'ಕಾಫಿ ವಿತ್ ಕರಣ್‌ ಶೋ' ಸ್ಥಗಿತ ಇಲ್ಲ, ಟಿವಿ ಅಲ್ಲ.. ಒಟಿಟಿಗೆ ಲಗ್ಗೆ

ಬಾಲಿವುಡ್‌ನಲ್ಲಿ ದೊಡ್ಡ ಮಟ್ಟದಲ್ಲಿಯೇ ಸುದ್ದಿಯಾಗಿದ್ದ ಶೋ ಅಂದರೆ ಅದು 'ಕಾಫಿ ವಿತ್ ಕರಣ್‌' ಶೋ. ಅಷ್ಟು ಮಟ್ಟಿಗೆ ಫ್ಯಾನ್ಸ್ ಕ್ರೇಜ್ ಹೊಂದಿದ್ದ ಈ ಶೋ ನೋಡಲು ಟಿವಿ ಪ್ರೇಕ್ಷಕರು ಕಾದು ಕೂರುತ್ತಿದ್ದರು. ಬಾಲಿವುಡ್‌ನ ಖ್ಯಾತ ಫಿಲ್ಮ್ ಮೇಕರ್ ಕರಣ್ ಜೋಹರ್ ಈ ಶೋವನ್ನು ನಡೆಸಿಕೊಡುತ್ತಿದ್ದರು. ಈ 'ಕಾಫಿ ವಿತ್ ಕರಣ್' ಶೋನಲ್ಲಿ ಹಲವು ಬಾಲಿವುಡ್ ತಾರೆಯರು ಭಾಗಿಯಾಗಿ ತಮ್ಮ ಮನದಾಳದ ಮಾತುಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ. ಎಷ್ಟೋ ಬಾರಿ ಯಾವುದೇ ಫಿಲ್ಟರ್‌ ಇಲ್ಲದೆ, ಇದ್ದಿದ್ದು ಇದ್ದ ಹಾಗೆ ಹೇಳಿಕೊಂಡ ಹಲವು ಸೆಲೆಬ್ರೆಟಿಗಳು ವಿವಾದಕ್ಕೆ ಸಿಲುಕಿದ ಉದಾಹರಣೆಗಳೂ ನಮ್ಮ ಮುಂದೆಯೇ ಇದೆ. ಆದರೆ ಕರಣ್ ಜೋಹರ್ ದಿಢೀರ್ ಅಂತ ಈ ಕಾರ್ಯಕ್ರಮ ಇನ್ನು ಮುಂದೆ ಪ್ರಸಾರವಾಗುವದಿಲ್ಲ ಎಂದು ಹೇಳುವ ಮೂಲಕ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್ ಕೊಟ್ಟಿದ್ದರು.

ಹೌದು ಕರಣ್ ಜೋಹರ್‌ ತಮ್ಮ ಹೆಸರಿನಲ್ಲೇ ನಡೆಸಿಕೊಡುವ ಈ ಶೋ ಬಾಲಿವುಡ್‌ನ ಟೆಲಿವಿಷನ್‌ನಲ್ಲೇ ಅಗ್ರ ಸ್ಥಾನದಲ್ಲಿತ್ತು. ಈ ಶೋಗೆ ಸಿನಿ ಪ್ರೇಕ್ಷಕರ ನೆಚ್ಚಿನ ಸ್ಟಾರ್‌ಗಳು ಆಗಮಿಸಿ ಕಾಫಿ ಕುಡಿಯುತ್ತಾ ತಮ್ಮ ಜೀವನದ ಪ್ರತಿಯೊಂದು ಘಟನೆಯ ಬಗ್ಗೆಯೋ ಹೇಳುತ್ತಿದ್ದರು. ಇಡೀ ಶೋ ಸಂಪೂರ್ಣವಾಗಿ ಎಮೋಷನಲ್ ಹಾಗೂ ಹಾಸ್ಯಮಯವಾಗಿರುತ್ತಿತ್ತು. ಆದರೆ. ಸಡನ್ ಆಗಿ ಕರಣ್ ಶೋ ನಡೆಯಲ್ಲ ಎಂದು ಹೇಳಿದ್ದು, ಶೋ ನೋಡುವ ವೀಕ್ಷಕರಿಗೆ ಬೇಸರ ತರಿಸಿತ್ತು.

