OTT Releases this Week: ಈ ವಾರ ಓಟಿಟಿಗೆ ಇಂಟ್ರೆಸ್ಟಿಂಗ್ ಸಿನಿಮಾ, ವೆಬ್ ಸೀರಿಸ್.. ನಿಮ್ಮ ಆಯ್ಕೆ?
ಥಿಯೇಟರ್‌ಗಳಲ್ಲಿ ಈ ವಾರ ದೊಡ್ಡ ದೊಡ್ಡ ಸಿನಿಮಾಗಳು ರಿಲೀಸ್ ಆಗುತ್ತಿದೆ. ಕನ್ನಡದ 'ಬಾನದಾರಿಯಲ್ಲಿ' ಹಾಗೂ 'ತೋತಾಪುರಿ-2' ತೆಲುಗಿನ 'ಸ್ಕಂದ', ತಮಿಳಿನ 'ಚಂದ್ರಮುಖಿ-2' ಜೊತೆ ಹಿಂದಿಯ 'ಫುಕ್ರೆ-2' ಹಾಗೂ 'ವ್ಯಾಕ್ಸಿನ್ ವಾರ್' ಸಿನಿಮಾಗಳು ಗುರುವಾರವೇ ತೆರೆಗಪ್ಪಳಿಸುತ್ತಿದೆ. ಇದರ ಜೊತೆಗೆ ಓಟಿಟಿಯಲ್ಲೂ ಭರ್ಜರಿ ಮನರಂಜನೆ ಕಾಯ್ತಿದೆ.
ಓಟಿಟಿಯಲ್ಲಿ ವಿವಿಧ ಜಾನರ್‌ನ ಸಿನಿಮಾ, ವೆಬ್‌ಸೀರಿಸ್‌ಗಳು ಈ ವಾರ ವೀಕ್ಷಕರ ಮುಂದೆ ಬರ್ತಿದೆ. ಈಗಾಗಲೇ ಕೆಲ ಚಿತ್ರಗಳ ಸ್ಟ್ರೀಮಿಂಗ್ ಆರಂಭವಾಗಿದೆ. 24ಕ್ಕೂ ಅಧಿಕ ಸಿನಿಮಾಗಳು ಡಿಜಿಟಲ್ ಎಂಟ್ರಿಗೆ ಕಾಯ್ತಿವೆ. ಅದರಲ್ಲಿ ತೆಲುಗಿನ 'ಖುಷಿ', ಮಲಯಾಳಂನ 'ಕಿಂಗ್ ಆಫ್ ಕೋತ' ಸಿನಿಮಾ ಕೂಡ ಇದೆ.

ನೆಟ್‌ಫ್ಲಿಕ್ಸ್
1. 'ಖುಷಿ'
ವಿಜಯ್ ದೇರವಕೊಂಡ ಹಾಗೂ ಸಮಂತಾ ನಟನೆಯ 'ಖುಷಿ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಅಷ್ಟಾಗಿ ಸದ್ದು ಮಾಡಲಿಲ್ಲ. ಈ ರೊಮ್ಯಾಂಟಿಕ್ ಲವ್ ಸ್ಟೋರಿ ಭಾರೀ ನಿರೀಕ್ಷೆ ಮೂಡಿಸಿತ್ತು. ಒಳ್ಳೆ ಓಪನಿಂಗ್ ಕೂಡ ಸಿಕ್ಕಿತ್ತು. ಫಸ್ಟ್ ವೀಕೆಂಡ್‌ನಲ್ಲಿ ಉತ್ತಮ ಕಲೆಕ್ಷನ್ ಮಾಡಿದ್ದ ಸಿನಿಮಾ ಬಳಿಕ ಠುಸ್ ಆಗಿತ್ತು. ಪ್ರೀತಿಸಿ ಪೋಷಕರ ಒಪ್ಪಿಗೆ ಪಡೆದು ಮದುವೆಯಾದ ನವದಂಪತಿಯ ನೋವು ನಲಿವಿನ ಕತೆ ಚಿತ್ರದಲ್ಲಿದೆ. ನೆಟ್‌ಫ್ಲಿಕ್ಸ್‌ನಲ್ಲಿ ಭಾನುವಾರ ಸಿನಿಮಾ ಸ್ಟ್ರೀಮಿಂಗ್ ಆಗಲಿದೆ.
