For Quick Alerts
  ALLOW NOTIFICATIONS  
  For Daily Alerts

  ಜೀ 5ನಲ್ಲಿ 'ವಿಕ್ರಾಂತ್ ರೋಣ' 1000+ ಮಿಲಿಯನ್‌ ಸ್ಟ್ರೀಮಿಂಗ್ ನಿಮಿಷ ಪ್ರದರ್ಶನ: ಟಾಪ್ 3ಯಲ್ಲಿ ಕಿಚ್ಚನ ಸಿನಿಮಾ!

  |

  ಕಿಚ್ಚ ಸುದೀಪ್ ಪ್ಯಾನ್ ಇಂಡಿಯಾ ಸಿನಿಮಾ 'ವಿಕ್ರಾಂತ್ ರೋಣ' ಓಟಿಟಿಗೆ ಲಗ್ಗೆ ಇಟ್ಟಿರೋದು ಗೊತ್ತೇ ಇದೆ. ಥಿಯೇಟರ್‌ನಲ್ಲಿ 3ಡಿಯಲ್ಲಿ ತೆರೆಕಂಡಿದ್ದ ಸಿನಿಮಾ ಈಗ ಓಟಿಟಿಯಲ್ಲೂ ಅರ್ಭಟ ಮುಂದುವರೆಸಿದೆ. ಸುದೀಪ್ ಹಾಗೂ ಅನೂಪ್ ಭಂಡಾರಿ ಕಾಂಬಿನೇಷನ್‌ಗೆ ಓಟಿಟಿಯಲ್ಲೂ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.

  'ವಿಕ್ರಾಂತ್ ರೋಣ' ಸಿನಿಮಾವನ್ನು ಕಿಚ್ಚ ಸುದೀಪ್ ಹುಟ್ಟುಹಬ್ಬದ ಪ್ರಯುಕ್ತ ರಿಲೀಸ್ ಮಾಡಲಾಗಿತ್ತು. ಸೆಪ್ಟೆಂಬರ್ 02 ರಂದು ರಿಲೀಸ್ ಆಗಿದ್ದ ಈ ಸಿನಿಮಾ ಜೀ 5ಗೆ ಲಗ್ಗೆ ಇಟ್ಟು ಯಶಸ್ವಿ ಪ್ರದರ್ಶನವನ್ನು ಕಾಣುತ್ತಿದೆ.

  'ವಿಕ್ರಾಂತ್ ರೋಣ' ಓಟಿಟಿಗೆ ಲಗ್ಗೆ ಇಡಲು ಮುಹೂರ್ತ ಫಿಕ್ಸ್: ಕಿಚ್ಚನಿಗೆ ಜೀ 5 ಗಿಫ್ಟ್!'ವಿಕ್ರಾಂತ್ ರೋಣ' ಓಟಿಟಿಗೆ ಲಗ್ಗೆ ಇಡಲು ಮುಹೂರ್ತ ಫಿಕ್ಸ್: ಕಿಚ್ಚನಿಗೆ ಜೀ 5 ಗಿಫ್ಟ್!

  'ವಿಕ್ರಾಂತ್ ರೋಣ' ಟ್ರೆಂಡಿಂಗ್‌ನಲ್ಲಿ ಟಾಪ್ 3

  ಅನೂಪ್ ಭಂಡಾರಿ ಅಡ್ವೆಂಚರಸ್ ಜೊತೆಗೆ ಮರ್ಡರ್ ಮಿಸ್ಟ್ರೀ ಸ್ಟೋರಿಯನ್ನು ತೆರೆಮೇಲೆ ತಂದಿದ್ದರು. ಕಿಚ್ಚ ಸುದೀಪ್ ಪೊಲೀಸ್ ಅಧಿಕಾರಿಯಾಗಿ ತೆರೆಮೇಲೆ ಕಂಡಿದ್ದರು. 'ವಿಕ್ರಾಂತ್ ರೋಣ'ನಾಗಿ ತೆರೆಮೇಲೆ ಸುದ್ದಿ ಅಬ್ಬರಿಸಿದ್ದರು.

  ಜೀ 5ನಲ್ಲಿ ಪ್ರದರ್ಶನ ಕಾಣುತ್ತಿರುವ 'ವಿಕ್ರಾಂತ್ ರೋಣ' ಟ್ರೆಂಡಿಂಗ್‌ನಲ್ಲಿ ಟಾಪ್‌ 3 ಸ್ಥಾನದಲ್ಲಿದೆ. ಮೂರು ವಾರಗಳಿಂದ ಯಶಸ್ವಿಯಾಗಿ ಪ್ರದರ್ಶನ ಮಾಡುತ್ತಿರುವ ಸಿನಿಮಾ 1000 ಮಿಲಿಯನ್‌ಗೂ ಹೆಚ್ಚು ನಿಮಿಷಗಳು ಪ್ರದರ್ಶನ ಕಂಡಿದೆ. ಇದು ಕನ್ನಡ ಸಿನಿಮಾದ ಮಟ್ಟಿಗೆ ಹೊಸ ದಾಖಲೆ ಅಂತಲೇ ಹೇಳಬಹುದು.

