For Quick Alerts
  ALLOW NOTIFICATIONS  
  For Daily Alerts

  ಕರಣ್ ಜೋಹರ್ ಪ್ರಶ್ನೆಗೆ ಸೆಕ್ಸ್.. ಸೆಕ್ಸ್.. ಸೆಕ್ಸ್ ಎಂದ ಅನಿಲ್ ಕಪೂರ್: ವರುಣ್ ಧವನ್ ಶಾಕ್!

  |

  ಓಟಿಟಿಯಲ್ಲಿ ಕಾಫಿ ವಿತ್ ಕರಣ್‌ ಸೀಸನ್‌- 7 ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಬಾಲಿವುಡ್ ಸ್ಟಾರ್‌ಗಳು ಮಾತ್ರವಲ್ಲದೇ ಸೌತ್‌ ಸ್ಟಾರ್‌ಗಳು ಕೂಡ ಈ ಬಾರಿ ಶೋನಲ್ಲಿ ಭಾಗವಹಿಸ್ತಿದ್ದಾರೆ. ಕರಣ್‌ ಬೋಲ್ಡ್ ಪ್ರಶ್ನೆಗಳಿಗೆ ಕೆಲವರು ನೇರವಾಗಿ ಉತ್ತರಿಸಿದರೆ ಮತ್ತೆ ಕೆಲವರು ಪರೋಕ್ಷವಾಗಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಈ ವಾರ ಹಿರಿಯ ನಟ ಅನಿಲ್ ಕಪೂರ್ ಶೋಗೆ ಅತಿಥಿಯಾಗಿ ಬಂದಿದ್ದರು. ಕರಣ್ ಕೇಳಿದ ಒಂದು ಪ್ರಶ್ನೆಗೆ ಸೆಕ್ಸ್‌, ಸೆಕ್ಸ್, ಸೆಕ್ಸ್ ಎಂದು ಹೇಳಿ ಎಲ್ಲರ ಹುಬ್ಬೇರಿಸಿದ್ದಾರೆ.

  ಅಮೀರ್ ಖಾನ್, ಕರೀನಾ ಕಪೂರ್, ಜಾನ್ವಿ ಕಪೂರ್, ಕೈರಾ ಅದ್ವಾನಿ, ವಿಜಯ್ ದೇವರಕೊಂಡ ಮತ್ತು ಸಮಂತಾ ಸೇರಿದಂತೆ ಹಲವರಿಗೆ ಕರಣ್ ಜೋಹರ್‌ರಿಂದ ಸೆಕ್ಸ್ ಬಗ್ಗೆ ಪ್ರಶ್ನೆಗಳು ಎದುರಾಗಿತ್ತು. ಈ ವಾರ ಅನಿಲ್ ಕಪೂರ್ ಮತ್ತು ವರುಣ್ ಧವನ್ ಕಾಫಿ ವಿತ್ ಕರಣ್ ಶೋನಲ್ಲಿ ಭಾಗವಹಿಸಿದ್ದರು. ನೀವು ಯಂಗ್ ಆಗಿ ಫೀಲ್ ಆಗುವ ಮೂರು ವಿಷಯಗಳು ಯಾವುವು ಎಂದು ಕರಣ್ ಜೋಹರ್ ಕೇಳಿದ್ದಕ್ಕೆ ಅನಿಲ್ ಕಪೂರ್ ಸೆಕ್ಸ್.. ಸೆಕ್ಸ್.. ಸೆಕ್ಸ್ ಎಂದು ಹೇಳಿ ಅಚ್ಚರಿ ಮೂಡಿಸಿದ್ದಾರೆ. ಇದನ್ನು ಕೇಳಿ ಪಕ್ಕದಲ್ಲೇ ಕೂತಿದ್ದ ವರುಣ್ ಕೂಡ ಹೌಹಾರಿದ್ದಾರೆ. ಸದ್ಯ ಈ ಪ್ರೋಮೊ ಈಗ ಸಖತ್ ವೈರಲ್ ಆಗಿದೆ.

  ಅಕ್ಷಯ್ ಕುಮಾರ್ ಹೊಸ ಜಾಹೀರಾತಿಗೆ ವಿರೋಧ: ಜಾಹೀರಾತಿನಲ್ಲಿ ಅಂಥಹದ್ದೇನಿದೆ?ಅಕ್ಷಯ್ ಕುಮಾರ್ ಹೊಸ ಜಾಹೀರಾತಿಗೆ ವಿರೋಧ: ಜಾಹೀರಾತಿನಲ್ಲಿ ಅಂಥಹದ್ದೇನಿದೆ?

