ಹೈಕೋರ್ಟ್‌ ಆದೇಶದಿಂದ ನೆಟ್‌ಫ್ಲಿಕ್ಸ್ ನಿರಾಳ: ಬೆಂಗಳೂರು ಕ್ರೈಂ ಕೇಸ್ ಮತ್ತೆ ಪ್ರಸಾರ

ಒಟಿಟಿ ದೈತ್ಯ ನೆಟ್‌ಫ್ಲಿಕ್ಸ್‌ನಲ್ಲಿ 'ಕ್ರೈಂ ಸ್ಟೋರಿಸ್; ಇಂಡಿಯಾ ಡಿಟೆಕ್ಟಿವ್ಸ್' ಹೆಸರಿನ ಡಾಕ್ಯುಮೆಂಟ್ ಸರಣಿ ಪ್ರಸಾರವಾಗುತ್ತಿದ್ದು, ಈ ಸರಣಿಯ ಮೊದಲ ಮೂರು ಎಪಿಸೋಡ್‌ಗಳು ಬೆಂಗಳೂರಿನ ಮೂರು ಅಪರಾಧ ಪ್ರಕರಣಗಳ ಬಗ್ಗೆ ಆಗಿದ್ದವು.

ಬೆಂಗಳೂರಿನಲ್ಲಿ ನಡೆದ ಮೂರು ಅಪರಾಧ ಪ್ರಕರಣಗಳನ್ನು ದೂರು ಮತ್ತು ತನಿಖೆ ಹಂತದಲ್ಲಿ ಚಿತ್ರೀಕರಿಸಿ ಪ್ರಸಾರ ಮಾಡಲಾಗಿತ್ತು. ಕ್ರೈಂ ನಡೆದಾಗಿನಿಂದ, ಪೊಲೀಸರ ವಿಚಾರಣೆ, ತನಿಖೆ, ಆರೋಪಿಗಳನ್ನು ಹಿಡಿಯುವ ರೀತಿ ಎಲ್ಲವನ್ನೂ ಚಿತ್ರೀಕರಿಸಿ ಪ್ರಸಾರ ಮಾಡಲಾಗಿತ್ತು. ಈ ಡಾಕ್ಯು ಸರಣಿ ಮೆಚ್ಚುಗೆ ಗಳಿಸಿತ್ತು.

ಆದರೆ ಈ ಡಾಕ್ಯುಸರಣಿಯ ಮೊದಲ ಎಪಿಸೋಡ್ 'ಎ ಮದರ್ ಮರ್ಡರ್' ಬಗ್ಗೆ, ಅದೇ ಎಪಿಸೋಡ್‌ನಲ್ಲಿ ಪ್ರಕರಣವೊಂದರಲ್ಲಿ ಕಾಣಿಸಿಕೊಳ್ಳುವ ಆರೋಪಿ ಶ್ರೀಧರ್ ರಾವ್ ಎಂಬಾತ ಆಕ್ಷೇಪ ವ್ಯಕ್ತಪಡಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ.

Karnataka High Court Allows Netflix To Air Blocked Episode Of Crime Stories India Detectives

ಪ್ರಕರಣವು ವಿಚಾರಣೆ ಹಂತದಲ್ಲಿದ್ದು ಈ ಸಮಯದಲ್ಲಿ ಎಪಿಸೋಡ್‌ ಪ್ರಸಾರವಾಗುವುದರಿಂದ ವಿಚಾರಣೆ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ. ಎಪಿಸೋಡ್‌ನಲ್ಲಿ ಪ್ರಸಾರವಾಗಿರುವ ಕೆಲವು ಅಂಶಗಳು ನನ್ನ ವಿರುದ್ಧ ಬಳಸಿಕೊಳ್ಳುವ ಅವಕಾಶವೂ ಇದೆ ಎಂದಿದ್ದ. ವಿಚಾರಣೆ ನಡೆಸಿದ ಹೈಕೋರ್ಟ್ ಈ ಎಪಿಸೋಡ್‌ ಪ್ರಸಾರವನ್ನು ಸ್ಥಗಿತಗೊಳಿಸುವಂತೆ ಆದೇಶ ನೀಡಿತ್ತು. ಅಂತೆಯೇ ಅಕ್ಟೋಬರ್ 01 ರಿಂದ ಎಪಿಸೋಡ್ ಪ್ರಸಾರ ಸ್ಥಗಿತಗೊಂಡಿತ್ತು.