  ರಕ್ಕಮ್ಮ ಹಾಡಿಗೆ ಹೆಜ್ಜೆ ಹಾಕಿದವರಿಗೆ ಬಹುಮಾನ

  'ವಿಕ್ರಾಂತ್ ರೋಣ' ಓಟಿಟಿಗೆ ಲಗ್ಗೆ ಇಡುತ್ತಿದ್ದಂತೆ ಜೀ 5 ಸ್ಪರ್ಧೆಯೊಂದನ್ನು ಹಮ್ಮಿಕೊಂಡಿತ್ತು. ರಾ ರಾ ರಕ್ಕಮ್ಮ ಹಾಡಿಗೆ ಅದ್ಭುತವಾಗಿ ಹೆಜ್ಜೆ ಹಾಕಿದವರಿಗೆ ವಿಶೇಷ ಬಹುಮಾನವನ್ನು ಅನೌನ್ಸ್ ಮಾಡಲಾಗಿತ್ತು. ರಕ್ಕಮ್ಮ ಅಂತ ಕುಣಿದವರಿಗೆ 25 ಸಾವಿರ ಬಹುಮಾನ. ಜೊತೆಗೆ 10 ಸ್ಪರ್ಧಿಗಳಿಗೆ ಉಡುಗೊರೆಯನ್ನು ನೀಡುವುದಾಗಿ ಹೇಳಲಾಗಿತ್ತು. ಅದರಂತೆ ರಕ್ಕಮ್ಮ ಹಾಡಿಗೆ ಬೊಂಬಾಟ್ ಆಗಿ ಹೆಜ್ಜೆ ಹಾಕಿದವರಿಗೆ 25 ಸಾವಿರ ರೂ. ಹಣ, ಹಾಗೇ 10 ಜನಕ್ಕೆ ಕಿಚ್ಚನ ಕಡೆಯಿಂದ ಪತ್ರ ಹಾಗೂ ಉಡುಗೊರೆ ನೀಡಲಾಗಿದೆ.

  ದುಬಾರಿ ಬಜೆಟ್‌ನಲ್ಲಿ 'ವಿಕ್ರಾಂತ್ ರೋಣ' ಸಿನಿಮಾವನ್ನು ಜಾಕ್ ಮಂಜು ನಿರ್ಮಿಸಿದ್ದರು. ಕಿಚ್ಚ ಸುದೀಪ್ ಜೊತೆ ನಿರೂಪ್ ಭಂಡಾರಿ, ನೀತಾ ಅಶೋಕ್, ಜಾಕ್ವೆಲಿನ್ ಫರ್ನಾಂಡಿಸ್, ಮಿಲನಾ ನಾಗರಾಜ್ , ಮಧುಸೂದನ್ ರಾವ್, ರವಿಶಂಕರ್ ಗೌಡ ಸೇರಿದಂತೆ ಹಲವರು ನಟಿಸಿದ್ದರು.

  Kichcha Sudeep Starrer Vikrant Rona Got 1000 plus Streaming Minutes In Zee5 Ott

  ಅಜನೀಶ್​ ಬಿ. ಲೋಕನಾಥ್ ಹಾಕಿದ ಟ್ಯೂನ್‌ಗಳು ​ಸೂಪರ್ ಹಿಟ್ ಆಗಿದ್ದವು. ಜಾಕ್ವೆಲಿನ್ ಫರ್ನಾಂಡಿಸ್​ ಜೊತೆ ಕಿಚ್ಚ ಸುದೀಪ್ ಹೆಜ್ಜೆ ಹಾಕಿದ 'ರಾ ರಾ ರಕ್ಕಮ್ಮ..' ಹಾಡಿಗೆ​ ಅಭಿಮಾನಿಗಳು ಫಿದಾ ಆಗಿದ್ದರು. ಬಾಕ್ಸಾಫೀಸ್‌ನಲ್ಲೂ 'ವಿಕ್ರಾಂತ್ ರೋಣ' ಬೇಜಾನ್ ಸದ್ದು ಮಾಡಿದ್ದು, ಈಗ ಓಟಿಟಿಯಲ್ಲಿ ಹಲ್‌ಚಲ್ ಎಬ್ಬಿಸುತ್ತಿದೆ.

  English summary
  Kichcha Sudeep Starrer Vikrant Rona Got 1000 plus Streaming Minutes In Zee5 Ott, Know More.
  Thursday, September 22, 2022, 17:30
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X