Kranti OTT: ತಿಂಗಳಿಗೂ ಮೊದ್ಲೆ ಓಟಿಟಿಗೆ 'ಕ್ರಾಂತಿ': 4 ಭಾಷೆಗಳಲ್ಲಿ ಸ್ಟ್ರೀಮಿಂಗ್: ಹಿಂದಿ ಕಥೆಯೇನು?
'ಕ್ರಾಂತಿ' ಚಿತ್ರತಂಡ ದಿಢೀರನೇ ಬ್ರೇಕಿಂಗ್ ನ್ಯೂಸ್ ಕೊಟ್ಟಿದೆ. ಸಿನಿಮಾ ಓಟಿಟಿ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಜನವರಿ 26ಕ್ಕೆ ತೆರಗಪ್ಪಳಿಸಿದ್ದ ಆಕ್ಷನ್ ಎಂಟರ್‌ಟೈನರ್ 'ಕ್ರಾಂತಿ' ಸಿನಿಮಾ 28 ದಿನಕ್ಕೆ ಡಿಜಿಟಲ್ ಫ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮಿಂಗ್ ಆಗ್ತಿದೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ಕ್ರಾಂತಿ' ಸಿನಿಮಾ ಕಳೆದೊಂದು ವರ್ಷದಿಂದ ಭಾರೀ ಸದ್ದು ಮಾಡಿತ್ತು. ಅಭಿಮಾನಿಗಳು ದೊಡ್ಡಮಟ್ಟದಲ್ಲಿ ಚಿತ್ರವನ್ನು ರಾಜ್ಯದ ಮೂಲೆಮೂಲೆಗೆ ಕೊಂಡೊಯ್ದಿದ್ದರು. ಒಂದೊಳ್ಳೆ ಸಂದೇಶದ ಜೊತೆಗೆ ಎಲ್ಲಾ ಕಮರ್ಷಿಯಲ್ ಅಂಶಗಳನ್ನು ಸೇರಿಸಿ ವಿ. ಹರಿಕೃಷ್ಣ ಈ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ. ಸದ್ಯ 25 ದಿನ ಪೂರೈಸಿ ಸಿನಿಮಾ ಥಿಯೇಟರ್‌ಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಇದರ ಬೆನ್ನಲ್ಲೇ ಸಿನಿಮಾ ಓಟಿಟಿ ರಿಲೀಸ್ ಡೇಟ್ ಫಿಕ್ಸ್ ಆಗಿದೆ.
ಬಿಡುಗಡೆಗೂ ಮೊದ್ಲು ಭಾರೀ ಹೈಪ್ ಕ್ರಿಯೇಟ್ ಮಾಡಿದ್ದ 'ಕ್ರಾಂತಿ' ಚಿತ್ರಕ್ಕೆ ಪ್ರೇಕ್ಷಕರಿಂದ ಮಿಶ್ರಪ್ರತಿಕ್ರಿಯೆ ಸಿಕ್ಕಿತ್ತು. ಸಿನಿಮಾ ಕಲೆಕ್ಷನ್ ಬಗ್ಗೆಯೂ ಕೆಲವರು ಅನುಮಾನ ವ್ಯಕ್ತಪಡಿಸಿದ್ದರು.

ಫೆ. 23ಕ್ಕೆ ಓಟಿಟಿಗೆ 'ಕ್ರಾಂತಿ'
ಅಮೇಜಾನ್ ಪ್ರೈಂ 'ಕ್ರಾಂತಿ' ಚಿತ್ರದ ಡಿಜಿಟಲ್ ರೈಟ್ಸ್ ಕೊಂಡುಕೊಂಡಿದೆ. ಫೆ. 23ಕ್ಕೆ 'ಕ್ರಾಂತಿ' ಚಿತ್ರವನ್ನು ನಿಮ್ಮ ಮೊಬೈಲ್ ಪರದೆಗಳಲ್ಲಿ ನೋಡಬಹುದು. ಸಿನಿಮಾ ಬಿಡುಗಡೆಯಾಗಿ 28 ದಿನಕ್ಕೆಲ್ಲಾ ಓಟಿಟಿಗೆ ಬರ್ತಿರೋದು ಕೆಲವರಿಗೆ ಅಚ್ಚರಿ ಮೂಡಿಸಿದೆ. ಸಾಮಾನ್ಯವಾಗಿ ಯಾವುದೇ ಸಿನಿಮಾ ಆದರೂ ಬಿಡುಗಡೆಯಾಗಿ 28 ದಿನಗಳ ನಂತರ ಓಟಿಟಿ ಸ್ಟ್ರೀಮಿಂಗ್‌ಗೆ ಒಪ್ಪಂದ ಆಗಿರುತ್ತದೆ. ಆದರೆ 'ಕ್ರಾಂತಿ' ಸಿನಿಮಾ ಬಹಳ ಬೇಗ ಬರ್ತಿದೆ.

