For Quick Alerts
  ALLOW NOTIFICATIONS  
  For Daily Alerts

  ಕರಣ್ ಹೆಗಲಿಗೆ 'ಬಿಗ್ ಬಾಸ್' ನಿರೂಪಣೆ ಜವಾಬ್ದಾರಿ: ಸಲ್ಮಾನ್ ಖಾನ್ ಕಥೆ ಏನು?

  |

  ಭಾರತೀಯ ಕಿರುತೆರೆಯ ಖ್ಯಾತ ರಿಯಾಲಿಟಿ ಶೋಗಳಲ್ಲಿ ಬಿಗ್ ಬಾಸ್ ಕೂಡ ಒಂದು. ಹಿಂದಿ ಸೇರಿದಂತೆ ದೇಶ ಬೇರೆ ಬೇರೆ ಭಾಷೆಗಳಲ್ಲಿ ಬಿಗ್ ಬಾಸ್ ರಿಯಾಲಿಟಿ ಶೋ ಖ್ಯಾತಿಗಳಿಸಿದೆ. ಅದರಲ್ಲೂ ಹಿಂದಿಯಲ್ಲಿ ಬಿಗ್ ಬಾಸ್ 15ನೇ ಸೀಸನ್ ಗೆ ತಯಾರಿ ನಡೆಯುತ್ತಿದ್ದು ಈಗಾಗಲೇ ಪ್ರೋಮೋ ಕೂಡ ಬಿಡುಗಡೆಯಾಗಿದೆ.

  ಬಿಗ್ ಬಾಸ್ ಹೊಸ ಆವೃತ್ತಿಯ ಟೀಸರ್ ಅನ್ನು ವೂಟ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಅಂದಹಾಗೆ ಬಹುನಿರೀಕ್ಷೆಯ ರಿಯಾಲಿಟಿ ಶೋ ಬಗ್ಗೆ ಮತ್ತೊಂದು ಇಂಟ್ರೆಸ್ಟಿಂಗ್ ವಿಚಾರ ಬಹಿರಂಗವಾಗಿದೆ. ಬಿಗ್ ಬಾಸ್ ಸೀಸನ್ 15 ಅನ್ನು ನಿರ್ಮಾಪಕ ಕರಣ್ ಜೋಹರ್ ನಡೆಸಿಕೊಡುತ್ತಿದ್ದಾರೆ ಎನ್ನುವ ಮಾಹಿತಿ ಹೊರಬಿದ್ದಿದೆ.

  ಹಾಗಾದರೆ ಸಲ್ಮಾನ್ ಖಾನ್ ಬಿಗ್ ಬಾಸ್ ಶೋನಿಂದ ಔಟ್ ಆದ್ರಾ ಅಂತ ಅಚ್ಚರಿ ಪಡಬೇಡಿ. ಕರಣ್ ಜೋಹರ್ ನಡೆಸಿಕೊಡುವುದು ಒಟಿಟಿ ಪ್ಲಾಟ್ ಫಾರ್ಮ್ ವೋಟ್ ನಲ್ಲಿ. ರಿಯಾಲಿಟಿ ಶೋನ ಒಟಿಟಿ ಆವೃತ್ತಿಯನ್ನು ನಡೆಸಿಕೊಡುವ ಜವಾಬ್ದಾರಿಯನ್ನು ಕರಣ್ ವಹಿಸಿಕೊಂಡಿದ್ದಾರೆ.

  ಈ ಮೊದಲು ಬಿಗ್ ಬಾಸ್ 13ರ ಸ್ಪರ್ಧಿಯಾಗಿದ್ದ ಸಿದ್ಧಾರ್ಥ್ ಶುಕ್ಲಾ ಮತ್ತು ಶೆಹಜಾನ್ ಗಿಲ್ ನಡೆಸಿಕೊಡಲಿದ್ದಾರೆ ಎನ್ನುವ ಸುದ್ದಿ ಕೇಳಿಬಂದಿತ್ತು. ಆದರೀಗ ಕರಣ್ ಹೆಗಲಿಗೆ ಬಿದ್ದಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕರಣ್ ತನ್ನ ತಾಯಿ ಬಿಗ್ ಬಾಸ್ ನ ಅಪಾರ ಅಭಿಮಾನಿ. ಒಂದು ದಿನವೂ ಮಿಸ್ ಮಾಡದಂತೆ ನೋಡುತ್ತಾರೆ, ಇದಾಗ ಅವರ ತಾಯಿಯ ಕನಸು ನನಸಾಗಿದೆ ಎಂದು ಹೇಳಿದ್ದಾರೆ.

