ಕೀರ್ತಿ ಸುರೇಶ್ ಸಿನಿಮಾ ನೇರವಾಗಿ ಓಟಿಟಿಗೆ; ಕನ್ನಡದಲ್ಲೇ ನೋಡಿ

ಜನ ಮನೆಯಲ್ಲೇ ಕೂತು ಓಟಿಟಿಯಲ್ಲಿ ಸಿನಿಮಾ ನೋಡಬೇಕೋ? ಚಿತ್ರಮಂದಿರಗಳಿಗೆ ಹೋಗಬೇಕೋ? ಎಂದು ಕನ್‌ಫ್ಯೂಸ್ ಆಗಿಬಿಟ್ಟಿದ್ದಾರೆ. ಮನೆಯಲ್ಲೇ ನೋಡಿದರೆ ದೊಡ್ಡಪರದೆಯಲ್ಲಿ ನೋಡುವ ಆ ಅನುಭವ ಸಿಗಲ್ಲ, ಚಿತ್ರಮಂದಿರಕ್ಕೆ ಹೋಗಲು ಹೆಚ್ಚು ಹಣ ಬೇಕು. ಇನ್ನು ನೇರವಾಗಿಯೇ ಕೆಲ ಸಿನಿಮಾಗಳು ಓಟಿಟಿಗೆ ಬರುವುದು ಇದೆ.

ಕೋವಿಡ್ ಸಮಯದಲ್ಲಿ ಕೆಲ ಸಿನಿಮಾಗಳು ನೇರವಾಗಿ ಡಿಜಿಟಲ್ ಪ್ಲಾಟ್‌ಫಾರ್ಮ್‌ಗೆ ಎಂಟ್ರಿ ಕೊಟ್ಟಿದ್ದವು. ಬಳಿಕ ಈ ಸಂಖ್ಯೆ ಕಮ್ಮಿ ಆಯಿತು. ಆದರೂ ಆಗಿಮ್ಮೆ ಈಗೊಮ್ಮೆ ಕೆಲ ಸಣ್ಣ ಬಜೆಟ್ ಸಿನಿಮಾಗಳನ್ನು ಚಿತ್ರಮಂದಿರದಲ್ಲಿ ಬಿಡುಗಡೆ ಮಾಡದೇ ಓಟಿಟಿಯಲ್ಲಿ ಸ್ಟ್ರೀಮಿಂಗ್ ಮಾಡಲಾಗುತ್ತದೆ. ಸದ್ಯ ಕೀರ್ತಿ ಸುರೇಶ್ ನಟನೆಯ ಹೊಚ್ಚ ಹೊಸ ಸಿನಿಮಾ ಓಟಿಟಿಗೆ ಎಂಟ್ರಿಗೆ ಸಜ್ಜಾಗುತ್ತಿದೆ.

Keerthy Suresh starrer Uppu Kappurambu Set for Direct OTT Release on this date

ವಸಂತ್ ಮರಿಂಗಂಟಿ ನಿರ್ದೇಶನದ 'ಉಪ್ಪುಕಪ್ಪುರಂಬು' ಸಿನಿಮಾ ಜುಲೈ 4ಕ್ಕೆ ಪ್ರೈಂ ವೀಡಿಯೋದಲ್ಲಿ ಸ್ಟ್ರೀಮಿಂಗ್ ಆರಂಭಿಸಲಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿದೆ. ಈ ತೆಲುಗು ಕಾಮಿಡಿ ಎಂಟರ್‌ಟೈನರ್ ಸಿನಿಮಾ ಕನ್ನಡಕ್ಕೂ ಡಬ್ ಆಗಿ ಬಿಡುಗಡೆ ಆಗಲಿದೆ. ಕೀರ್ತಿ ಸುರೇಶ್ ಜೊತೆಗೆ ಸುಹಾಸ್, ಸತ್ರು, ತಲ್ಲೂರಿ ರಾಮೇಶ್ವರಿ ಚಿತ್ರದ ತಾರಾಗಣದಲ್ಲಿದ್ದಾರೆ.

ಚಿಟ್ಟಿ ಜಯಪುರಂ ಎಂಬ ಕಾಲ್ಪನಿಕ ಹಳ್ಳಿಯ ಸುತ್ತ 'ಉಪ್ಪುಕಪ್ಪುರಂಬು' ಚಿತ್ರದ ಕಥೆ ಸಾಗುತ್ತದೆ. ಸ್ಮಶಾನದಲ್ಲಿ ಸಮಾಧಿಗಳನ್ನು ನಿರ್ಮಿಸಲು ಸ್ಥಳವಕಾಶ ಸಿಗದೇ ಏನೆಲ್ಲಾ ಆಗುತ್ತದೆ ಎನ್ನುವುದನ್ನು ವಿಡಂಬನಾತ್ಮಕವಾಗಿ ಹೇಳುವ ಪ್ರಯತ್ನ ಮಾಡಲಾಗುತ್ತಿದೆ. ಎಲ್ಲಾನಾರ್ ಫಿಲ್ಮ್ಸ್ ಪ್ರೈವೇಟ್ ಲಿಮಿಟೆಡ್ ಬ್ಯಾನರ್ ಅಡಿಯಲ್ಲಿ ರಾಧಿಕಾ ಲಾವು ಈ ಚಿತ್ರವನ್ನು ನಿರ್ಮಿಸಿದ್ದಾರೆ.

ಈ ಹಿಂದೆ ಕೀರ್ತಿ ಸುರೇಶ್ ನಟನೆಯ 'ರಘುತಾತ' ಸಿನಿಮಾ ಕೂಡ ಓಟಿಟಿಯಲ್ಲಿ ಸದ್ದು ಮಾಡಿತ್ತು. ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ನಿರ್ಮಾಣದ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬಂದಿತ್ತು. ಆದರೆ ಚಿತ್ರಮಂದಿರಗಳಲ್ಲಿ ಯಶಸ್ಸು ಸಿಗಲಿಲ್ಲ. ಬಳಿಕ ಪ್ರೈ ವೀಡಿಯೋದಲ್ಲಿ ಸ್ಟ್ರೀಮಿಂಗ್ ಆಗಿತ್ತು. ಮದುವೆ ಬಳಿಕ ಕೀರ್ತಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಬಾಲಿವುಡ್ ಅಂಗಳಕ್ಕೂ ಜಿಗಿದಿದ್ದಾರೆ.

ಇತ್ತೀಚೆಗೆ ಮಹಾನಟಿ ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ಹೆಚ್ಚು ನಟಿಸುತ್ತಿದ್ದಾರೆ. 'ಉಪ್ಪುಕಪ್ಪುರಂಬು' ಚಿತ್ರದಲ್ಲಿ ಕೂಡ ಕೀರ್ತಿ ಲೀಡ್ ರೋಲ್‌ನಲ್ಲಿ ಮಿಂಚಿದ್ದಾರೆ. ಇನ್ನುಳಿದಂತೆ 'ರಿವಾಲ್ವರ್ ರೀಟಾ', 'ಕನ್ನಿವೆಡಿ' ಎಂಬ ಎರಡು ಮಹಿಳಾ ಪ್ರಧಾನ ಸಿನಿಮಾಗಳು ಕೈಯಲ್ಲಿದೆ. ಮತ್ತಷ್ಟು ಸಿನಿಮಾಗಳ ಕಥೆಗಳ ಬಗ್ಗೆ ಮಾತುಕತೆ ನಡೀತಿದೆ.

More from Filmibeat

English summary
When and where to watch Keerthy Suresh's This satire drama movie on ott
Read more about: keerthy suresh telugu
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X