ಹೊಚ್ಚ ಹೊಸ ಕನ್ನಡ ಸಿನಿಮಾ ಓಟಿಟಿಗೆ ಬಂದಿದೆ; ಈಗ್ಲೇ ನೋಡಿ ಎಂಜಾಯ್ ಮಾಡಿ

ಐಪಿಎಲ್ ನಡುವೆಯೂ ಈ ವಾರ ಒಂದಷ್ಟು ಸಿನಿಮಾಗಳು ತೆರೆಗಪ್ಪಳಿಸಿವೆ. ಕನ್ನಡ 'ಮನದ ಕಡಲು', ಮಲಯಾಳಂನ 'ಎಂಪುರಾನ್' ಸಿನಿಮಾ ಪ್ರೇಕ್ಷಕರನ್ನು ರಂಜಿಸುತ್ತಿದೆ. ತಮಿಳಿನ 'ವೀರ ಧೀರ ಸೂರನ್' ಬಿಡುಗಡೆ ಕೊಂಚ ಗೊಂದಲದಿಂದ ಕೂಡಿತ್ತು. ಅಂತೂ ಇಂತೂ ವಿಕ್ರಂ ನಟನೆಯ ಆ ಸಿನಿಮಾ ಕೂಡ ತೆರೆಗೆ ಬಂದಿದೆ.

ತೆಲುಗಿನ 'ರಾಬಿನ್ ಹುಡ್' ಸಿನಿಮಾ ಕೂಡ ಬಿಡುಗಡೆಯಾಗಿದೆ. ಭಾನುವಾರ(ಮಾರ್ಚ್ 30) ಈದ್ ಸಂಭ್ರಮದಲ್ಲಿ ಸಲ್ಮಾನ್ ಖಾನ್ ನಟನೆಯ 'ಸಿಕಂದರ್' ಸಿನಿಮಾ ತೆರೆಗೆ ಬರ್ತಿದೆ. ಒಟ್ಟಾರೆ ವೀಕೆಂಡ್‌ನಲ್ಲಿ ಸಿನಿರಸಿಕರಿಗೆ ಭರ್ಜರಿ ಮನರಂಜನೆಯೇ ಕಾದಿದೆ. ಆದರೂ ಕೆಲವರು ಐಪಿಎಲ್ ಸಂಭ್ರಮದಲ್ಲಿ ಕಳೆದು ಹೋಗಿದ್ದಾರೆ. ಚಿತ್ರಮಂದಿರಕ್ಕೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ.

Latest Kannada horror comedy film now streaming in Ott

ಇದೆಲ್ಲಾ ಈ ವಾರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿರುವ ಸಿನಿಮಾಗಳ ಕಥೆಯಾಯಿತು. 'ಮುಫಾಸಾ: ದಿ ಲಯನ್ ಕಿಂಗ್', 'ದೇವ', 'ಮಜಾಕಾ' ಸೇರಿ ಒಂದಷ್ಟು ಸಿನಿಮಾಗಳು ಓಟಿಟಿಗೆ ಎಂಟ್ರಿ ಕೊಟ್ಟಿವೆ. ವೀಕೆಂಡ್ ಮನೆಯಲ್ಲೇ ಕೂತು ಇಂಟ್ರೆಸ್ಟಿಂಗ್ ಸಿನಿಮಾ, ವೆಬ್ ಸೀರಿಸ್ ವೀಕ್ಷಿಸಬಹುದು. ಕನ್ನಡದ ಒಂದು ಹಿಟ್ ಸಿನಿಮಾ ಕೂಡ ಸದ್ದಿಲ್ಲದೇ ಓಟಿಟಿಗೆ ಎಂಟ್ರಿ ಕೊಟ್ಟಿದೆ.

