OTT releases this week: ಇಂಡಿಪೆಂಡೆನ್ಸ್ ಡೇ ವೀಕೆಂಡ್‌ನಲ್ಲಿ 18 ಸಿನಿಮಾ, ಸೀರಿಸ್ ಮನೆಯಲ್ಲೇ ನೋಡಿ
ಸ್ವಾತಂತ್ರ್ಯ ದಿನಾಚರಣೆ, ವರಲಕ್ಷ್ಮಿ ಹಬ್ಬ ಹಾಗೂ ಭಾನುವಾರ ಹೀಗೆ ಸಾಲು ಸಾಲು ರಜಾ ದಿನಗಳು ಬಂದಿವೆ. ಒಟ್ಟಾರೆ ಲಾಂಗ್ ವೀಕೆಂಡ್‌ನಲ್ಲಿ ದೊಡ್ಡ ದೊಡ್ಡ ಸಿನಿಮಾಗಳು ಪ್ರೇಕ್ಷಕರನ್ನು ರಂಜಿಸಲು ತೆರೆಗೆ ಬಂದಿವೆ. ಕನ್ನಡದಲ್ಲಿ 'ಕೃಷ್ಣಂ ಪ್ರಣಯ ಸಖಿ' ಹಾಗೂ 'ಗೌರಿ' ಚಿತ್ರಗಳು ರಿಲೀಸ್ ಆಗಿದೆ.
ತಮಿಳಿನ 'ತಂಗಲಾನ್' ಹಾಗೂ ತೆಲುಗಿನ 'ಡಬಲ್ ಇಸ್ಮಾರ್ಟ್ ಶಂಕರ್' ಸಿನಿಮಾಗಳು ಪ್ರೇಕ್ಷಕರನ್ನು ರಂಜಿಸುತ್ತಿವೆ. ಇತ್ತ ಓಟಿಟಿಯಲ್ಲೂ ಹಲವು ಸಿನಿಮಾ ಹಾಗೂ ವೆಬ್ ಸೀರಿಸ್ ರಿಲೀಸ್ ಆಗುತ್ತಿವೆ. ವೀಕ್ಷಕರನ್ನು ರಂಜಿಸುತ್ತಿವೆ. ವೀಕೆಂಡ್‌ನಲ್ಲಿ ಜನ ಮನೆಯಲ್ಲೇ ಕೂತು ಇಂಟ್ರೆಸ್ಟಿಂಗ್ ಸಿನಿಮಾಗಳನ್ನು ನೋಡಬಹುದು. ಈಗಾಗಲೇ ಒಂದಷ್ಟು ಸಿನಿಮಾ, ಸೀರಿಸ್ ಸ್ಟ್ರೀಮಿಂಗ್ ಆರಂಭಿಸಿದೆ.

ಅಮೇಜಾನ್ ಪ್ರೈಂ
1. ಕೋಟಿ
ಡಾಲಿ ಧನಂಜಯ್ ನಟನೆಯ 'ಕೋಟಿ' ಸಿನಿಮಾ ಸದ್ಯ ಅಮೇಜಾನ್ ಪ್ರೈಂನಲ್ಲಿ ವೀಕ್ಷಣೆಗೆ ಲಭ್ಯವಿದೆ. ಪರಮೇಶ್ವರ್ ಗುಂಡ್ಕಲ್ ನಿರ್ದೇಶನದ ಈ ಸಿನಿಮಾ ಜೂನ್ 14ಕ್ಕೆ ತೆರೆಗೆ ಬಂದಿತ್ತು. ಮೋಕ್ಷಾ ಕೌಶಲ್ ನಾಯಕಿಯಾಗಿ ನಟಿಸಿರುವ ಚಿತ್ರದಲ್ಲಿ ತಾರಾ, ರಂಗಾಯಣ ರಘು ಹಾಗೂ ರಮೇಶ್ ಇಂದಿರಾ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಚಿತ್ರಮಂದಿರಗಳಲ್ಲಿ 'ಕೋಟಿ' ಚಿತ್ರಕ್ಕೆ ದೊಡ್ಡಮಟ್ಟದಲ್ಲಿ ಸಕ್ಸಸ್ ಸಿಕ್ಕಿರಲಿಲ್ಲ. ಸದ್ಯ ಓಟಿಟಿಯಲ್ಲಿ ನೀವು ವೀಕೆಂಡ್ ಸಿನಿಮಾ ನೋಡಿ ಎಂಜಾಯ್ ಮಾಡಿ.
2. ವಾಸ್ಕೋಡಗಾಮ(ತಮಿಳು ಸಿನಿಮಾ) ಆಗಸ್ಟ್ 16
3. ಯೇ ಮೇರಿ ಫ್ಯಾಮಿಲಿ ಸೀಸನ್-4 (ಹಿಂದಿ ಸೀರಿಸ್) ಆಗಸ್ಟ್ 16
4. ಜಾಕ್‌ಪಾಟ್(ಇಂಗ್ಲೀಷ್ ಸಿನಿಮಾ) ಆಗಸ್ಟ್ 15
5. ಲೈಫ್ ಈಸ್ ಬ್ಯೂಟಿಫುಲ್(ಕೊರಿಯನ್ ಸಿನಿಮಾ)
ಜೀ-5
1. ಮನೋರಥಂಗಳ್
ಎಂಟು ಜನ ನಿರ್ದೇಶಕರು ಕಟ್ಟಿಕೊಟ್ಟಿರುವ ಸಣ್ಣ ಕಥೆಗಳ ಆಂಥಾಲಜಿ ವೆಬ್ ಸೀರಿಸ್ ಮನೋರಥಂಗಳ್. ಎಂ. ಟಿ ವಾಸುದೇವನ್ ನಾಯರ್ ಬರೆದ ಸಣ್ಣ ಕಥೆಗಳನ್ನು ಆಧರಿಸಿ ಈ ಸೀರಿಸ್ ನಿರ್ಮಿಸಲಾಗಿದೆ. ಮೋಹನ್ ಲಾಲ್, ಮಮ್ಮುಟಿ, ಫಹಾದ್ ಫಾಸಿಲ್, ಬಿಜು ಮೆನನ್ ಸೇರಿದಂತೆ ಘಟಾನುಘಟಿ ಕಲಾವಿದರು ಒಂದೊಂದು ಕಥೆಯಲ್ಲಿ ನಟಿಸಿದ್ದಾರೆ. ಕಮಲ್ ಹಾಸನ್ ನಿರೂಪಕನಾಗಿ ಕಥೆಗಳನ್ನು ವಿವರಿಸಿದ್ದಾರೆ. ಕನ್ನಡಕ್ಕೂ ಡಬ್ ಆಗಿ ಮನೋರಥಂಗಳ್ ಸ್ಟ್ರೀಮಿಂಗ್ ಆಗುತ್ತಿದೆ.
2. ಕಾಂಟಾಯೆ ಕಾಂಟಾಯೆ(ಹಿಂದಿ ಸಿನಿಮಾ) ಆಗಸ್ಟ್ 15

