For Quick Alerts
  ALLOW NOTIFICATIONS  
  For Daily Alerts

  'KGF 2' ಅಮೆಜಾನ್‌ನಲ್ಲಿ ಲಭ್ಯ: ಸಿನಿಮಾ ನೋಡುವುದಕ್ಕೆ 199 ರೂ. ಕಟ್ಟಲೇ ಬೇಕು

  |

  ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಕೆಜಿಎಫ್ 2' ಬಾಕ್ಸ್ ಆಫೀಸ್‌ನಲ್ಲಿ ಹಲವಾರು ದಾಖಲೆಗಳನ್ನು ಮುರಿಯುತ್ತಿದೆ. 2022 ರಲ್ಲಿ ಮಹತ್ತರ ದಾಖಲೆ ಮಾಡಿದ ಸಿನಿಮಾ ಅಗಿ ಹೊರ ಹೊಮ್ಮಿದೆ. ಈ ಸಿನಿಮಾವನ್ನೂ ವಿಶ್ವದಾದ್ಯಂತ ಲಕ್ಷಾಂತರ ಜನ ತೆರೆಯ ಮೇಲೆ ನೋಡಿ ಮೆಚ್ಚಿದ್ದಾರೆ. ಒಮ್ಮೆ ಮಾತ್ರ ಅಲ್ಲ, ಹಲವು ಬಾರಿ ದೊಡ್ಡ ಪರದೆ ಮೇಲೆ 'ಕೆಜಿಎಫ್ 2' ಚಿತ್ರವನ್ನು ನೋಡಿ, ಹಾಡಿ ಹೊಗಳಿದ್ದಾರೆ.

  'ಕೆಜಿಎಫ್ 2' ಸಿನಿಮಾವನ್ನು ಇಷ್ಟ ಪಟ್ಟವರು ಮತ್ತೆ ಮತ್ತೆ ಸಿನಿಮಾ ನೋಡಲು ಬಯಸುತ್ತಿದ್ದಾರೆ. ಚಿತ್ರಮಂದಿರದಲ್ಲಿ ಸಿನಿಮಾ ನೋಡಿದವರು ಒಟಿಟಿಯಲ್ಲಿ ಮತ್ತೆ ರಾಕಿ ಭಾಯ್ ಆರ್ಭಟವನ್ನು ಕಣ್ತುಂಬಿಕೊಳ್ಳಲು ಕಾಯುತ್ತಿದ್ದರು. ಅಂತೆಯೇ ಸಿನಿಮಾ ತಂಡ ಒಟಿಟಿಯಲ್ಲಿ 'ಕೆಜಿಎಫ್ 2' ಸಿನಿಮಾವನ್ನು ರಿಲೀಸ್ ಮಾಡಿದೆ.

  'ಕೆಜಿಎಫ್ 2': 30 ದಿನ, 5ನೇ ವಾರ, ಕಲೆಕ್ಷನ್ ಬೀಳೋ ಮಾತೇ ಇಲ್ಲ ಗುರು!'ಕೆಜಿಎಫ್ 2': 30 ದಿನ, 5ನೇ ವಾರ, ಕಲೆಕ್ಷನ್ ಬೀಳೋ ಮಾತೇ ಇಲ್ಲ ಗುರು!

  ಅರೆ 'ಕೆಜಿಎಫ್ 2' ಒಟಿಟಿಗೆ ಬಂತಾ?, ನಾವಿನ್ನು ಎಷ್ಟು ಬಾರಿ ಬೇಕಾದರೂ ಸಿನಿಮಾ ನೋಡಬಹುದು ಅಂತ ಅಂದು ಕೊಂಡರೆ ಅದು ಸಾಧ್ಯನೇ ಇಲ್ಲ. ಯಾಕೆಂದರೆ ಇಲ್ಲಿ ಸಿನಿಮಾ ರಿಲೀಸ್ ಮಾಡಿದ ಅಮೆಜಾನ್ ಪ್ರೈಮ್ ಹೊಸ ಟ್ವಿಸ್ಟ್ ಇಟ್ಟಿದೆ.

