For Quick Alerts
  ALLOW NOTIFICATIONS  
  For Daily Alerts

  ಕರಣ್ ಜೋಹರ್ ಸಲ್ಮಾನ್ ಖಾನ್‌ಗಿಂತಲೂ ಅದ್ವಾನ: ನಟಿ ಸೋಫಿಯಾ ಹಯಾತ್

  By ಫಿಲ್ಮಿಬೀಟ್ ಡೆಸ್ಕ್
  |

  ಸುಶಾಂತ್ ಸಿಂಗ್ ಸಾವಿನ ಬಳಿಕ ಎದುರಾದ ತೀವ್ರ ಟೀಕೆ, ನಿಂದನೆ, ಟ್ರೋಲಿಂಗ್‌ಗಳಿಂದ ನೊಂದು ಹಲವು ತಿಂಗಳು ಏಕಾಂಗಿಯಾಗಿದ್ದ ಕರಣ್ ಜೋಹರ್ ಇದೀಗ ಬಿಗ್‌ಬಾಸ್ ಒಟಿಟಿ ಮೂಲಕ ಶೋ ಬ್ಯುಸಿನೆಸ್‌ಗೆ ಮರಳಿದ್ದಾರೆ.

  ಆದರೆ ಬಿಗ್‌ಬಾಸ್ ಒಟಿಟಿಯ ನಿರೂಪಣೆಯನ್ನು ಕರಣ್ ಜೋಹರ್ ಮಾಡುತ್ತಿರುವುದು ಹಲವರಿಗೆ ಸರಿ ಬಂದಿಲ್ಲ. ಕರಣ್ ಜೋಹರ್ ನಿರೂಪಣೆ ಸರಿಯಿಲ್ಲ ಎಂದು ಕೆಲವರು, ಕರಣ್ ಜೋಹರ್ ಕೆಲವು ಸ್ಪರ್ಧಿಗಳ ಬಗ್ಗೆ ಪಕ್ಷಪಾತಿಯಾಗಿ ವರ್ತಿಸುತ್ತಾರೆ ಎಂದು ಹಲವರು ಟೀಕೆ ಮಾಡುತ್ತಿದ್ದಾರೆ.

  ಈ ನಡುವೆ ನಟಿ, ಮಾಜಿ ಬಿಗ್‌ಬಾಸ್ ಸ್ಪರ್ಧಿಯೊಬ್ಬರು ಒಬ್ಬರು ಬಿಗ್‌ಬಾಸ್ ನಿರೂಪಣೆ ವಿಷಯಕ್ಕೆ ಸಂಬಂಧಿಸಿದಂತೆ ಕರಣ್ ಜೋಹರ್, ಸಲ್ಮಾನ್ ಖಾನ್‌ಗಿಂತಲೂ ಅದ್ವಾನ ಎಂದು ಹೇಳಿದ್ದಾರೆ. ಕೂಡಲೇ ಈ ಶೋ ಅನ್ನು ನಿಲ್ಲಿಸಬೇಕು ಎಂದು ಸಹ ಕೇಳಿದ್ದಾರೆ.

  ಸಂದರ್ಶನವೊಂದರಲ್ಲಿ ಮಾತನಾಡಿರುವ ಸೋಫಿಯಾ ಹಯಾತ್, 'ಕರಣ್ ಜೋಹರ್, ಸಲ್ಮಾನ್ ಖಾನ್‌ಗಿಂತಲೂ ಅದ್ವಾನ. ಅವರು ಶೋನಲ್ಲಿ ಹಿಂಸೆಗೆ ಪ್ರಚೋದನೆ ನೀಡುತ್ತಿದ್ದಾರೆ. ಒಬ್ಬರನ್ನು ಒಬ್ಬರು ದ್ವೇಷ ಮಾಡಲು ಪ್ರೇರೇಪಿಸುತ್ತಿದ್ದಾರೆ. ಇದೇ ಶೋ ಬ್ರಿಟನ್ ನಲ್ಲಿ ಇದ್ದಿದ್ದರೆ ಈ ಹೊತ್ತಿಗಾಗಲೇ ಅದನ್ನು ರದ್ದು ಮಾಡಿರುತ್ತಿದ್ದರು'' ಎಂದಿದ್ದಾರೆ.

