ಹೊಚ್ಚ ಹೊಸ ಕನ್ನಡ ಹಾರರ್ ಕಾಮಿಡಿ ಸಿನಿಮಾ ಓಟಿಟಿಗೆ ಬಂತು; ಈಗ್ಲೇ ನೋಡಿ

5 ತಿಂಗಳು ಕಳೆದ್ರು ಕನ್ನಡದಲ್ಲಿ ಒಂದೇ ಒಂದು ಸಿನಿಮಾ ದೊಡ್ಡದಾಗಿ ಹಿಟ್ ಆಗಿಲ್ಲ. 'ಕೆಡಿ' ಹಾಗೂ 'ಲವ್ ಮಾಕ್ಟೇಲ್'-3 ಸಿನಿಮಾಗಳು ಕೊಂಚಮಟ್ಟಿಗೆ ಸದ್ದು ಮಾಡಿದ್ವು. ಐಪಿಎಲ್ ಟೂರ್ನಿ ಶುರುವಾದ ಬಳಿಕ ಕನ್ನಡ ಚಿತ್ರರಂಗ ಮತ್ತಷ್ಟು ಸೈಲೆಂಟ್ ಆಗಿಬಿಡ್ತು. ಇತ್ತ ಓಟಿಟಿಯಲ್ಲಿ ಕೂಡ ಕನ್ನಡ ಸಿನಿಮಾ, ವೆಬ್ ಸೀರಿಸ್ ಸಂಖ್ಯೆ ಕಮ್ಮಿ ಆಗಿಬಿಡ್ತು.

ಈ ವಾರ ಸದ್ದಿಲ್ಲದೇ ಹಾರರ್ ಕಾಮಿಡಿ ಸಿನಿಮಾ 'ಸೀಟ್‌ಎಡ್ಜ್' ಓಟಿಟಿಗೆ ಬಂದಿದೆ. ಕಳೆದೆರಡು ದಿನಗಳಿಂದ ಸ್ಟ್ರೀಮಿಂಗ್ ಆರಂಭಿಸಿದೆ. ಜನವರಿ 30ರಂದು ತೆರೆಗೆ ಬಂದಿದ್ದ ಸಿನಿಮಾ ಈಗ ಅಮೇಜಾನ್ ಪ್ರೈಂ ವೀಡಿಯೋದಲ್ಲಿ ವೀಕ್ಷಣೆಗೆ ಲಭ್ಯವಿದೆ. ಸಿದ್ದು ಮೂಲಿಮನಿ ಹಾಗೂ ರವೀಕ್ಷಾ ಶೆಟ್ಟಿ ಚಿತ್ರದ ಲೀಡ್ ರೋಲ್‌ಗಳಲ್ಲಿ ನಟಿಸಿದ್ದಾರೆ. ರಘು ರಾಮನಕೊಪ್ಪ, ಗಿರೀಶ್ ಶಿವಣ್ಣ, ಮಿಮಿಕ್ರಿ ಗೋಪಿ, ಕಿರಣ್, ಪುನೀತ್ ತಾರಾಗಣದಲ್ಲಿದ್ದಾರೆ.

Latest Kannada horror comedy film now steaming in OTT

ಕಥೆ, ಚಿತ್ರಕಥೆ ಬರೆದು ಚೇತನ್ ಶೆಟ್ಟಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಡಾರ್ಕ್ ಕಾಮಿಡಿ ಜೊತೆಗೆ ಹಾರರ್-ಥ್ರಿಲ್ಲರ್ ಅಂಶಗಳು ಚಿತ್ರದಲ್ಲಿದೆ. 'ಸೀಟ್‌ಎಡ್ಜ್' ಸಿನಿಮಾ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಇದೀಗ ಓಟಿಟಿಯಲ್ಲಿ ವೀಕ್ಷಕರ ಮನಗೆದ್ದಿದೆ. ವೀಕೆಂಡ್‌ನಲ್ಲಿ ಮನೆಯಲ್ಲೇ ಸಿನಿಮಾ ನೋಡಿ ಎಂಜಾಯ್ ಮಾಡಬಹುದು. ಸೋಶಿಯಲ್ ಮೀಡಿಯಾ, ಯೂಟ್ಯೂಬ್ ಕಂಟೆಂಟ್, ವ್ಲಾಗ್ ವೀಡಿಯೋ ಸುತ್ತಾ ಸುತ್ತುವ ಸಿನಿಮಾ ಇದು. ಯೂಟ್ಯೂಬ್‌ನಲ್ಲಿ ಲೈಕ್ಸ್, ವೀವ್ಸ್‌ಗಾಗಿ ವ್ಲಾಗರ್ಸ್ ಏನೆಲ್ಲಾ ಸರ್ಕಸ್ ಮಾಡ್ತಾರೆ ಎನ್ನುವುದನ್ನು ಚಿತ್ರದಲ್ಲಿ ಹೇಳಲಾಗಿದೆ.

