Raghu Thatha OTT: ನೇರವಾಗಿ ಓಟಿಟಿಗೆ ಹೊಂಬಾಳೆ ಫಿಲ್ಮ್ಸ್ 'ರಘುತಾತ'; ಸ್ಟ್ರೀಮಿಂಗ್ ಡೇಟ್ ಘೋಷಣೆ

ಕೀರ್ತಿ ಸುರೇಶ್ ನಟನೆಯ 'ರಘುತಾತ' ಸಿನಿಮಾ ಕಳೆದ ವಾರ ಪ್ರೇಕ್ಷಕರ ಮುಂದೆ ಬಂದಿತ್ತು. ಹೊಂಬಾಳೆ ಫಿಲ್ಮ್ಸ ಈ ಪೊಲಿಟಿಕಲ್ ಕಾಮಿಡಿ ಸಿನಿಮಾ ನಿರ್ಮಾಣ ಮಾಡಿತ್ತು. ಸುಮನ್ ಕುಮಾರ್ ನಿರ್ದೇಶನದ ಚಿತ್ರಕ್ಕೆ ಪ್ರೇಕ್ಷಕರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ತಮಿಳಿನಲ್ಲಿ ಮಾತ್ರ ಸಿನಿಮಾ ತೆರೆಗೆ ಬಂದಿದೆ.

ಪ್ಯಾನ್ ಇಂಡಿಯಾ ಮಟ್ಟದಲ್ಲಿ 'ರಘುತಾತ' ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ಪ್ರಯತ್ನ ಮಾಡಲಾಗಿತ್ತು. ತೆಲುಗು ಸೇರಿದಂತೆ ಬೇರೆ ಭಾಷೆಗಳಲ್ಲಿ ಸಿನಿಮಾ ಡಬ್ ಮಾಡಿ ರಿಲೀಸ್ ಮಾಡುವ ಪ್ರಯತ್ನ ನಡೆಯಿತು. ಆಗಸ್ಟ್ 15ಕ್ಕೆ ತೆಲುಗಿನಲ್ಲಿ ದೊಡ್ಡ ದೊಡ್ಡ ಸಿನಿಮಾಗಳು ತೆರೆಗೆ ಬಂದವು. ಹಾಗಾಗಿ ಆಂಧ್ರ, ತೆಲಂಗಾಣದಲ್ಲಿ 'ರಘುತಾತ' ಸಿನಿಮಾ ಅಷ್ಟಾಗಿ ಸದ್ದು ಮಾಡಲಿಲ್ಲ.

Keerthy suresh s Raghu Thatha opt for an direct OTT release including kannada telugu

'ರಘುತಾತ' ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿಬಂದಿತ್ತು. ಫ್ಯಾಮಿಲಿ ಆಡಿಯನ್ಸ್‌ಗೆ ಸಿನಿಮಾ ಇಷ್ಟವಾಗಿತ್ತು. ವಿಮರ್ಶಕರಿಂದಲೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಆದರೆ ವಿಕ್ರಂ ನಟನೆಯ 'ತಂಗಲಾನ್' ಸಿನಿಮಾ ಮುಂದೆ ಡಲ್ಲಾಗಿತ್ತು. ಅದೇ ಕಾರಣಕ್ಕೆ ಇದೀಗ ಚಿತ್ರ ನೇರವಾಗಿ ಶೀಘ್ರದಲ್ಲೇ ಓಟಿಟಿಗೆ ಬರುತ್ತಿದೆ. ಕನ್ನಡದಲ್ಲೂ ಸಿನಿಮಾ ಸ್ಟ್ರೀಮಿಂಗ್ ಆಗಲಿದೆ.

ಚಿತ್ರದ ಕಥೆ ಏನು ಎನ್ನುವುದನ್ನು ನೋಡುವುದಾದರೆ ಕಯಲ್ವಿಳಿ(ಕೀರ್ತಿ ಸುರೇಶ್) ವಲ್ಲುವೆನ್‌ಪೆಟ್ಟೈಯ ಸೆಂಟ್ರಲ್ ಇಂಡಿಯನ್ ಬ್ಯಾಂಕ್‌ ಶಾಖೆ ಉದ್ಯೋಗಿ. ಆಕೆ ಕಟ್ಟಾ ಸ್ತ್ರೀವಾದಿ, ಹಿಂದಿ ಹೇರಿಕೆ ವಿರೋಧಿ ಹೋರಾಟಗಾರ್ತಿ, ಕಾ. ಪಾಂಡಿಯನ್ ಎಂಬ ಹೆಸರಿನಲ್ಲಿ ಲೇಖನಗಳನ್ನು ಪ್ರಕಟಿಸುತ್ತಿರುತ್ತಾಳೆ. ತನ್ನ ಅಜ್ಜನೊಂದಿಗೆ ಹಳ್ಳಿಯಲ್ಲಿ ಭಾರತೀಯ ಭಾಷಾ ಏಕತಾ ಸಭಾ ಎಂಬ ಹಿಂದಿ ಸಂಘಟನೆ ಮುಚ್ಚುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾಳೆ.

