ಹೊಚ್ಚ ಹೊಸ ಕನ್ನಡ ಡಾರ್ಕ್ ಕಾಮಿಡಿ ಸಿನಿಮಾ ಓಟಿಟಿಗೆ ಬಂತು; ಈಗ್ಲೇ ನೋಡಿ

ಮತ್ತೊಂದು ಕನ್ನಡ ಸಿನಿಮಾ ಓಟಿಟಿಗೆ ಬಂದು ಸದ್ದು ಮಾಡ್ತಿದೆ. ಕನ್ನಡದಲ್ಲಿ ದೊಡ್ಡ ಸಿನಿಮಾಗಳ ಬರ ಎದುರಿಸುವಂತಾಗಿದೆ. ಸ್ಟಾರ್ ನಟರು ಎರಡು ವರ್ಷಕ್ಕೊಂದು ಸಿನಿಮಾ ಮಾಡುತ್ತಿದ್ದಾರೆ. ಇತ್ತೀಚೆಗೆ 'ಭೀಮ' ಹಾಗೂ 'ಕೃಷ್ಣಂ ಪ್ರಣಯ ಸಖಿ' ಚಿತ್ರಗಳು ಗೆಲುವಿನ ನಗೆ ಬೀರಿವೆ.

ಉಪೇಂದ್ರ ನಿರ್ದೇಶಿಸಿ ನಟಿಸಿರುವ 'ಯುಐ', ಧ್ರುವ ಸರ್ಜಾ ನಟನೆಯ 'ಮಾರ್ಟಿನ್', ಶಿವಣ್ಣನ 'ಭೈರತಿ ರಣಗಲ್', ಸುದೀಪ್ ನಟನೆಯ 'ಮ್ಯಾಕ್ಸ್' ಹಾಗೂ ಶ್ರೀಮುರಳಿ ನಟನೆಯ 'ಬಘೀರ' ಚಿತ್ರಗಳ ಇದೇ ವರ್ಷ ಪ್ರೇಕ್ಷಕರ ಮುಂದೆ ಬರಲಿವೆ. ಆದರೆ ಒಂದೆರಡು ಚಿತ್ರಗಳ ರಿಲೀಸ್ ಡೇಟ್ ಇನ್ನು ಪಕ್ಕಾ ಆಗಿಲ್ಲ. ಮತ್ತೊಂದು ಕಡೆ ಚಿತ್ರಮಂದಿರಗಳಲ್ಲಿ ಸಣ್ಣ ಚಿತ್ರಗಳು ಬಿಡುಗಡೆ ಆಗುತ್ತಿವೆ.

Latest kannada dark comedy movie began streaming on OTT

ಗಣೇಶ ಹಬ್ಬಕ್ಕೂ ಯಾವುದೇ ದೊಡ್ಡ ಸಿನಿಮಾ ತೆರೆಗೆ ಬರಲಿಲ್ಲ. ಒಂದೊಳ್ಳೆ ಅವಕಾಶ ಮಿಸ್ ಮಾಡಿಕೊಂಡಂತೆ ಆಯಿತು. ಇದ್ದಿದ್ದರಲ್ಲಿ 'ಕೃಷ್ಣಂ ಪ್ರಣಯ ಸಖಿ' ಹಾಗೂ 'ಇಬ್ಬನಿ ತಬ್ಬಿದ ಇಳೆಯಲಿ' ಚಿತ್ರಗಳು ಯಶಸ್ವಿ ಪ್ರದರ್ಶನ ಕಾಣುತ್ತಿವೆ. ಮತ್ತೊಂದು ಕಡೆ ಓಟಿಟಿಗೂ ಕನ್ನಡ ಸಿನಿಮಾಗಳು ಅಷ್ಟು ಸುಲಭವಾಗಿ ಬರ್ತಿಲ್ಲ. ಚಿಕ್ಕ ಚಿತ್ರಗಳನ್ನು ಕೊಂಡುಕೊಳ್ಳಲು ಓಟಿಟಿ ಸಂಸ್ಥೆಗಳು ಹಿಂದುಮುಂದು ನೋಡ್ತಿವೆ.

ಅಮೇಜಾನ್ ಪ್ರೈಂ ಮಾತ್ರ ಪೇ ಪಾರ್ ವೀವ್ ಕಾನ್ಸೆಪ್ಟ್‌ನಲ್ಲಿ ಕನ್ನಡ ಚಿತ್ರಗಳ ರೈಟ್ಸ್ ಕೊಂಡುಕೊಳ್ಳುತ್ತಿದೆ. ಈವಾರ 'ಫ್ಯಾಮಿಲಿ ಡ್ರಾಮಾ' ಸಿನಿಮಾ ಪ್ರೈಂ ವೀಡಿಯೋದಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ. ಜುಲೈ 26ಕ್ಕೆ ಈ ಡಾರ್ಕ್ ಕಾಮಿಡಿ ಎಂಟರ್‌ಟೈನರ್ ಸಿನಿಮಾ ತೆರೆಗೆ ಬಂದಿತ್ತು. ಆಕರ್ಷ್ ನಿರ್ದೇಶನದ ಚಿತ್ರವನ್ನು ದಬ್ಬುಗುಡಿ ಮುರಳಿ ಕೃಷ್ಣ ನಿರ್ಮಿಸಿದ್ದಾರೆ.