ಬಾಲಿವುಡ್‌ನಲ್ಲಿ ಕರಣ್‌ ಹೆಸರಿಗೆ ಒಳ್ಳೆಯ ನೇಮ್‌ ಫೇಮ್‌ ಇದೆ. ಹೀಗಾಗಿ ಈ ಕಾರ್ಯಕ್ರಮಕ್ಕೆ ಬಿಗ್‌ ಸ್ಟಾರ್‌ಗಳೇ ಆಗಮಿಸಿ ತಮ್ಮ ಲೈಫ್‌ ಬಗ್ಗೆ ಓಪನ್‌ ಆಗಿ ಮಾತನಾಡುತ್ತಿದ್ದರು. ಭಿನ್ನ ವಿಭಿನ್ನ ಗೇಮ್‌ಗಳು ಸಹ ಈ ಶೋನಲ್ಲಿ ಇರುತ್ತಿದ್ದವು. ಆಗಾಗ ಫನ್ನಿ ಫನ್ನಿ ಜೋಕ್‌ಗಳು ಸಹ ಇರುತ್ತಿದ್ದವು. ಹೀಗಾಗಿ ಈ ಶೋ ಕೂಡ ಎಲ್ಲರ ಮನೆ-ಮನಗಳಲ್ಲಿ ನೆಚ್ಚಿನ ಶೋ ಆಗಿ ಉಳಿದುಕೊಂಡಿತ್ತು. ಮನೆ ಮಂದಿಯೆಲ್ಲಾ ಕುಳಿತು ಈ ಶೋನ ಪ್ರೀತಿಯಿಂದ ನೋಡುತ್ತಿದ್ದರು. ಆದರೆ, ಕರಣ್‌ ಆ ನಿರ್ಧಾರದಿಂದಾಗಿ ಹಲವು ಜನರಿಗೆ ಅಸಮಾಧಾನ ಮೂಡಿಸಿತ್ತು. ಆದರೆ, ಈಗ ಕರಣ್‌ ಮತ್ತೊಂದು ಬ್ರೇಕಿಂಗ್ ನ್ಯೂಸ್‌ ಕೊಡುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ.

'ಕಾಫಿ ವಿತ್ ಕರಣ್' ಶೋ ನಡೆಯಲ್ಲ ಎಂದಿದ್ದ ಕರಣ್

"ಹಲೋ ಕಳೆದ ಆರು ಸೀಸನ್‌ಗಳಿಂದ "ಕಾಫಿ ವಿತ್ ಕರಣ್" ಶೋ ನನ್ನ ಹಾಗೂ ನಿಮ್ಮ ಜೀವನದ ಒಂದು ಭಾಗವಾಗಿದೆ. ಈ ಕಾರ್ಯಕ್ರಮದಿಂದ ನಾವು ಒಂದು ರೀತಿಯಲ್ಲಿ ಪರಿಣಾಮ ಬೀರಿದ್ದೇವೆ ಹಾಗೂ ಪಾಪ್‌ ಸಂಸ್ಕೃತಿಯ ಇತಿಹಾಸದಲ್ಲಿ ಗುರುತಿಸಿಕೊಂಡಿದ್ದೇವೆ ಎಂದು ನಾನು ಭಾವಿಸುತ್ತೇನೆ. ಈಗ ಭಾರವಾದ ಹೃದಯದಿಂದಲೇ 'ಕಾಫಿ ವಿತ್ ಕರಣ್' ಶೋ ಬರುವುದಿಲ್ಲ ಎಂದು ನಾನು ಘೋಷಿಸುತ್ತೇನೆ." ಎಂದು ಟ್ವೀಟ್‌ ಮಾಡಿ ಅಭಿಮಾನಿಗಳಿಗೆ ಶಾಕ್‌ ಕೊಟ್ಟಿದ್ದರು..

