ವಿವಾದಗಳೇನೇ ಆಗಲಿ ಮತ್ತೆ ಬರ್ತಿದೆ 'ಕಾಫಿ ವಿಥ್ ಕರಣ್': ಆದರೆ ಅತಿಥಿಗಳೇ ಬರಲೊಲ್ಲರು!

'ಕಾಫಿ ವಿತ್ ಕರಣ್' ಟಾಕ್ ಶೋ ಬಾಲಿವುಡ್‌ನ ಜನಪ್ರಿಯ ಟಾಕ್ ಶೋ. ನಿರ್ದೇಶಕ, ನಿರ್ಮಾಪಕ ಕರಣ್ ಜೋಹರ್ ನಡೆಸಿಕೊಡುವ ಈ ಟಾಕ್ ಶೋನಲ್ಲಿ ಬಾಲಿವುಡ್‌ನ ಖ್ಯಾತನಾಮರೆಲ್ಲ ಹಲವು ಭಾರಿ ಭಾಗವಹಿಸಿದ್ದಾರೆ.

ಆದರೆ ಈ ಶೋ ಸೃಷ್ಟಿಸಿದಷ್ಟು ವಿವಾದ ಹಿಂದಿಯ ಇನ್ನಾವುದೇ ಟಾಕ್ ಶೋ ಸೃಷ್ಟಿಸಿಲ್ಲ ಎನಿಸುತ್ತದೆ. ಅತಿಥಿಗಳನ್ನು ಕರೆತರುವ ಕರಣ್ ಜೋಹರ್ ಅವರೊಟ್ಟಿಗೆ ತೀರ ಖಾಸಗಿ ಪ್ರಶ್ನೆಗಳನ್ನು ಸಹ ಕೇಳಿದ್ದಿದೆ. ಜೊತೆಗೆ ಉದ್ಯಮದಲ್ಲಿ ಒಬ್ಬರ ವಿರುದ್ಧ ಒಬ್ಬರಿಗೆ ದ್ವೇಷ ಬೆಳೆಯುವಂಥಹಾ ಪ್ರಶ್ನೆಗಳನ್ನೂ ಕೇಳುತ್ತಾರೆ.

ಹಲವು ವಿವಾದಗಳಿಗೆ ಕಾರಣವಾಗಿದ್ದ ಕಾಫಿ ವಿತ್ ಕರಣ್ ಕಾರ್ಯಕ್ರಮವನ್ನು ರದ್ದು ಮಾಡುವಂತೆ ಹಲವು ಬಾರಿ ಒತ್ತಾಯಗಳು ಕೇಳಿ ಬಂದಿವೆ. ಹೊರಗಿನಿಂದ ಮಾತ್ರವಲ್ಲ ಉದ್ಯಮದ ಒಳಗೆಯೇ ಹಲವು ನಟ-ನಟಿಯರು ಕಾಫಿ ವಿತ್ ಕರಣ್ ವಿರುದ್ಧ ಪ್ರತಿಭಟನೆ ಮಾಡಿದ್ದಿದೆ. ಇಷ್ಟೆಲ್ಲ ಆದರೂ ಕಾಫಿ ವಿತ್ ಕರಣ್ ಶೋ ಮತ್ತೆ ಪ್ರಸಾರವಾಗುತ್ತಿದೆ!

ಮತ್ತೆ ಪ್ರಸಾರವಾಗುತ್ತಿದೆ 'ಕಾಫಿ ವಿತ್ ಕರಣ್'

ಮತ್ತೆ ಪ್ರಸಾರವಾಗುತ್ತಿದೆ 'ಕಾಫಿ ವಿತ್ ಕರಣ್'

ಹೌದು, 'ಕಾಫಿ ವಿತ್ ಕರಣ್' ಟಾಕ್ ಶೋ ಮತ್ತೆ ಪ್ರಸಾರವಾಗುತ್ತಿದೆ. 2004 ರಲ್ಲಿ ಮೊದಲ ಬಾರಿಗೆ ಪ್ರಾರಂಭವಾದ 'ಕಾಫಿ ವಿತ್ ಕರಣ್' ಕಾರ್ಯಕ್ರಮ ಆರು ಸೀಸನ್‌ಗಳನ್ನು ಮುಗಿಸಿದ್ದು ಈ ಬಾರಿಯದ್ದು ಏಳನೇ ಸೀಸನ್ ಆಗಿದೆ. ಆದರೆ ಈ ಬಾರಿ ವಿಶೇಷವಾಗಿ ಒಟಿಟಿಯಲ್ಲಿ ಈ ಸೀಸನ್ ಪ್ರಸಾರವಾಗುತ್ತಿದೆ. ಡಿಸ್ನಿ ಹಾಟ್‌ ಸ್ಟಾರ್ ಪ್ಲಸ್‌ನಲ್ಲಿ ಬಾರಿಯ ಕಾಫಿ ವಿತ್ ಕರಣ್ ಸ್ಟ್ರೀಮ್ ಆಗಲಿದೆ.

