ಬಾಕ್ಸಾಫೀಸ್ ಕೊಳ್ಳೆ ಹೊಡೆದ 'ಕೆಜಿಎಫ್ 2' ಈ ದಿನ ಒಟಿಟಿಗೆ ಲಗ್ಗೆ ಇಡೋದು ಗ್ಯಾರಂಟಿನಾ ?

ಭಾರತೀಯ ಚಿತ್ರರಂಗವೇ ತಿರುಗಿ ನೋಡುವ ಹಾಗೇ 'ಕೆಜಿಎಫ್‌ 2' ಸಿನಿಮಾ ಹವಾ ಕ್ರಿಯೇಟ್‌ ಆಗಿದೆ. 'ಕೆಜಿಎಫ್‌ 1' ಗಿಂತ 'ಕೆಜಿಎಫ್‌ 2' ಈ ಹಿಂದೆ ಇದ್ದ ಎಲ್ಲಾ ದಾಖಲೆಗಳನ್ನು ಮೀರಿಸಿ ಮುನ್ನುಗ್ಗುತ್ತಿದೆ. ಪಂಚ ಭಾಷೆಗಳಲ್ಲಿ ರಿಲೀಸ್ ಆಗಿದ್ದ ಈ ಸಿನಿಮಾಗೆ ಎಲ್ಲಾ ರಾಜ್ಯಗಳಿಂದಲೂ ಉತ್ತಮ ಸ್ಪಂದನೆ ದೊರಕಿದೆ. ಅದರಲ್ಲೂ ಬಾಲಿವುಡ್‌ನಲ್ಲಿ 'ಕೆಜಿಎಫ್‌ 2' ಸಿನಿಮಾ ಕಲೆಕ್ಷನ್‌ ಬೇಟೆಯನ್ನು ರಿಲೀಸ್‌ ಆಗಿ ಮೂರು ವಾರಗಳಾದರೂ ಮುಂದುವರೆಸಿದೆ.

ಈಗಾಗಲೇ 400 ಕೋಟಿಯತ್ತ ದಾಪುಗಾಲು ಇಟ್ಟಿರುವ 'ಕೆಜಿಎಫ್‌ 2' ಸಿನಿಮಾ ದಂಗಲ್‌ ಸಿನಿಮಾದ ಕೆಲಕ್ಷನ್‌ ಬ್ರೇಕ್‌ ಮಾಡಿ ಮುಂದೆ ಸಾಗಿದೆ. ಈಗಲೂ ಸಹ ಹಿಂದಿ ವರ್ಷನ್‌ 'ಕೆಜಿಎಫ್‌ 2' ಸಿನಿಮಾ ನೋಡಲು ಪ್ರೇಕ್ಷಕರು ಆಗಮಿಸುತ್ತಿದ್ದು, ಬಾಲಿವುಡ್‌ನ ಬೇರೆ ಸ್ಟಾರ್‌ಗಳ ಸಿನಿಮಾಗಳು ನೆಲಕಚ್ಚಿದೆ. ಒಟ್ಟಾರೆ 'ಕೆಜಿಎಫ್‌ 2' ಚಿತ್ರ ಎಲ್ಲಾ ಭಾಷೆಗಳಲ್ಲಿ ದಾಖಲೆಯ ಕಲೆಕ್ಷನ್ ಮಾಡಿಕೊಂಡಿದ್ದು, 1000 ಕೋಟಿ ಹೆಚ್ಚು ಗಳಿಕೆ ಕಂಡಿದೆ. ಇನ್ನು ಕೆಲವೇ ದಿನಗಳಲ್ಲಿ 'ಬಾಹುಬಲಿ 2' ಸಿನಿಮಾದ ದಾಖಲೆಯನ್ನು ಮುರಿಯಲಿದೆ ಎಂದು ಸಿನಿ ಪಂಡಿತರು ಹೇಳುತ್ತಿದ್ದಾರೆ.

ಸದ್ಯ ಈಗ ಇದೇ 'ಕೆಜಿಎಫ್‌ 2' ಒಟಿಟಿ ಪ್ಲಾಟ್‌ ಫಾರ್ಮ್‌ಗೆ ಲಗ್ಗೆ ಇಡಲು ಮುಂದಾಗಿದೆ. ಈಗಾಗಲೇ ಹಲವು ದಾಖಲೆಗಳನ್ನು ಮುರಿದಿರುವ 'ಕೆಜಿಎಫ್‌ 2' ಚಿತ್ರ ಈಗ ಒಟಿಟಿಯಲ್ಲೂ ದಾಖಲೆಯ ಶಿಖರ ಏರುವ ಎಲ್ಲಾ ಸಾಧ್ಯತೆಗಳು ಇದೆ.