 ಶೋ ನಿಲ್ಲಿಸಬೇಡಿ ಎಂದು ಒತ್ತಾಯ

ಶೋ ನಿಲ್ಲಿಸಬೇಡಿ ಎಂದು ಒತ್ತಾಯ

ಕರಣ್ ಜೋಹರ್ ಈ ಶಾಕಿಂಗ್ ನ್ಯೂಸ್‌ ಬಾಲಿವುಡ್‌ನಲ್ಲಿ ಭಾರೀ ಸಂಚಲನ ಮೂಡಿಸಿತ್ತು. ಏಕೆಂದರೆ. ಈ ಶೋಗೆ ಅಪಾರ ಅಭಿಮಾನಿಗಳಿದ್ದರು. ಆದರೆ, ಈ ರೀತಿ ದಿಢೀರ್‌ ಆಗಿ ಕರಣ್ ಈ ನಿರ್ಧಾರ ಕೇಳಿ ಹಲವರಿಗೆ ಬೇಸರ ಉಂಟಾಗಿತ್ತು. ಕೆಲವರು 'ಕಾಫಿ ವಿತ್ ಕರಣ್' ಶೋ ಮುಕ್ತಾಯಗೊಂಡಿದೆ. ಇನ್ನು ಮುಂದೆ ಬರಲ್ಲಾ ಎಂದು ಅಸಮಾಧಾನಗೊಂಡಿದ್ದರು. ಕೆಲವರು ಈ ಶೋ ನಿಲ್ಲಿಸುವುದು ಬೇಡ ಕರಣ್‌ ಮತ್ತೆ ಶೋ ನಡೆಸಿಕೊಡಿ ಎಂದು ಕರಣ್ ಟ್ವೀಟ್‌ಗೆ ಮರು ಟ್ವೀಟ್ ಮಾಡಿ ಮನವಿ ಮಾಡಿಕೊಂಡಿದ್ದರು. ಆ ಮಟ್ಟಿಗೆ ಕರಣ್‌ ನಡೆಸಿಕೊಡುತ್ತಿದ್ದ ಈ ಶೋ ಬಾಲಿವುಡ್‌ನಲ್ಲಿ ಹೆಸರು ಮಾಡಿತ್ತು. ಹೀಗಾಗಿ ಶೋ ಸ್ಥಗಿತ ಬೇಡ ಎಂದು ಹಲವು ಮಂದಿ ಒಕ್ಕೊರಲಿನಿಂದ ಮನವಿ ಮಾಡಿಕೊಂಡಿದ್ದರು. ಸದ್ಯ ಅಂತಹ ಅಭಿಮಾನಿಗಳಿಗೆ ಕರಣ್‌ ಸರ್ಪೈಸ್‌ವೊಂದನ್ನು ಕೊಟ್ಟಿದ್ದಾರೆ.

ಅಭಿಮಾನಿಗಳನ್ನು ಫೂಲ್‌ ಮಾಡಿದ ಕರಣ್

'ಕಾಫಿ ವಿತ್ ಕರಣ್‌' ಶೋ ಇನ್ನು ಮುಂದೆ ಪ್ರಸಾರವಾಗಲ್ಲ ಅಂತ ಅಭಿಮಾನಿಗಳಿಗೆ ಶಾಕ್ ಕೊಟ್ಟಿದ್ದ ಕರಣ್ ಈಗ ಸರ್ಪೈಸ್‌ ಕೊಟ್ಟಿದ್ದಾರೆ. ಯೆಸ್‌ ಮತ್ತೆ 'ಕಾಫಿ ವಿತ್ ಕರಣ್' ಶೋ ಬರಲಿದೆ ಎಂದು ಹೇಳುವ ಮೂಲಕ ಅಭಿಮಾನಿಗಳಲ್ಲಿ ಆಶ್ಚರ್ಯ ಮೂಡಿಸಿದ್ದಾರೆ. ಈ ಬಗ್ಗೆ ಮತ್ತೊಂದು ಟ್ವಿಟ್‌ ಮಾಡಿರುವ ಕರಣ್, ಕಾಫಿ ವಿತ್ ಕರಣ್ ಕಾರ್ಯಕ್ರಮ ಟಿವಿಯಲ್ಲಿ ಹಿಂದಿರುಗುವುದಿಲ್ಲ. ಪ್ರತಿಯೊಂದು ಉತ್ತಮ ಕಥೆಗೆ ಉತ್ತಮ ತಿರುವು ಬೇಕಾಗಿರುವುದರಿಂದ 'ಕಾಫಿ ವಿತ್ ಕರಣ್' ಕಾರ್ಯಕ್ರಮದ 7 ನೇ ಆವೃತ್ತಿ ಡಿಸ್ನಿ + ಹಾಟ್‌ ಸ್ಟಾರ್‌ನಲ್ಲಿ ಪ್ರಸಾರವಾಗಲಿದೆ ಎಂದು ಘೋಷಿಸಲು ನಾನು ಸಂತೋಷ ಪಡುತ್ತೇನೆ ಎಂದು ಘೋಷಿಸಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ಫೂಲ್‌ ಮಾಡಿದ್ದಾರೆ.