  "ಬಿಗ್ ಬಾಸ್ ಒಟಿಟಿ ಖಂಡಿತವಾಗಿಯೂ ಯಶಸ್ಸು ಕಾಣುತ್ತೆ. ನನ್ನ ತಾಯಿಯ ಕನಸು ನನಸಾಗಿದೆ. ರಿಯಾಲಿಟಿ ಮತ್ತಷ್ಟು ರೋಚಕವಾಗಿರಲಿದೆ. ವೀಕೆಂಡ್ ಕಾರ್ಯಕ್ರಮವನ್ನು ತನ್ನದೆ ಶೈಲಿಯಲ್ಲಿ ನಡೆಸಿಕೊಡುತ್ತೇನೆ" ಎಂದು ಹೇಳಿದರು.

  ಆಗಸ್ಟ 8 ರಂದು ವೂಟ್ ನಲ್ಲಿ ಬಿಗ್ ಬಾಸ್ ನ ಪ್ರಥಮ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಒಟಿಟಿ ಆವೃತ್ತಿಯ ನಂತರ ಕಾರ್ಯಕ್ರಮವು ಟಿವಿಯಲ್ಲಿ ಪ್ರಸಾರವಾಗಲಿದೆ. ಟಿವಿಯಲ್ಲಿ ಸಲ್ಮಾನ್ ಖಾನ್ ನಡೆಸಿಕೊಡಲಿದ್ದಾರೆ.

  ಅಂದಹಾಗೆ ನಿರೂಪಣೆ ಕರಣ್ ಜೋಹರ್ ಅವರಿಗೇನು ಹೊಸದಲ್ಲ. ಕಾಫಿ ವಿತ್ ಕರಣ್ ಶೋ ಮೂಲಕ ಸಿಕ್ಕಾಪಟ್ಟೆ ಖ್ಯಾತಿಗಳಿಸಿದ್ದರು. ಅದರಲ್ಲೂ ಹೊಸ ಕಾರ್ಯಕ್ರಮಗಳನ್ನು ನಡೆಸಿಕೊಡುವುದೆಂದ್ರೆ ಕರಣ್ ಜೋಹರ್ ಅವರಿಗೆ ತುಂಬಾ ಇಷ್ಟವಾದ ಪಾತ್ರವಾಗಿದೆ. ಹಾಗಾಗಿ ಬಿಗ್ ಬಾಸ್ ಅನ್ನು ಖುಷಿಯಿಂದ ಒಪ್ಪಿಕೊಂಡಿದ್ದಾರೆ.

  ಇತ್ತೀಚಿಗೆ ಬಿಗ್ ಬಾಸ್ ಹೊಸ ಸೀಸನ್ ನ ಟೀಸರ್ ಹಂಚಿಕೊಂಡು, ಹೊಸ ಫಾರ್ಮೆಟ್ ಅನ್ನು ಎದುರು ನೋಡುತ್ತಿರುವುದಾಗಿ ಹೇಳಿದರು. ಡಿಜಿಟಲ್ ನಲ್ಲಿ ಬಿಗ್ ಬಾಸ್ 6 ವಾರಗಳು ಮುಂದಿರಲಿದೆ. ಬಳಿಕ ಟಿವಿಯಲ್ಲಿ ಪ್ರಸಾರವಾಗಲಿದೆ. ಡಿಜಿಟಲ್ ನಲ್ಲಿ ಪ್ರೇಕ್ಷಕರು ನೋಡುವುದು ಮಾತ್ರವಲ್ಲದೆ ಟಾಸ್ಕ್ ಗಳಲ್ಲೂ ಭಾಗಿಯಾಗಬಹುದು. ಈ ಬಾರಿಯ ಹೊಸ ರೀತಿಯ ಬಿಗ್ ಬಾಸ್ ಹೇಗಿರಲಿದೆ ಎನ್ನುವ ಪ್ರೇಕ್ಷಕರಲ್ಲೂ ಕುತೂಹಲ ಮನೆ ಮಾಡಿದೆ.

  English summary
  Producer, Director Karan Johar all set to host Bigg Boss OTT on Voot ; says his mom's dream has come true.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X