Mark OTT: ಸುದೀಪ್ ನಟನೆಯ 'ಮಾರ್ಕ್' ಸಿನಿಮಾ ಓಟಿಟಿಯಲ್ಲಿ ಎಲ್ಲಿ, ಯಾವಾಗ ನೋಡಬಹುದು?
ವಿಜಯ್ ಕಾರ್ತಿಕೇಯನ್ ನಿರ್ದೇಶನದ 'ಮಾರ್ಕ್' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡ್ತಿದೆ. ಕ್ರಿಸ್‌ಮಸ್ ಸಂಭ್ರಮದಲ್ಲಿ ಸಿನಿಮಾ ಬಿಡುಗಡೆ ಆಗಿ ಸದ್ದು ಮಾಡ್ತಿದೆ. '45' ಚಿತ್ರದ ಎದುರು ಕಿಚ್ಚನ ಮಾರ್ಕ್ ಗೊತ್ತಾಗುತ್ತಿದೆ. ಸತ್ಯ ಜ್ಯೋತಿ ಫಿಲ್ಮ್ಸ್ ಜೊತೆ ಸೇರಿ ಸುದೀಪ್ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಒಂದು ವಾರ ತಡವಾಗಿ ಆಂಧ್ರ, ತೆಲಂಗಾಣ ಹಾಗೂ ತಮಿಳುನಾಡಿನಲ್ಲಿ ಸಿನಿಮಾ ಬಿಡುಗಡೆ ಆಗಲಿದೆ.
ಕೆಆರ್‌ಜಿ ಸ್ಟುಡಿಯೋಸ್ ಸಂಸ್ಥೆ 'ಮಾರ್ಕ್' ಸಿನಿಮಾ ವಿತರಣೆಗೆ ಕೈಜೋಡಿಸಿದೆ. ದೊಡ್ಡಮಟ್ಟದಲ್ಲಿ ಓಟಿಟಿ ಹಾಗೂ ಟಿವಿ ರೈಟ್ಸ್ ಮಾರಾಟವಾಗಿದೆ. ಸೂಪರ್ ಹಿಟ್ 'ಮ್ಯಾಕ್ಸ್' ಕಾಂಬಿನೇಷನ್ ಸಿನಿಮಾ ಎನ್ನುವ ಕಾರಣಕ್ಕೆಸ 'ಮಾರ್ಕ್' ಸಿನಿಮಾ ನಿರೀಕ್ಷೆ ಹುಟ್ಟಾಕ್ಕಿತ್ತು. ಅದಕ್ಕೆ ತಕ್ಕಂತೆ ಅಭಿಮಾನಿಗಳನ್ನು ರಂಜಿಸ್ತಿದೆ. ಕೇವಲ 6 ತಿಂಗಳಲ್ಲಿ ಸುದೀಪ್ ಅಂಡ್ ಟೀಮ್ ಸಿನಿಮಾ ಮಾಡಿ ತೆರೆಗೆ ತಂದಿರುವುದು ವಿಶೇಷ.

ದಾಖಲೆ ಮೊತ್ತಕ್ಕೆ 'ಮಾರ್ಕ್' ಓಟಿಟಿ, ಸ್ಯಾಟಲೈಟ್ ರೈಟ್ಸ್ ಸೇಲ್ ಆಗಿದ್ದಾಗಿ ಹೇಳಲಾಗಿತ್ತು. ಬಹಳ ಹಿಂದಯೇ ಡೀಲ್ ಕುದುರಿಸಿತ್ತು ಚಿತ್ರತಂಡ. 'ಮ್ಯಾಕ್ಸ್' ಸಿನಿಮಾ ಓಟಿಟಿ ಹಾಗೂ ಟಿವಿ ರೈಟ್ಸ್ ಜೀ ಸಂಸ್ಥೆ ಪಾಲಾಗಿತ್ತು. ಒಂದೇ ದಿನ ಒಮ್ಮೆಲೆ ಟಿವಿ ಹಾಗೂ ಓಟಿಟಿಯಲ್ಲಿ ಸಿನಿಮಾ ಪ್ರಸಾರವಾಗಿತ್ತು. ಆದರೆ 'ಮಾರ್ಕ್' ಓಟಿಟಿ ಹಾಗೂ ಟಿವಿ ರೈಟ್ಸ್ ಬೇರೆ ಬೇರೆ ಸಂಸ್ಥೆಗಳಿಗೆ ಮಾರಾಟವಾಗಿದೆ ಎನ್ನಲಾಗ್ತಿದೆ.