2. ಗಾಂಡೀವಧಾರಿ ಅರ್ಜುನ
ವರುಣ್ ತೇಜ್ ನಟನೆಯ 'ಗಾಂಡೀವಧಾರಿ ಅರ್ಜುನ' ಭಾನುವಾರದಿಂದಲೇ(ಸೆಪ್ಟೆಂಬರ್ 24) ನೆಟ್‌ಫ್ಲಿಕ್ಸ್‌ನಲ್ಲಿ ಪ್ರದರ್ಶನವಾಗ್ತಿದೆ. ಪ್ರವೀಣ್ ಸತ್ತಾರು ನಿರ್ದೇಶನದ ಈ ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ಸಾಕ್ಷಿ ವೈದ್ಯ ನಾಯಕಿಯಾಗಿ ನಟಿಸಿದ್ದಾರೆ. ನಾಸರ್, ವಿನಯ್ ರಾಯ್, ವಿಮಲಾ ರಾಮನ್ ತಾರಾಗಣದಲ್ಲಿದ್ದಾರೆ.
3. ಲವ್ ಈಜ್ ಇನ್ ದಿ ಏರ್
4. ಸ್ಟ್ರೀಟ್‌ಫ್ಲೋ 2
5. ನೌಹಿಯರ್
6. ದಿ ವಂಡರ್‌ಫುಲ್ ಸ್ಟೋರಿ ಆಫ್ ಹೆನ್ನಿ ಶುಗರ್
7. ರೆಪ್ಟೈಲ್
8. ಡೂ ನ್ಯಾಟ್ ಡಿಸ್ಟ್ರೋಬ್
9.ಸ್ಪೈಡರ್ ಮ್ಯಾನ್ ಅಕ್ರಾಸ್ ದಿ ಸ್ಪೈಡರ್ ವರ್ಸ್
ಡಿಸ್ನಿ ಪ್ಲಸ್ ಹಾಟ್‌ಸ್ಟರ್
1. ಕಿಂಗ್ ಆಫ್ ಕೋತ
ಮಲಯಾಳನ 'ಕಿಂಗ್ ಆಫ್ ಕೋತ' ಸಿನಿಮಾ ಸೆಪ್ಟೆಂಬರ್ 29ರಿಂದ ಡಿಸ್ನಿ ಪ್ಲಸ್ ಹಾಟ್‌ಸ್ಟರ್‌ನಲ್ಲಿ ಸಿಗಲಿದೆ. ಮಾಲಿವುಡ್ 'KGF' ಅಂತ್ಲೇ ಬಿಂಬಿತವಾಗಿದ್ದ ಈ ಗ್ಯಾಂಗ್‌ಸ್ಟರ್ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿತ್ತು. ಪ್ಯಾನ್ ಇಂಡಿಯಾಮಟ್ಟದಲ್ಲಿ ಸಿನಿಮಾ ಬಂದರೂ ಪ್ರಯೋಜನವಾಗಿರಲಿಲ್ಲ. ಐಶ್ವರ್ಯ ಲಕ್ಷ್ಮಿ, ಪ್ರಸನ್ನ, ವಿನೋದ್ ಚೆಂಬನ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಈ ವಾರದ ಓಟಿಟಿ ರಿಲೀಸ್ ಸಿನಿಮಾಗಳ ಇದು ಭಾರೀ ನಿರೀಕ್ಷೆ ಮೂಡಿಸಿದೆ.
