For Quick Alerts
  ALLOW NOTIFICATIONS  
  For Daily Alerts

  ಉರ್ಕೊಳ್ಳೋರ್ ಉರ್ಕೊಳ್ಳಲಿ: ಅಕ್ಷಯ್ ಕುಮಾರ್ ತೆಕ್ಕೆಯಲ್ಲಿ ಗ್ರ್ಯಾಂಡ್ ಎಂಟ್ರಿ ಕೊಟ್ಟ ಸಮಂತಾ!

  |

  ಕರಣ್‌ ಜೋಹರ್ ನಡೆಸಿಕೊಡುವ 'ಕಾಫಿ ವಿಥ್ ಕರಣ್ ಶೋ ಈ ಬಾರಿ ಒಟಿಟಿಯಲ್ಲಿ ಪ್ರಸಾರ ಆಗುತ್ತಿರುವುದೇ ವಿಶೇಷ. ಈಗಾಗಲೇ ಎರಡು ಎಪಿಸೋಡ್‌ಗಳು ಒಟಿಟಿ ವೀಕ್ಷಕರಿಗೆ ಸಖತ್ ಕಿಕ್ ಕೊಟ್ಟಿದೆ. ಈಗ ಮೂರನೇ ಎಪಿಸೋಡ್‌ಗೆ ಕ್ಷಣಗಣನೆ ಶುರುವಾಗಿದೆ.

  ಒಟಿಟಿ ವೇದಿಕೆ ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ 'ಕಾಫಿ ವಿಥ್ ಕರಣ್ ಸೀಸನ್ 7'ನ ಮೂರನೇ ಎಪಿಸೋಡ್ ಜುಲೈ 21ರಂದು ಸಂಜೆ 7ಕ್ಕೆ ಪ್ರೀಮಿಯರ್ ಆಗಲಿದೆ. ಈ ಬಾರಿ ಅಕ್ಷಯ್ ಕುಮಾರ್ ಹಾಗೂ ಟಾಲಿವುಡ್ ನಟಿ ಸಮಂತಾ ಭಾಗವಹಿಸಲಿದ್ದಾರೆ.

  'ಬಂಧನದಲ್ಲಿಡುವ ಪ್ರೀತಿಗಿಂತ ಸ್ವತಂತ್ರವಾಗಿ ಬಿಡುವ ಪ್ರೀತಿ ದೊಡ್ಡದು': ಸಮಂತಾಗೆ ನಾಗಚೈತನ್ಯ ಟಾಂಗ್?'ಬಂಧನದಲ್ಲಿಡುವ ಪ್ರೀತಿಗಿಂತ ಸ್ವತಂತ್ರವಾಗಿ ಬಿಡುವ ಪ್ರೀತಿ ದೊಡ್ಡದು': ಸಮಂತಾಗೆ ನಾಗಚೈತನ್ಯ ಟಾಂಗ್?

  ಈಗಾಗಲೇ ಕರಣ್‌ ಜೋಹರ್ ಮೂರನೇ ಎಪಿಸೋಡ್‌ನ ಪ್ರೋಮೊ ರಿಲೀಸ್ ಮಾಡಿದ್ದಾರೆ. ಇಷ್ಟು ದಿನ ಈ ಎಪಿಸೋಡ್‌ಗಾಗಿ ಕಾದು ಕೂತಿದ್ದ ಇಬ್ಬರ ಅಭಿಮಾನಿಗಳಿಗೂ ಈ ಪ್ರೋಮೊ ನೋಡಿ ಥ್ರಿಲ್ ಆಗಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಸಮಂತಾ ಹಾಗೂ ಅಕ್ಷಯ್ ಕುಮಾರ್ ಎಂಟ್ರಿ ಇಂಟರ್‌ನೆಟ್‌ಗೆ ಕಿಚ್ಚು ಹಚ್ಚಿದೆ.