Keerthy suresh s Raghu Thatha opt for an direct OTT release including kannada telugu

ಹೀಗೆ ಸ್ವತಂತ್ರ ಮಹಿಳೆಯಾಗಿ ಕಯಲ್ವಿಳಿ ತನ್ನದೇ ಪ್ರಪಂಚದಲ್ಲಿ ವಿಹರಿಸುತ್ತಿರುತ್ತಾಳೆ. ದುರದೃಷ್ಟವಶಾತ್ ಆಕೆ ಮದುವೆ ಆಗಬೇಕು ಎನ್ನುವ ಒತ್ತಡಕ್ಕೆ ಸಿಲುಕುವಂತಾಗುತ್ತದೆ. ಕೊನೆಗೆ ಮದುವೆಗೂ ಒಪ್ಪುತ್ತಾಳೆ. ತನ್ನ ಸ್ನೇಹಿತ ತಮಿಳ್ ಸೆಲ್ವನ್‌(ರವೀಂದ್ರ ವಿಜಯ್) ನನ್ನು ಮದುವೆ ಆಗಲು ನಿರ್ಧರಿಸುತ್ತಾಳೆ. ಆದರೆ ಅಷ್ಟರಲ್ಲೇ ಅವನ ನಿಜಬಣ್ಣ ಬಯಲಾಗುತ್ತದೆ. ಮುಂದೇನು ಎನ್ನುವುದು ಸಿನಿಮಾ ಕಥೆ.

ಎಂ. ಎಸ್ ಭಾಸ್ಕರ್ ಚಿತ್ರದಲ್ಲಿ ಕೀರ್ತಿ ಸುರೇಶ್ ತಾತನ ಪಾತ್ರದಲ್ಲಿ ನಟಿಸಿದ್ದಾರೆ. 60-70ರ ದಶಕದ ಕಾಲಘಟ್ಟದಲ್ಲಿ 'ರಘುತಾತ' ಸಿನಿಮಾ ಕಥೆ ಸಾಗುತ್ತದೆ. ದೇವದರ್ಶಿನಿ, ಆನಂದ್‌ಸಾಮಿ, ರಾಜೀವ್ ರವೀಂದ್ರನಾಥನ್ ಹೀಗೆ ಹಲವರು ಚಿತ್ರದ ತಾರಾಗಣದಲ್ಲಿದ್ದಾರೆ. ಸಾಕಷ್ಟು ಮಹಿಳಾ ತಂತ್ರಜ್ಞರು ಚಿತ್ರಕ್ಕಾಗಿ ಕೆಲಸ ಮಾಡಿದ್ದಾರೆ. ಸದ್ಯ ಜೀ-5 ಸಂಸ್ಥೆ ಚಿತ್ರದ ಓಟಿಟಿ ರೈಟ್ಸ್ ಕೊಂಡುಕೊಂಡಿತ್ತು.

ಸೆಪ್ಟೆಂಬರ್ 13ಕ್ಕೆ 'ರಘುತಾತ' ಸಿನಿಮಾ ಓಟಿಟಿಗೆ ಬರ್ತಿದೆ. ತಮಿಳು ಜೊತೆಗೆ ಕನ್ನಡ, ತೆಲುಗು ಭಾಷೆಗಳಿಗೂ ಡಬ್ ಆಗಿ ಸ್ಟ್ರೀಮಿಂಗ್ ಆಗುತ್ತಿದೆ. ಅಧಿಕೃತವಾಗಿ ಓಟಿಟಿ ರಿಲೀಸ್ ಡೇಟ್ ಘೋಷಣೆ ಆಗಿದೆ. ಇನ್ನು ಕೀರ್ತಿ ಸುರೇಶ್ ಈ ಸಿನಿಮಾ ಮೇಲೆ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದರು. ಶೀಘ್ರದಲ್ಲೇ ಬಾಲಿವುಡ್‌ಗೂ ಎಂಟ್ರಿ ಕೊಡುತ್ತಿದ್ದಾರೆ.

'ಮಹಾನಟಿ' ಬಳಿಕ 'ಮಿಸ್ ಇಂಡಿಯಾ' ಎನ್ನುವ ಮತ್ತೊಂದು ಮಹಿಳಾ ಪ್ರಧಾನ ಚಿತ್ರದಲ್ಲಿ ಕೀರ್ತಿ ನಟಿಸಿದ್ದರು. ಆ ಸಿನಿಮಾ ಕೂಡ ಓಟಿಟಿಯಲ್ಲಿ ಹೆಚ್ಚು ಸದ್ದು ಮಾಡಿತ್ತು. 'ರಘುತಾತ' ಸಿನಿಮಾ ನೋಡಲು ಸಾಕಷ್ಟು ಜನ ಕಾಯುತ್ತಿದ್ದಾರೆ. ಕೆಲವರು ಓಟಿಟಿ ಸ್ಟ್ರೀಮಿಂಗ್‌ಗಾಗಿ ಎದುರು ನೋಡುತ್ತಿದ್ದಾರೆ.

ಈಗಾಗಲೇ 'ರಘುತಾತ' ಕನ್ನಡ ಹಾಗೂ ತೆಲುಗು ವರ್ಷನ್ ಟ್ರೈಲರ್ ಸಹ ಬಿಡುಗಡೆ ಆಗಿದೆ. ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಸಿನಿಮಾ ಎನ್ನುವ ಕಾರಣಕ್ಕೆ ಕುತೂಹಲ ಹೆಚ್ಚಿದೆ. ಜೀ-5 ಚಂದಾದಾರರು ಮನೆಯಲ್ಲಿ ಕೂತು ಸಿನಿಮಾ ವೀಕ್ಷಿಸಬಹುದು.

More from Filmibeat

English summary
Keerthy suresh starrer Raghu Thatha ott streaming details;
Read more about: ott hombale films keerthy suresh
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X