For Quick Alerts
  ALLOW NOTIFICATIONS  
  For Daily Alerts

  ಚಿತ್ರಮಂದಿರದಲ್ಲಿ ಅಬ್ಬರಿಸಿದ್ದ ಕಾರ್ತಿಕೇಯ 2 ಚಿತ್ರ ಓಟಿಟಿಯಲ್ಲಿ ಯಾವಾಗ? ಅಧಿಕೃತ ದಿನಾಂಕ ಪ್ರಕಟ

  |

  ಆಗಸ್ಟ್ 13ರಂದು ಯಾವುದೇ ನಿರೀಕ್ಷೆ ಹಾಗೂ ಕೇಜ್ ಇಲ್ಲದೇ ಚಿತ್ರಮಂದಿರಕ್ಕೆ ಪ್ರವೇಶಿಸಿದ್ದ ಕಾರ್ತಿಕೇಯ 2 ಚಿತ್ರ ಈ ವರ್ಷದ ಸೆನ್ಸೇಷನಲ್ ಹಿಟ್ ಆಗಿ ಹೊರಹೊಮ್ಮಿತ್ತು. 20 ಕೋಟಿ ವೆಚ್ಚದಲ್ಲಿ ತಯಾರಾದ ಕಾರ್ತಿಕೇಯ 2 ಚಿತ್ರವನ್ನು ತೆಲುಗು ಹಾಗೂ ಹಿಂದಿ ಎರಡೂ ಭಾಷೆಗಳಲ್ಲಿ ಬಿಡುಗಡೆ ಮಾಡಲಾಯಿತು. ಬಾಯ್ಕಾಟ್ ಬಾಲಿವುಡ್ ಅಭಿಯಾನದಡಿಯಲ್ಲಿ ಹಿಂದಿ ಚಿತ್ರಗಳ ವಿರುದ್ಧ ತಿರುಗಿ ಬಿದ್ದಿದ್ದ ಬಾಲಿವುಡ್ ಸಿನಿಪ್ರೇಕ್ಷಕರು ಕಾರ್ತಿಕೇಯ 2 ಚಿತ್ರದ ಕಥಾ ಹಂದರಕ್ಕೆ ಮನಸೋತಿದ್ದರು. ಹೀಗಾಗಿಯೇ ದಕ್ಷಿಣದಿಂದ ಹಿಂದಿಗೆ ಡಬ್ ಆದ ಈ ಹೈಪ್ ಇಲ್ಲದ ಚಿತ್ರ ತೆಲುಗು ಹಾಗೂ ಹಿಂದಿ ಎರಡೂ ಭಾಷೆಗಳಲ್ಲಿಯೂ ಸೇರಿ ಬಾಕ್ಸ್ ಆಫೀಸ್‌ನಲ್ಲಿ 120 ಕೋಟಿ ರೂಪಾಯಿಗಳನ್ನು ಬಾಚಿತು.

  ಹೀಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದ ಹಾಗೂ ಬಾಕ್ಸ್ ಆಫೀಸಿನಲ್ಲಿ ಒಳ್ಳೆಯ ಗಳಿಕೆ ಮಾಡಿದ ಕಾರ್ತಿಕೇಯ 2 ಚಿತ್ರ ಅಕ್ಟೋಬರ್ ತಿಂಗಳಿನಲ್ಲಿ ಓಟಿಟಿಗೆ ಆಗಮಿಸಲಿದೆ ಎಂಬ ಸುದ್ದಿ ಕಳೆದೆರಡು ವಾರಗಳಿಂದ ಹರಿದಾಡುತ್ತಲೇ ಇತ್ತು. ಈ ಸುದ್ದಿ ಈಗ ನಿಜವಾಗಿದ್ದು ವಿಜಯದಶಮಿ ಪ್ರಯುಕ್ತ ಕಾರ್ತಿಕೇಯ 2 ಒಟಿಟಿಗೆ ಲಗ್ಗೆಯಿಡುತ್ತಿದೆ. ಈ ಕುರಿತಾಗಿ ಕಾರ್ತಿಕೇಯ 2 ಪ್ರಸಾರವಾಗಲಿರುವ ಒಟಿಟಿ ವೇದಿಕೆಯಾದ ಜೀ 5 ವಿಶೇಷ ಟ್ರೈಲರ್ ಹಂಚಿಕೊಂಡಿದ್ದು, ಅಕ್ಟೋಬರ್ 5ರಿಂದ ವೀಕ್ಷಿಸಲು ಲಭ್ಯವಿದೆ ಎಂಬುದನ್ನು ತಿಳಿಸಿದೆ.

  ಇನ್ನು ನಿಖಿಲ್ ಸಿದ್ಧಾರ್ಥ್ ಹಾಗೂ ಅನುಪಮಾ ಪರಮೇಶ್ವರನ್ ಅಭಿನಯದ ಕಾರ್ತಿಕೇಯ 2 ಚಿತ್ರ ಬುಕ್ ಮೈ ಶೋ ಅಪ್ಲಿಕೇಶನ್‌ನಲ್ಲಿ 91% ರೇಟಿಂಗ್ ಪಡೆದುಕೊಂಡಿದ್ದು, 97% ಗೂಗಲ್ ಬಳಕೆದಾರರು ಚಿತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಹಾಗೂ ಐಎಂಡಿಬಿಯಲ್ಲಿ 10ಕ್ಕೆ 8.3 ಅಂಕಗಳನ್ನು ಚಿತ್ರ ಪಡೆದುಕೊಂಡಿದೆ.

  English summary
  Nikhil Siddhartha and Anupama Parameswaran starrer Karthikeya 2 OTT release date and platform details
  Friday, September 30, 2022, 15:42
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X