ನಟಿ ಕೀರ್ತಿ ಸುರೇಶ್ ಅಭಿಮಾನಿಗಳಿಗೆ ಸಿಕ್ತು ಸಿಹಿ ಸುದ್ದಿ
ದಕ್ಷಿಣ ಭಾರತೀಯ ಚಿತ್ರರಂಗದ ಖ್ಯಾತ ನಟಿ ಕೀರ್ತಿ ಸುರೇಶ್ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ಇತ್ತೀಚಿಗೆ ಮದುವೆ ವಿಚಾರವಾಗಿ ಸುದ್ದಿಯಾಗಿದ್ದ ಕೀರ್ತಿ ಈಗ ಸಿನಿಮಾ ವಿಚಾರದ ಮೂಲಕ ಸದ್ದು ಮಾಡುತ್ತಿದ್ದಾರೆ. ಕೊರೊನಾ ಲಾಕ್ ಡೌನ್ ನಿಂದ ಮನೆಯಲ್ಲಿಯೆ ಇದ್ದ ಕೀರ್ತಿ ಸುರೇಶ್ ಈಗ ಅಭಿಮಾನಿಗಳ ಮುಂದೆ ಬರುತ್ತಿದೆ.
Recommended Video
ಹೌದು ಕೀರ್ತಿ ಸುರೇಶ್ ಅಭಿನಯದ ಬಹು ನಿರೀಕ್ಷೆಯ ಪೆಂಗ್ವಿನ್ ಸಿನಿಮಾದ ಟೀಸರ್ ರಿಲೀಸ್ ಗೆ ಡೇಟ್ ಫಿಕ್ಸ್ ಆಗಿದೆ. ಜೂನ್ 6 ರಂದು ಚಿತ್ರದ ಫಸ್ಟ್ ಲುಕ್ ರಿಲೀಸ್ ಮಾಡಲಾಗಿದೆ. ಮುಖದಲ್ಲಿ ರಕ್ತ ಸೋರುತ್ತಿರುವ ಕೀರ್ತಿ ಸುರೇಶ್ ಫಸ್ಟ್ ಲುಕ್ ವೈರಲ್ ಆಗಿದ್ದು ಚಿತ್ರದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ.
ಫಸ್ಟ್ ಲುಕ್ ರಿಲೀಸ್ ಬೆನ್ನಲ್ಲೆ ಚಿತ್ರದ ಟೀಸರ್ ಸಹ ರಿಲೀಸ್ ಆಗುತ್ತಿದೆ. ಇದೆ ತಿಂಗಳು ಜೂನ್ 8ಕ್ಕೆ ಚಿತ್ರದ ಟೀಸರ್ ಔಟ್ ಆಗುತ್ತಿದೆ. ಅಂದ್ಹಾಗೆ ಪೆಂಗ್ವಿನ್ ಸಿನಿಮಾ ಇದೆ ತಿಂಗಳು 19ಕ್ಕೆ ಆನ್ ಲೈನ್ ನಲ್ಲಿ ರಿಲೀಸ್ ಆಗುತ್ತಿದೆ. ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಯಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಕೀರ್ತಿ ಜೂನ್ 8ಕ್ಕೆ ಟೀಸರ್ ರಿಲೀಸ್ ಆಗುತ್ತಿದ್ದು, ಸಂಭ್ರಮಾಚರಣೆ ಮಾಡೋಣ ಎಂದು ಬರೆದು ಕೊಂಡಿದ್ದಾರೆ. ಕೀರ್ತಿ ಪೋಸ್ಟ್ ಗೆ ಅಭಿಮಾನಿಗಳು ಸಿನಿಮಾಗಾಗಿ ಕಾಯುತ್ತಿರುವುದಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಕೀರ್ತಿ ಸುರೇಶ್ ಕೊನೆಯದಾಗಿ ಮನ್ಮದುಡು-2 ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ವರ್ಷದ ಬಳಿಕ ಈಗ ಅಭಿಮಾನಿಗಳ ಮುಂದೆ ಬರ್ತಿದ್ದಾರೆ.


Click it and Unblock the Notifications











