ಓಟಿಟಿ ಟ್ರೆಂಡಿಂಗ್‌ನಲ್ಲಿ ಹೊಚ್ಚ ಹೊಸ ಕ್ರೈಂ ಥ್ರಿಲ್ಲರ್ ಸಿನಿಮಾ; ಈಗ್ಲೇ ನೋಡಿ
ಕ್ರೈಂ ಥ್ರಿಲ್ಲರ್ ಸಿನಿಮಾಗಳು ಸದಾ ಪ್ರೇಕ್ಷಕರನ್ನು ಸೆಳೆಯುತ್ತಿರುತ್ತದೆ. ಯಾರು ಯಾಕೆ ಕ್ರೈಂ ಮಾಡಿದ್ರು? ಅದಕ್ಕೆ ಕಾರಣ ಏನು? ಪ್ರಕರಣವನ್ನು ಪೊಲೀಸರು ಹೇಗೆ ಭೇದಿಸುತ್ತಾರೆ? ಹೀಗೆ ನಾನಾ ಕುತೂಹಲಕಾರಿ ಪ್ರಶ್ನೆಗಳೊಂದಿಗೆ ನೋಡುಗರನ್ನು ಹಿಡಿದಿಟ್ಟುಕೊಳ್ಳುವ ಸಿನಿಮಾಗಳು ಗೆಲ್ಲುತ್ತವೆ.
ಓಟಿಟಿ ಜಮಾನ ಶುರುವಾದ ಬಳಿಕ ಕ್ರೈಂ ಥ್ರಿಲ್ಲರ್ ಸಿನಿಮಾಗಳ ಸಂಖ್ಯೆ ಹೆಚ್ಚುತ್ತಿದೆ. ಸ್ಟಾರ್ ನಟರು ಇಂತಹ ಚಿತ್ರಗಳಲ್ಲಿ ನಟಿಸಿದರೆ ಅಭಿಮಾನಿಗಳಿಗೆ ಇಷ್ಟವಾಗಲ್ಲ. ಅಭಿಮಾನಿಗಳಿಗೆ ರೆಗ್ಯುಲರ್ ಕಮರ್ಷಿಯಲ್ ಸಿನಿಮಾಗಳೇ ಬೇಕು. ಆದರೆ ಓಟಿಟಿಯಲ್ಲಿ ಸ್ಟಾರ್ ನಟರು ಇಲ್ಲದೇ ಇದ್ದರೂ ಕಂಟೆಂಟ್ ಚೆನ್ನಾಗಿದೆ ಜನ ಇಷ್ಟಪಡುತ್ತಾರೆ. ಸದ್ಯ ತೆಲುಗಿನ ಕ್ರೈಂ ಥ್ರಿಲ್ಲರ್ ಸಿನಿಮಾವೊಂದು ಓಟಿಟಿಯಲ್ಲಿ ಧೂಳೆಬ್ಬಿಸಿದೆ.

ತಮಿಳು ಹಾಗೂ ತೆಲುಗು ಭಾಷೆಗಳಲ್ಲಿ ಏಕಕಾಲಕ್ಕೆ ನಿರ್ಮಾಣವಾಗಿದ್ದ ಸಿನಿಮಾ ಮೇ 16ಕ್ಕೆ ತೆರೆಗೆ ಬಂದಿತ್ತು. ಇದೀಗ 5 ಭಾಷೆಗಳಲ್ಲಿ ಸಿನಿಮಾ ಓಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಜೂನ್ 13ರಂದು ಓಟಿಟಿಗೆ ಬಂದ ಸಿನಿಮಾ ಸದ್ಯ ದೇಶದಲ್ಲೇ ನಂಬರ್ 1 ಟ್ರೆಂಡಿಂಗ್‌ನಲ್ಲಿದೆ. ಚಿತ್ರಮಂದರಿಗಳಲ್ಲಿ ಬಿಡುಗಡೆಯಾದಾಗ ಮಿಶ್ರಪ್ರತಿಕ್ರಿಯೆ ಪಡೆದುಕೊಂಡಿದ್ದ ಸಿನಿಮಾ ಓಟಿಟಿಯಲ್ಲಿ ಮಾತ್ರ ಕಮಾಲ್ ಮಾಡ್ತಿದೆ.
ಅಷ್ಟಕ್ಕೂ ಆ ಸಿನಿಮಾ ಯಾವುದು ಅಂದ್ರೆ ಲೋಕೇಶ್ ಅಜ್ಲ್ಸ್ ನಿರ್ದೇಶನದ 'ಇಲೆವೆನ್'. ಒಬ್ಬ ಐಪಿಎಸ್ ಆಫೀಸರ್ ತನಿಖೆಯ ಸುತ್ತಾ ಈ ಸಿನಿಮಾ ಕತೆ ಸಾಗುತ್ತದೆ. ನವೀನ್ ಚಂದ್ರ, ಮಾಸ್ಟರ್ ಸಶಾಂಗ್, ರೆಯಾ, ಶಶಾಂಕ್, ಅಭಿರಾಮಿ ಚಿತ್ರದ ತಾರಾಗಣದಲ್ಲಿದ್ದಾರೆ. ಡಿ. ಇಮ್ಮಾನ್ ಸಂಗೀತ ಚಿತ್ರಕ್ಕಿದೆ. ಸಿನಿಮಾ ಅಮೇಜಾನ್ ಪ್ರೈಂ ವೀಡಿಯೋದಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ.