ಆದರೆ ಇದೀಗ ಹೈಕೋರ್ಟ್, ತಡೆ ಹಿಡಿಯಲಾಗಿದ್ದ 'ಎ ಮದರ್ ಮರ್ಡರ್' ಎಪಿಸೋಡ್ ಅನ್ನು ಪುನಃ ಪ್ರಸಾರ ಮಾಡುವಂತೆ ಆದೇಶ ನೀಡಿದೆ. ಆದೇಶ ಹೊರಬಿದ್ದ ಬೆನ್ನಲ್ಲೆ ನೆಟ್‌ಫ್ಲಿಕ್ಸ್‌ ಈ ಎಪಿಸೋಡ್ ಅನ್ನು ಪ್ರಸಾರ ಮಾಡಲು ಆರಂಭಿಸಿದೆ.

ಹೈಕೋರ್ಟ್‌ ನ್ಯಾಯಮೂರ್ತಿ ಬಿಎಂ ಶ್ಯಾಮ್ ಪ್ರಸಾದ್ ಈ ಹಿಂದೆ ನೀಡಿದ್ದ ಆದೇಶವನ್ನು ಪ್ರಶ್ನಿಸಿದ್ದ ನೆಟ್‌ಫ್ಲಿಕ್ಸ್‌ ಪರ, ವಕೀಲರಾದ ಎಸ್‌ಎಸ್ ನಾಗದಂಡ, ಸಾಯಿಕೃಷ್ಣ ಅಸೋಸಿಯೇಟ್ಸ್‌ ಲಾ ಫರ್ಮ್‌ನ ಥಾಮಸ್ ಜಾರ್ಜ್, ಥಾನ್ವಿ ಸಿನ್ಹಾ ಮತ್ತು ವಿಕ್ರಂ ಉನ್ನಿಕೃಷ್ಣನ್ ಹಾಗೂ ಡಾಕ್ಯುಸರಣಿಯ ನಿರ್ಮಾಣ ಸಂಸ್ಥೆಯಾದ ಮಿನ್ನಾವ್ ಫಿಲಮ್ಸ್ ಪರವಾಗಿ ಹಿರಿಯ ವಕೀಲ ಉದಯ್ ಹೊಳ್ಳ, ಕೌಶಿಕ್ ಮೋಯಿತ್ರಾ, ಶ್ರೆಯಾ ಸಿರ್ಕಾರ್‌ ಅವರುಗಳು ವಾದ ಮಂಡಿಸಿ ತಡೆ ಹಿಡಿಯಲಾಗಿದ್ದ ಎಪಿಸೋಡ್ ಮರು ಪ್ರಸಾರವಾಗುವಂತೆ ಮಾಡಿದ್ದಾರೆ.

'ಎ ಮದರ್ ಮರ್ಡರ್‌' ಕಂತು, ಟೆಕಿಯೊಬ್ಬಾಕೆ ತನ್ನ ತಾಯಿಯನ್ನು ಕೊಂದು ಪರಾರಿಯಾಗಿದ್ದ ಪ್ರಕರಣದ್ದಾಗಿದೆ. ಈ ಪ್ರಕರಣದಲ್ಲಿ ಯುವಕನೊಬ್ಬ ಆರೋಪಿಯಾಗಿದ್ದು, ಮುಖ್ಯ ಆರೋಪಿಯಾಗಿದ್ದ ಯುವತಿಗೆ ಆ ಯುವಕ ಸಹಾಯ ಮಾಡಿದ್ದಾನೆ ಎಂಬರ್ಥ ಬರುವಂತೆ ಕೆಲವು ಸಂಭಾಷಣೆಗಳು ಇವೆ. ಯುವಕ ಪೊಲೀಸರ ಮುಂದೆ ತಪ್ಪೊಪ್ಪಿಕೊಳ್ಳುವ (ಕೊಲೆ ಮಾಡಿದ್ದಾಗಿ ಅಲ್ಲ) ದೃಶ್ಯವೊಂದಿದೆ. ಈ ದೃಶ್ಯಕ್ಕೆ ಆಕ್ಷೇಪ ವ್ಯಕ್ತಪಡಿಸಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು.

