ಅಬ್ಬಾ..! ವೆಬ್ ಸೀರಿಸ್ ನಲ್ಲಿ ನಟಿಸಲು ಕಪಿಲ್ ಶರ್ಮಾ ಇಷ್ಟೊಂದು ಸಂಭಾವನೆ ಕೇಳಿದ್ರಾ?
ಹಿಂದಿ ಕಿರುತೆರೆ ಲೋಕದ ಜನಪ್ರಿಯ ಕಾರ್ಯಕ್ರಮಗಳಲ್ಲಿ ಕಪಿಲ್ ಶರ್ಮಾ ಶೋ ಕೂಡ ಒಂದು. ಹಾಸ್ಯ ಪ್ರಜ್ಞೆ ಮತ್ತು ಕಾಮಿಡಿ ಶೋ ಮೂಲಕ ಕಪಿಲ್ ಶರ್ಮಾ ಬಾಲಿವುಡ್ ನ ಸ್ಟಾರ್ ನಟರ ಸಾಲಿನಲ್ಲಿ ನಿಂತಿದ್ದಾರೆ. ದಿ ಕಪಿಲ್ ಶರ್ಮಾ ಶೋ ಮೂಲಕ ಕಿರುತೆರೆ ಪ್ರೇಕ್ಷಕರನ್ನು ರಂಜಿಸುತ್ತಿರುವ ಕಪಿಲ್ ಈಗ ಮತ್ತೆ ಸುದ್ದಿಯಲಿದ್ದಾರೆ.
ಕಿರುತೆರೆ ಮತ್ತು ಸಿನಿಮಾದಲ್ಲಿ ಮಿಂಚಿರುವ ಕಪಿಲ್, ವೆಬ್ ಸೀರಿಸ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಕಪಿಲ್ ಶರ್ಮಾ ಮೊದಲ ವೆಬ್ ಸೀರಿಸ್ ಬಗ್ಗೆ ಹೆಚ್ಚಿನ ಮಾಹಿತಿ ಬಹಿರಂಗವಾಗಿಲ್ಲ. ಆದರೆ ಮೊದಲ ಡಿಜಿಟಲ್ ಯೋಜನೆಗೆ ಕಪಿಲ್ ಶರ್ಮಾ ಬೇಡಿಕೆ ಇಟ್ಟಿರುವ ಸಂಭಾವನೆ ಅನೇಕರ ಹುಬ್ಬೇರಿಸುವಂತೆ ಮಾಡಿದೆ.
ಇತ್ತೀಚಿಗೆ ಕಪಿಲ್ ಶರ್ಮಾ ಶೋನಲ್ಲಿ ನಟ ಮತ್ತು ಕಮಿಡಿಯನ್ ಕೃಷ್ಣ ಅಭಿಷೇಕ್ ಈ ಬಗ್ಗೆ ಬಹಿರಂಗ ಪಡಿಸಿದ್ದಾರೆ. ಕಪಿಲ್ ಶರ್ಮಾ ಒಟಿಟಿಗೆ ಎಂಟ್ರಿ ಕೊಡುತ್ತಿದ್ದಾರೆ. ಮೊದಲ ವೆಬ್ ಸೀರಿಸ್ ಗೆ 20 ಕೋಟಿ ಚಾರ್ಜ್ ಮಾಡುತ್ತಿದ್ದಾರೆ ಎಂದು ಹೇಳುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ. ಇದು ನಿಜನಾ ಅಥವಾ ಇಬ್ಬರು ತಮಾಷೆ ಮಾಡುತ್ತಿದ್ದಾರಾ ಎನ್ನುವುದು ಅಭಿಮಾನಿಗಳಿಗೆ ಗೊಂದಲ ಮೂಡಿಸಿದೆ.

ಆದರೆ ಕಪಿಲ್ ಶರ್ಮಾ ಜನಪ್ರಿಯತೆಯನ್ನು ಗಮನಿಸಿದರೆ 20 ಕೋಟಿ ದೊಡ್ಡ ಮೊತ್ತ ಎನಿಸುವುದಿಲ್ಲ. ಯಾಕೆಂದರೆ ಕಪಿಲ್ ಒಂದು ಎಪಿಸೋಡ್ ಗೆ 1 ಕೋಟಿ ಪಡೆಯುತ್ತಾರೆ ಎನ್ನುವ ಸುದ್ದಿ ಇದೆ. ಹೀಗಿರುವಾಗ ವೆಬ್ ಸೀರಿಸ್ ನಲ್ಲಿ ನಟಿಸಲು 20 ಕೋಟಿ ಪಡೆಯುವುದು ದೊಡ್ಡ ವಿಚಾರವೇನಲ್ಲ.
ಲಾಕ್ ಡೌನ್ ಬಳಿಕ ಮತ್ತೆ ಶೋ ಪ್ರಾರಂಭ ಮಾಡಿರುವ ಕಪಿಲ್, ಇಂಥ ಕಷ್ಟದ ಸಮಯದಲ್ಲೂ ಪ್ರೇಕ್ಷಕರನ್ನು ರಂಜಿಸುವ ಕೆಲಸ ಮಾಡುತ್ತಿದ್ದಾರೆ. ಶೋ ಜೊತೆಗೆ ವೆಬ್ ಸೀರಿಸ್ ನಲ್ಲೂ ಕಾಣಿಸಿಕೊಳ್ಳುತ್ತಾರಾ ಎಂದು ಕಾದುನೋಡಬೇಕು.


Click it and Unblock the Notifications











