ಐಟಿ ಉದ್ಯೋಗಿಯ ಮಾಸ್ ಅವತಾರ; 'ಕರಿಕಾಡ' ಸಿನಿಮಾಗೆ ಒಟಿಟಿಯಲ್ಲಿ ಸಿಗುತ್ತಿದೆ ಭರ್ಜರಿ ರೆಸ್ಪಾನ್ಸ್!

By ಫಿಲ್ಮಿಬೀಟ್ ಡೆಸ್ಕ್

ಹೊಸಬರ ಸಿನಿಮಾ 'ಕರಿಕಾಡ' ಟೀಸರ್ ಹಾಗು ಟ್ರೈಲರ್‌ನಿಂದಲೇ ಗಮನ ಸೆಳೆದಿತ್ತು. ಈ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಬ್ಬ ಭರವಸೆಯ ನಟನಾಗಿ ಕಾಡ ನಟರಾಜ್ ಗುರುತಿಸಿಕೊಂಡಿದ್ದಾರೆ. ರಗಡ್, ಟಫ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದ ಈ ನಟ ಅಸಲಿ ಲುಕ್ ಬೇರೆನೇ ಇದೆ. ಅಂದರೆ ಸಿನಿಮಾಗೂ, ರಿಯಲ್‌ ಲೈಫ್‌ಗೂ ಒಂದಕ್ಕೊಂದು ಸಂಬಂಧವೇ ಇಲ್ಲ ಅನ್ನೋ ರೀತಿ ಇದ್ದಾರೆ.

ಇದೇ ಜೂನ್ 6ರಂದು ಕಾಡ ನಟರಾಜ್ ತಮ್ಮ ಜನ್ಮದಿನವನ್ನು ಸಡಗರದಿಂದ ಆಚರಿಸಿಕೊಂಡಿದ್ದರು. ಈ ವಿಶೇಷ ಸಂದರ್ಭದಲ್ಲಿ ಅವರಿಗೆ ಡಬಲ್ ಖುಷಿ ಕೊಟ್ಟಿದೆ. ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಈ ಬಾರಿಯ ಹುಟ್ಟುಹಬ್ಬ ತಮಗೆ ಡಬಲ್ ಖುಷಿ ಕೊಟ್ಟಿರುವುದರ ಹಿಂದಿನ ಅಸಲಿ ರಹಸ್ಯವನ್ನು ಹಂಚಿಕೊಂಡಿದ್ದಾರೆ. ಆ ಡಬಲ್ ಖುಷಿ ಏನಪ್ಪಾ ಅಂದ್ರೆ, ಒಂದು ಬರ್ತ್‌ಡೇ. ಇನ್ನೊಂದು ಸಿನಿಮಾ ಸಕ್ಸಸ್.

Karikaada Kannada Movie getting good response in Amazon prime video

ಅಮೆಜಾನ್ ಪ್ರೈಮ್‌ನಲ್ಲಿ 'ಕರಿಕಾಡ' ಸಕ್ಸಸ್

'ಕರಿಕಾಡ' ಸಿನಿಮಾವನ್ನು ಗಿಲ್ಲಿ ವೆಂಕಟೇಶ್ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ 'ಕರಿಕಾಡನಾಗಿ' ನಟರಾಜ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಅವರ ರಗಡ್ ಅಭಿನಯಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಚಿತ್ರಮಂದಿರಗಳಲ್ಲಿ ಪ್ರಶಂಸೆ ಸಿಕ್ಕಿದ ಬೆನ್ನಲ್ಲೇ ಈ ಸಿನಿಮಾ ಈಗ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಸದ್ದು ಮಾಡುತ್ತಿದೆ. ಹೌದು, 'ಕರಿಕಾಡ' ಸಿನಿಮಾ ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಾಣುತ್ತಿದೆ.

ಒಟಿಟಿಯಲ್ಲಿ 'ಕರಿಕಾಡ' ಸಿನಿಮಾವನ್ನು ವೀಕ್ಷಿಸಿದ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅದರಲ್ಲೂ ನಟರಾಜ್ ಅವರ ನಟನೆಗೆ ಸಖತ್ ಪಾಸಿಟಿವ್ ಪ್ರತಿಕ್ರಿಯೆಗಳು ಹರಿದುಬರುತ್ತಿವೆ. ತಮ್ಮ ಹುಟ್ಟುಹಬ್ಬದಂದೇ ಇಂತಹದ್ದೊಂದು ಜಾಗತಿಕ ಮಟ್ಟದ ಗೆಲುವು ಸಿಕ್ಕಿರುವುದು ನಟರಾಜ್ ಅವರ ಸಂಭ್ರಮವನ್ನು ದುಪ್ಪಟ್ಟು ಮಾಡಿದೆ.

