Meiyazhagan OTT: ಕಾರ್ತಿ, ಅರವಿಂದ್ ಸ್ವಾಮಿ ಚಿತ್ರ ಕನ್ನಡಕ್ಕೂ ಡಬ್ ಆಗಿ ಸ್ಟ್ರೀಮಿಂಗ್

ಸೂರ್ಯ ಸಹೋದರ ಕಾರ್ತಿ ವೈವಿಧ್ಯಮಯ ಪಾತ್ರಗಳಿಂದ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ತಿಂಗಳ ಹಿಂದೆಯಷ್ಟೆ ಕಾರ್ತಿ ನಟನೆಯ 'ಮೇಯಳಗನ್' ಸಿನಿಮಾ ತೆರೆಗೆ ಬಂದಿತ್ತು. ಚಿತ್ರದಲ್ಲಿ ಅರವಿಂದ್ ಸ್ವಾಮಿ ಕೂಡ ಪ್ರಮುಖ ಪಾತ್ರದಲ್ಲಿ ಮಿಂಚಿದ್ದರು.

ಒಂದು ತಿಂಗಳ ಅಂತರದಲ್ಲಿ 'ಮೇಯಳಗನ್' ಸಿನಿಮಾ ಓಟಿಟಿಗೆ ಬರ್ತಿದೆ. ಅಧಿಕೃತವಾಗಿ ಸಿನಿಮಾ ಡಿಜಿಟಲ್ ಸ್ಟ್ರೀಮಿಂಗ್ ಡೇಟ್ ರಿವೀಲ್ ಆಗಿದೆ. 'ಸತ್ಯಂ-ಸುಂದರಂ' ಹೆಸರಿನಲ್ಲಿ ಸಿನಿಮಾ ತೆಲುಗಿಗೂ ಡಬ್ ಆಗಿ ರಿಲೀಸ್ ಆಗಿತ್ತು. ಇದೀಗ ಕನ್ನಡ ಸೇರಿ 5 ಭಾಷೆಗಳಲ್ಲಿ ಸಿನಿಮಾ ಓಟಿಟಿಗೆ ಬರ್ತಿದೆ. ಪ್ರೇಮ್ ಕುಮಾರ್ ಈ ಚಿತ್ರದ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.

Karthi Arvind Swamy starrer Meiyazhagan OTT release date of Meiyazhagan locked

2D ಎಂಟರ್‌ಟೈನ್‌ಮೆಂಟ್ ಬ್ಯಾನರ್ ಅಡಿಯಲ್ಲಿ ನಟ ಸೂರ್ಯ ಹಾಗೂ ಜ್ಯೋತಿಕಾ ದಂಪತಿ 'ಮೇಯಳಗನ್' ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಸಿಂಪಲ್ ಕಥೆಯನ್ನು ಚಿತ್ರದಲ್ಲಿ ಬಹಳ ಚೆನ್ನಾಗಿ ಕಟ್ಟಿಕೊಡಲಾಗಿದೆ. ಎಮೋಷನಲ್ ಜರ್ನಿ ಕಥೆ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ಆದರೆ ದೊಡ್ಡ ಮಟ್ಟದಲ್ಲಿ ಸಿನಿಮಾ ಗೆಲ್ಲಲಿಲ್ಲ. ಡೀಸೆಂಟ್ ಹಿಟ್ ಎನಿಸಿಕೊಂಡಿತ್ತು. ಗೋವಿಂದ್ ವಸಂತ ಸಂಗೀತವೂ ಚಿತ್ರಕ್ಕೆ ಸಾಥ್ ನೀಡಿತ್ತು.

90ರ ದಶಕದ ಮಧ್ಯಭಾಗದಲ್ಲಿ 'ಮೇಯಳಗನ್' ಚಿತ್ರದ ಕಥೆ ಶುರುವಾಗುತ್ತದೆ. ಅರುಲ್ಮೋಳಿ (ಅರವಿಂದ್ ಸ್ವಾಮಿ) ಹಾಗೂ ಆತನ ಕುಟುಂಬ ಅನಿವಾರ್ಯವಾಗಿ ತಮ್ಮ ಸ್ವಂತ ಊರನ್ನು ಬಿಟ್ಟು ಬೇರೆ ಊರಿಗೆ ಹೋಗಿ ನೆಲೆಸುವಂತಾಗುತ್ತದೆ. ತನಗೆ ಬಹಳ ಇಷ್ಟವಾದ ಸೈಕಲ್ ಅನ್ನು ಕೂಡ ಬಿಟ್ಟು ಹೋಗುತ್ತಾನೆ. 22 ವರ್ಷಗಳ ಬಳಿಕ ಅರುಳ್‌ಮುಳಿ ತನ್ನ ಸಹೋದರಿ ಭುವನಾ ಮದುವೆಗಾಗಿ ಮತ್ತೆ ತನ್ನ ಊರಿಗೆ ಬರ್ತಾನೆ. ಆ ಮದುವೆಯಲ್ಲಿ ಮೇಯಳಗನ್(ಕಾರ್ತಿ) ತಾನಾಗಿಯೇ ಮೇಲೆ ಬಿದ್ದು ಅರುಲ್ಮೋಳಿ ಪರಿಚಯ ಮಾಡಿಕೊಳ್ಳುತ್ತಾನೆ.

