ಇನ್ನು 9 ದಿನಗಳಲ್ಲಿ ಓಟಿಟಿಗೆ ಕಾಂತಾರ: ಒಳ್ಳೆ ಪ್ರದರ್ಶನ ಕಾಣುತ್ತಿರುವ ಕಾರಣ ಆಗುತ್ತಾ ಮತ್ತೆ ಪೋಸ್ಟ್‌ಪೋನ್?

ಕಾಂತಾರ.. ಈ ವರ್ಷ ಉತ್ತಮ ಗಳಿಕೆ ಕಂಡ ಚಿತ್ರಗಳ ಪಟ್ಟಿ ಸೇರಿರುವ ಚಿತ್ರವಾಗಿದೆ. ಆದರೆ ಈ ವರ್ಷ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರಗಳ ಪೈಕಿ ಕಾಂತಾರ ತುಂಬಾ ವಿಭಿನ್ನ ಎಂದೇ ಹೇಳಬಹುದು. ಏಕೆಂದರೆ ಇತರೆ ಚಿತ್ರಗಳ ಹಾಗೆ ಕಾಂತಾರ ಚಿತ್ರದ ಬಗ್ಗೆ ಚಿತ್ರ ಘೋಷಣೆಯಾದಾಗಿನಿಂದ ಹೈಪ್ ಇರಲಿಲ್ಲ, ಟೀಸರ್ ಹಾಗೂ ಟ್ರೈಲರ್ ಬಿಡುಗಡೆಗೊಂಡಾಗ ದೇಶವ್ಯಾಪಿ ವೈರಲ್ ಆಗಿರಲಿಲ್ಲ ಹಾಗೂ ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ಅಂತೂ ಇರಲೇ ಇಲ್ಲ.

ಹೀಗೆ ಗಲ್ಲಾಪೆಟ್ಟಿಗೆಯಲ್ಲಿ ನೂರಾರು ಕೋಟಿ ದೋಚಲಿದೆ, ದೇಶವ್ಯಾಪಿ ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡಲಿದೆ ಎಂಬ ಯಾವುದೇ ನಿರೀಕ್ಷೆಯೂ ಇಲ್ಲದೆ ಚಿತ್ರಮಂದಿರದ ಅಂಗಳಕ್ಕೆ ಬಂದ ಕಾಂತಾರ ಮೊದಲ ದಿನ ಕನ್ನಡ ಅವತರಣಿಕೆಯಲ್ಲಿ ಒಂದೂವರೆ ಕೋಟಿ ಕಲೆಕ್ಷನ್ ಮಾಡಿತ್ತು. ನಂತರ ಪ್ರೇಕ್ಷಕರಿಂದ ವ್ಯಕ್ತವಾದ ದೊಡ್ಡ ಮಟ್ಟದ ಪ್ರತಿಕ್ರಿಯೆಯಿಂದಾಗಿ ಕಾಂತರ ಚಿತ್ರ ಪ್ಯಾನ್ ಇಂಡಿಯಾ ಚಿತ್ರವಾಗಿ ಬದಲಾಯಿತು.

ತೆಲುಗಿನಲ್ಲಿ ಮೊದಲ ದಿನವೇ 5 ಕೋಟಿ ಕೊಳ್ಳೆ ಹೊಡೆದ ಕಾಂತಾರ ಹಿಂದಿ ಗಲ್ಲಾಪೆಟ್ಟಿಗೆಯಲ್ಲಿ ಮೊದಲ ದಿನ ಒಂದೂವರೆ ಕೋಟಿ ಕಲೆಕ್ಷನ್ ಮಾಡಿತ್ತು. ಆದರೆ ನಂತರದ ದಿನಗಳಲ್ಲಿ ಹಿಂದಿ ಅವತರಣಿಕೆಯ ಕಲೆಕ್ಷನ್ ಶರವೇಗದಲ್ಲಿ ಹೆಚ್ಚಾಗತೊಡಗಿತು, ಅತ್ತ ತೆಲುಗು ಕಲೆಕ್ಷನ್ ಸಹ ಉತ್ತಮ ಏರಿಕೆ ಕಂಡಿತು. ಹೀಗೆ ಎಲ್ಲಾ ಭಾಷೆಯಲ್ಲಿಯೂ ಉತ್ತಮ ಕಲೆಕ್ಷನ್ ಮಾಡುವ ಮೂಲಕ ಮುನ್ನೂರು ಕೋಟಿ ಕ್ಲಬ್ ಸೇರಿರುವ ಕಾಂತಾರ ಚಿತ್ರ ನವೆಂಬರ್ 4ರಂದೇ ಓಟಿಟಿಯಲ್ಲಿ ಪ್ರದರ್ಶನಗೊಳ್ಳಲು ಒಪ್ಪಂದವಾಗಿತ್ತು. ಇನ್ನು ಚಿತ್ರಮಂದಿರದಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿರುವ ಚಿತ್ರಗಳ ಓಟಿಟಿ ಬಿಡುಗಡೆ ದಿನಾಂಕವನ್ನು ಮುಂದೂಡುವ ಅವಕಾಶವಿದ್ದ ಕಾರಣ ನವೆಂಬರ್ 4ರಿಂದ ಕಾಂತಾರ ಓಟಿಟಿ ಸ್ಟ್ರೀಮಿಂಗ್ ದಿನಾಂಕವನ್ನು ಮತ್ತೊಂದು ದಿನಕ್ಕೆ ಮುಂದೂಡಲಾಗಿತ್ತು. ಸದ್ಯ ಈ ದಿನವೂ ಸಹ ಸಮೀಪಿಸುತ್ತಿದ್ದು, ಚಿತ್ರ ಉತ್ತಮ ಪ್ರದರ್ಶನ ಕಾಣುತ್ತಿರುವ ಕಾರಣ ಮತ್ತೊಮ್ಮೆ ಓಟಿಟಿ ದಿನಾಂಕ ಬದಲಾಗುತ್ತಾ ಎಂಬ ಪ್ರಶ್ನೆ ಮೂಡಿದೆ.

