ರಶ್ಮಿಕಾಗೆ ಸೆಡ್ಡು? 'ನ್ಯಾಷನಲ್ ಕ್ರಶ್' ಆಗುವತ್ತ ಕನ್ನಡತಿ ಆದ್ಯಾ ಆನಂದ್

ಕನ್ನಡತಿ ರಶ್ಮಿಕಾ ಮಂದಣ್ಣಗೆ 'ನ್ಯಾಷನಲ್ ಕ್ರಶ್' ಬಿರುದು ನೀಡಲಾಗಿದೆ. ಅವರ ಮುದ್ದಾದ ಹಾವ ಭಾವಗಳಿಗೆ ಮಾರು ಹೋಗಿ ಅಭಿಮಾನಿಗಳು ರಶ್ಮಿಕಾರನ್ನು 'ನ್ಯಾಷನಲ್ ಕ್ರಶ್' ಎನ್ನುತ್ತಾರೆ. ಆದರೆ ಈಗ ಮತ್ತೊಬ್ಬ ಕರ್ನಾಟಕ ಮೂಲದ ನಟಿ ರಶ್ಮಿಕಾರ ಈ ಬಿರುದು ಕಿತ್ತುಕೊಳ್ಳುವಲ್ಲಿ ಪ್ರಬಲ ಪೈಪೋಟಿ ನೀಡುತ್ತಿದ್ದಾರೆ. ಅವರೇ ಆದ್ಯಾ ಆನಂದ್.

ನೆಟ್ ಫ್ಲಿಕ್ಸ್ನಲ್ಲಿ ಪ್ರಸಾರವಾಗಿದ್ದ 'ಬಾಂಬೆ ಬೇಗಮ್ಸ್' ವೆಬ್ ಸಿರೀಸ್‌ನಲ್ಲಿ ನಟಿಸಿದ್ದ ಕನ್ನಡತಿ ಆದ್ಯಾ ಆನಂದ್ ಮೊದಲ ವೆಬ್ ಸರಣಿಯಲ್ಲಿಯೇ ಹಲವರ ಗಮನ ಸೆಳೆದಿದ್ದರು. ಇದೀಗ ಅಮೆಜಾನ್ ಮಿನಿ ಟಿವಿಯಲ್ಲಿ ಪ್ರಸಾರವಾಗುತ್ತಿರುವ 'ಕ್ರಷ್ಡ್' ಸಿರೀಸ್‌ನಲ್ಲಿ ಮುಖ್ಯ ಪಾತ್ರ ನಿರ್ವಹಿಸಿರುವ ಆದ್ಯಾ ಮತ್ತೊಮ್ಮೆ ಪಡ್ಡೆಗಳ ಹೃದಯ ಗೆದ್ದಿದ್ದಾರೆ.

ಹೌದು, ನೋಡುಗರನ್ನ ತಮ್ಮ ಬಾಲ್ಯದ ಶಾಲಾ ದಿನಗಳಿಗೆ ಕರೆದೊಯ್ಯುವ ಈ 'ಕ್ರಷ್ಡ್' ಸಿರೀಸ್‌ನಲ್ಲಿ ಆದ್ಯಾ, ಮಥುರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆದ್ಯಾರ ಮುದ್ದು ಮುಖಕ್ಕೆ, ನಟನೆಗೆ ವೀಕ್ಷಕರು ಮಾರು ಹೋಗಿದ್ದಾರೆ. ಆದ್ಯಾ ಪ್ರಸ್ತುತ ಇಂಟರ್ನೆಟ್ ಸೆನ್ಸೇಶನ್ ಆಗಿದ್ದಾಳೆ. ಕಳೆದ ಮೂರ್ನಾಲ್ಕು ದಿನಗಳಿಂದಲೂ ಸಾವಿರಾರು ಜನ ಸಾಮಾಜಿಕ ಜಾಲತಾಣಗಳಲ್ಲಿ ಆದ್ಯಾಳ ಫೊಟೊ, ವಿಡಿಯೋಗಳನ್ನು 'ನ್ಯಾಶನಲ್ ಕ್ರಷ್ ಆಫ್ ಇಂಡಿಯಾ' ಎಂಬ ಟೈಟಲ್‌ನೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ಆದ್ಯಾಳ ನಟನೆ ಹಾಗೂ ಸೌಂದರ್ಯವನ್ನು ಹೊಗಳುತ್ತಿದ್ದಾರೆ.

