'ಕೆಜಿಎಫ್ 2' ಜೂನ್ 3ರಿಂದ ಅಮೆಜಾನ್‌ನಲ್ಲಿ ಲಭ್ಯ: 'ಫ್ರೀ'ಯಾಗಿ ನೋಡಿ!

ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಕೆಜಿಎಫ್ 2' ಬಾಕ್ಸಾಫೀಸ್‌ನಲ್ಲಿ ಹಲವಾರು ದಾಖಲೆಗಳನ್ನು ಮುರಿಯುತ್ತಿದೆ. 2022 ರಲ್ಲಿ ಮಹತ್ತರ ದಾಖಲೆ ಮಾಡಿದ ಸಿನಿಮಾ ಎನಿಸಿಕೊಂಡಿದೆ. ಈ ಸಿನಿಮಾವನ್ನೂ ವಿಶ್ವದಾದ್ಯಂತ ಲಕ್ಷಾಂತರ ಜನ ತೆರೆಯ ಮೇಲೆ ನೋಡಿ ಮೆಚ್ಚಿದ್ದಾರೆ.

'ಕೆಜಿಎಫ್ 2' ಸಿನಿಮಾವನ್ನು ಇಷ್ಟ ಪಟ್ಟವರು ಮತ್ತೇ, ಮತ್ತೇ ಸಿನಿಮಾ ನೋಡಲು ಬಯಸುತ್ತಿದ್ದಾರೆ. ಚಿತ್ರಮಂದಿರದಲ್ಲಿ ಸಿನಿಮಾ ನೋಡಿದವರು ಒಟಿಟಿಯಲ್ಲಿ ಮತ್ತೆ ರಾಕಿ ಭಾಯ್ ಆರ್ಭಟವನ್ನು ಕಣ್ತುಂಬಿಕೊಳ್ಳಲು ಕಾಯುತ್ತಿದ್ದರು. ಅಂತೆಯೇ ಈಗ ಒಟಿಟಿಯಲ್ಲಿ 'ಕೆಜಿಎಫ್ 2' ಸಿನಿಮಾ ರಿಲೀಸ್ ಆಗುತ್ತಿದೆ.

ಈ ಹಿಂದೆ 'ಕೆಜಿಎಫ್ 2' ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗಿದೆ. ಆದರೆ ಅಷ್ಟು ಸುಲಭಕ್ಕೆ ಈ ಚಿತ್ರವನ್ನು ಎಲ್ಲರೂ ನೋಡಲು ಸಾಧ್ಯ ಆಗಿರಲಿಲ್ಲ. ಕಾರಣ 'ಕೆಜಿಎಫ್ 2' ಸಿನಿಮಾ ಅಮೆಜಾನ್ ಪ್ರೈಂನಲ್ಲಿ ಪೇ ಪರ್ ವ್ಯೂ ಆಧಾರದಲ್ಲಿ ರಿಲೀಸ್ ಆಗಿತ್ತು. ಈಗ ಹಣ ಕೊಟ್ಟು ಸಿನಿಮಾ ವೀಕ್ಷಿಸುವ ಹಂತ ಮುಗಿದಿದ್ದು ಫ್ರೀಯಾಗಿ ನೋಡಬಹುದಾಗಿದೆ.

ಜೂನ್ 3ರಿಂದ ಅಮೆಜಾನ್‌ನಲ್ಲಿ 'ಕೆಜಿಎಫ್ 2'!

ಜೂನ್ 3ರಿಂದ ಅಮೆಜಾನ್‌ನಲ್ಲಿ 'ಕೆಜಿಎಫ್ 2'!

'ಕೆಜಿಎಫ್ 2' ಸಿನಿಮಾವನ್ನು ನೀವಿನ್ನೂ ನೋಡಲೇ ಇಲ್ಲವಾ, ಒಟಿಟಿಯಲ್ಲಿ ಸಿನಿಮಾ ಬರಲಿ ಎಂದು ಕಾಯುತ್ತಿದ್ದೀರಾ? ಅಥವಾ ಸಿನಿಮಾ ನೋಡಿದರೂ ಮತ್ತೆ ಸಿನಿಮಾ ನೋಡಬೇಕು ಎಂದು ಅಂದುಕೊಂಡಿದ್ದೀರಾ? ಅದಕ್ಕೆ ಇನ್ನು ಹೆಚ್ಚು ದಿನ ಕಾಯಬೇಕಾಗಿಲ್ಲ. ಯಾಕೆಂದರೆ 'ಕೆಜಿಎಫ್ 2' ಜೂನ್ 3 ರಿಂದ ಅಮೆಜಾನ್ ಪ್ರೈಂ ವಿಡಿಯೋದಲ್ಲಿ ರಿಲೀಸ್ ಆಗುತ್ತಿದೆ. ಇದು 'ಕೆಜಿಎಫ್ 2' ಅಭಿಮಾನಿಗಳಿಗೆ ಭರ್ಜರಿ ಸುದ್ದಿ.