ಜಿಯೋ ಹಾಟ್‌ಸ್ಟರ್‌ಗೆ 'ಮಾರ್ಕ್' ಚಿತ್ರದ ಓಟಿಟಿ ರೈಟ್ಸ್ ಮಾರಾಟವಾಗಿದೆ. ಅದೇ ರೀತಿ ಸ್ಟಾರ್ ನೆಟ್‌ವರ್ಕ್ ಜೊತೆ ಟಿವಿ ರೈಟ್ಸ್ ವ್ಯವಹಾರ ಕುದುರಿಸಲಾಗಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ 'ಮಾರ್ಕ್' ಕನ್ನಡ ವರ್ಷನ್ ಪ್ರಸಾರ ಆಗುವ ನಿರೀಕ್ಷೆಯಿದೆ. ಜಿಯೋ ಹಾಟ್‌ಸ್ಟರ್ ಕನ್ನಡ ಸಿನಿಮಾಗಳನ್ನು ಕೊಂಡುಕೊಳ್ಳುವುದು ಕಮ್ಮಿ. ಆದರೆ 'ಮಾರ್ಕ್' ಸಿನಿಮಾ ಕ್ರೇಜ್ ನೋಡಿ ರೈಟ್ಸ್ ಖರೀದಿಸಿರುವುದು ಗೊತ್ತಾಗುತ್ತಿದೆ. ಚಿತ್ರದ ಪೋಸ್ಟರ್‌ಗಳಲ್ಲಿ ಜಿಯೋ ಹಾಟ್‌ಸ್ಟರ್ ಲೋಗೊ ನೋಡಬಹುದು.
ದೊಡ್ಡ ದೊಡ್ಡ ಸಿನಿಮಾಗಳೇ ತಿಂಗಳಿಗೂ ಮುನ್ನ ಓಟಿಟಿಗೆ ಬರ್ತಿದೆ. 'ಕಾಂತಾರ'-1 ಸಿನಿಮಾ 30 ದಿನಕ್ಕೆ ಪ್ರೈಂ ವೀಡಿಯೋದಲ್ಲಿ ಸ್ಟ್ರೀಮಿಂಗ್ ಆಗಿತ್ತು. 40 ದಿನಗಳ ಬಳಿಕ 'ಮ್ಯಾಕ್ಸ್' ಸಿನಿಮಾ ಓಟಿಟಿಗೆ ಬಂದಿತ್ತು. ಆ ಲೆಕ್ಕದಲ್ಲಿ ಫೆಬ್ರವರಿ ಮೊದಲ ವಾರ ಅಥವಾ ಎರಡನೇ ವಾರ ಸಿನಿಮಾ ಡಿಜಿಟಲ್ ಪ್ಲಾಟ್‌ಫಾರ್ಮ್‌ಗೆ ಎಂಟ್ರಿ ಕೊಡಲಿದೆ. ಆ ಬಳಿಕ ಟಿವಿಯಲ್ಲಿ ಪ್ರಸಾರವಾಗಲಿದೆ.
