OTT Releases This week: ಎರಡು ಕನ್ನಡ ಸೇರಿ 20 ಚಿತ್ರಗಳು ಈ ವಾರ ಓಟಿಟಿಗೆ; ಇಲ್ಲಿದೆ ಲಿಸ್ಟ್
ಚಿತ್ರರಂಗದಲ್ಲೀಗ 'ಟಾಕ್ಸಿಕ್' ಹಾಗೂ 'ಧುರಂಧರ್-2' ಸಿನಿಮಾಗಳ ಬಗ್ಗೆ ಚರ್ಚೆ ಜೋರಾಗಿದೆ. ಈ ಎರಡೂ ಸಿನಿಮಾಗಳನ್ನು ಫಸ್ಟ್ ಡೇ ಫಸ್ಟ್ ಶೋ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಅದಕ್ಕೂ ಮುನ್ನ ಒಂದಷ್ಟು ಸಿನಿಮಾಗಳು ತೆರೆಕಂಡು ಗೆಲ್ಲುವ ಪ್ರಯತ್ನ ಶುರುವಾಗಿದೆ.
ದೊಡ್ಡ ಸಿನಿಮಾಗಳ ಬಿಡುಗಡೆ ನಡುವೆ ಸಣ್ಣ ಸಿನಿಮಾಗಳು ತೆರೆಗೆ ಬರಲು ಹೆದರುವಂತಾಗುತ್ತದೆ. 3 ವಾರ ಮುನ್ನ ಒಂದಷ್ಟು ಇಂಟ್ರೆಸ್ಟಿಂಗ್ ಸಿನಿಮಾಗಳು ತೆರೆಗೆ ಬರ್ತಿವೆ. ಇತ್ತ ಓಟಿಟಿಯಲ್ಲಿ ಕೂಡ ಕೆಲ ಸಿನಿಮಾ, ವೆಬ್ ಸೀರಿಸ್ ಈ ವಾರ ಸ್ಟ್ರೀಮಿಂಗ್ ಆಗಲಿದೆ. ಲಿಸ್ಟ್‌ನಲ್ಲಿ ಒಂದು ಕನ್ನಡ ಸಿನಿಮಾ ಕೂಡ ಇದೆ.

1. ಕ್ಷೇತ್ರಪತಿ
ಅಂತೂ ಇಂತೂ ಕನ್ನಡದ 'ಕ್ಷೇತ್ರಪತಿ' ಸಿನಿಮಾ ಈ ವಾರ ಓಟಿಟಿಗೆ ಬಂದಿದೆ. ನವೀನ್ ಶಂಕರ್, ಅರ್ಚನಾ ಜೋಯಿಸ್ ನಟನೆಯ ಸಿನಿಮಾ 2023ರಲ್ಲಿ ಈ ಸಿನಿಮಾ ತೆರೆಗೆ ಬಂದಿತ್ತು. ಆದರೆ ಡಿಜಿಟಲ್ ಸ್ಟ್ರೀಮಿಂಗ್ ಬಹಳ ತಡವಾಗಿತ್ತು. ಫೆಬ್ರವರಿ 26ರಂದು ಜಿಯೋ ಹಾಟ್‌ಸ್ಟರ್‌ನಲ್ಲಿ ಸಿನಿಮಾ ಸ್ಟ್ರೀಮಿಂಗ್ ಆರಂಭಿಸಿದೆ.