  ಮುಂದಿನ ಚಿತ್ರದಲ್ಲೂ ಯಶ್ 'ಗಡ್ಡ'ದ ಲುಕ್ ಮುಂದುವರಿಕೆ! ಮುಂದಿನ ಚಿತ್ರದಲ್ಲೂ ಯಶ್ 'ಗಡ್ಡ'ದ ಲುಕ್ ಮುಂದುವರಿಕೆ!

  ಒಟಿಟಿಯಲ್ಲಿ 'ಕೆಜಿಎಫ್ 2' ನೋಡಬೇಕಾ?

  ಹೌದು 'ಕೆಜಿಎಫ್ 2' ಈಗ ಒಟಿಟಿ ವೇದಿಕೆಯಾದ ಅಮೆಜಾನ್ ಪ್ರೈಮ್‌ನಲ್ಲಿ ನೋಡಲು ಲಭ್ಯವಿದೆ. ಹಾಗಂತ ಈ ಚಿತ್ರವನ್ನು ನೋಡಲು ಅಮೆಜಾನ್ ಸಬ್‌ಸ್ಕ್ರಿಪ್ಷನ್ ಇದ್ದರೆ ಮಾತ್ರ ಸಾಲದು. ಯಾಕೆಂದರೆ ಅಮೆಜಾನ್ ವತಿಯಿಂದ 'ಮೂವಿ ರೆಂಟಲ್' ಎನ್ನುವ ಹೊಸ ಯೋಜನೆ ತರಲಾಗಿದೆ. ಇದರಂತೆ 199 ರೂ. ಕಟ್ಟಿ ವರ್ಷದ ಸಬ್‌ಸ್ಕ್ರಿಪ್ಷನ್ ಪಡೆಯಬೇಕು. ಆಗಲೇ 'ಕೆಜಿಎಫ್ 2' ಸಿನಿಮಾವನ್ನು ನೋಡಲು ಸಾಧ್ಯ.

  ಅಮೆಜಾನ್‌ನಲ್ಲಿ 'ಕೆಜಿಎಫ್ 2' ನೋಡುವುದು ಹೇಗೆ?

  ಅಮೆಜಾನ್‌ನಲ್ಲಿ 'ಕೆಜಿಎಫ್ 2' ನೋಡುವುದು ಹೇಗೆ?

  ವೀಕ್ಷಕರು 'ಕೆಜಿಎಫ್ 2' ಸಿನಿಮಾವನ್ನು ಬಾಡಿಗೆಗೆ ಪಡೆಯಬಹುದಾಗಿದೆ. ಅಮೆಜಾನ್ ಪ್ರೈಮ್ ವಿಡಿಯೋ ಅಪ್ಲೀಕೇಷನ್ ಮೂಲಕ ಸಿನಿಮಾವನ್ನು ಬಾಡಿಗೆಗೆ ಪಡೆಯಬಹುದು. ನಿಮ್ಮ ಫೋನ್, ಟ್ಯಾಬ್, ಸ್ಮಾರ್ಟ್ ಟಿವಿ ಮೂಲಕ ಅಮೆಜಾನ್ ಅಪ್ಲೀಕೇಶನ್‌ನಲ್ಲಿ ಮೂವಿ ರೆಂಟಲ್ಸ್ ಎನ್ನುವ ಆಪ್ಷನ್ ಇದೆ. ಅಲ್ಲಿ 'ಕೆಜಿಎಫ್ 2' ಸಿನಿಮಾಗಾಗಿ 199 ರೂ. ಕಟ್ಟಿದಲ್ಲಿ ಸಿನಿಮಾ ನಿಮ್ಮದಾಗುತ್ತದೆ. 'ಕೆಜಿಎಫ್ 2' ಹಿಂದಿ, ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಸೇರಿದಂತೆ 5 ಭಾಷೆಗಳಲ್ಲಿ ಪ್ರೇಕ್ಷಕರಿಗೆ ಲಭ್ಯವಾಗಲಿದೆ.

