Mark OTT; ಅಬ್ಬಬ್ಬಾ.. ದಾಖಲೆ ಬೆಲೆಗೆ ಸೇಲ್ ಆಯ್ತು ಸುದೀಪ್ 'ಮಾರ್ಕ್' ಓಟಿಟಿ ರೈಟ್ಸ್

ಕಿಚ್ಚ ಸುದೀಪ್ ನಟನೆಯ 'ಮಾರ್ಕ್' ಸಿನಿಮಾ ಚಿತ್ರೀಕರಣ ಇತ್ತೀಚೆಗೆ ಮುಗಿದಿತ್ತು. ಸದ್ಯ ಪೋಸ್ಟ್ ಪ್ರೊಡಕ್ಷನ್, ಡಬ್ಬಿಂಗ್ ಕೆಲಸಗಳು ಭರದಿಂದ ಸಾಗುತ್ತಿದೆ. ಕ್ರಿಸ್‌ಮಸ್ ಸಂಭ್ರಮದಲ್ಲಿ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಸೂಪರ್ ಹಿಟ್ 'ಮ್ಯಾಕ್ಸ್' ಕಾಂಬಿನೇಷನ್‌ನಲ್ಲಿ ಈ ಸಿನಿಮಾ ಕೂಡ ಬರ್ತಿರೋದು ಕುತೂಹಲ ಮೂಡಿಸಿದೆ.

ವಿಜಯ್ ಕಾರ್ತಿಕೇಯನ್ ನಿರ್ದೇಶನದ ಆಕ್ಷನ್ ಥ್ರಿಲ್ಲರ್ ಸಿನಿಮಾ 'ಮಾರ್ಕ್'. ಸತ್ಯಜ್ಯೋತಿ ಫಿಲ್ಮ್ಸ್ ಹಾಗೂ ಕಿಚ್ಚ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗ್ತಿದೆ. ಈಗಾಗಲೇ ಒಂದು ಹಾಡು ಹಾಗೂ ಟೀಸರ್ ಬಂದು ಹಿಟ್ ಆಗಿದೆ. ಅಭಿಮಾನಿಗಳು ಫಸ್ಟ್ ಡೇ ಫಸ್ಟ್ ಶೋ ನೋಡಲು ಮನಸ್ಸು ಮಾಡಿದ್ದಾರೆ. ಸಿಕ್ಕಾಪಟ್ಟೆ ಸ್ಟೈಲಿಶ್ ಅವತಾರದಲ್ಲಿ ಸುದೀಪ್ ಈ ಚಿತ್ರದಲ್ಲಿ ಮಿಂಚುತ್ತಿದ್ದಾರೆ. ಸದ್ಯ ಚಿತ್ರದ ಓಟಿಟಿ ರೈಟ್ಸ್ ಮಾರಾಟವಾಗಿದೆ.

Kichcha Sudeep starrer action thiller Mark movie OTT Rights Sold for a Whopping Price

ಸೂರತ್ಕಲ್ ಪೊಲೀಸ್ ಠಾಣೆ ಸುತ್ತಾ 'ಮಾರ್ಕ್' ಚಿತ್ರದ ಕಥೆ ಸಾಗಲಿದೆ. ಚಿತ್ರದಲ್ಲಿ ಅಜಯ್ ಮಾರ್ಕಂಡೆ ಎಂಬ ಪೊಲೀಸ್ ಆಫೀಸರ್ ಪಾತ್ರದಲ್ಲಿ ಸುದೀಪ್ ನಟಿಸುತ್ತಿದ್ದಾರೆ ಎನ್ನಲಾಗ್ತಿದೆ. ತಮಿಳು ಹಾಗೂ ಕನ್ನಡ ಕಲಾವಿದರು, ತಂತ್ರಜ್ಞರು ಚಿತ್ರಕ್ಕಾಗಿ ಕೆಲಸ ಮಾಡಿದ್ದಾರೆ. 'ಮ್ಯಾಕ್ಸ್' ಚಿತ್ರಕ್ಕೆ ಕೆಲಸ ಮಾಡಿದ್ದ ತಂಡವೇ ಮತ್ತೆ ಜೊತೆಯಾಗಿದೆ. ಶೇಖರ್ ಚಂದ್ರ ಛಾಯಾಗ್ರಹಣ ಹಾಗೂ ಅಜನೀಶ್ ಲೋಕನಾಥ್ ಸಂಗೀತ ಚಿತ್ರಕ್ಕಿದೆ.

'ಮ್ಯಾಕ್ಸ್' ಚಿತ್ರದ ಕಥೆಗೂ 'ಮಾರ್ಕ್' ಚಿತ್ರಕ್ಕೂ ಯಾವುದೇ ಸಂಬಂಧ ಇಲ್ಲ. ಅದೇ ರೀತಿ ಒಂದು ರಾತ್ರಿಯಲ್ಲಿ ನಡೆಯುವ ಕಥೆ ಈ ಚಿತ್ರದಲ್ಲಿ ಇರಬಹುದು ಎಂದು ನಿರೀಕ್ಷಿಸಲಾಗುತ್ತಿದೆ. ಇನ್ನು ಚಿತ್ರದ ಓಟಿಟಿ ರೈಟ್ಸ್ ಅಮೇಜಾನ್ ಪ್ರೈಂ ಪಾಲಾಗಿದೆ. ಇತ್ತೀಚೆಗೆ ಪ್ರೈಂ ಅಧಿಕೃತ ಖಾತೆಗಳಲ್ಲಿ ಮಾಡಿದ್ದ ಪೋಸ್ಟ್ ಇಂತಾದೊಂದು ಸುಳಿವು ನೀಡಿತ್ತು. ಇದೀಗ ಚಿತ್ರತಂಡದ ಆಪ್ತ ಮೂಲಗಳಿಂದ ಕೂಡ ಇದು ನಿಜ ಎನ್ನುವ ಮಾಹಿತಿ ಫಿಲ್ಮಿಬೀಟ್ ಕನ್ನಡಕ್ಕೆ ಲಭ್ಯವಾಗಿದೆ.

