಲ್ಲಿಯೂ ಮುಂದುವರೆಸಿದೆ.

ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ಅಮೆಜಾನ್‌ ಪ್ರೈಂನಲ್ಲಿ ಬಿಡುಗಡೆ ಆಗಿದ್ದ 'ಕಾಂತಾರ' ಸಿನಿಮಾ, ಹಿಂದಿ ಭಾಷೆಯ ಆವೃತ್ತಿ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ ಆಗಿತ್ತು. ವಿದೇಶದ ಪ್ರೇಕ್ಷಕರನ್ನೂ ತಲುಪುವ ಕಾರಣಕ್ಕೆ ನಿರ್ಮಾಣ ಸಂಸ್ಥೆ ಈ ನಿರ್ಧಾರ ತೆಗೆದುಕೊಂಡಿತ್ತು.

ಈಗ ಈ ಸಿನಿಮಾದ ರೀಚ್ ಅನ್ನು ಇನ್ನಷ್ಟು ವಿಸ್ತರಿಸಲು ಹೊಸದೊಂದು ಸಾಹಸಕ್ಕೆ ಕೈ ಹಾಕಲಾಗಿದೆ. 'ಕಾಂತಾರ' ಸಿನಿಮಾವನ್ನು ಇಂಗ್ಲೀಷ್ ಭಾಷೆಗೆ ಡಬ್ ಮಾಡಿ ಬಿಡುಗಡೆ ಮಾಡಲಾಗುತ್ತಿದೆ.

Kantara Kannada Movie To Be Dubbed In English And It Will Start Streaming On Netflix

ಹೌದು, ಈಗಾಗಲೇ ತೆಲುಗು, ತಮಿಳು, ಮಲಯಾಳಂ, ಹಿಂದಿ, ತುಳು ಭಾಷೆಗಳಿಗೆ ಡಬ್ ಆಗಿರುವ 'ಕಾಂತಾರ' ಸಿನಿಮಾ ಇಂಗ್ಲೀಷ್ ಭಾಷೆಗೆ ಡಬ್ ಆಗುತ್ತಿದ್ದು, ಸಿನಿಮಾದ ಇಂಗ್ಲೀಷ್ ಆವೃತ್ತಿ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗಲಿದೆ.

ಈಗಾಗಲೇ ಭಾರತದಲ್ಲಿ ದೊಡ್ಡ ಮಟ್ಟದಲ್ಲಿ ಜನರನ್ನು ತಲುಪಿರುವ 'ಕಾಂತಾರ' ಸಿನಿಮಾವನ್ನು ಅಂತರಾಷ್ಟ್ರೀಯ ಸಿನಿಮಾ ಪ್ರೇಕ್ಷಕರಿಗೂ ತಲುಪಿಸುವ ಕಾರಣದಿಂದಾಗಿ ಸಿನಿಮಾವನ್ನು ಇಂಗ್ಲೀಷ್ ಭಾಷೆಗೆ ಡಬ್ ಮಾಡಲಾಗುತ್ತಿರುವುದು ಸುಲಭದ ಊಹೆ. 'ಕಾಂತಾರ' ಸಿನಿಮಾದ ಇಂಗ್ಲೀಷ್ ಆವೃತ್ತಿ ನೆಟ್‌ಫ್ಲಿಕ್ಸ್‌ನಲ್ಲಿ ಜನವರಿಯಿಂದ ಸ್ಟ್ರೀಮ್ ಆಗಲಿದೆ.

ನೆಲ ಸಂಸ್ಕೃತಿಯ ಆಚರಣೆಗಳ ಬಗೆಗಿನ ಸಿನಿಮಾವೊಂದನ್ನು ಇಂಗ್ಲೀಷ್‌ನಲ್ಲಿ ಹೇಗೆ ಡಬ್ ಮಾಡುತ್ತಾರೆ ಎಂಬುದು ಕುತೂಹಲ ಮೂಡಿಸಿದೆ. 'ಗಗ್ಗರ', 'ಕಂಬಳ', 'ಕೋಲ', ಕಾರ್ಣಿಕ, ನೇಮ, ಇನ್ನಿತರೆಗಳನ್ನು ಇಂಗ್ಲೀಷ್‌ನಲ್ಲಿ ಹೇಗೆ ಡಬ್ ಮಾಡುತ್ತಾರೆ, ಆಚರಣೆಗಳಿಗೆ ಸಂಬಂಧ ಪಟ್ಟ ಪದಗಳನ್ನು ಹಾಗೆಯೇ ಉಳಿಸಿಕೊಳ್ಳುತ್ತಾರೆಯೇ ಅಥವಾ ಇಂಗ್ಲೀಷ್‌ನಲ್ಲಿ ಅವಕ್ಕೆ ಪರ್ಯಾಯ ಪದಗಳನ್ನು ಬಳಸುತ್ತಾರೆಯೇ ಎಂಬುದು ಕುತೂಹಲ. ಜೊತೆಗೆ ಹಾಡುಗಳನ್ನು ಸಹ ಇಂಗ್ಲೀಷ್‌ಗೆ ಡಬ್ ಮಾಡುತ್ತಾರಾ ಅಥವಾ ಹಾಡುಗಳನ್ನು ತೆಗೆದು ಹಾಕುತ್ತಾರಾ ಎಂಬ ಕುತೂಹಲವೂ ಇದೆ. ಆದರೆ ನೆಲದ ಕತೆಯೊಂದು ತನ್ನ ಸರಳತೆ, ಪ್ರಾಮಾಣಿಕ ಪ್ರಯತ್ನದ ಕಾರಣಕ್ಕೆ ಪಾಶ್ಚಿಮಾತ್ಯರನ್ನು ಸೆಳೆಯಲು ಹೊರಟಿರುವುದು ಹೆಮ್ಮೆಯ ಸಂಗತಿ.

More from Filmibeat

English summary
Kannada movie Kantara to be dubbed in English and it will start streaming on Netflix from January.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X