'ಫ್ರೀ'ಯಾಗಿ 'ಕೆಜಿಎಫ್ 2' ನೋಡ ಬಹುದು!

'ಫ್ರೀ'ಯಾಗಿ 'ಕೆಜಿಎಫ್ 2' ನೋಡ ಬಹುದು!

'ಕೆಜಿಎಫ್ 2' ಸಿನಿಮಾಒಟಿಟಿಯಲ್ಲಿ ರಿಲೀಸ್ ಎಂದಾಕ್ಷಣ ಗಾಬರಿ ಆಯ್ತಾ. ಸಿನಿಮಾ ನೋಡಲು ದುಡ್ಡು ಕಟ್ಟ ಬೇಕಲ್ಲಪ್ಪಾ ಎಂದುಕೊಳ್ಳಬೇಡಿ. ಯಾಕೆಂದರೆ ಈ ಬಾರಿ 'ಕೆಜಿಎಫ್ 2' ನೋಡಲು ಯಾವುದೇ ರೀತಿಯ ಹೆಚ್ಚುವರಿ ಹಣ ಕಟ್ಟಬೇಕಾಗಿಲ್ಲ. ಅಮೆಜಾನ್ ಮೆಂಬರ್‌ಶಿಪ್ ಇದ್ದರೆ ಸಾಕು. ಎಲ್ಲಾ ಸಿನಿಮಾಗಳ ಹಾಗೆ ಈ ಚಿತ್ರವನ್ನು ಅಮೆಜಾನ್‌ನಲ್ಲಿ ನೋಡಬಹುದು.

ಈ ಹಿಂದೆ 199ರೂ. ಕೊಡಬೇಕಿತ್ತು!

ಈ ಹಿಂದೆ 199ರೂ. ಕೊಡಬೇಕಿತ್ತು!

ಇನ್ನು ಈ ಹಿಂದೆಯೇ 'ಕೆಜಿಎಫ್ 2' ಸಿನಿಮಾವನ್ನು ಅಮೆಜಾನ್‌ನಲ್ಲಿ ರಿಲೀಸ್ ಮಾಡಲಾಗಿದೆ. ಆದರೆ ಸಿನಿಮಾವನ್ನು ಹೆಚ್ಚುವರಿ ಹಣ ಕೊಟ್ಟು ನೋಡಬೇಕಾಗಿತ್ತು. ಅಂದರೆ 'ಕೆಜಿಎಫ್ 2' ಅಮೆಜಾನ್ ಪ್ರೈಂನಲ್ಲಿ ಲಭ್ಯವಿದ್ದರೂ, ಒಮ್ಮೆ ಸಿನಿಮಾ ನೋಡಲು ಹಣ ಕೊಡಬೇಕಿತ್ತು. ಹಾಗಾಗಿ ಅಮೆಜಾನ್ ಪ್ರೈಂ ಸದಸ್ಯತ್ವ ಇದ್ದರೂ ಕೂಡ ಹೆಚ್ಚುವರಿ 199 ರೂ . ಕೊಟ್ಟು ಸಿನಿಮಾ ನೋಡಬೇಕಿತ್ತು.

50ನೇ ದಿನಕ್ಕೆ ಅಮೇಜಾನ್‌ನಲ್ಲಿ 'ಕೆಜಿಎಫ್ 2'!

50ನೇ ದಿನಕ್ಕೆ ಅಮೇಜಾನ್‌ನಲ್ಲಿ 'ಕೆಜಿಎಫ್ 2'!

ಇನ್ನು 'ಕೆಜಿಎಫ್ 2' ಸಾಲು, ಸಾಲು ದಾಖಲೆಗಳನ್ನು ಮಾಡಿದೆ. ಸದ್ಯ 50 ದಿನದತ್ತ ಓಡುತ್ತಿದೆ. ಸಿನಿಮಾ ರಿಲೀಸ್ ಆಗಿ ಒಟಿಟಿಗೆ ಬಂದರೂ ಕೂಡ, ಚಿತ್ರಮಂದಿರದಲ್ಲಿ ಸಿನಿಮಾ ನೋಡುವವರ ಸಂಖ್ಯೆ ಕಡಿಮೆ ಆಗಿಲ್ಲ. ಇನ್ನು 50ನೇ ದಿನಕ್ಕೆ ಅಮೆಜಾನ್‌ನಲ್ಲಿ ರಿಲೀಸ್ ಆಗಲಿದೆ. ಇಲ್ಲೂ ಕೂಡ ದಾಖಲೆಯನ್ನು ಬರೆಯುವ ನಿರೀಕ್ಷೆ ಹೆಚ್ಚಾಗಿದೆ.

More from Filmibeat

English summary
KGF Chapter 2 Streeming Available On Amazon Prime Viedo From June 3rd For Free, Know More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X