ಜನರ ಪ್ರೀತಿ ಕಂಡು ಖುಷಿಯಾಗಿರುವ ಆದ್ಯಾ

ಜನರ ಪ್ರೀತಿ ಕಂಡು ಖುಷಿಯಾಗಿರುವ ಆದ್ಯಾ

ಈ ಬಗ್ಗೆ ಮಾತನಾಡಿರುವ ಆದ್ಯಾ ಆನಂದ್, 'ನಾನು ಇಂಟರ್ನೆಟ್ ಸೆನ್ಷೇನ್ ಆಗಿದ್ದೀನಿ ಎನ್ನುವುದನ್ನು ಕೇಳಲು ತುಂಬಾ ಖುಷಿಯಾಗುತ್ತಿದೆ. 'ಕ್ರಷ್ಡ್'ನಲ್ಲಿ ನನಗೆ ಅವಕಾಶ ನೀಡಿದ್ದಕ್ಕೆ ಅಮೆಜಾನ್ ಮಿನಿಗೆ ಧನ್ಯವಾದ ಹೇಳುತ್ತೇನೆ. ಈ ಸಿರೀಸ್‌ನಲ್ಲಿ ನನ್ನ ಪಾತ್ರ ಹೆಚ್ಚಿನ ಜನರಿಗೆ ಇಷ್ಟವಾಗಿದೆ. ಈ ಸಿರೀಸ್ ಬಿಡುಗಡೆಯಾದ ನಂತರದಿಂದ ನನಗೆ ಸಾಮಾಜಿಕ ಜಾಲತಾಣಗಳಲ್ಲಿ ದಿನವೂ 500ಕ್ಕೂ ಹೆಚ್ಚು ಪ್ರೀತಿಯ, ಮೆಚ್ಚುಗೆಯ ಸಂದೇಶಗಳು ಬರುತ್ತಿವೆ. ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ನನ್ನ ಫೊಟೊ, ವಿಡಿಯೋಗಳನ್ನು ಹಂಚಿಕೊಳ್ಳುವುದನ್ನು, ನನ್ನನ್ನು ಟ್ಯಾಗ್‌ ಮಾಡುತ್ತಿರುವುದು ಕಂಡು ನನಗೆ ತುಂಬಾ ಸಂತೋಷವಾಗಿದೆ' ಎಂದಿದ್ದಾರೆ.

ಶಾಲೆಯಲ್ಲಿ ನಡೆವ ಕತೆ ಆಧರಿಸಿದ 'ಕ್ರಶ್ಡ್'

ಶಾಲೆಯಲ್ಲಿ ನಡೆವ ಕತೆ ಆಧರಿಸಿದ 'ಕ್ರಶ್ಡ್'