ಕನ್ನಡ ಸಿನಿಮಾಗಳು ಓಟಿಟಿಗೆ ಬರೋದು ಗೊತ್ತಾಗುವುದೇ ಇಲ್ಲ. ಅದ್ಯಾಕೋ ಯಾವುದೇ ಅಪ್‌ಡೇಟ್ ಇಲ್ಲದೇ ಕನ್ನಡ ಸಿನಿಮಾಗಳನ್ನು ಡಿಜಿಟಲ್ ಪ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮಿಂಗ್ ಮಾಡುತ್ತಾರೆ. ಸದ್ಯ ಹಾರರ್ ಕಾಮಿಡಿ ಥ್ರಿಲ್ಲರ್ 'ಛೂ ಮಂತರ್' ಸಿನಿಮಾ ಓಟಿಟಿಗೆ ಲಗ್ಗೆ ಇಟ್ಟಿದೆ. ಈಗಾಗಲೇ ಕೆಲವರು ಸಿನಿಮಾ ನೋಡಿ ಎಂಜಾಯ್ ಮಾಡುತ್ತಿದ್ದಾರೆ. ವೀಕೆಂಡ್ ನೀವು ಮನೆಯಲ್ಲೇ ಕೂತು ಶರಣ್ ಹಾಗೂ ಚಿಕ್ಕಣ್ಣ ಕಾಮಿಡಿ ಮಜಾ ಅನುಭವಿಸಿ.

Latest Kannada horror comedy film now streaming in Ott

ಈ ವರ್ಷ ಮೊದಲು ಹಿಟ್ ಲಿಸ್ಟ್ ಸೇರಿದ ಕನ್ನಡ ಸಿನಿಮಾ 'ಛೂ ಮಂತರ್'. ತರುಣ್ ಶಿವಪ್ಪ ನಿರ್ಮಾಣದ ಈ ಚಿತ್ರವನ್ನು 'ಕರ್ವ' ಸಿನಿಮಾ ಖ್ಯಾತಿಯ ನವನೀತ್ ಕಟ್ಟಿಕೊಟ್ಟಿದ್ದಾರೆ. ಸಂಕ್ರಾಂತಿ ಸಂಭ್ರಮದಲ್ಲಿ ಜನವರಿ 10ಕ್ಕೆ ಬಂದಿದ್ದ ಸಿನಿಮಾ ಯಶಸ್ವಿಯಾಗಿ 25 ದಿನ ಪೂರೈಸಿತ್ತು. 50 ದಿನಗಳ ಕಾಲ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಂಡ ಬಳಿಕ ಇದೀಗ ಓಟಿಟಿಗೆ ಬಂದಿದೆ.

ಶರಣ್ ಹಾಗೂ ಚಿಕ್ಕಣ್ಣ ಜೊತೆಗೆ ಅದಿತಿ ಪ್ರಭುದೇವ, ಮೇಘನಾ ಗಾವ್ಕಂರ್, ಪ್ರಭು ಮುಂಡ್ಕರ್, ಗುರುಕಿರಣ್, ಓಂ ಪ್ರಕಾಶ್ ರಾವ್, ಪ್ರಥಮ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಚಂದನ್ ಶೆಟ್ಟಿ ಹಾಗೂ ಅವಿನಾಶ್ ಬಸುಟ್ಕರ್ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದು ಅನೂಪ್ ಕುಟ್ಟುಕರನ್ ಚಿತ್ರವನ್ನು ಸೆರೆ ಹಿಡಿದಿದ್ದಾರೆ. ಬಹಳ ಅದ್ಧೂರಿಯಾಗಿ ಸಿನಿಮಾ ಮೂಡಿ ಬಂದಿದೆ.

ಟ್ವಿಸ್ಟ್ ಮೇಲೆ ಟ್ವಿಸ್ಟ್ ಕೊಡುತ್ತಾ 'ಛೂ ಮಂತರ್' ಕಥೆಯನ್ನು ನವನೀತ್ ತೆರೆಗೆ ತಂದಿದ್ದಾರೆ. ಬಹುತೇಕ ಹಾರರ್ ಸಿನಿಮಾಗಳಲ್ಲಿ ಇರುವಂತೆ ಈ ಚಿತ್ರದಲ್ಲಿ ಕೂಡ ಒಂದು ಭೂತ ಬಂಗಲೆ, ಅಲ್ಲಿ ಚಿತ್ರವಿಚಿತ್ರ ಸಮಸ್ಯೆಗಳಿವೆ. ಉತ್ತರಾಖಂಡದ ನೈನಿತಾಲ್‌ನಲ್ಲಿರುವ ಮಾರ್ಗನ್ ಹೌಸ್ ಸುತ್ತಾ ಕಥೆ ಸಾಗುತ್ತದೆ. ಅಲ್ಲಿ ನಿಧಿ ಇದೆ ಎನ್ನುವ ವಿಚಾರ ಗೊತ್ತಾಗುತ್ತದೆ.