KGF Chapter 2 Likely to Releasing in OTT Platform from May 27th

ಟೈಮ್ಸ್‌ ಆಫ್‌ ಇಂಡಿಯಾ ವರದಿ ಪ್ರಕಾರ, ಈಗಾಗಲೇ ಒಟಿಟಿ ಸಂಸ್ಥೆಗಳೊಂದಿಗೆ 'ಕೆಜಿಎಫ್‌ 2' ಮಾರಾಟದ ಕುರಿತು ಚರ್ಚೆ ಮಾಡಲಾಗಿದೆ. ದಾಖಲೆ ಮಟ್ಟದಲ್ಲಿ 'ಕೆಜಿಎಫ್‌ 2' ಚಿತ್ರವನ್ನು ಮಾರಾಟ ಮಾಡಲಾಗಿದೆ ಎನ್ನಲಾಗ್ತಿದೆ. ಅಂದಾಜು 320 ಕೋಟಿ ರೂಪಾಯಿಗೆ 'ಕೆಜಿಎಫ್ 2' ಚಿತ್ರ ಸೇಲ್ ಆಗಿದೆ ಎಂದು ಹೇಳಲಾಗ್ತಿದೆ. ಅಲ್ಲದೆ ಕನ್ನಡ, ತಮಿಳು, ತೆಲುಗು, ಹಿಂದಿ ಮತ್ತು ಮಲಯಾಳಂನ ಭಾಷೆಗಳಲ್ಲಿ ಮೇ 27 ರಿಂದ ಒಟಿಟಿ ಪ್ಲಾಟ್‌ ಫಾರ್ಮ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ ಎಂದು ವರದಿ ಮಾಡಿದೆ.

KGF Chapter 2 Likely to Releasing in OTT Platform from May 27th

ಈ ಹಿಂದೆ 'ಕೆಜಿಎಫ್‌ 2' ಅಮೆಜಾನ್ ಪ್ರೈಮ್‌ ವಿಡಿಯೋದಲ್ಲಿ ಸ್ಟ್ರೀಮ್ ಆಗಲಿದೆ ಎಂದು ಸುದ್ದಿ ಹರಿದಾಡುತ್ತಿತ್ತು. ಆದರೆ. ಈ ಬಗ್ಗೆ ಚಿತ್ರತಂಡ ಅಧಿಕೃತವಾಗಿ ಹೇಳಿಕೊಂಡಿರಲಿಲ್ಲ. ಸದ್ಯ ಈಗ ಸಿನಿಮಾ ಒಟಿಟಿ ಪ್ಲಾಟ್‌ ಫಾರ್ಮ್ ಬರುತ್ತಿದ್ದು, ಥಿಯೇಟರ್‌ನಲ್ಲಿ ನೋಡದೇ ಇರುವವರು ಒಟಿಟಿಯಲ್ಲಿ ಸಿನಿಮಾ ನೋಡಿ ಕಣ್ತುಂಬಿಕೊಳ್ಳಬಹುದಾಗಿದೆ.

ಸದ್ಯ ಈಗಾಗಲೇ 'ಕೆಜಿಎಫ್‌ 2' ಸಿನಿಮಾ ಎಲ್ಲಾ ಹಳೆ ದಾಖಲೆಗಳನ್ನು ಮುರಿದು ಹೊಸ ದಾಖಲೆ ಸೃಷ್ಟಿಸಿದೆ. ಏಪ್ರಿಲ್ 14 ರಿಂದ ಈವರೆಗೂ ಕೂಡ 'ಕೆಜಿಎಫ್‌ 2' ಹವಾ ಮಾತ್ರ ಕುಂಠಿತವಾಗಿಲ್ಲ. ಈಗ ಒಟಿಟಿ ಪ್ಲಾಟ್‌ ಫಾರ್ಮ್‌ಗೆ ಲಗ್ಗೆ ಇಟ್ಟರೆ, ಮತ್ತೆಷ್ಟು ದಾಖಲೆಗಳನ್ನು ಉಡೀಸ್‌ ಮಾಡುತ್ತಾ ಅನ್ನೋದು ಕುತೂಹಲಕ್ಕೆ ಕಾರಣವಾಗಿದೆ.

More from Filmibeat

English summary
KGF Chapter 2 OTT Release Date and Time: Yash-starrer KGF Chapter 2 will reportedly begin streaming on the OTT platform from May 27 in all the five languages. Kannada, Tamil, Telugu, Hindi, and Malayalam.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X