  ''ಕರಣ್ ಜೋಹರ್ ಸ್ಪರ್ಧಿಗಳ ನಡುವೆ ದ್ವೇಷ ಹೆಚ್ಚಿಸುವ ಕಾರ್ಯ ಮಾಡುತ್ತಿದ್ದಾರೆ. ಜೊತೆಗೆ ಹಿಂಸೆಗೆ ಪ್ರಚೋದನೆ ನೀಡುತ್ತಿದ್ದಾರೆ. ಸ್ಪರ್ಧಿಗಳಿಗೆ ಅವಮಾನ ಮಾಡುವಂತೆ ಮಾತನಾಡುತ್ತಾರೆ. ಟಿಆರ್‌ಪಿ ಪಡೆಯಲು ಕೆಟ್ಟ ಮಾದರಿಗಳ ಪ್ರಯೋಗಗಳನ್ನು ಕರಣ್ ಜೋಹರ್ ಮಾಡುತ್ತಿದ್ದಾರೆ'' ಎಂದಿದ್ದಾರೆ ಸೋಫಿಯಾ.

  ಸಲ್ಮಾನ್ ನಡೆಸಿಕೊಡುವ ಬಿಗ್‌ಬಾಸ್ ಶೋನ ಏಳನೇ ಸೀಸನ್‌ನಲ್ಲಿ ಸ್ಪರ್ಧಿಯಾಗಿದ್ದ ಸೋಫಿಯಾ ಹಯಾತ್, 'ಇನ್ನು ಮುಂದೆ ಎಂದಿಗೂ ಇಂಥಹಾ ಶೋಗೆ ನಾನು ಹೋಗುವುದಿಲ್ಲ. ವ್ಯಕ್ತಿಗಳ ನಡುವೆ ದ್ವೇಷ ಹುಟ್ಟಿಸುವ, ಪರಸ್ಪರ ಮೇಲೆ ಕೋಪ ಹುಟ್ಟುವಂತೆ ಮಾಡುವ ಇಂಥಹಾ ಶೋ ಬ್ಯಾನ್ ಆಗಬೇಕು'' ಎಂದಿದ್ದಾರೆ.

  ''ಭಾರತವು ಅಧ್ಯಾತ್ಮಕತೆಯ ತವರು. ಪರರಿಗೆ ಹಾನಿ ಮಾಡಬಾರದು ಎಂದು ಅಲ್ಲಿನ ಧರ್ಮ ಹೇಳುತ್ತದೆ. ಆದರೆ ಕರಣ್ ಜೋಹರ್, ಬಿಗ್‌ಬಾಸ್ ಒಟಿಟಿಯಲ್ಲಿ ಧರ್ಮದ ವಿರುದ್ಧ ನಡೆದುಕೊಳ್ಳುತ್ತಿದ್ದಾರೆ. ಅವರು ದೇವರ ವಿರುದ್ಧ ಹೋಗುತ್ತಿದ್ದಾರೆ. ದೇವರ ವರಗಳಾದ ಪ್ರೀತಿ, ಶಾಂತಿಗೆ ಭಂಗ ತರುತ್ತಿದ್ದಾರೆ. ಅದರ ಬದಲಿಗೆ ಪಕ್ಷಪಾತ, ಹಿಂಸೆ, ದ್ವೇಷಕ್ಕೆ ಪ್ರಚಾರ ನೀಡುತ್ತಿದ್ದಾರೆ'' ಎಂದಿದ್ದಾರೆ ಸೋಫಿಯಾ ಹಯಾತ್.

  ''ಈ ರೀತಿಯ ಶೋಗಳು ಭಾರತದ ಮಕ್ಕಳ ಮನಸ್ಸಿನ ಮೇಲೆ ಋಣಾತ್ಮಕ ಪ್ರಭಾವ ಬೀರುತ್ತವೆ. ಮಕ್ಕಳ ಭವಿಷ್ಯವನ್ನು ಹಾಳು ಮಾಡುತ್ತವೆ. ಇಂಥಹಾ ಶೋ ಅನ್ನು ನೋಡುವ ಮಕ್ಕಳು ಮುಂದೆ ಹೋಗಿ ಕೋಪಿಷ್ಟರು, ಹಿಂಸಾಪ್ರಿಯರು ಆಗಬಹುದು ಮಕ್ಕಳ ಮಾನಸಿಕ ಆರೋಗ್ಯದ ದೃಷ್ಟಿಯಿಂದ ಶೋ ಬ್ಯಾನ್ ಆಗಬೇಕು'' ಎಂದಿದ್ದಾರೆ ಸೋಫಿಯಾ.