4 ಭಾಷೆಗಳಲ್ಲಿ ಓಟಿಟಿ ರಿಲೀಸ್
ಮೊದಲಿನಿಂದಲೂ 'ಕ್ರಾಂತಿ' ಪ್ಯಾನ್ ಇಂಡಿಯಾ ಸಿನಿಮಾ ಎಂದು ಚಿತ್ರತಂಡ ಹೇಳಿಕೊಂಡು ಬಂದಿತ್ತು. ಚಿತ್ರವನ್ನು ಹಿಂದಿ, ತಮಿಳು, ತೆಲುಗು, ಮಲಯಾಳಂ ಭಾಷೆಗಳಿಗೆ ಡಬ್ ಮಾಡುವ ಕೆಲಸಗಳು ಕುಡ ನಡೆದಿತ್ತು. ಚಿತ್ರದ ಹಾಡುಗಳನ್ನು ಏಕಕಾಲಕ್ಕೆ 5 ಭಾಷೆಗಳಲ್ಲಿ ರಿಲೀಸ್ ಮಾಡಲಾಗಿತ್ತು. ಆದರೆ ಕನ್ನಡ ವರ್ಷನ್ ಮಾತ್ರ ಥಿಯೇಟರ್‌ಗಳಲ್ಲಿ ರಿಲೀಸ್ ಆಗಿತ್ತು. ಇದೀಗ ಕನ್ನಡದ ಜೊತೆಗೆ ತೆಲುಗು, ತಮಿಳು, ಮಲಯಾಳಂ ವರ್ಷನ್‌ಗಳನ್ನು ಏಕಕಾಲಕ್ಕೆ ಓಟಿಟಿಯಲ್ಲಿ ಸ್ಟ್ರೀಮಿಂಗ್ ಮಾಡಲಾಗುತ್ತಿದೆ. ಅದನ್ನು ಅಮೇಜಾನ್ ಸಂಸ್ಥೆ ಖಚಿತ ಪಡಿಸಿದೆ.

ನೇರವಾಗಿ ಟಿವಿಗೆ ಹಿಂದಿ ವರ್ಷನ್?
ಸದ್ಯ 'ಕ್ರಾಂತಿ' ಕನ್ನಡ, ತೆಲುಗು, ತಮಿಳು, ಮಲಯಾಳಂ ವರ್ಷನ್ ಮಾತ್ರ ಅಮೇಜಾನ್ ಪ್ರೈಮ್‌ನಲ್ಲಿ ಫೆಬ್ರವರಿ 23ರಿಂದ ಸ್ಟ್ರೀಮಿಂಗ್ ಆಗಲಿದೆ. ಹಿಂದಿ ವರ್ಷನ್ ಕಥೆ ಏನು? ಎನ್ನುವ ಮಾಹಿತಿ ಸಿಕ್ಕಿಲ್ಲ. ಬೇರೆ ಓಟಿಟಿ ಫ್ಲಾಟ್‌ಫಾರ್ಮ್‌ಗೆ ಹಿಂದಿ 'ಕ್ರಾಂತಿ' ಸಿನಿಮಾ ರೈಟ್ಸ್ ಸೇಲ್ ಆಗಿದ್ಯಾ? ಅಥವಾ ನೇರವಾಗಿ ಹಿಂದಿ ವಾಹಿನಿಯಲ್ಲಿ ಸಿನಿಮಾ ಪ್ರೀಮಿಯರ್ ಆಗುತ್ತಾ ಕಾದು ನೋಡಬೇಕು. ಯಾಕಂದರೆ ದರ್ಶನ್ ಸಿನಿಮಾಗಳಿಗೆ ಹಿಂದಿ ಮನರಂಜನೆ ವಾಹಿನಿಗಳಲ್ಲಿ ಭಾರೀ ಬೇಡಿಕೆ ಇದೆ.

ಕೊಂಕು ಮಾತನಾಡಿದವರಿಗೆ ಖಡಕ್ ಉತ್ತರ
ದರ್ಶನ್, ರಚಿತಾ ರಾಮ್, ರವಿಚಂದ್ರನ್ ಸೇರಿದಂತೆ ಘಟಾನುಘಟಿ ಕಲಾವಿದರು 'ಕ್ರಾಂತಿ' ಚಿತ್ರದಲ್ಲಿ ನಟಿಸಿದ್ದಾರೆ. ಸರ್ಕಾರಿ ಶಾಲೆಗಳ ಸ್ಥಿತಿಗತಿ ಬಗ್ಗೆ ಚಿತ್ರದಲ್ಲಿ ಚರ್ಚಿಸಲಾಗಿದೆ. ಚಿತ್ರಕ್ಕೆ ಮೊದಲ ದಿನ ಭರ್ಜರಿ ಓಪನಿಂಗ್ ಸಿಕ್ಕಿತ್ತು. ಅಭಿಮಾನಿಗಳು ಭರ್ಜರಿ ಸಂಭ್ರಮಾಚರಣೆ ಮಾಡಿ ಚಿತ್ರಕ್ಕೆ ಸ್ವಾಗತ ಕೋರಿದ್ದರು. ಆದರೆ ನಂತರ ಸಿನಿಮಾ ಕಲೆಕ್ಷನ್ ಸರಿಯಾಗಿ ಆಗುತ್ತಿಲ್ಲ ಎನ್ನುವ ಮಾತುಗಳು ಕೇಳಿ ಬಂದಿತ್ತು. ಸಿನಿಮಾ ಬಿಡುಗಡೆಯಾದ 4 ದಿನಕ್ಕೆ ಸಕ್ಸಸ್ ಮೀಟ್ ನಡೆದಿತ್ತು. 109 ಕೋಟಿ ವಿನ್ಯಾಸದ ಕೇಕ್ ಕಟ್ ಮಾಡಿ ಚಿತ್ರತಂಡ ಸಂಭ್ರಮಿಸಿತ್ತು. ಆ ಮೂಲಕ ಕಲೆಕ್ಷನ್ ಆಗಿಲ್ಲ ಎಂದವರಿಗೆ ದರ್ಶನ್ ಅಂಡ್ ಟೀಂ ತಿರುಗೇಟು ನೀಡಿತ್ತು.


Click it and Unblock the Notifications