 ಟಿವಿಯಲ್ಲಿ ಇಲ್ಲ, ಒಟಿಟಿಯಲ್ಲಿ ಪ್ರಸಾರ

ಟಿವಿಯಲ್ಲಿ ಇಲ್ಲ, ಒಟಿಟಿಯಲ್ಲಿ ಪ್ರಸಾರ

ಕರಣ್‌ ಜೋಹರ್ ಬೆಳಿಗ್ಗೆ ಕಾರ್ಯಕ್ರಮ ನಡೆಯಲ್ಲ ಅಂತ ಹೇಳಿ ಅಭಿಮಾನಿಗಳಿಗೆ ಬೇಸರ ತರಿಸಿತ್ತು. ಬಳಿಕ ಸಂಜೆ ವೇಳೆಗೆ ಶೋ ನಡೆಯುತ್ತೆ ಆದರೆ ಟಿವಿಯಲ್ಲಿ ಪ್ರಸಾರವಾಗಲ್ಲ ಬದಲಾಗಿ ಒಟಿಟಿ ಯಲ್ಲಿ ಪ್ರಸಾರ ಆಗುತ್ತೆ ಅಂತ ಹೇಳಿದ್ದರು. ಭಾರತದಾದ್ಯಂತ ದೊಡ್ಡ ದೊಡ್ಡ ತಾರೆಯರು ನನ್ನೊಂದಿಗೆ ಕಾಫಿ ಕುಡಿಯುತ್ತಾ ಮಾತುಕತೆ ನಡೆಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಕೆಲವು ಆಟಗಳಿವೆ. ತಾರೆಯರು ಕೆಲವು ಗಾಸಿಪ್‌ಗಳಿಗೆ ಪೂರ್ಣವಿರಾಮ ಇಡಲಿದ್ದಾರೆ. ಕೆಲವು ವರ್ಷಗಳಿಂದ ನಾವೆಲ್ಲರೂ ಅನುಭವಿಸಿದ ಸಂಕಟ, ನೋವು, ಪ್ರೀತಿ ಬಗ್ಗೆ ತಾರೆಯರು ಮನಬಿಚ್ಚಿ ಮಾತನಾಡಲಿದ್ದಾರೆ. ಅತಿ ಶೀಘ್ರದಲ್ಲೇ 'ಕಾಫಿ ವಿತ್ ಕರಣ್' ಸೀಸನ್ 7 ಕಾರ್ಯಕ್ರಮ ಒಟಿಟಿಯಲ್ಲಿ ಪ್ರಸಾರವಾಗಲಿದೆ ಎಂದು ಹೇಳುವ ಮೂಲಕ ಅಭಿಮಾನಿಗಳಿಗೆ ಸರ್ಪೈಸ್‌ ಕೊಟ್ಟು ಖುಷಿ ನೀಡಿದ್ದಾರೆ.

ಶೋ ಬರಲ್ಲಾ ಅಂದ್ಕೊಂಡಿದ್ದವರಿಗೆಲ್ಲಾ ಕರಣ್‌ ಸರ್ಫೈಸ್‌ ಕೊಟ್ಟು ಸರಿಯಾಗಿ ಫೂಲ್ ಮಾಡಿದ್ದಾರೆ. ಇನ್ಮೇಲೆ 7 ಆವೃತ್ತಿ ಒಟಿಟಿ ರಿಲೀಸ್ ಆಗಲಿದ್ದು, ಇದೇ ರೀತಿ ಪ್ರೀತಿ, ಆರ್ಶೀವಾದ ಶೋಗೆ ಬೇಕಿದೆ. 7 ಆವೃತ್ತಿಯ 'ಕಾಫಿ ವಿತ್ ಕರಣ್‌' ಶೋ ಸಕ್ಸಸ್ ಆಗುವ ಎಲ್ಲಾ ನಿರೀಕ್ಷೆಯೂ ಇದೆ.

More from Filmibeat

English summary
Koffee With Karan Show Not To Discontinue Will Telecast In Disney Hotstar Says Karan Johar, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X