ಹಾಟ್‌ಸ್ಟರ್
1. ಮೈ ಪರ್ಫೆಕ್ಟ್ ಹಸ್ಬೆಂಡ್- ಆಗಸ್ಟ್ 16
2. ಡಾರ್ಲಿಂಗ್(ತೆಲುಗು ಸಿನಿಮಾ) ಆಗಸ್ಟ್ 16
ನೆಟ್‌ಫ್ಲಿಕ್ಸ್
1. ಕೆಂಗನ್ ಅಸುರ ಸೀಸನ್-2(ಜಪಾನೀಸ್ ವೆಬ್ ಸೀರಿಸ್)
2. ಎಮಿಲಿ ಇನ್ ಪ್ಯಾರೀಸ್ ಸೀನಸ್-4(ಇಂಗ್ಲೀಷ್ ಸೀರಿಸ್)
3. ದಿ ಯೂನಿಯನ್(ಇಂಗ್ಲೀಷ್ ಸಿನಿಮಾ) ಆಗಸ್ಟ್ 16
4. ಲವ್ ನೆಕ್ಸ್ಟ್ ಡೋರ್(ಕೊರಿಯನ್ ಸೀರಿಸ್) ಆಗಸ್ಟ್ 17
ಆಹಾ ಓಟಿಟಿ
1. ಎವೋಲ್(ತೆಲುಗು ಸಿನಿಮಾ) ಆಗಸ್ಟ್ 16
2. ಓ ಮಂಚಿ ಘೋಸ್ಟ್(ತೆಲುಗು ಸಿನಿಮಾ)
3. ವೇರೆ ಮಾಡಿ ಆಫಿಸ್-2(ತಮಿಳು ವೆಬ್ ಸೀರಿಸ್)
4. ಕೊಂಜಮ್ ಪೇಸಿನಾಲ್ ಎನ್ನ(ತಮಿಳು ಸಿನಿಮಾ) ಆಗಸ್ಟ್ 16
ಬುಕ್‌ಮೈ ಶೋ
1. ಡೆಸ್ಪಿಕಬಲ್ ಮಿ- 4(ಇಂಗ್ಲೀಷ್ ಸಿನಿಮಾ) ಆಗಸ್ಟ್ 16
ಜಿಯೋ ಸಿನಿಮಾ
1. ಬೆಲ್ ಎಯಿರ್ ಸೀಸನ್-3(ಇಂಗ್ಲೀಷ್ ಸೀರಿಸ್) ಆಗಸ್ಟ್ 16
ಸೋನಿ ಲಿವ್
1. ಚಮಕ್: ದಿ ಕನ್‌ಕ್ಲೂಷನ್(ಹಿಂದಿ ಸಿನಿಮಾ) ಆಗಸ್ಟ್ 16


Click it and Unblock the Notifications