  ವಯಸ್ಸು 65 ಆದರೂ ಅನಿಲ್‌ ಕಪೂರ್ ಇಷ್ಟು ಎನರ್ಜಿಟಿಕ್ ಆಗಿ ಇರೋದಕ್ಕೆ ಇದೇ ಕಾರಣ ಅನ್ನಿಸ್ತಿದೆ ಎಂದು ಕೆಲವರು ವ್ಯಂಗ್ಯ ಮಾಡುತ್ತಿದ್ದಾರೆ. ಇನ್ನು ಇದೇ ವಿಚಾರಕ್ಕೆ ಅನಿಕ್ ಕಪೂರ್ ಸಿಕ್ಕಾಪಟ್ಟೆ ಟ್ರೋಲ್ ಆಗುವಂತಾಗಿದೆ. ಇನ್ನು ಬಾಲಿವುಡ್‌ನಲ್ಲಿ ಸೆಲ್ಫಿ ಹುಚ್ಚು ಯಾರಿಗೆ ಹೆಚ್ಚು ಎನ್ನುವ ಪ್ರಶ್ನೆಗೆ ಅರ್ಜುನ್ ಕಪೂರ್‌ ಎಂದು ವರುಣ್ ಧವನ್ ಉತ್ತರಿಸಿದ್ದಾರೆ. ಅಲ್ಲದೆ, ರಾಂಗ್‌ ಸ್ಕ್ರಿಪ್ಟ್‌ಗಳನ್ನು ಹೆಚ್ಚು ಆಯ್ಕೆ ಮಾಡಿಕೊಳ್ಳುವುದು ಕೂಡ ಅರ್ಜುನ್ ಕಪೂರ್ ಎಂದ ವರುಣ್ ಹೇಳಿದ್ದಾರೆ. ಇದೇ ಗುರುವಾರ ಕಂಪ್ಲೀಟ್ ಎಪಿಸೋಡ್ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ.

  ಅನಿಲ್ ಕಪೂರ್ ಕನ್ನಡ ಸಿನಿರಸಿಕರಿಗೂ ಚಿರಪರಿಚಿತ ಹೆಸರು. ಮಣಿರತ್ನಂ ನಿರ್ದೇಶನದ ಕನ್ನಡದ 'ಪಲ್ಲವಿ ಅನುಪಲ್ಲವಿ' ಚಿತ್ರದಲ್ಲಿ ಅನಿಲ್ ಹೀರೊ ಆಗಿ ನಟಿಸಿದ್ದರು. ಮುಂದೆ ಬಾಲಿವುಡ್‌ನಲ್ಲಿ ಸೂಪರ್ ಸ್ಟಾರ್ ಆಗಿ ಮೆರೆದರು. 'ಪಲ್ಲವಿ ಅನುಪಲ್ಲವಿ' ಸಿನಿಮಾ ನಿರ್ದೇಶಕರಾಗಿ ಮಣಿರತ್ನಂ ಹಾಗೂ ಹೀರೊ ಆಗಿ ಅನಿಲ್ ಕಪೂರ್‌ಗೆ ಒಳ್ಳೆ ಬ್ರೇಕ್‌ ಕೊಟ್ಟಿತ್ತು. ಬಾಲಿವುಡ್‌ನಲ್ಲಿ ಅನಿಲ್ ಕಪೂರ್ ಸಖತ್ ಬ್ಯುಸಿಯಾಗಿದ್ದಾರೆ. 'ಫೈಟರ್', 'ನೋ ಎಂಟ್ರಿ ಮೈನ್ ಎಂಟ್ರಿ' ಹಾಗೂ ರಣ್‌ಬೀರ್ ಕಪೂರ್, ರಶ್ಮಿಕಾ ಮಂದಣ್ಣ ನಟನೆಯ 'ಅನಿಮಲ್' ಸಿನಿಮಾಗಳಲ್ಲಿ ನಟಿಸ್ತಿದ್ದಾರೆ.

  English summary
  koffee with karan Promo anil kapoor says Making Love makes him feel younger. Actors Anil Kapoor and Varun Dhawan will be seen together on the latest episode of Koffee With Karan season.
  Tuesday, September 13, 2022, 9:24
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X