  ಕಿಚ್ಚು ಹಚ್ಚಿದ ಅಕ್ಷಯ್- ಸಮಂತಾ ಎಂಟ್ರಿ

  ಕಿಚ್ಚು ಹಚ್ಚಿದ ಅಕ್ಷಯ್- ಸಮಂತಾ ಎಂಟ್ರಿ

  'ಕಾಫಿ ವಿಥ್ ಕರಣ್ ಸೀಸನ್ 7' ಆರಂಭಕ್ಕೂ ಮುನ್ನವೇ ಒಂದು ಪ್ರೋಮೊ ರಿಲೀಸ್ ಆಗಿತ್ತು. ಇದರಲ್ಲಿ ಅಕ್ಷಯ್ ಕುಮಾರ್ ಹಾಗೂ ಸಮಂತಾ ಎಪಿಸೋಡ್ ಬಗ್ಗೆ ಸುಳಿವು ನೀಡಲಾಗಿತ್ತು. ಆದರೆ, ಎರಡು ಎಪಿಸೋಡ್ ರಿಲೀಸ್ ಆದ ಬಳಿಕವೂ ಅಕ್ಷಯ್ ಹಾಗೂ ಸಮಂತಾ ಎಪಿಸೋಡ್‌ ಬಗ್ಗೆ ಸುಳಿವನ್ನು ನೀಡಿರಲಿಲ್ಲ. ಕೊನೆಗೂ ಇದೇ ವಾರ ಇಬ್ಬರೂ ಕರಣ್‌ ಟಾಕ್ ಶೋನಲ್ಲಿ ಭಾಗಿಯಾಗಲಿದ್ದಾರೆ. ಆದರೆ, ಅಕ್ಷಯ್ ತೆಕ್ಕೆಯಲ್ಲಿ ಸಮಂತಾ ಎಂಟ್ರಿ ಕೊಟ್ಟಿದ್ದು, ಸೋಶಿಯಲ್ ಮೀಡಿಯಾದಲ್ಲಿ ಕಿಚ್ಚು ಹಚ್ಚಿದೆ.

  ಸಮಂತಾ ಅಭಿನಯದ 'ಯಶೋದಾ' ಶೂಟಿಂಗ್ ಫಿನಿಶ್: ಕನ್ನಡದಲ್ಲಿ ರಿಲೀಸ್ ಯಾವಾಗ?ಸಮಂತಾ ಅಭಿನಯದ 'ಯಶೋದಾ' ಶೂಟಿಂಗ್ ಫಿನಿಶ್: ಕನ್ನಡದಲ್ಲಿ ರಿಲೀಸ್ ಯಾವಾಗ?

  ಅನ್‌ಹ್ಯಾಪಿ ಮದುವೆಗೆ ಕರಣ್ ಕಾರಣ

  ಅನ್‌ಹ್ಯಾಪಿ ಮದುವೆಗೆ ಕರಣ್ ಕಾರಣ

  ಹಳೆಯ ಪ್ರೋಮೊದಲ್ಲಿರುವ ಕಂಟೆಂಟ್‌ ಅನ್ನೇ ಹೊಸ ಪ್ರೋಮೊದಲ್ಲೂ ಸೇರಿಸಲಾಗಿದೆ. ಕರಣ್ ಜೋಹರ್ ಮದುವೆ ಬಗ್ಗೆ ಪ್ರಶ್ನೆ ಕೇಳಿದಾಗ, ಸಮಂತಾ ಕೊಟ್ಟ ಉತ್ತರ ಸಂಚಲನ ಸೃಷ್ಟಿಸಿತ್ತು. ಈಗ ಅದನ್ನು ಹೊಸ ಪ್ರೋಮೊದಲ್ಲೂ ಸೇರಿಸಲಾಗಿದೆ. ಕರಣ್ ಪ್ರಶ್ನೆಗೆ " ಮದುವೆ ಮುರಿದು ಬೀಳಲು ನೀವೇ ಕಾರಣ" ಎಂದು ಸಮಂತಾ ಬಾಲಿವುಡ್ ನಿರ್ದೇಶಕ ಕಮ್ ನಿರ್ಮಾಪಕ ಕರಣ್‌ ಜೋಹರ್‌ಗೆ ಟಾಂಗ್ ಕೊಟ್ಟಿದ್ದರು. ಸಮಂತಾಗೆ ಅಕ್ಷಯ್ ಕುಮಾರ್ ಸಾಥ್ ಕೊಟ್ಟಿದ್ದು, "ನನಗೊಬ್ಬರು ಜೋಡಿ ಸಿಕ್ಕಿದ್ದಾರೆ." ಎಂದು ಕರಣ್ ಕಾಲೆಳೆದಿದ್ದಾರೆ.