ಕಳೆದ ವರ್ಷ ಬಂದಿದ್ದ 'ಮ್ಯಾಕ್ಸ್' ಸಿನಿಮಾ ಏಕಕಾಲಕ್ಕೆ ಓಟಿಟಿ ಹಾಗೂ ಟಿವಿಗೆ ಬಂದಿತ್ತು. ಜೀ-5 ಹಾಗೂ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿತ್ತು. ಆದರೆ 'ಮಾರ್ಕ್' ಚಿತ್ರದ ಡಿಜಿಟಲ್ ಸ್ಟ್ರೀಮಿಂಗ್ ರೈಟ್ಸ್ ಪ್ರೈಂ ವೀಡಿಯೋಗೆ ಮಾರಾಟವಾಗಿದೆ. ಭಾರೀ ಮೊತ್ತಕ್ಕೆ ಈ ಡೀಲ್ ನಡೆದಿದೆ. 'ಮ್ಯಾಕ್ಸ್' ಚಿತ್ರದ ರೀತಿಯಲ್ಲೇ 'ಮಾರ್ಕ್' ಹೈಪ್ ಕ್ರಿಯೇಟ್ ಮಾಡಿದ್ದು ಅದಕ್ಕೆ ತಕ್ಕಂತೆ ಡೀಲ್ ಕುದುರಿಸಲಾಗಿದೆ.

ಡಿಸೆಂಬರ್ 25ಕ್ಕೆ 'ಮಾರ್ಕ್' ಸಿನಿಮಾ ತೆರೆಗಪ್ಪಳಿಸಿದರೆ ಜನವರಿ ಅಂತ್ಯದ ವೇಳೆಗೆ ಓಟಿಟಿಗೆ ಬರಬಹುದು ಎಂದು ನಿರೀಕ್ಷಿತಲಾಗ್ತಿದೆ. 'ಕೂಲಿ', 'ಕಾಂತಾರ-1' ರೀತಿಯ ದೊಡ್ಡ ದೊಡ್ಡ ಸಿನಿಮಾಗಳು 4 ವಾರಕ್ಕೆ ಓಟಿಟಿಗೆ ಬಂದು ಅಚ್ಚರಿ ಮೂಡಿಸಿದ್ದವು. ಹಾಗಾಗಿ ಅದೇ ರೀತಿ 'ಮಾರ್ಕ್' ಚಿತ್ರದ ಒಪ್ಪಂದ ಕೂಡ ನಡೆದಿರುವ ಅಂದಾಜಿದೆ.

110 ದಿನಗಳ ಕಾಲ 'ಮಾರ್ಕ್' ಚಿತ್ರದ ಚಿತ್ರೀಕರಣ ನಡೆದಿದೆ. ಚಿತ್ರದ ಗ್ರಾಫಿಕ್ಸ್, ಹಿನ್ನೆಲೆ ಸಂಗೀತ ಹಾಗೂ ಡಬ್ಬಿಂಗ್ ಕೂಡ ಮುಗಿದಿದೆ. 'ಮ್ಯಾಕ್ಸ್' ಬಳಿಕ ಸುದೀಪ್ 'ಬಿಲ್ಲ ರಂಗ ಬಾಷ' ಚಿತ್ರ ಆರಂಭಿಸಿದ್ದರು. ಒಂದು ಸಣ್ಣ ಶೆಡ್ಯೂಲ್ ಮುಗಿಸಿ ನಡುವೆ 'ಮಾರ್ಕ್' ಚಿತ್ರ ಕೈಗೆತ್ತಿಕೊಂಡಿದ್ದರು. ಜುಲೈ 7ರಂದು ಚಿತ್ರೀಕರಣ ಆರಂಭವಾಗಿತ್ತು. ಬಹಳ ಬೇಗನೆ ಸಿನಿಮಾ ಮುಗಿಸುವ ಪಣ ತೊಟ್ಟಿದ್ದ ತಂಡ ಅದನ್ನು ಸಾಧಿಸಿ ತೋರಿಸಿದೆ. ಬಿಗ್‌ಬಾಸ್ ನಿರೂಪಣೆ ನಡುವೆಯೂ ಸುದೀಪ್ 'ಮಾರ್ಕ್' ಕೆಲಸಗಳನ್ನು ಕಂಪ್ಲೀಟ್ ಮಾಡಿದ್ದಾರೆ.

ಸುದೀಪ್ ಜೊತೆ ಈ ಚಿತ್ರದಲ್ಲಿ ನವೀನ್ ಚಂದ್ರ, ದೀಪಶಿಖಾ, ಅರ್ಚನಾ ಕೊಟ್ಟಿಗೆ, ನಿಶ್ವಿಕಾ ನಾಯ್ಡು, ರೋಶನಿ ಪ್ರಕಾಶ್ ಮತ್ತು ವಿಕ್ರಾಂತ್ ಬಣ್ಣ ಹಚ್ಚಿ ನಟಿಸಿದ್ದಾರೆ. ವರ್ಷದ ಅಂತರದಲ್ಲಿ 2ನೇ ಸಿನಿಮಾವನ್ನು ಸುದೀಪ್ ತೆರೆಗೆ ತರುವ ಪ್ರಯತ್ನ ಮಾಡುತ್ತಿದ್ದಾರೆ.

More from Filmibeat

Read more about: sudeep
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X