For Quick Alerts
  ALLOW NOTIFICATIONS  
  For Daily Alerts

  ಆಹಾ ಓಟಿಟಿಯಲ್ಲಿ ಅಡುಗೆ ಮಂತ್ರ: ಗಾಸಿಪ್ ಜೊತೆ ಸೆಲೆಬ್ರೆಟಿ ರೆಸಿಪ್ಪಿ!

  |

  ಸಿನಿಮಾ ತಾರೆಯರು ಅಂದ್ರೆನೇ ಹಾಗೆ. ಅವರ ಬದುಕನ್ನು ತಿಳಿದುಕೊಳ್ಳುವ ಬಯಕೆ ಇದ್ದೇ ಇರುತ್ತೆ. ಸೆಲೆಬ್ರೆಟಿಗಳು ಬಿಡುವಿನ ವೇಳೆಯಲ್ಲಿ ಏನು ಮಾಡುತ್ತಾರೆ? ಅವರು ಹೇಗಿರುತ್ತಾರೆ? ಹೇಗೆ ಅಡುಗೆ ಮಾಡುತ್ತಾರೆ? ಅವರ ಫೇವರಿಟ್ ಅಡುಗೆ ಯಾವುದು? ಅನ್ನೋದನ್ನು ತಿಳಿದುಕೊಳ್ಳುವ ಕುತೂಹಲವಿರುತ್ತೆ.

  ಸೆಲೆಬ್ರೆಟಿಗಳು ರುಚಿಕರವಾಗಿ ಅಡುಗೆ ಮಾಡುವುದರ ಜೊತೆ ಜೊತೆಗೆ ಗಾಸಿಪ್ ನೀಡಿದರೆ ಹೇಗಿರುತ್ತೆ? ಇಂತಹದ್ದೊಂದು ವಿಭಿನ್ನ ಕಾನ್ಸೆಪ್ಟ್ ಅನ್ನು ಆಹಾ ಓಟಿಟಿ ತರಲು ಹೊರಟಿದೆ. ಆ ಕಾರ್ಯಕ್ರಮವೇ 'ಚೆಫ್ ಮಂತ್ರ'. ಈಗಾಗಲೇ ಒಂದು ಸೀಸನ್ ಪ್ರಸಾರ ಆಗಿತ್ತು. ಅದು ಸಕ್ಸಸ್‌ಫುಲ್ ಕೂಡ ಆಗಿತ್ತು. ಈಗ ಎರಡನೇ ಸೀಸನ್ ಆರಂಭ ಆಗುತ್ತಿದೆ.

  "ನಮ್ಮ ಚಿತ್ರಗಳಿಗೆ ಆಸ್ಕರ್ ಸರ್ಟಿಫಿಕೇಟ್ ಬೇಕಾಗಿಲ್ಲ": ನಿಖಿಲ್ ಶಾಕಿಂಗ್ ಹೇಳಿಕೆ

  'ಚೆಫ್ ಮಂತ್ರ' ಎರಡನೇ ಸೀಸನ್‌ನಲ್ಲಿ ಟಾಲಿವುಡ್‌ನಲ್ಲಿ ನಟಿಯಾಗಿ, ನಿರ್ದೇಶಕಿಯಾಗಿ, ಲೇಖಕಿಯಾಗಿ ಹಾಗೂ ನಿರ್ಮಾಪಕಿಯಾಗಿ ಗುರುತಿಸಿಕೊಂಡಿರುವ ಲಕ್ಷ್ಮಿ ಮಂಚು ನಿರೂಪಣೆ ಮಾಡುತ್ತಿದ್ದಾರೆ. ಟಾಲಿವುಡ್‌ನಲ್ಲಿ ಇವರಿಗೆ ವಿಶೇಷವಾದ ಸ್ಥಾನವಿದ್ದು, ಗಾಸಿಪ್‌ಗಳ ಜೊತೆ ಅಡುಗೆ ಮನೆ ಪ್ರವೇಶ ಮಾಡಲಿದ್ದಾರೆ. ಅಂದ್ಹಾಗೆ ಈ ಸೀಸನ್‌ನಲ್ಲಿ ಸುಮಾರು 8 ಸಂಚಿಕೆಗಳು ಇರಲಿವೆ.

  ಈ ಎಂಟೂ ಸೀಸನ್‌ಗಳಲ್ಲಿ ಸೆಲೆಬ್ರೆಟಿಗಳು ಕೇವಲ ಅಡುಗೆ ಅಷ್ಟೇ ಮಾಡುವುದಿಲ್ಲ. ಬದಲಾಗಿ ತಮ್ಮ ಆಹಾರದ ಗುಟ್ಟನ್ನೂ ಬಿಟ್ಟು ಕೊಡಲಿದ್ದಾರೆ. ಅಷ್ಟೇ ಅಲ್ಲದೆ ಅವರು ಆಹಾರವನ್ನು ಹೇಗೆ ಸೇವಿಸುತ್ತಾರೆ? ಎಂತಹ ಆಹಾರವನ್ನು ಇಷ್ಟಪಡುತ್ತಾರೆ? ಅನ್ನೋದನ್ನು ರಿವೀಲ್ ಮಾಡಲಿದ್ದಾರೆ. ಈಗಾಗಲೇ ಈ ರಿಯಾಲಿಟಿ ಶೋದ ಪ್ರೋಮೊ ರಿಲೀಸ್ ಆಗಿದ್ದು, ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

  ಅಂದ್ಹಾಗೆ ಲಕ್ಷ್ಮಿ ಮಂಚು ಕುಟುಂಬ ಟಾಲಿವುಡ್‌ನಲ್ಲಿ ತುಂಬಾನೇ ಹೆಸರುವಾಸಿ. ಇವರ ಮನೆಯಲ್ಲಿ ಎಲ್ಲರೂ ಆಹಾರ ಪ್ರೇಮಿಗಳಂತೆ. ಪ್ರತಿ ದಿನ ಊಟ ಮಾಡುವಾಗ ಅನೇಕ ವಿಷಯಗಳನ್ನು ಚರ್ಚೆ ಮಾಡುತ್ತಾರಂತೆ. ಒಳ್ಳೆಯ ಆಹಾರವಿದ್ದರೆ ಆ ದಿನ ಉತ್ತಮವಾಗಿರುತ್ತೆ ಎಂದಿದ್ದಾರೆ ಲಕ್ಷ್ಮಿ ಮಂಚು.

  Lakshmi Manchu Will Be Hosting A Celebrity Cookery Show On Aha OTT

  ಸೆಲೆಬ್ರೆಟಿಗಳ ವಿಶಿಷ್ಟ ಫುಡ್ ಶೋ ಸೆಪ್ಟೆಂಬರ್ 30ರಿಂದ ಆಹಾ ಓಟಿಟಿಯಲ್ಲಿ ಪ್ರಸಾರ ಆಗಲಿದೆ. ಸದ್ಯ ಪ್ರೋಮೊ ಸಿನಿಪ್ರಿಯರಿಗೆ ಇಷ್ಟ ಆಗಿದ್ದು, ಎರಡನೇ ಸೀಸನ್‌ನಲ್ಲಿ ಯಾರೆಲ್ಲಾ ನಟರು 'ಚೆಫ್ ಮಂತ್ರ'ಕ್ಕೆ ಬರುತ್ತಾರೆ ಎನ್ನುವ ಕುತೂಹಲವಿದ್ದೇ ಇದೆ.

  English summary
  Lakshmi Manchu Will Be Hosting A Celebrity Cookery Show On Aha OTT, Know More
  Saturday, September 24, 2022, 9:12
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X