  ಬಿಗ್‌ಬಾಸ್‌ನಲ್ಲಿ ಹಿಂಸಾಚಾರದ ಬಗ್ಗೆ ಸೋಫಿಯಾ ಮಾತನಾಡಿರುವ ಬೆನ್ನಲ್ಲೆ ಬಿಗ್‌ಬಾಸ್ ಒಟಿಟಿಯಲ್ಲಿ ಜಗಳವಾಗಿದ್ದು ಸ್ಪರ್ಧಿಗಳು ಪರಸ್ಪರ ಕೈ-ಕೈ ಮಿಲಾಯಿಸಿದ್ದಾರೆ. ಸಹ ಸ್ಪರ್ಧಿಯ ಮೇಲೆ ಹಲ್ಲೆ ಮಾಡಿದ ಆರೋಪದಲ್ಲಿ ಜೀಶನ್ ಖಾನ್ ಅನ್ನು ಮನೆಯಿಂದ ಹೊರಗೆ ಕಳುಹಿಸಿದ್ದಾರೆ.

  ಸೋಫಿಯಾ ಹಯಾತ್‌ ತಮ್ಮ ಹಾಟ್ ಚಿತ್ರಗಳಿಂದ ಬಹಳ ಖ್ಯಾತರು. ಈ ಹಿಂದೆ ಕಾಳಿ ಮಾತೆಯ ನಗ್ನ ಚಿತ್ರವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡು ಸುದ್ದಿಯಾಗಿದ್ದರು. ಜೊತೆಗೆ ಬೆತ್ತಲಾಗಿ ಓಂಕಾರಕ್ಕೆ ನಮಿಸುತ್ತಿರುವ ಚಿತ್ರವನ್ನು ಹಂಚಿಕೊಂಡಿದ್ದು ಸಹ ಸುದ್ದಿಯಾಗಿತ್ತು. ಸೋಫಿಯಾ ವಿರುದ್ಧ ಹಲವರು ಕಮೆಂಟ್ ಮಾಡಿದ್ದರು. ಸೋಫಿಯಾ ಆಗಾಗ್ಗೆ ಇಂಥಹುದ್ದೇ ಕಾರಣಕ್ಕೆ ಸುದ್ದಿಯಲ್ಲಿರುತ್ತಾರೆ.

  ಇನ್ನು ಕರಣ್ ಜೋಹರ್ ಸಹ ಬಿಗ್‌ಬಾಸ್ ನಿರೂಪಣೆಗಾಗಿ ಸಾಕಷ್ಟು ಟೀಕೆಗೆ ಒಳಗಾಗುತ್ತಿದ್ದಾರೆ. ಕರಣ್ ಜೋಹರ್ ಸದಾ ಶಮಿತಾ ಶೆಟ್ಟಿ ಪರವಾಗಿ ಮಾತನಾಡತ್ತಾರೆ, ದಿವ್ಯಾ, ಅಕ್ಷರಾ ಸಿಂಗ್ ಅವರುಗಳನ್ನು ತೆಗಳುತ್ತಾರೆ. ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ಸ್ಪಷ್ಟ ನಿಲವನ್ನು ಕರಣ್ ಜೋಹರ್ ತೆಗೆದುಕೊಳ್ಳದೆ ಸ್ಪರ್ಧಿಗಳ ನಡುವೆ ಗೊಂದಲ ಮೂಡಿಸುತ್ತಾರೆ ಎಂಬ ಆರೋಪಗಳು ಇವೆ.

  English summary
  Singer, Former Bigg Boss contestant Sofia Hayat criticized Bigg Boss OTT and said Karan Johan is worse than Salman Khan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X