ಡಿಸ್ನಿಹಾಟ್‌ಸ್ಟಾರ್ ಕೊಟ್ಟ ಬಂಪರ್ ಆಫರ್ ತಿರಸ್ಕರಿಸಿದ ಕರಣ್ ಜೋಹರ್
ಬಾಲಿವುಡ್‌ನ ಅನೇಕ ಸಿನಿಮಾಗಳು ಒಟಿಟಿಯಲ್ಲಿ ಬಿಡುಗಡೆ ಕಾಣುತ್ತಿವೆ. ಅಮಿತಾಬ್ ಬಚ್ಚನ್, ಅಕ್ಷಯ್ ಕುಮಾರ್ ಅಂಥಹಾ ಬಾಕ್ಸ್‌ಆಫೀಸ್ ಕಿಂಗ್ ಗಳೇ ತಮ್ಮ ಸಿನಿಮಾಗಳೇ ಒಟಿಟಿಯಲ್ಲಿ ಬಿಡುಗಡೆ ಕಂಡು 'ಸೇಫ್' ಆಗಲು ಯತ್ನಿಸುತ್ತಿದ್ದಾರೆ.
ಆದರೆ ನಿರ್ದೇಶಕ, ನಿರ್ಮಾಪಕ ಕರಣ್ ಜೋಹರ್ ಮಾತ್ರ ಅಲೆಯ ವಿರುದ್ಧವಾಗಿ ಈಜುತ್ತಿದ್ದಾರೆ. ಡಿಸ್ನಿಹಾಟ್‌ಸ್ಟಾರ್ ಕೊಟ್ಟ ಭರ್ಜರಿ ಆಫರ್ ಅನ್ನು ತಿರಸ್ಕರಿಸಿದ್ದಾರೆ ಕರಣ್ ಜೋಹರ್.
ಕರಣ್ ನಿರ್ಮಾಣದ ಬಹುತಾರಾಗಣದ 'ಬ್ರಹ್ಮಾಸ್ತ್ರ' ಸಿನಿಮಾವನ್ನು ಕೊಂಡುಕೊಳ್ಳುವುದಾಗಿ ಡಿಸ್ನಿಹಾಟ್‌ಸ್ಟಾರ್ ಬಹುಕೋಟಿ ಆಫರ್ ಅನ್ನು ಕರಣ್ ಮುಂದಿಟ್ಟಿತ್ತು. ಆದರೆ ಇದಕ್ಕೆ ಒಲ್ಲೆ ಎಂದಿರುವ ಕರಣ್, ಸಿನಿಮಾವನ್ನು ಚಿತ್ರಮಂದಿರಗಳಲ್ಲೇ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ.

ಅಕ್ಷಯ್ ಕುಮಾರ್ ನಟನೆಯ 'ಲಕ್ಷ್ಮಿ', ಸುಶಾಂತ್ ಕೊನೆಯ ಸಿನಿಮಾ 'ದಿಲ್ ಬೇಚಾರಾ' 'ಸಡಕ್ 2' ಇನ್ನೂ ಹಲವು ಬಿಗ್‌ಬಜೆಟ್ ಸಿನಿಮಾಗಳನ್ನು ಬಿಡುಗಡೆ ಮಾಡಿದ್ದ ಡಿಸ್ನಿ ಹಾಟ್‌ಸ್ಟಾರ್, ಬ್ರಹ್ಮಾಸ್ತ್ರ ಸಿನಿಮಾಕ್ಕೆ ಸಹ ದೊಡ್ಡ ಮೊತ್ತದ ಆಫರ್ ಅನ್ನೇ ನೀಡಿತ್ತು. ಆದರೆ ಕರಣ್ ಆಫರ್ ಸ್ವೀಕರಿಸಿಲ್ಲ.
ಅಮಿತಾಬ್ ಬಚ್ಚನ್, ರಣಬೀರ್ ಸಿಂಗ್, ಆಲಿಯಾ ಭಟ್, ಡಿಂಪಲ್ ಕಪಾಡಿಯಾ, ಮೌನಿ ರಾಯ್, ತೆಲುಗಿನ ಸೂಪರ್ ಸ್ಟಾರ್ ನಾಗಾರ್ಜು ಇನ್ನೂ ಹಲವು ಸ್ಟಾರ್‌ಗಳು ಈ ಸಿನಿಮಾದಲ್ಲಿ ನಟಿಸಿದ್ದಾರೆ.


Click it and Unblock the Notifications