  ಅಮೆಜಾನ್ 'ಮೂವಿ ರೆಂಟಲ್ಸ್'ಗೆ ವಿರೋಧ!

  ಅಮೆಜಾನ್ 'ಮೂವಿ ರೆಂಟಲ್ಸ್'ಗೆ ವಿರೋಧ!

  ಇನ್ನು 'ಕೆಜಿಎಫ್ 2' ಸಿನಿಮಾವನ್ನು ಒಟಿಟಿಯಲ್ಲಿ ಎಷ್ಟು ಬಾರಿ ಬೇಕಾದರೂ ನೋಡಬಹುದು ಎಂದು ಕೊಂಡಿದ್ದವರಿಗೆ ಅಮೆಜಾನ್ ಶಾಕ್ ಕೊಟ್ಟಿದೆ. ಈಗಾಗಲೇ ಅಮೆಜಾನ್ ಸಬ್‌ಸ್ಕ್ರಿಪ್ಷನ್ ಇದ್ದರೂ ಕೂಡ, 'ಕೆಜಿಎಫ್ 2' ಮೂವಿ ರೆಂಟಲ್ಸ್ ಯೋಜನೆ ಅಡಿ ಬರುತ್ತಿರುವ ಕಾರಣ ಮತ್ತೆ 199 ರೂ ಕೊಟ್ಟು ಸಿನಿಮಾವನ್ನು ಬಾಡಿಗೆಗೆ ಪಡೆಯ ಬಹುದು. ಹಾಗಾಗಿ ಈ ಯೋಜನೆಗೆ ಭಾರಿ ವಿರೋಧ ವ್ಯಕ್ತವಾಗಿದೆ. ಇದು ಹಣದ ಸುಲಿಗೆ, ದೊಡ್ಡ ಸ್ಕ್ಯಾಮ್ ಎಂದು ಸೋಶಿಯಲ್ ಮೀಡಿಯಾದಲ್ಲಿ ಜನ ಕಮೆಂಟ್ ಮಾಡುತ್ತಿದ್ದಾರೆ.

  1200 ಕೋಟಿಯತ್ತ 'ಕೆಜಿಎಫ್' ಓಟ!

  1200 ಕೋಟಿಯತ್ತ 'ಕೆಜಿಎಫ್' ಓಟ!

  ಇನ್ನು 'ಕೆಜಿಎಫ್ 2' ಕಲೆಕ್ಷನ್ ವಿಚಾರಕ್ಕೆ ಬರುವುದಾದರೆ. ಬಾಕ್ಸಾಫೀಸ್‌ನಲ್ಲಿ ಐದನೇ ವಾರವೂ ಸಿನಿಮಾ ಸದೃಢವಾಗಿ ನಿಂತಿದೆ. ಕೇವಲ 31 ದಿನಗಳಲ್ಲಿ ವಿಶ್ವದಾದ್ಯಂತ 1191 ಕೋಟಿ ರೂ. ಗಳಿಕೆ ಕಂಡಿದೆ. ಈ ವಾರದಲ್ಲೇ ಬಾಕ್ಸಾಫೀಸ್‌ನಲ್ಲಿ 1200 ಕೋಟಿ ರೂಪಾಯಿ ಗಡಿ ದಾಟಲಿದೆ. ಈ ಮೂಲಕ ಮತ್ತೊಂದು ದಾಖಲೆಗೆ 'ಕೆಜಿಎಫ್ 2' ಸಾಕ್ಷಿ ಆಗಲಿದೆ.

  English summary
  KGF Chapter 2 Available In All Languages For Pay Per View On Amazon Prime at Rs 199, Know More

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X