Latest kannada dark comedy movie began streaming on OTT

ಅಭಯ್, ಸಿಂಧೂ ಶ್ರೀನಿವಾಸಮೂರ್ತಿ, ರೇಖಾ ಕುಡ್ಲಿಗಿ, ಪೂರ್ಣಚಂದ್ರ ಮೈಸೂರು, ಅನನ್ಯಾ ಅಮರ್, ಮಹದೇವ್, ಅರುಣ್‌ ಮೂರ್ತಿ, ವೀರೇಶ್ ಸೇರಿದಂತೆ ದೊಡ್ಡ ತಾರಾಗಣ 'ಫ್ಯಾಮಿಲಿ ಡ್ರಾಮಾ' ಚಿತ್ರದಲ್ಲಿದೆ. ಸಿದ್ದಾರ್ಥ್ ಸುನೀಲ್ ಛಾಯಾಗ್ರಹಣ, ಚೇತನ್ ಅಮ್ಮಯ್ಯ ಸಂಗೀತ ನಿರ್ದೇಶನದ ಚಿತ್ರಕ್ಕಿದೆ. ಕೆಆರ್‌ಜಿ ಸ್ಟುಡಿಯೋಸ್ ಸಂಸ್ಥೆ ಈ ಚಿತ್ರವನ್ನು ವಿತರಣೆ ಮಾಡಿತ್ತು. ಉತ್ತಮ ಪ್ರತಿಕ್ರಿಯೆ ಸಿಕ್ಕರೂ ಬಾಕ್ಸಾಫೀಸ್‌ನಲ್ಲಿ ಸಿನಿಮಾ ದೊಡ್ಡದಾಗಿ ಸದ್ದು ಮಾಡಿರಲಿಲ್ಲ.

ಲಕ್ಷ್ಮೀ (ರೇಖಾ ಕೂಡ್ಲಿಗಿ) ಹಾಗೂ ಇಬ್ಬರು ಮಕ್ಕಳು ದಿವ್ಯಾ (ಸಿಂಧು) ಹಾಗೂ ಅಭಯ್ (ಅಭಯ್). ಮಿಡ್ಲ್ ಕ್ಲಾಸ್ ಫ್ಯಾಮಿಲಿ. ಜೀವನ ಸಾಗಿಸುವುದೇ ಕಷ್ಟ ಎನ್ನುವ ಪರಿಸ್ಥಿತಿ. ಇಂತಹ ಸಮಯದಲ್ಲೇ ಅವರಿಗೆ ಒಂದು ಕೆಲಸ ಸಿಗುತ್ತದೆ. ಅದು ಅಂತಿಂಥ ಕೆಲಸ ಕಂಡಿತ ಅಲ್ಲ. ಮೂವರು ಒಬ್ಬರಿಗೆ ಗೊತ್ತಿಲ್ಲದೇ ಮತ್ತೊಬ್ಬರು ಆ ಕೆಲಸ ಮಾಡಲು ಮುಂದಾಗುತ್ತಾರೆ. ಯಾವುದೇ ಗ್ಯಾಂಗ್ ವಾರ್ ಹೀಗೆ ಇವರ ಮನೆಯೊಳಗೆ ಎಂಟ್ರಿ ಕೊಟ್ಟುಬಿಡುತ್ತದೆ. ಅಷ್ಟಕ್ಕೂ ಆ ಕೆಲಸ ಏನು? ಅದನ್ನು ಕೊನೆಗೂ ಮಾಡಿ ಮುಗಿಸುತ್ತಾರಾ? ಯಾರು ಮಾಡ್ತಾರೆ? ಎನ್ನುವುದನ್ನು ಸಿನಿಮಾ ನೋಡಿ ಎಂಜಾಯ್ ಮಾಡಿ.

ಕನ್ನಡದಲ್ಲಿ ಅಪರೂಪಕ್ಕೆ ಡಾರ್ಕ್‌ ಕಾಮಿಡಿ ಸಿನಿಮಾಗಳು ಬರುತ್ತವೆ. ಅಂಥದ್ದೇ ಒಂದು ಪ್ರಯತ್ನ 'ಫ್ಯಾಮಿಲಿ ಡ್ರಾಮಾ'. ಈ ಹಿಂದೆ 'ಆಚಾರ್ & ಕೋ' ಚಿತ್ರ ನಿರ್ದೇಶಿಸಿ ನಟಿಸಿ ಗೆದ್ದಿದ್ದ ಸಿಂಧು ಶ್ರೀನಿವಾಸ್ ಮೂರ್ತಿ ಚಿತ್ರದ ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ. ಡಾನ್ ಪ್ರಕಾಶನಾಗಿ ಪೂರ್ಣಚಂದ್ರ ಮೈಸೂರು ನಟನೆ ಗಮನ ಸೆಳೆಯುವಂತಿದೆ.

ಔಟ್ ಅಂಡ್ ಔಟ್ ಕಾಮಿಡಿ ಎಂಟರ್‌ಟೈನರ್ ಸಿನಿಮಾ ಇದು. ಮನೆಮಂದಿಯೆಲ್ಲಾ ಕೂತು ಸಿನಿಮಾ ನೋಡಿ ಎಂಜಾಯ್ ಮಾಡಬಹುದು. ಗಂಭೀರ ಸನ್ನಿವೇಶದಲ್ಲಿ ಕೂಡ ನೋಡುಗರು ಬಿದ್ದು ಬಿದ್ದು ನಗುವಂತಿದೆ. ಚಿತ್ರದ ಸಂಭಾಷಣೆ ಇಷ್ಟವಾಗುತ್ತದೆ.

More from Filmibeat

English summary
Recent released Kannada comedy entertainer movie streaming now;
Read more about: filmibeat news kannada ott
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X