ಹೊಸ ಥ್ರಿಲ್ಲರ್ ಸಿನಿಮಾ ಓಟಿಟಿಗೆ ಎಂಟ್ರಿ; ಕನ್ನಡದಲ್ಲೇ ನೋಡಿ
ಓಟಿಟಿಯಲ್ಲಿ ಇತ್ತೀಚೆಗೆ ಕನ್ನಡ ಸಿನಿಮಾಗಳು ಜೋರಾಗಿ ಸದ್ದು ಮಾಡ್ತಿದೆ. ಕಳೆದ ವಾರ 4 ಕನ್ನಡ ಸಿನಿಮಾಗಳು ಡಿಜಿಟಲ್ ಪ್ಲಾಟ್‌ಫಾರ್ಮ್‌ಗೆ ಎಂಟ್ರಿ ಕೊಟ್ಟಿದ್ದವು. ಕೆಲ ಪರಭಾಷೆ ಸಿನಿಮಾಗಳು ಕನ್ನಡಕ್ಕೆ ಡಬ್ ಆಗಿ ಬಂದಿದ್ದವು.
ಸೂರ್ಯ ನಟನೆಯ 'ರೆಟ್ರೋ', ನಾನಿ ನಟನೆಯ 'ಹಿಟ್-3' ಹಾಗೂ ಮೋಹನ್ ಲಾಲ್ 'ಥುಡರುಮ್' ಚಿತ್ರಗಳು ಓಟಿಟಿಯಲ್ಲಿ ಸದ್ದು ಮಾಡ್ತಿವೆ. ಇನ್ನು ರಂಗಾಯಣ ರಘು ನಟನೆಯ 'ಅಜ್ಞಾತವಾಸಿ' ಹಾಗೂ ರವಿ ಬಸ್ರೂರು ನಿರ್ದೇಶನದ 'ವೀರಚಂದ್ರಹಾಸ' ಚಿತ್ರಗಳಿಗೂ ಓಟಿಟಿಯಲ್ಲಿ ಒಳ್ಳೆ ರೆಸ್ಪಾನ್ಸ್ ಸಿಕ್ತಿದೆ. ಈ ವಾರ ಯಾವೆಲ್ಲಾ ಸಿನಿಮಾಗಳು ಓಟಿಟಿಗೆ ಬರುತ್ತದೆ ಎನ್ನುವ ಲೆಕ್ಕಾಚಾರ ಶುರುವಾಗಿದೆ.

ಕನ್ನಡದ ಯಾವುದೇ ಸಿನಿಮಾ ಈ ಓಟಿಟಿಗೆ ಬರುವ ಬಗ್ಗೆ ಇನ್ನು ಮಾಹಿತಿ ಸಿಕ್ಕಿಲ್. ಇದೆಲ್ಲದರ ನಡುವೆ ಮಲಯಾಳಂ ಸಿನಿಮಾ 'ವಡಕ್ಕನ್' ಸದ್ದು ಮಾಡ್ತಿದೆ. ಮೇ 5ಕ್ಕೆ ಸಿನಿಮಾ ಪ್ರೈಂ ವೀಡಿಯೋದಲ್ಲಿ ಸ್ಟ್ರೀಮಿಂಗ್ ಆರಂಭಿಸಿತ್ತು. ಇದೀ ಕನ್ನಡ ಆಡಿಯೋದಲ್ಲಿ ಸಿನಿಮಾ ವೀಕ್ಷಣೆಗೆ ಸಿಗುತ್ತಿದೆ. ಕನ್ನಡ ನಟ ಕಿಶೋರ್ ಕೂಡ ಚಿತ್ರರ ಮುಖ್ಯ ಪಾತ್ರದಲ್ಲಿ ನಟಿಸಿರುವುದು 'ವಡಕ್ಕನ್' ವಿಶೇಷ.
ಬ್ರಹ್ಮಗಿರಿ ಎಂಬ ದಟ್ಟಕಾಡು. ನಡುವೆ ಒಂದು ದ್ವೀಪ. ಅಲ್ಲಿ ಒಂದು ಬಂಗಲೆ. ಅಲ್ಲೇ ಒಂದು ಟಿವಿ ರಿಯಾಲಿಟಿ ಶೋ ನಡೆಸಲಾಗುತ್ತದೆ. 6 ಜನ ಸ್ಪರ್ಧಿಗಳು ಅದರಲ್ಲಿ ಭಾಗಿ ಆಗುತ್ತಾರೆ. ಕಾಣದ ಶಕ್ತಿ ಒಬ್ಬೊಬ್ಬರ ಸಾವಿಗೆ ಕಾರಣವಾಗುತ್ತಿರುತ್ತದೆ. ಈ ನಿಗೂಢ ಸರಣಿ ಸಾವಿನ ಪ್ರಕರಣದ ಭೇದಿಸಲು ಖ್ಯಾತ ಪ್ಯಾರನಾರ್ಮಲ್ ತನಿಖಾಧಿಕಾರಿ ರಾಮ್(ಕಿಶೋರ್) ಬರ್ತಾರೆ. ಮುಂದೇನು ಎನ್ನುವುದು 'ವಡಕ್ಕನ್' ಕಥೆ.