ಕಾಂತಾರ ಓಟಿಟಿ ಸ್ಟ್ರೀಮಿಂಗ್ ಯಾವಾಗ?

ಕಾಂತಾರ ಓಟಿಟಿ ಸ್ಟ್ರೀಮಿಂಗ್ ಯಾವಾಗ?

ನವೆಂಬರ್ 4ರಂದು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಕಾಂತಾರ ಸ್ಟ್ರೀಮ್ ಆಗಬೇಕಿತ್ತು. ಆದರೆ ಚಿತ್ರ ಉತ್ತಮ ಪ್ರದರ್ಶನ ಕಾಣುತ್ತಿದ್ದ ಕಾರಣ ನವೆಂಬರ್ 4ರಿಂದ ಮುಂದೂಡಲ್ಪಟ್ಟು ನವೆಂಬರ್ 18ರಂದು ಸ್ಟ್ರೀಮ್ ಮಾಡಲು ತೀರ್ಮಾನ ಮಾಡಲಾಗಿತ್ತು. ಹೀಗಾಗಿ ಇಂದಿಗೆ ( ನವೆಂಬರ್ 9 ) ಸರಿಯಾಗಿ ಒಂಬತ್ತು ದಿನಗಳಿಗೆ ಅಂದರೆ ನವೆಂಬರ್ 18ರಿಂದ ಕಾಂತಾರ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಪ್ರಸಾರವಾಗುವುದು ಬಹುತೇಕ ಖಚಿತವಾಗಿದೆ.

ಮತ್ತೊಮ್ಮೆ ಬಿಡುಗಡೆಯ ದಿನಾಂಕ ಬದಲಿಸುವಂತೆ ಮಾತುಕತೆ

ಮತ್ತೊಮ್ಮೆ ಬಿಡುಗಡೆಯ ದಿನಾಂಕ ಬದಲಿಸುವಂತೆ ಮಾತುಕತೆ

ಈ ಕುರಿತಾಗಿ ಹೊಸದೊಂದು ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ನವೆಂಬರ್ 18ರಿಂದಲೂ ಕಾಂತಾರ ಓಟಿಟಿ ಬಿಡುಗಡೆಯನ್ನು ಮುಂದೂಡುವಂತೆ ಚಿತ್ರತಂಡ ಅಮೆಜಾನ್ ಪ್ರೈಮ್ ವಿಡಿಯೋ ತಂಡದ ಜತೆ ಮಾತುಕತೆ ನಡೆಸುತ್ತಿದೆ ಎನ್ನಲಾಗುತ್ತಿದೆ. ಆದರೆ ಅಮೆಜಾನ್ ಪ್ರೈಮ್ ವಿಡಿಯೋ ಎರಡನೇ ಬಾರಿಗೆ ಸ್ಟ್ರೀಮಿಂಗ್ ದಿನಾಂಕವನ್ನು ಮುಂದೂಡಲು ಸಮ್ಮತಿಸುತ್ತಾ ಎಂಬ ಪ್ರಶ್ನೆಯೂ ಸಹ ಸದ್ಯ ಎದ್ದಿದೆ.

ಈಗಾಗಲೇ ಪ್ರೈಮ್ ವಿಡಿಯೋದಲ್ಲಿ ಕಾಂತಾರಗಾಗಿ ಹುಡುಕಾಟ

ಈಗಾಗಲೇ ಪ್ರೈಮ್ ವಿಡಿಯೋದಲ್ಲಿ ಕಾಂತಾರಗಾಗಿ ಹುಡುಕಾಟ

ಇನ್ನು ಕಾಂತಾರ ಚಿತ್ರದ ಓಟಿಟಿ ಹಕ್ಕನ್ನು ಅಮೆಜಾನ್ ಪ್ರೈಮ್ ವಿಡಿಯೋ ಖರೀದಿಸಿದೆ ಎಂಬ ವಿಷಯ ಅರಿತಿರುವ ಸಿನಿಪ್ರೇಕ್ಷಕರು ಈಗಾಗಲೇ ಅಪ್ಲಿಕೇಶನ್‌ನಲ್ಲಿ ಕಾಂತಾರ ಚಿತ್ರ, ಕಾಂತಾರ ಕನ್ನಡ ಚಿತ್ರ ಹಾಗೂ ಕಾಂತಾರ ಹಿಂದಿ ಚಿತ್ರ ಎಂಬ ಹುಡುಕಾಟವನ್ನು ನಡೆಸಿದ್ದಾರೆ. ಈ ಮೂಲಕ ಚಿತ್ರವನ್ನು ಓಟಿಟಿಯಲ್ಲಿ ವೀಕ್ಷಿಸಲು ಸಿನಿರಸಿಕರು ದೊಡ್ಡಮಟ್ಟದಲ್ಲಿ ಕಾಯುತ್ತಿದ್ದು, ಥಿಯೇಟರ್ ಮಾತ್ರವಲ್ಲದೆ ಮೊಬೈಲ್ ಪರದೆಗಳಲ್ಲಿಯೂ ಕಾಂತಾರ ಅಬ್ಬರ ಜೋರಾಗಿರಲಿದೆ.

More from Filmibeat

English summary
Kantara likely to stream on OTT from November 18 and makers are in talk to postpone. Take a look
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X