ಟೆಕಿ, ತನ್ನ ತಾಯಿಯನ್ನು ಕೊಂದ ಈ ಪ್ರಕರಣ ದೇಶದಾದ್ಯಂತ ಸದ್ದಾಗಿತ್ತು, ಆರೋಪಿಗಳನ್ನು ಬೆಂಗಳೂರು ಪೊಲೀಸರು ಪೋರ್ಟ್‌ ಬ್ಲೇರ್‌ನಲ್ಲಿ ಬಂಧಿಸಿದ್ದರು. ಡಾಕ್ಯುಮೆಂಟರಿಯಲ್ಲಿ ಆ ಯುವತಿಯನ್ನು ಮಾತನಾಡಿಸಲಾಗಿ, ಯುವತಿಯು ತಾನೇಕೆ ತನ್ನ ತಾಯಿಯನ್ನು ಕೊಂದೆ ಎಂಬುದನ್ನು ಹೇಳಿದ್ದಳು. 'ಕ್ರೈಂ ಸ್ಟೋರಿಸ್; ಇಂಡಿಯಾ ಡಿಟೆಕ್ಟಿವ್ಸ್'ನ ಮೊದಲ ಎಪಿಸೋಡ್ ಆಗಿ ಈ ಪ್ರಕರಣ ಪ್ರಸಾರವಾಗಿತ್ತು.

ಸರಣಿಯ ಇನ್ನೆರಡು ಕಂತುಗಳಲ್ಲಿ ಎರಡು ಬೆಂಗಳೂರಿನಲ್ಲಿಯೇ ನಡೆದ ಪ್ರತ್ಯೇಕ ಅಪರಾಧಗಳ ಕುರಿತ ಮಾಹಿತಿ ಇದೆ. ಒಂದು ಕಂತಿನಲ್ಲಿ ವೇಶ್ಯೆಯೊಬ್ಬಳ ಕೊಲೆ ಪ್ರಕರಣ ಮತ್ತು ಮಗುವೊಂದರ ಅಪಹರಣ ಪ್ರಕರಣದ ಮತ್ತೊಂದು ಕಂತು ಪ್ರಸಾರವಾಗಿದೆ. 'ಕ್ರೈಂ ಸ್ಟೋರೀಸ್; ಇಂಡಿಯಾ ಡಿಟೆಕ್ಟೀವ್ಸ್' ಡಾಕ್ಯುಮೆಂಟ್ ಸೀರೀಸ್‌ನಲ್ಲಿ ಬೆಂಗಳೂರು ಸೆಂಟ್ರಲ್ ಡಿಸಿಪಿ ಅನುಚೇತ್ ಸೇರಿದಂತೆ ಹಲವು ಬೆಂಗಳೂರು ಪೊಲೀಸ್ ಹಿರಿಯ ಅಧಿಕಾರಿಗಳು, ಸಿಬ್ಬಂದಿ, ಕಾನ್ಸ್‌ಟೇಬಲ್‌ಗಳು ವೆಬ್ ಸರಣಿಯಲ್ಲಿ ಕಾಣಿಸಿಕೊಂಡಿದ್ದಾರೆ. ಇವರಲ್ಲಿ ಹಲವರು ಕನ್ನಡದಲ್ಲಿಯೇ ಮಾತನಾಡಿದ್ದಾರೆ. ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ವೆಬ್ ಸರಣಿಯ ಚಿತ್ರೀಕರಣ ನಡೆದಿದೆ.

'ಕ್ರೈಂ ಸ್ಟೋರೀಸ್; ಇಂಡಿಯಾ ಡಿಟೆಕ್ಟೀವ್ಸ್' ಬೆಂಗಳೂರು ಮಾತ್ರವೇ ಅಲ್ಲದೆ ದೇಶದ ಹಲವು ನಗರಗಳಲ್ಲಿ ನಡೆದ ಅಪರಾಧ ಪ್ರಕರಣಗಳ ಮಾಹಿತಿಯನ್ನು ವೀಕ್ಷಕರ ಎದುರಿಗಿಡುತ್ತಿದೆ. ಬೆಂಗಳೂರು ಪ್ರಕರಣಗಳ ಬಳಿಕ, ದೇಶವನ್ನೇ ನಡುಗಿಸಿದ್ದ ದೆಹಲಿಯ 'ಬುರಾರಿ ಕೇಸ್' ಬಗ್ಗೆ ಎಪಿಸೋಡ್‌ಗಳು ಪ್ರಸಾರವಾಗಿವೆ.

More from Filmibeat

English summary
Karnataka high court allows Netflix to air blocked episode of crime stories India detectives. On October 1 high court passed injection order to stop one of the episode of docu series.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X