'ಇಲೆವೆನ್' ಸಿನಿಮಾ ಕಥೆ ಬಹಳ ಸಿಂಪಲ್. ಅರವಿಂದನ್ ಐಪಿಎಸ್ ಬಬ್ಬ ದಕ್ಷ ಪೊಲೀಸ್ ಆಫೀಸರ್. ವೈಜಾಗ್‌ನಲ್ಲಿ ಎಸಿಪಿ ಆಗಿ ಸೇವೆ ಸಲ್ಲಿಸುತ್ತಿರುತ್ತಾನೆ. ಇನ್ನು ನಗರದಲ್ಲಿ ಸರಣಿ ಹತ್ಯೆಗಳು ನಡೆಯುತ್ತಿರುತ್ತದೆ. ಆ ಪ್ರಕರಣದ ಬೆನ್ನಟ್ಟಿ ಹೊರಟ ಎಸಿಪಿ ರಂಜಿತ್ ಕುಮಾರ್(ಶಶಾಂಕ್) ಅಪಘಾತದಲ್ಲಿ ಸಾಯುವಂತಾಗುತ್ತದೆ. ಹಾಗಾಗಿ ಈ ಪ್ರಕರಣವನ್ನು ಅರವಿಂದನ್ ಕೈಗೆತ್ತಿಕೊಳ್ಳುತ್ತಾನೆ. ಅಷ್ಟಕ್ಕೂ ಈ ಸರಣಿ ಹತ್ಯೆಗಳಿಗೆ ಕಾರಣ ಯಾರು? ಅವಳಿ ಜವಳಿಯಲ್ಲಿ ಒಬ್ಬರನ್ನು ಮಾತ್ರ ಸಾಯಿಸೋದು ಯಾಕೆ? ಕೊಲೆಗಾರ ಸಿಗ್ತಾನಾ? ಎನ್ನುವುದೇ ಸಿನಿಮಾ ಕಥೆ.
ಒನ್‌ಲೈನ್ ಸ್ಟೋರಿ ನೋಡಿದಾಗ ಎಲ್ಲಾ ಇನ್‌ವೆಸ್ಟಿಗೇಷನ್ ಸಿನಿಮಾಗಳ ಕಥೆ ರೀತಿಯೇ ಕಾಣುತ್ತದೆ. ಆದರೆ 'ಇಲೆವೆನ್' ಚಿತ್ರದಲ್ಲಿ ಅದೇ ಕಥೆಯನ್ನು ವಿಭಿನ್ನವಾಗಿ ಹೇಳುವ ಪ್ರಯತ್ನ ಮಾಡಲಾಗಿದೆ. ದೊಡ್ಡಪರದೆಯಲ್ಲಿ ಸಿನಿಮಾ ಅಷ್ಟೇನು ಮಜ ಕೊಡಲ್ಲ. ಓಟಿಟಿಯಲ್ಲಿ ಓಕೆ ಓಕೆ ಎನಿಸುತ್ತದೆ. ಈ ವಾರ ಓಟಿಟಿಯಲ್ಲಿ ಯಾವುದೇ ದೊಡ್ಡ ಸಿನಿಮಾ ಬಂದಿಲ್ಲ. ಹಾಗಾಗಿ ಜನ ಈ ಸಿನಿಮಾ ನೋಡಲು ಮುಗಿಬಿದ್ದಿದ್ದಾರೆ.
ಅಮೇಜಾನ್ ಪ್ರೈಂ ಜೊತೆಗೆ ಅಹಾ ಓಟಿಟಿಯಲ್ಲಿ ಕೂಡ ಸಿನಿಮಾ ಸಿನಿಮಾ ಸ್ಟ್ರೀಮಿಂಗ್ ಆಗುತ್ತಿದೆ. ಸದ್ಯ ಪ್ರೈಂ ವೀಡಿಯೋದಲ್ಲಿ 'ಇಲೆವೆನ್' ಸಿನಿಮಾ ಟ್ರೆಂಡಿಂಗ್‌ನಲ್ಲಿರುವ ಬಗ್ಗೆ ನಟ ನವೀನ್ ಚಂದ್ರ ಸಂತಸ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿ "ನಿಮ್ಮೆಲ್ಲರ ಅಗಾಧ ಪ್ರೀತಿಗೆ ಧನ್ಯವಾದ. 'ಇಲೆವೆನ್' ಸಿನಿಮಾ ಈಗ ಪ್ರೈಮ್ ವಿಡಿಯೋದಲ್ಲಿ ಒಂದನೇ ಸ್ಥಾನದಲ್ಲಿ ಟ್ರೆಂಡಿಂಗ್‌ನಲ್ಲಿದೆ. ಇದು ಒಂದು ದೊಡ್ಡ ಆಶೀರ್ವಾದ, ಮತ್ತು ಪ್ರೇಕ್ಷಕರ ಬೆಂಬಲಕ್ಕಾಗಿ ನಾನು ನಿಜವಾಗಿಯೂ ಕೃತಜ್ಞನಾಗಿದ್ದೇನೆ.ವೀಕ್ಷಿಸಿದ, ಹಂಚಿಕೊಂಡ ಮತ್ತು ನಂಬಿದ ಎಲ್ಲರಿಗೂ - ಇದು ನಿಮಗಾಗಿ" ಎಂದು ಬರೆದುಕೊಂಡಿದ್ದಾರೆ.


Click it and Unblock the Notifications