ಕನ್ನಡದಲ್ಲಿ ತಮ್ಮ ಪಾತ್ರಕ್ಕೆ ಸ್ವತಃ ಕಿಶೋರ್ ಡಬ್ ಮಾಡಿದ್ದಾರೆ. ಹಾಗಾಗಿ ಡಬ್ಬಿಂಗ್ ಬಹಳ ಚೆನ್ನಾಗಿದೆ. ಕ್ಯಾಮರಾ ವರ್ಕ್ ಚಿತ್ರದ ಮತ್ತೊಂದು ಹೈಲೆಟ್. ಫ್ಲಾಶ್‌ಬ್ಯಾಕ್ ಚಿತ್ರದ ಕೊಂಚಮಟ್ಟಿಗೆ ಬಲ ತುಂಬಿದೆ. 'ಕಾಂತಾರ' ಕ್ಲೈಮ್ಯಾಕ್ಸ್ ನೆನಪಿಸುವಂತೆ ಈ ಎಪಿಸೋಡ್ ಇರುತ್ತದೆ. ಹಾರರ್ ಟಚ್ ಕೂಡ ಚಿತ್ರಕ್ಕಿದೆ.
ಸಿಂಪಲ್ ಕಥೆಯನ್ನು ಪರಿಣಾಮಕಾರಿಯಾಗಿ ಹೇಳುವ ಪ್ರಯತ್ನ ಮಾಡಲಾಗಿದೆ. ಆದರೆ ಅದ್ಭುತ ಸಿನಿಮಾ ಏನಲ್ಲ. ನೀವು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾಗಳನ್ನು ಇಷ್ಟಪಡುವವರಾಗಿದ್ದರೆ, ಫ್ರೀ ಇದ್ದರೆ ಓಟಿಟಿಯಲ್ಲಿ ಸಿನಿಮಾ ವೀಕ್ಷಿಸಬಹುದು. ಕಿಶೋರ್ ಜೊತೆಗೆ ಶೃತಿ ಮೆನನ್, ಗಾರ್ಗಿ ಅನಂತನ್, ಮೀನಾಕ್ಷಿ ಉನ್ನಿಕೃಷ್ಣನ್, ಶ್ಯಾಮ್ ಮೋಹನ್ ಚಿತ್ರದಲ್ಲಿ ನಟಿಸಿದ್ದಾರೆ.
'ವಡಕ್ಕನ್' ಚಿತ್ರಕ್ಕೆ ಸಾಜಿದ್ ಆಕ್ಷನ್ ಕಟ್ ಹೇಳಿದ್ದಾರೆ. ಆಫ್‌ಬೀಟ್ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಜಯದೀಪ್ ಸಿಂಗ್ ಮತ್ತು ಭವ್ಯ ನಿಧಿ ಶರ್ಮಾ ಚಿತ್ರಕ್ಕೆ ಹಣ ಹೂಡಿದ್ದಾರೆ. ಸಾಜಿದ್ ಜೊತೆ ಉನ್ನಿ ಎಂಬುವವರು ಸೇರಿ ಕಥೆ ಬರೆದಿದ್ದಾರೆ. ಮಾರ್ಚ್ 7ಕ್ಕೆ ಸಿನಿಮಾ ತೆರೆಗೆ ಬಂದಿತ್ತು. ಇದೀಗ ಓಟಿಟಿಯಲ್ಲಿ ವೀಕ್ಷಣೆಗೆ ಲಭ್ಯವಿದೆ.
ಸದ್ಯಕ್ಕೆ 'ವಡಕ್ಕನ್' ಚಿತ್ರದ ಮಲಯಾಳಂ ಹಾಗೂ ಕನ್ನಡ ವರ್ಷನ್ ಮಾತ್ರ ಅಮೇಜಾನ್ ಪ್ರೈಂ ವೀಡಿಯೋದಲ್ಲಿದೆ. ಜೂನ್ 6ರಿಂದ ತಮಿಳು ಹಾಗೂ ತೆಲುಗು ಭಾಷೆಗಳಿಗೆ ಸಿನಿಮಾ ಡಬ್ ಆಗಿ ಅಹಾ ಓಟಿಟಿ ವೇದಿಕೆಗೆ ಬರ್ತಿದೆ. ಎರಡೆರಡು ಓಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗುವುದು ಹೊಸದೇನು ಅಲ್ಲ. ಇದೀಗ 'ವಡಕ್ಕನ್' ಸಹ ಅದೇ ಪಟ್ಟಿಗೆ ಸೇರುತ್ತಿದೆ.


Click it and Unblock the Notifications