2. ತುಮ್‌ಸೇ ನ ಹೋ ಪಾಯೇಗಾ
3. ದಿ ವರ್ಸ್ಟ್ ಆಫ್ ಇವಿಲ್
4. ಎಲ್ ಪಾಪ್
5. ಲಾಂಚ್ ಪ್ಯಾಡ್- ಸೀಜನ್- 2

ಅಮೆಜಾನ್ ಪ್ರೈಮ್
1. ಕುಮಾರಿ ಶ್ರೀಮತಿ
ನಿತ್ಯಾ ಮೆನನ್ ಲೀಡ್ ರೋಲ್‌ನಲ್ಲಿ ನಟಿಸಿರುವ ತೆಲುಗು ವೆಬ್‌ಸಿರೀಸ್ 'ಕುಮಾರಿ ಶ್ರೀಮತಿ' ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ರಿಲೀಸ್ ಆಗುತ್ತಿದೆ. ಗೋದಾವರಿ ಬ್ಯಾಕ್‌ಡ್ರಾಪ್‌ನಲ್ಲಿ ಫನ್ ಫ್ಯಾಮಿಲಿ ಎಂಟರ್‌ಟೈನರ್ ಆಗಿ ಈ ವೆಬ್ ಸೀರಿಸ್ ಕಟ್ಟಿಕೊಡಲಾಗಿದೆ. ನಿರುಪಮ್ ಪ್ರಧಾನ ಪಾತ್ರದಲ್ಲಿ ನಟಿಸಿರುವ ಈ ಸರಣಿಗೆ ಗೋಮಟೇಶ್ ಉಪಾಧ್ಯಾಯ್ ಆಕ್ಷನ್ ಕಟ್ ಹೇಳಿದ್ದಾರೆ. ಸೆಪ್ಟೆಂಬರ್ 28ಕ್ಕೆ ಸ್ಟ್ರೀಮಿಂಗ್ ಆಗಲಿದೆ.
2. ಹಾಸ್ಟಲ್ ಡೇಸ್, ಸೀಜನ್- 4
3. ದಿ ಫೇಕ್ ಶೇಕ್
4. ಡಬಲ್ ಡಿಸ್ಕರ್ಸ್
ಸೋನಿ ಲಿವ್
1. ಏಜೆಂಟ್
ಈ ವರ್ಷ ಟಾಲಿವುಡ್‌ನಲ್ಲಿ ದೊಡ್ಡಮಟ್ಟದಲ್ಲಿ ಸೋಲುಂಡ ಸಿನಿಮಾ 'ಏಜೆಂಟ್'. ಸುರೇಂದರ್ ರೆಡ್ಡಿ ನಿರ್ದೇಶನದ ಈ ಚಿತ್ರದಲ್ಲಿ ಅಕ್ಕಿನೇನಿ ಅಖಿಲ್ ಹೀರೊ ಆಗಿ ನಟಿಸಿದ್ದರು. ಆಕ್ಷನ್ ಎಂಟರ್‌ಟೈನರ್ ಸಿನಿಮಾ ಹೀನಾಯವಾಗಿ ಸೋಲುಂಡಿತ್ತು. ಅದ್ಯಾವಮಟ್ಟಿಗೆ ಅಂದರೆ ನಿರ್ಮಾಪಕರು ಬಹಿರಂಗವಾಗಿ ಪ್ರೇಕ್ಷಕರ ಕ್ಷಮೆ ಕೇಳಿದ್ದರು. ಅಂತೂ ಇಂತೂ ಸೆಪ್ಟೆಂಬರ್ 29ಕ್ಕೆ 'ಏಜೆಂಟ್' ಓಟಿಟಿಗೆ ಬರ್ತಿದ್ದಾನೆ.
2. ಚಾರ್ಲಿ ಚೋಪ್ರಾ ಆಂಡ್ ದಿ ಮಿಸ್ಟರೀ ಆಫ್ ಸೊಲಾಂಗ್ ವಾಲಿ
3. ಅಡಿಯೆ (ತಮಿಳು ಸಿನಿಮಾ)
ಇನ್ನುಳಿದಂತೆ ಅಹಾ ಓಟಿಟಿಯಲ್ಲಿ ಪಾಪಂ ಪಸಿವಾಡು ವೆಬ್ ಸೀರಿಸ್ ರಿಲೀಸ್(ಸೆಪ್ಟೆಂಬರ್ 29) ಸ್ಟ್ರೀಮ್ ಆಗಲಿದೆ. ಇನ್ನು ಜೀ-5ನಲ್ಲಿ 'ಅಂಗುಷ್‌ಮ್ಯಾನ್ ಎಂಬಿಎ' ಎನ್ನುವ ಬೆಂಗಾಳಿ ಬರಲಿದೆ.


Click it and Unblock the Notifications