Karthi Arvind Swamy starrer Meiyazhagan OTT release date of Meiyazhagan locked

ಮೇಯಳಗನ್ ಯಾರು ಎನ್ನುವುದು ಅರುಲ್ಮೋಳಿಗೆ ಗೊತ್ತಿರಲ್ಲ. ನನ್ನ ಬಾಲ್ಯದ ದಿನಗಳೂ ನೆನಪಿಗೆ ಬರಲ್ಲ. ಆತನ ಹೆಸರು ಗೊತ್ತಿಲ್ಲದೇ ಅರುಲ್ಮೋಳಿ ಇಬ್ಬರೂ ಒಟ್ಟಿಗೆ ಪ್ರಯಾಣಿಸುವಂತಾಗುತ್ತದೆ. ಮುಂದೆ ಏನೆಲ್ಲಾ ಆಗುತ್ತದೆ ಎನ್ನುವುದು 'ಮೇಯಳಗನ್' ಚಿತ್ರದ ಒನ್‌ಲೈನ್ ಸ್ಟೋರಿ. ಬಹಳ ಸೆನ್ಸಿಬಲ್, ಎಮೋಷನಲ್ ಕಥೆಯನ್ನು ಚಿತ್ರದಲ್ಲಿ ಹೇಳಲಾಗಿದೆ.

ಸದ್ಯ ಮಾಸ್ ಸಿನಿಮಾಗಳ ಟ್ರೆಂಡ್ ನಡೀತಿದೆ. ಅಂತಹ ಸಿನಿಮಾಗಳ ನಡುವೆ 'ಮೇಯಳಗನ್' ಸಿನಿಮಾ ಅಷ್ಟಾಗಿ ಪ್ರೇಕ್ಷಕರಿಗೆ ಇಷ್ಟವಾಗಿರಲಿಲ್ಲ. ಸ್ಲೋ ಆಗಿ ಸಾಗುವ ಕಥೆ ಪ್ರೇಕ್ಷಕರ ತಾಳ್ಮೆ ಪರೀಕ್ಷೆ ಮಾಡಿದ್ದು ಸುಳ್ಳಲ್ಲ. ಆದರೆ ಓಟಿಟಿಯಲ್ಲಿ ಸಿನಿಮಾ ವೀಕ್ಷಿಸಲು ಸಾಕಷ್ಟು ಜನ ಕಾಯುತ್ತಿದ್ದಾರೆ. ದೀಪಾವಳಿ ಸಂಭ್ರಮದಲ್ಲಿ ಸಿನಿಮಾ ಓಟಿಟಿಗೆ ಸ್ಟ್ರೀಮಿಂಗ್‌ಗೆ ಸಜ್ಜಾಗುತ್ತಿದೆ. ಇದೇ ಭಾನುವಾರ(ಅಕ್ಟೋಬರ್ 27) ಮೇಯಳಗನ್ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ರಿಲೀಸ್ ಆಗಲಿದೆ.

2 ಗಂಟೆ 57 ನಿಮಿಷಗಳ ದೊಡ್ಡ ಸಿನಿಮಾ 'ಮೇಯಳಗನ್' ಚಿತ್ರಮಂದಿರಗಳಲ್ಲಿ ಪ್ರೇಕ್ಷಕರಿಗೆ ನಿರಾಸೆ ಮೂಡಿಸಿತ್ತು. ಬಳಿಕ 18 ನಿಮಿಷ ಸನ್ನಿವೇಶಗಳಿಗೆ ಕತ್ತರಿ ಹಾಕಲಾಗಿತ್ತು. ಆದರೆ ಓಟಿಟಿಯಲ್ಲಿ 2 ಗಂಟೆ 57 ನಿಮಿಷ ಸಿನಿಮಾ ಸ್ಟ್ರೀಮಿಂಗ್ ಆಗಲಿದೆ. ಕಾರ್ತಿ ನಟಿಸಿದ ಸಿನಿಮಾಗಳು ಇತ್ತೀಚೆಗೆ ದೊಡ್ಡದಾಗಿ ಸದ್ದು ಮಾಡ್ತಿಲ್ಲ. 'ಮೇಯಳಗನ್' ಚಿತ್ರದ ಬಗ್ಗೆ ಭಾರೀ ನಿರೀಕ್ಷೆಯಿತ್ತು. ಅದು ಹುಸಿಯಾಗಿತ್ತು.

ಕಾರ್ತಿ ಹಾಗೂ ಅರವಿಂದ್ ಸಾಮಿ ನಟನೆ ಬಗ್ಗೆ ಮೆಚ್ಚುಗೆ ವ್ಯಕ್ತವಾದರೂ ಇಡೀ ಸಿನಿಮಾ ಪ್ರೇಕ್ಷಕರನ್ನು ರಂಜಿಸುವಲ್ಲಿ ವಿಫಲವಾಗಿತ್ತು. ತಮಿಳಿನಲ್ಲಿ ತಕ್ಕಮಟ್ಟಿಗೆ ಗೆದ್ದಿತ್ತು. ತೆಲುಗಿನಲ್ಲಿ 'ಸತ್ಯಂ- ಸುಂದರಂ' ಆಟ ನಡೆಯಲಿಲ್ಲ. ಇದೀಗ ಸಿನಿಮಾ 5 ಭಾಷೆಗಳಲ್ಲಿ ಓಟಿಟಿ ವೀಕ್ಷಕರ ಮುಂದೆ ಬರ್ತಿದೆ. ಯಾವ ರೀತಿಯ ರೆಸ್ಪಾನ್ಸ್ ಸಿಗುತ್ತದೆ ಕಾದು ನೋಡಬೇಕು.

More from Filmibeat

English summary
Karthi, Arvind Swamy's Meiyazhagan OTT Release Date;
Read more about: ott arvind swamy
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X