ಯಾರು ಹೋಗದ ಬಹಳ ಭಯಾನಕ ಜಾಗವನ್ನು ತಮ್ಮ ಯೂಟ್ಯೂಬ್‌ನಲ್ಲಿ ವೀಕ್ಷಕರಿಗೆ ತೋರಿಸಲು ಸಿದ್ದು ಮುಂದಾಗುತ್ತಾನೆ. ಅದಕ್ಕಾಗಿ ಹಠಕ್ಕೆ ಬಿದ್ದು ಘೋಸ್ಟ್‌ ಟೌನ್‌ಗೆ ಹೋಗಿ ಘೋಸ್ಟ್ ಹಂಟಿಂಗ್ ವೀಡಿಯೋ ಮಾಡುವ ಪ್ರಯತ್ನಕ್ಕೆ ಕೈ ಹಾಕುತ್ತಾನೆ. ಬಳಿಕ ಅಲ್ಲಿ ಸಮಸ್ಯೆಗೆ ಸಿಲುಕಿ ಏನೆಲ್ಲಾ ಆಗುತ್ತದೆ ಎನ್ನುವುದು 'ಸೀಟ್‌ ಎಡ್ಜ್' ಚಿತ್ರದ ಕಥೆ. ಮೊದಲಾರ್ಧ ತಮಾಷೆಯಾಗಿ ನಗಿಸುವ ಸಿನಿಮಾ ದ್ವಿತಿಯಾರ್ಧ ಭಯ ಹುಟ್ಟಿಸುತ್ತದೆ.

ಎನ್.ಆರ್. ಸಿನಿಮಾ ಪ್ರೊಡಕ್ಷನ್ಸ್ ಬ್ಯಾನರ್‌ ಅಡಿಯಲ್ಲಿ ಗಿರಿಧರ ಟಿ. ವಸಂತಪುರ ಮತ್ತು ಸುಜಾತ ಗಿರಿಧರ ಈ ಚಿತ್ರವನ್ನು ನಿರ್ಮಿಸಿದ್ದರು. 'ಕೆಮಿಸ್ಟ್ರಿ ಆಫ್ ಕರಿಯಪ್ಪ' ಹಾಗೂ 'ಕ್ರಿಟಿಕಲ್ ಕೀರ್ತನೆಗಳು' ಚಿತ್ರಗಳಿಗೆ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದ ಚೇತನ್ ಶೆಟ್ಟಿ ನಿರ್ದೇಶನದ ಚೊಚ್ಚಲ ಸಿನಿಮಾ ಇದು. ಆಕಾಶ್ ಪರ್ವ ಸಂಗೀತದಲ್ಲಿ 'ಹಂಗೋ ಹಿಂಗೋ' ಸಾಂಗ್ ಸಿಕ್ಕಾಪಟ್ಟೆ ವೈರಲ್ ಆಗಿತ್ತು.

45 ದಿನಗಳ ಕಾಲ ಬೆಂಗಳೂರು, ಮೈಸೂರು, ಶಿವಮೊಗ್ಗ ಸುತ್ತಮುತ್ತ 'ಸೀಟ್‌ ಎಡ್ಜ್' ಸಿನಿಮಾ ಚಿತ್ರೀಕರಣ ನಡೆದಿತ್ತು. ದೀಪಕ್ ಕುಮಾರ್ ಜೆಕೆ ಛಾಯಾಗ್ರಹಣ ಹಾಗೂ ನಾಗೇಂದ್ರ ಉಜ್ಜನಿ ಸಂಕಲನ ಈ ಹಾರರ್ ಕಾಮಿಡಿ ಚಿತ್ರಕ್ಕಿತ್ತು. ಈ ವಾರ ಓಟಿಟಿಗೆ ಬರಬೇಕಿದ್ದ ಧ್ರುವ ಸರ್ಜಾ ನಟನೆಯ 'ಕೆಡಿ' ಸಿನಿಮಾ ಒಂದು ವಾರ ತಡವಾಗಿ ಸ್ಟ್ರೀಮಿಂಗ್ ಆಗಲಿದೆ. ಹಾಗಾಗಿ ಈ ವೀಕೆಂಡ್ 'ಸೀಟ್ ಎಡ್ಜ್' ಸಿನಿಮಾ ಓಟಿಟಿಯಲ್ಲಿ ಕನ್ನಡ ಸಿನಿರಸಿಕರಿಗೆ ಮನರಂಜನೆ ಉಣಬಡಿಸಲಿದೆ.

Read more about: sandalwood kannada comedy
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X