  ಸಮಂತಾ-ಅಕ್ಷಯ್ ಮೋಜು-ಮಸ್ತಿ

  ಸಮಂತಾ-ಅಕ್ಷಯ್ ಮೋಜು-ಮಸ್ತಿ

  ಸಮಂತಾ ಹಾಗೂ ಅಕ್ಷಯ್ ಕುಮಾರ್ ಇಬ್ಬರೂ ಅತಿಥಿಗಳಾಗಿ ಬಂದಿರೋ ಎಪಿಸೋಡ್‌ನಲ್ಲಿ ಮೋಜು-ಮಸ್ತಿ ಇರುತ್ತೆ ಅನ್ನೋದು ಕನ್ಫರ್ಮ್ ಆಗಿದೆ. ಕರಣ್ ಜೋಹರ್ ಕೇಳುವ ಪ್ರಶ್ನೆಗಳಿಗೆ ಸಮಂತಾ ನೇರವಾಗಿ ಉತ್ತರ ನೀಡುತ್ತಾರಾ? ವಿಚ್ಛೇದನಕ್ಕೆ ಕಾರಣ ಕೊಡುತ್ತಾರಾ? ಇಲ್ಲಾ ತಪ್ಪಿಸಿಕೊಳ್ಳುತ್ತಾರಾ? ಅನ್ನುವ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಲೇ ಇದೆ. ಇದರೊಂದಿಗೆ ಅಕ್ಷಯ್ ಕುಮಾರ್ ಹಾಗೂ ಸಮಂತಾ ಕಾಂಬಿನೇಷನ್ ಕಿಕ್ ಕೊಡೋದು ಗ್ಯಾರಂಟಿ.

  ಸಮಂತಾ ಬಾಲಿವುಡ್ ಎಂಟ್ರಿಗೆ ಕರಣ್ ಸಾಥ್

  ಸಮಂತಾ ಈಗಾಗಲೇ ತನ್ನ ಅಭಿನಯದಿಂದ ಗಮನ ಸೆಳೆದಿದ್ದಾರೆ. ಈಗಾಗಲೇ ಬಂದಿರೋ 'ದಿ ಫ್ಯಾಮಿಲಿ ಮ್ಯಾನ್ 2' ವೆಬ್‌ ಸೀರಿಸ್ ಮೂಲಕ ಬಾಲಿವುಡ್ ಮಂದಿಗೂ ಚಿರಪರಿಚಿತರಾಗಿದ್ದಾರೆ. ಈ ಮಧ್ಯೆ ಸಮಂತಾ ಬಾಲಿವುಡ್‌ ಎಂಟ್ರಿ ಬಗ್ಗೆನೂ ಮಾತುಕತೆ ನಡೆಯುತ್ತಿದೆ. ಮೂಲಗಳ ಪ್ರಕಾರ, ಸಮಂತಾ ಬಾಲಿವುಡ್‌ ಗ್ರ್ಯಾಂಡ್ ಎಂಟ್ರಿಗೆ ಕರಣ್ ಜೋಹರ್ ಶೋ ವೇದಿಕೆಯಾಗಲಿದೆ. ಅಲ್ಲದೆ ಸ್ವತ: ಕರಣ್ ಜೋಹರ್ ನಟಿ ಸಮಂತಾಗೆ ಸಾಥ್ ನೀಡಲಿದ್ದಾರೆ.

  English summary
  Koffee With Karan Season 7: Akshay Kumar Carries Samantha In Disney+ Hotstar Show, Know More,
  Tuesday, July 19, 2022, 20:29
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X