'ಮ್ಯಾಕ್ಸ್' ಸಿನಿಮಾ ಓಟಿಟಿಯಲ್ಲಿ ಕೂಡ ಸಖತ್ ಸದ್ದು ಮಾಡಿತ್ತು. 'ಮಾರ್ಕ್' ಚಿತ್ರಕ್ಕೂ ಅದೇ ರೆಸ್ಪಾನ್ಸ್ ಸಿಗುವ ನಿರೀಕ್ಷೆಯಿದೆ. ರಾಜ್ಯಾದ್ಯಂತ ಅಭಿಮಾನಿಗಳು ಹಬ್ಬದ ರೀತಿ ಸಿನಿಮಾ ಸ್ವಾಗತಿಸಿದ್ದಾರೆ. ರಾಜ್ಯದ ಹಲವು ಚಿತ್ರಮಂದಿರಗಳಲ್ಲಿ ಅಭಿಮಾನಿಗಳ ಸಂಭ್ರಮಾಚರಣೆ ಜೋರಾಗಿತ್ತು. ಸುದೀಪ್ ಸ್ಟೈಲ್, ಸ್ವ್ಯಾಗ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಕಿಚ್ಚನ ಆಕ್ಷನ್ ಧಮಾಕ ಸಖತ್ ಕಿಕ್ ಕೊಡ್ತಿದೆ.
ಸುದೀಪ್ ಜೊತೆಗೆ ನವೀನ್ ಚಂದ್ರ, ಶೈನ್ ಟಾಮ್ ಚಾಕೊ, ಯೋಗಿ ಬಾಬು, ರೋಶನಿ ಪ್ರಕಾಶ್, ಗುರು ಸೋಮಸುಂದರಂ 'ಮಾರ್ಕ್' ಚಿತ್ರದ ತಾರಾಗಣದಲ್ಲಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ, ಶೇಖರ್ ಚಂದ್ರ ಛಾಯಾಗ್ರಹಣ ಚಿತ್ರಕ್ಕೆ ಬಲ ತುಂಬಿದೆ. ಚಿತ್ರದಲ್ಲಿ ಒಟ್ಟು 3 ಹಾಡುಗಳಿವೆ. ಸುದೀಪ್ ಮಗಳು ಸಾನ್ವಿ ಹಾಡಿರುವ 'ಮಸ್ತ್ ಮಲೈಕಾ' ಹಾಡು ಚಿತ್ರಮಂದಿರಗಳಲ್ಲಿ ಅಭಿಮಾನಿಗಳನ್ನು ಕುಣಿಸುತ್ತಿದೆ. ಈ ಹಾಡಿನ ಮೂಲಕ ಸಾನ್ವಿ ಗಾಯಕಿಯಾಗಿ ಚಿತ್ರರಂಗಕ್ಕೆ ಪರಿಚಿತರಾಗಿದ್ದಾರೆ.
ಸುದೀಪ್ ಅಭಿಮಾನಿಗಳನ್ನು ರಂಜಿಸಲು ಬೇಕಾದ ಎಲ್ಲಾ ಕಮರ್ಷಿಯಲ್ ಅಂಶಗಳನ್ನು ಸೇರಿಸಿ ವಿಜಯ್ ಕಾರ್ತಿಕೇಯನ್ ಸಿನಿಮಾ ಕಟ್ಟಿಕೊಟ್ಟಿದ್ದಾರೆ. ಕ್ರಿಸ್‌ಮಸ್ ಹಾಗೂ ಹೊಸ ವರ್ಷದ ರಜೆ 'ಮಾರ್ಕ್' ಚಿತ್ರಕ್ಕೆ ಪ್ಲಸ್ ಆಗುವ ನಿರೀಕ್ಷೆಯಿದೆ. ಅಭಿಮಾನಿಗಳು ಸಿನಿಮಾ ಕೊಂಡಾಡುತ್ತಿದ್ದಾರೆ. ಸಾಮಾನ್ಯ ಪ್ರೇಕ್ಷಕರು ದೊಡ್ಡಮಟ್ಟದಲ್ಲಿ ಬಂದರೆ ಸಿನಿಮಾ ಗೆಲುವಿನ ಹಾದಿ ಹಿಡಿಯಲಿದೆ.


Click it and Unblock the Notifications