ಛೂಮಂತರ್ ಆ್ಯಂಡ್ ಕಂಪನಿ ಘೋಸ್ಟ್ ಹಂಟರ್ ತಂಡದ ಸದಸ್ಯರಾದ ಡೈನಮೊ (ಶರಣ್), ಆರ್ ಜೆ (ಚಿಕ್ಕಣ್ಣ), ಆಕಾಂಕ್ಷಾ (ಅದಿತಿ) ಮತ್ತು ನಕುಲ್ ಆ ಮನೆಗೆ ಎಂಟ್ರಿ ಕೊಡುವ ಮೂಲಕ ಕಥೆಗೆ ತಿರುವು ಸಿಗುತ್ತದೆ. ಅಷ್ಟಕ್ಕೂ ಮಾರ್ಗನ್ ಹೌಸ್ ಹಿನ್ನೆಲೆ ಏನು? ಆ ಮನೆಯಲ್ಲಿ ಸತ್ತವರ ಸಂಖ್ಯೆ ಎಷ್ಟು? ಅಲ್ಲಿನ ಅತೃಪ್ತ ಆತ್ಮಗಳ ವ್ಯಥೆ ಏನು? ಡೈನಮೊ ಆ ಮನೆಯ ಸಮಸ್ಯೆ ಪರಿಹರಿಸುತ್ತಾನಾ? ಎನ್ನುವುದು ಇನ್ನುಳಿದ ಕಥೆ.

ಅಮೇಜಾನ್ ಪ್ರೈಂ ವೀಡಿಯೋದಲ್ಲಿ 'ಛೂ ಮಂತರ್' ಸಿನಿಮಾ ಸ್ಟ್ರೀಮಿಂಗ್ ಆಗುತ್ತಿದೆ. ಟೆಕ್ನಿಕಲಿ ಸಿನಿಮಾ ಸಿಕ್ಕಾಪಟ್ಟೆ ಚೆನ್ನಾಗಿದೆ. ಬಹಳ ದಿನಗಳ ಬಳಿಕ ಕನ್ನಡದಲ್ಲಿ ಬಂದಿರುವ ಒಂದೊಳ್ಳೆ ಹಾರರ್ ಸಿನಿಮಾ ಇದು. ಶರಣ್, ಚಿಕ್ಕಣ್ಣ ಇದ್ದಾರೆ ಅಂದ್ಮೇಲೆ ಕಾಮಿಡಿಗೆ ಬರ ಇಲ್ಲ. ಸಿನಿಮಾ ಕ್ಲೈಮ್ಯಾಕ್ಸ್‌ನಲ್ಲಿ ಒಂದು ಟ್ವಿಸ್ಟ್ ಕೂಡ ಇದೆ. ಅದು ಏನು? ಎನ್ನುವುದನ್ನು ನೀವೆ ಸಿನಿಮಾ ನೋಡಿ ತಿಳಿದುಕೊಳ್ಳಬೇಕು.

ಕನ್ನಡ ಸಿನಿಮಾಗಳು ಓಟಿಟಿಗೆ ಬರೋದೆ ಕಮ್ಮಿ. ಆಗೊಮ್ಮೆ ಹೀಗೊಮ್ಮೆ ಹಿಟ್ ಸಿನಿಮಾಗಳು ಬರುತ್ತವೆ. ಕಳೆದ ವಾರ 'ನೋಡಿದವರು ಏನಂತಾರೆ' ಸಿನಿಮಾ ಪ್ರೈಂ ವೀಡಿಯೋಗೆ ಬಂದಿತ್ತು. ಈಗ 'ಛೂ ಮಂತರ್' ಸರದಿ.

More from Filmibeat

English summary
Check out the recent hit Kannada horror-comedy film, now live on OTT;
Read more about: kannada sharan
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X