ಸೆಲೆಬ್ರಿಟಿಗಳನ್ನು ಬೇಡಿಕೊಳ್ಳುತ್ತಿರುವ ಕರಣ್ ಜೋಹರ್

ಸೆಲೆಬ್ರಿಟಿಗಳನ್ನು ಬೇಡಿಕೊಳ್ಳುತ್ತಿರುವ ಕರಣ್ ಜೋಹರ್

ಈಗಾಗಲೇ ಹಲವು ಬಾಲಿವುಡ್ ಸೆಲೆಬ್ರಿಟಿಗಳು 'ಕಾಫಿ ವಿತ್ ಕರಣ್' ಶೋ ಬಗ್ಗೆ ಬಹಿರಂಗವಾಗಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಈ ಬಾರಿ ಯಾರು ಅತಿಥಿಗಳಾಗಿ ಶೋಗೆ ಆಗಮಿಸಲಿದ್ದಾರೆ ಎಂಬ ಬಗ್ಗೆ ಕುತೂಹಲವಿದೆ. ಈ ಸೀಸನ್‌ನ ಜಾಹೀರಾತು ಈಗಾಗಲೇ ಹೊರ ಬಂದಿದ್ದು, ಜಾಹೀರಾತಿನಲ್ಲಿ ಸಹ ಕರಣ್ ಜೋಹರ್, ಬಾಲಿವುಡ್‌ನ ಸೆಲೆಬ್ರಿಟಿಗಳಿಗೆ ಕರೆ ಮಾಡಿ ತನ್ನ ಶೋಗೆ ಆಗಮನಿಸುವಂತೆ ಬೇಡಿಕೊಳ್ಳುತ್ತಿದ್ದಾರೆ. ಹಲವು ಆಮಿಷಗಳನ್ನು ಸಹ ಒಡ್ಡುತ್ತಿದ್ದಾರೆ.

ಜುಲೈ 7 ರಿಂದ ಪ್ರಸಾರವಾಗಲಿದೆ ಶೋ

ಜುಲೈ 7 ರಿಂದ ಪ್ರಸಾರವಾಗಲಿದೆ ಶೋ

ಆದರೆ ಜಾಹೀರಾತಿನಲ್ಲಿ ಕರಣ್ ಜೋಹರ್ ಹೇಳಿರುವಂತೆ, ಯಾರು ಬರಲಿ ಬರದೇ ಇರಲಿ ನಾನು ಈ ಶೋ ಅನ್ನು ಮಾಡಿಯೇ ಮಾಡುತ್ತೇನೆ. ಏಕೆಂದರೆ ಜನಕ್ಕೆ ಈ ಶೋ ಮೇಲೆ ಪ್ರೀತಿ ಇದೆ ಎಂದಿದ್ದಾರೆ. 'ಕಾಫಿ ವಿತ್ ಕರಣ್'ನ ಸೀಸನ್ ಏಳು ಜುಲೈ 7ರಿಂದ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ಪ್ರಸಾರವಾಗಲಿದೆ. ಕಾರ್ಯಕ್ರಮದ ಮೊದಲ ಸೀಸನ್‌ಗೆ ಯಾರು ಅತಿಥಿಯಾಗಿ ಆಗಮಿಸಲಿದ್ದಾರೆ ಎಂಬುದು ಕುತೂಹಲ ಕೆರಳಿಸಿದೆ.

ಈ ಬಾರಿ ದಕ್ಷಿಣ ಭಾರತದ ಸೆಲೆಬ್ರಿಟಿಗಳು!

ಈ ಬಾರಿ ದಕ್ಷಿಣ ಭಾರತದ ಸೆಲೆಬ್ರಿಟಿಗಳು!

ಮೂಲಗಳ ಪ್ರಕಾರ ಈ ಬಾರಿಯ 'ಕಾಫಿ ವಿತ್ ಕರಣ್' ಶೋನಲ್ಲಿ ಬಾಲಿವುಡ್‌ನ ಸೆಲೆಬ್ರಿಟಿಗಳ ಬದಲಿಗೆ ದಕ್ಷಿಣ ಭಾರತದ ಸೆಲೆಬ್ರಿಟಿಗಳು ಪಾಲ್ಗೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಪ್ಯಾನ್ ಇಂಡಿಯಾ ಸಿನಿಮಾ ಕಲ್ಚರ್ ಪ್ರಾರಂಭವಾದ ಬಳಿಕ ಕರಣ್ ಜೋಹರ್ ಹಲವು ದಕ್ಷಿಣದ ಸಿನಿಮಾಗಳನ್ನು ಹಿಂದಿಯಲ್ಲಿ ಬಿಡುಗಡೆ ಮಾಡಿದ್ದು, ದಕ್ಷಿಣದ ಸಿನಿಮಾ ಮಂದಿಯ ಜೊತೆಗೆ ಉತ್ತಮ ಬಾಂಧವ್ಯ ನಿರ್ಮಿಸಿಕೊಂಡಿದ್ದಾರೆ. ಹಾಗಾಗಿ ಈ ಬಾರಿಯ ಶೋಗೆ ಪ್ರಭಾಸ್, ಯಶ್, ಜೂ ಎನ್‌ಟಿಆರ್, ರಾಮ್ ಚರಣ್ ದಂಪತಿ, ಕನ್ನಡತಿ ರಶ್ಮಿಕಾ ಮಂದಣ್ಣ, ಸುದೀಪ್ ಇನ್ನೂ ಹಲವರು ಆಗಮಿಸಲಿದ್ದಾರೆ ಎನ್ನಲಾಗುತ್ತಿದೆ.

More from Filmibeat

English summary
coffee with Karan talk show will stream on Disney plus Hotstar from July 07. Many new celebrities will appear in the show this time.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X