ಶ್ರೀಕಾಂತ್ ಕಟಗಿ ನಿರ್ದೇಶನದ ಚಿತ್ರದಲ್ಲಿ ರೈತನಾಗಿ ನವೀನ್ ಕಾಣಿಸಿಕೊಂಡಿದ್ದರು. ಅನ್ಯಾಯದ ವಿರುದ್ಧ ನಾಯಕನ ಬಂಡಾಯದ ಕಥೆ ಚಿತ್ರದಲ್ಲಿದೆ. ಚಿತ್ರಕ್ಕೆ ಪ್ರೇಕ್ಷಕರಿಂಗ ಒಳ್ಳೆ ರೆಸ್ಪಾನ್ಸ್ ಸಿಕ್ಕರೂ ದೊಡ್ಡದಾಗಿ ಸಿನಿಮಾ ಗೆಲ್ಲಲಿಲ್ಲ. ಈಗ ಓಟಿಟಿಯಲ್ಲೇ 'ಕ್ಷೇತ್ರಪತಿ' ಆರ್ಭಟ ವೀಕ್ಷಿಸಬಹುದು.

2. ಸೀಕ್ರೆಟ್ ಸ್ಟೋರಿಸ್: ರೋಸ್ಲಿನ್
ಬಹುಭಾಷಾ ನಟಿ ಮೀನಾ ನಟನೆಯ ವೆಬ್ ಸೀರಿಸ್ 'ಸೀಕ್ರೆಟ್ ಸ್ಟೋರಿಸ್: ರೋಸ್ಲಿನ್' ಈ ವಾರವೇ ಓಟಿಟಿಗೆ ಬರ್ತಿದೆ. ಮಲಯಾಳಂ ಭಾಷೆಯ ಈ ವೆಬ್ ಸೀರಿಸ್ ಕನ್ನಡ ಸೇರಿ 7 ಭಾಷೆಗಳಲ್ಲಿ ಡಬ್ ಆಗಿ ಜಿಯೋ ಹಾಟ್‌ಸ್ಟರ್‌ನಲ್ಲಿ ಫೆಬ್ರವರಿ 27ರಂದು ಬಿಡುಗಡೆ ಆಗಲಿದೆ.
ಸುಮೇಶ್ ನಂದಕುಮಾರ್ ನಿರ್ದೇಶನದ ಈ ವೆಬ್ ಸೀರಿಸ್‌ನಲ್ಲಿ ಸಂಜನಾ ದೀಪು, ವಿನೀತ್ ಮತ್ತು ಹಕೀಮ್ ಶಹಜಹಾನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇದು ಮೀನಾ ನಟನೆಯ ಮೊದಲ ವೆಬ್ ಸೀರಿಸ್ ಎನ್ನುವುದು ವಿಶೇಷ. ಈ ಬಗ್ಗೆ ಆಕೆ ಸಂತಸ ಹಂಚಿಕೊಂಡಿದ್ದಾರೆ.
3. ನೀಲಿ ಹಕ್ಕಿ
ಗಣೇಶ್ ಹೆಗಡೆ ನಿರ್ದೇಶನದ ಕನ್ನಡ ಸಿನಿಮಾ 'ನೀಲಿ ಹಕ್ಕಿ' ಫೆಬ್ರವರಿ 27ಕ್ಕೆ ಸನ್ ನೆಕ್ಸ್ಟ್ ಓಟಿಟಿಗೆ ಬರ್ತಿದೆ. ಹಲವು ಚಿತ್ರೋತ್ಸವಗಳಲ್ಲಿ ಈ ಸಿನಿಮಾ ಪ್ರದರ್ಶನ ಕಂಡು ಗಮನ ಸೆಳೆದಿತ್ತು. 5 ವರ್ಷಗಳ ಹಿಂದೆ ಬಹಳ ಸದ್ದು ಮಾಡಿದ್ದ ಸಿನಿಮಾ ಇದೀಗ ಓಟಿಟಿಗೆ ಸ್ಟ್ರೀಮಿಂಗ್‌ಗೆ ಸಜ್ಜಾಗಿದೆ. ಸಿದ್ಧ ಎಂಬ ಬಾಲಕನ ದೃಷ್ಟಿಕೋನದಲ್ಲಿ ಹಳ್ಳಿ ಮತ್ತು ನಗರದ ಬದುಕಿನ ನಡುವಿನ ಸಂಘರ್ಷವನ್ನು ಈ ಚಿತ್ರದಲ್ಲಿ ಕಟ್ಟಿಕೊಡಲಾಗಿದೆ. ಬೇರೆ ಯಾವೆಲ್ಲಾ ಸಿನಿಮಾಗಳು ಈ ವಾರ ಓಟಿಟಿಗೆ ಬರಲಿವೆ? ಇಲ್ಲಿದೆ ಲಿಸ್ಟ್.