'ಕ್ರಶ್ಡ್' ಸಿರೀಸ್‌ನ ಆರು ಸಂಚಿಕೆಗಳಲ್ಲಿ ಐದು ಈಗಾಗಲೇ ಅಮೆಜಾನ್ ಮಿನಿ ಟಿವಿಯಲ್ಲಿ ಉಚಿತವಾಗಿ ಸ್ಟ್ರೀಮ್ ಆಗುತ್ತಿದೆ. ಸೀಸನ್ ಫಿನಾಲೆ ಎಪಿಸೋಡ್ ಫೆಬ್ರುವರಿ 2ರಂದು ಬಿಡುಗಡೆಯಾಗಲಿದೆ. 'ಕ್ರಶ್ಡ್', ಶಾಲಾ ದಿನಗಳಲ್ಲಿ ನಡೆವ ರೊಮ್ಯಾಂಟಿಕ್ ಪ್ರೇಮ ಕತೆಯನ್ನು ಹೊಂದಿದೆ. ಎಲ್ಲಾ ವಯಸ್ಸಿನವರಿಗೂ ಒಗ್ಗುವ ಸುಂದರ ಕಥೆ 'ಕ್ರಶ್ಡ್' ವೆಬ್ ಸರಣಿಯಲ್ಲಿದೆ. ಸಿರೀಸ್ ನೋಡಿದ ಅನೇಕರು ತಮ್ಮ ಬಾಲ್ಯದ ದಿನಗಳು ನೆನಪಿಗೆ ಬಂದವು ಎಂದು ಹೇಳಿಕೊಂಡಿದ್ದಾರೆ. ಹೀನಾ ಡಿಸೋಜಾ ಮತ್ತು ಮಂದರ್ ಕುರುಂಡ್ಕರ್ ನಿರ್ದೇಶನದ ಈ ಸರಣಿಯಲ್ಲಿ ರುದ್ರಾಕ್ಷ್ ಜೈಸ್ವಾಲ್, ಆದ್ಯಾ ಆನಂದ್, ಊರ್ವಿ ಸಿಂಗ್, ನಮನ್ ಜೈನ್, ಅರ್ಜುನ್ ದೇಸ್ವಾಲ್ ಮತ್ತು ಅನುಪ್ರಿಯಾ ಕರೋಲಿ ಸೇರಿದಂತೆ ಅನೇಕ ಪ್ರತಿಭಾವಂತ ನಟರ ಸಮೂಹ ವೆಬ್ ಸರಣಿಯಲ್ಲಿದೆ. ಸಿರೀಸ್‌ನಲ್ಲಿ ಸ್ಯಾಮ್ (ಸಂವಿಧಾನ್ ಶರ್ಮಾ) ಪಾತ್ರದಲ್ಲಿ ನಟಿಸಿರುವ ರುದ್ರಾಕ್ಷ್ ಜೈಸ್ವಾಲ್ ಮತ್ತು ಆದ್ಯಾ ಮಥುರಾ ಆಗಿ ಕಾಣಿಸಿಕೊಂಡಿರುವ ಆದ್ಯಾ ಆನಂದ್ ಇಬ್ಬರ ಕೆಮಿಸ್ಟ್ರಿ ಅದ್ಭುತವಾಗಿ ಮೂಡಿಬಂದಿದ್ದು, ಒಟ್ಟಾರೆ 'ಕ್ರಷ್ಡ್' ಸಿರೀಸ್ ಭಾರತದ ಮತ್ತೊಂದು ಹಿಟ್ ವೆಬ್ ಸರಣಿ ಆಗುವತ್ತ ದಾಪುಗಾಲಿಟ್ಟಿದೆ.