ಐಟಿ ಉದ್ಯೋಗಿಯ ಮಾಸ್ ಅವತಾರ

ಅಸಲಿಗೆ ಸಿನಿಮಾದಲ್ಲಿ ಕಾಡ ನಟರಾಜ್ ಅವರ ರಗಡ್, ಟಫ್ ಲುಕ್ ಅನ್ನು ನೋಡಿ ರಿಯಲ್‌ ಲೈಫ್‌ನಲ್ಲೂ ಹಾಗೆ ಇರಬಹುದು ಅನ್ನೋ ಅನುಮಾನ ಮೂಡುತ್ತೆ. ಆದರೆ, ಕಾಡ ನಟರಾಜ್ ರಿಯಲ್ ಲೈಫ್ ಬೇರೆನೇ ಇದೆ. ಅವರು ಕೇವಲ ನಟರಷ್ಟೇ ಅಲ್ಲ, ವೃತ್ತಿಯಿಂದ ಐಟಿ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ಇವರು ಸಾಫ್ಟ್‌ವೇರ್ ಉದ್ಯೋಗಿಯಾಗಿಯೂ ಕೆಲಸ ಮಾಡುತ್ತಿದ್ದಾರೆ. ಕಾರ್ಪೊರೇಟ್ ಜಗತ್ತಿನಲ್ಲಿದ್ದ ನಟರಾಜ್, ಮೊದಲ ಸಿನಿಮಾದಲ್ಲೇ ಕಚ್ಚಾ ಹಳ್ಳಿಗನ ಪಾತ್ರಕ್ಕೆ ಜೀವ ತುಂಬಿದ್ದಾರೆ.

Karikaada Kannada Movie getting good response in Amazon prime video

ಕಾಡ ನಟರಾಜ್ ಅವರ ರಗಡ್ ಲುಕ್ ಅನ್ನು ನೋಡಿ ಅವರ ಸಹೋದ್ಯೋಗಿ ಹಾಗೂ ಪರಿಚಿತ ವಲಯದಲ್ಲಿ ದೊಡ್ಡ ಅಚ್ಚರಿ ಮೂಡಿಸಿತ್ತು. ರಿಸ್ಕಿ ಸಾಹಸ ಸನ್ನಿವೇಶ, ಚಿತ್ರದ ಕಠಿಣ ಸಾಹಸ ದೃಶ್ಯಗಳಲ್ಲಿ ಯಾವುದೇ ಡ್ಯೂಪ್ ಬಳಸದೆ ನಟರಾಜ್ ಸ್ವತಃ ಫೈಟ್ಸ್ ಮಾಡಿ ನೋಡುಗರು ಹುಬ್ಬೇರಿಸುವಂತೆ ಮಾಡಿದ್ದಾರೆ. ತಾವು ನಿರ್ವಹಿಸಿದ ಪಾತ್ರಕ್ಕೆ ತಕ್ಕ ನ್ಯಾಯ ಒದಗಿಸಿದ್ದಾರೆ. ಮೊದಲ ಸಿನಿಮಾವಾದರೂ ಪಾತ್ರದ ಗಾಂಭೀರ್ಯವನ್ನು ಅಚ್ಚುಕಟ್ಟಾಗಿ ನಿಭಾಯಿಸಿ ಮೆಚ್ಚುಗೆ ಗಳಿಸಿಕೊಂಡಿದ್ದಾರೆ.

'ಕರಿಕಾಡ'ಕ್ಕೆ ಸ್ಟಾರ್ ನಟರ ಸಾಥ್

'ಕರಿಕಾಡ' ಸಿನಿಮಾದ ವಿಶೇಷವೆಂದರೆ ಈ ಚಿತ್ರವನ್ನು ಸ್ವತಃ ಕಾಡ ನಟರಾಜ್ ಅವರೇ ನಿರ್ಮಾಣ ಮಾಡಿದ್ದಾರೆ. ಈ ಮೂಲಕ ಚಿತ್ರರಂಗದ ಮೇಲಿನ ತಮ್ಮ ಬದ್ಧತೆಯನ್ನು ತೋರಿಸಿದ್ದಾರೆ. ಸಿನಿಮಾದಲ್ಲಿ ನಟರಾಜ್‌ಗೆ ಜೋಡಿಯಾಗಿ ನಿರೀಕ್ಷಾ ಶೆಟ್ಟಿ ನಾಯಕಿಯಾಗಿ ನಟಿಸಿದ್ದಾರೆ. ಇವರ ಜೊತೆಗೆ ಸ್ಯಾಂಡಲ್‌ವುಡ್‌ನ ಪ್ರಮುಖ ಪೋಷಕ ನಟರಾದ ಬಲರಾಜ್ ವಾಡಿ, ಯಶ್ ಶೆಟ್ಟಿ ಮತ್ತು ವಿಜಯ್ ಚೆಂಡೂರ್ ನಟಿಸಿರೋದು ಸಿನಿಮಾದ ಹೈಲೈಟ್. ಕಾಡ ನಟರಾಜ್‌ ನಟಿಸಿದ ಚೊಚ್ಚಲ ಸಿನಿಮಾ 'ಕರಿಕಾಡ' ಒಟಿಟಿ ವೇದಿಕೆಯಲ್ಲಿ ಯಶಸ್ಸು ಸಿಕ್ಕಿದ್ದು, ಪ್ರೇಕ್ಷಕರಿಂದ ಅತ್ಯುತ್ತಮ ಪ್ರೀತಿ ಗಳಿಸಿಕೊಂಡಿದೆ.

English summary
Karikaada Kannada Movie getting good response in Amazon prime video.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X