ಜೀ-5
1. ತಡಯಮ್(ತಮಿಳು ವೆಬ್ ಸೀರಿಸ್) ಫೆಬ್ರವರಿ 27
2. ಡಾಟರ್ ಆಫ್ ಪ್ರಸಾದ್ ರಾವು: ಕನಬಡುಟಲೇದು(ತೆಲುಗು ವೆಬ್ ಸೀರಿಸ್) ಫೆಬ್ರವರಿ 27
3. ಅಂಧಾ ಪ್ಯಾರ್(ಹಿಂದಿ ರಿಯಾಲಿಟಿ ಶೋ) ಫೆಬ್ರವರಿ 28
ಪ್ರೈಂ ವಿಡಿಯೋ
1. ಪಾಲ್ ಮೆಕ್ಕರ್ಟ್ನಿ: ಮ್ಯಾನ್ ಆನ್ ದಿ ರನ್(ಇಂಗ್ಲೀಷ್ ಸಿನಿಮಾ) ಫೆಬ್ರವರಿ 25
2. ದಿ ಬ್ಲಫ್(ಇಂಗ್ಲೀಷ್ ಸಿನಿಮಾ) ಫೆಬ್ರವರಿ 25
3. ಇಕ್ಕಿಸ್(ಹಿಂದಿ ಸಿನಿಮಾ) ಫೆಬ್ರವರಿ 26
4. ದಿ ಸಿಇಓ ಕ್ಲಬ್(ಇಂಗ್ಲೀಷ್ ವೆಬ್ ಸೀರಿಸ್) ಫೆಬ್ರವರಿ 23
ನೆಟ್ ಫ್ಲಿಕ್ಸ್
1. ಅಕ್ಯೂಸ್ಡ್(ಕನ್ನಡ ಡಬ್ಬಿಂಗ್ ಸಿನಿಮಾ) ಫೆಬ್ರವರಿ 27
ಹಾಟ್‌ಸ್ಟರ್
1. ಸಂಗ್ ಮರ್ಮರ್(ಹಿಂದಿ ಸೀರಿಸ್) ಫೆಬ್ರವರಿ 26
2. ರೊಸ್ಲಿಂಗ್(ತೆಲುಗು ವೆಬ್ ಸೀರಿಸ್) ಫೆಬ್ರವರಿ 27
3. ಬ್ಲಾಕ್ ಫೋನ್(ಇಂಗ್ಲೀಷ್ ಸಿನಿಮಾ) ಫೆಬ್ರವರಿ 28
4. ಬುಗೊನಿಯಾ(ಇಂಗ್ಲೀಷ್ ಸಿನಿಮಾ) ಫೆಬ್ರವರಿ 28
5. ಪ್ಯಾರಡೈಸ್(ಇಂಗ್ಲೀಷ್ ವೆಬ್ ಸೀರಿಸ್) ಫೆಬ್ರವರಿ 23
6. ಒನ್ ಬ್ಯಾಟಲ್ ಆಫ್ಟರ್ ಅನದರ್(ಇಂಗ್ಲೀಷ್ ಸಿನಿಮಾ) ಫೆಬ್ರವರಿ 26
ಸನ್ ನೆಕ್ಸ್ಟ್
1. ಹನಿ(ತೆಲುಗು ಸಿನಿಮಾ) ಫೆಬ್ರವರಿ 27


Click it and Unblock the Notifications