ಹಲವು ಜಾಹೀರಾತುಗಳಲ್ಲಿ ನಟಿಸಿದ್ದಾರೆ

ಹಲವು ಜಾಹೀರಾತುಗಳಲ್ಲಿ ನಟಿಸಿದ್ದಾರೆ

ಆದ್ಯಾ ಹಲವು ಜಾಹೀರಾತುಗಳಲ್ಲಿ ಸಹ ನಟಿಸಿದ್ದಾರೆ. ವಿಮ್, ಟಾಟಾ ಸೇರಿದಂತೆ ಹಲವು ಪ್ರತಿಷ್ಠಿತ ಬ್ರ್ಯಾಂಡ್‌ಗಳ ಜಾಹೀರಾತಿನಲ್ಲಿ ಆದ್ಯಾ ಕಾಣಿಸಿಕೊಂಡಿದ್ದಾರೆ. ಜೊತೆಗೆ ಈ ಮೊದಲು ಬಾಲ ನಟಿಯಾಗಿಯೂ ಆದ್ಯಾ ನಟಿಸಿದ್ದಾರೆ. ಆದ್ಯಾರದ್ದು ಮಂಗಳೂರಾದರೂ ಬೆಳೆದಿದ್ದೆಲ್ಲ ಬಹುತೇಕ ಮುಂಬೈನಲ್ಲಿಯೇ. ಎಳೆಯ ವಯಸ್ಸಿನಿಂದಲೇ ನಟನೆ ಬಗ್ಗೆ ಆಸಕ್ತಿ ಹೊಂದಿದ್ದ ಆದ್ಯ ಹಲವು ಫ್ಯಾಷನ್‌ ಶೋಗಳಲ್ಲಿ ಸಹ ಭಾಗವಹಿಸಿದ್ದಾರೆ. ಸಿನಿಮಾ ರಂಗದಲ್ಲಿ ಮಿನುಗ ಬೇಕೆಂಬ ಆಸೆ ಇರಿಸಿಕೊಂಡಿರುವ ಆದ್ಯ ಕನಸುಗಳನ್ನು ಈಡೇರಿಸಿಕೊಳ್ಳುವತ್ತ ಹೆಜ್ಜೆ ಹಾಕುತ್ತಿದ್ದಾರೆ.

ಗಮನ ಸೆಳೆಯುತ್ತಿದ್ದಾರೆ ಕರ್ನಾಟಕ ಮೂಲದ ನಟಿಯರು

ಗಮನ ಸೆಳೆಯುತ್ತಿದ್ದಾರೆ ಕರ್ನಾಟಕ ಮೂಲದ ನಟಿಯರು

ಕನ್ನಡದ ಹಲವು ನಟಿಯರು ಬಾಲಿವುಡ್ ಸೇರಿದಂತೆ ಹಲವು ಸಿನಿಮಾ ರಂಗಗಳಲ್ಲಿ ಮಿಂಚುತ್ತಿದ್ದಾರೆ. ನ್ಯಾಷನಲ್ ಕ್ರಶ್ ಎನಿಸಿಕೊಂಡಿರುವ ರಶ್ಮಿಕಾ ಮಂದಣ್ಣ, ಕನ್ನಡ ಸಿನಿಮಾಗಳಿಂದ ನಟನೆ ಆರಂಭಿಸಿ ಇದೀಗ ಬಾಲಿವುಡ್‌ನ ದೊಡ್ಡ ಪ್ರೊಡಕ್ಷನ್ ಹೌಸ್‌ಗಳ ಜೊತೆಗೆ, ದೊಡ್ಡ ದೊಡ್ಡ ಸ್ಟಾರ್‌ಗಳೊಟ್ಟಿಗೆ ಕೆಲಸ ಮಾಡುತ್ತಿದ್ದಾರೆ. ಕರ್ನಾಟಕ ಮೂಲದ ಕೃತಿ ಶೆಟ್ಟಿ ಸಹ 'ಉಪ್ಪೆನ' ತೆಲುಗು ಸಿನಿಮಾ ಮೂಲಕ ಗಮನ ಸೆಳೆದಿದ್ದು, 'ಶ್ಯಾಮ ಸಿಂಘ ರಾಯ್', 'ಬಂಗಾರ್ರಾಜು' ಮೂಲಕ ಬ್ಯುಸಿ ನಟಿಯಾಗಿ ಬದಲಾಗಿದ್ದಾರೆ. ಅವರ ಮುಂದೆ ಸಾಲು-ಸಾಲು ಸಿನಿಮಾ ಅವಕಾಶಗಳು ಹರಡಿಕೊಂಡಿವೆ.

More from Filmibeat

English summary
Karnataka girl Aadya Anand becoming new internet sensation. She acting in Amazon Mini Tv web series Crushed. Her acting appreciated by many people.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X