ವಾರದ ಆರಂಭದಲ್ಲೇ ಎರಡು ಕನ್ನಡ ಚಿತ್ರಗಳು ಓಟಿಟಿಗೆ ಎಂಟ್ರಿ, ಈಗ್ಲೇ ನೋಡಿ

ದಸರಾ ಸಂಭ್ರಮದಲ್ಲಿ ಸಿನಿರಸಿಕರು 'ಕಾಂತಾರ- 1' ಸಿನಿಮಾ ಗುಂಗಿನಲ್ಲಿ ಇದ್ದಾರೆ. ಈಗಾಗಲೇ ಸಾಕಷ್ಟು ಜನ ಮೊದಲ ದಿನವೇ ಸಿನಿಮಾ ನೋಡಲು ಕಾತರದಿಂದ ಕಾಯುತ್ತಿದ್ದಾರೆ. ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಕೂಡ ಶುರುವಾಗಿದೆ. ಒಂದು ದಿನ ಮೊದಲೇ ಪ್ರೀಮಿಯರ್ ಶೋಗಳು ಆರಂಭವಾಗಲಿದೆ. ಇದೆಲ್ಲದರ ನಡುವೆ ಓಟಿಟಿಯಲ್ಲಿ 2 ಕನ್ನಡ ಚಿತ್ರಗಳು ಬಂದಿವೆ.

ಈ ವಾರ ಕನ್ನಡ, ತೆಲುಗು, ಹಿಂದಿ, ತಮಿಳು, ಮಲಯಾಳಂ ಹಾಗೂ ಇಂಗ್ಲೀಷ್ ಭಾಷೆಯ ಸಿನಿಮಾ ಹಾಗೂ ವೆಬ್ ಸೀರಿಸ್‌ಗಳು ವಿವಿಧ ಓಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಸ್ಟ್ರೀಮಿಂಗ್‌ಗೆ ಸಜ್ಜಾಗಿದೆ. ಕನ್ನಡ ಸಿನಿಮಾಗಳ ಬಗ್ಗೆ ಓಟಿಟಿ ಸಂಸ್ಥೆಗಳ ಮಲತಾಯಿ ಧೋರಣೆ ಮುಂದುವರೆದಿದೆ. ಚಿತ್ರಮಂದಿರಗಳಲ್ಲಿ ಗೆಲ್ಲುವ ಸಿನಿಮಾಗಳನ್ನು ಕೊಂಡುಕೊಳ್ಳಲು ಹಿಂದುಮುಂದು ನೋಡುತ್ತಾರೆ.

Latest Released two Kannada movies now streaming in Ott

ಕಳೆದ ವಾರ 'ಮಾದೇವ' ಹಾಗೂ 'ದೂರತೀರಯಾನ' ಚಿತ್ರಗಳು ಓಟಿಟಿಗೆ ಬಂದಿತ್ತು. 'ಜ್ಯೂನಿಯರ್' ಕೂಡ ಸ್ಟ್ರೀಮಿಂಗ್ ಆಗಬೇಕಿತ್ತು. ಆದರೆ ಕಾರಣಾಂತರಗಳಿಂದ ಮುಂದೂಡಲಾಗಿತ್ತು. ಇದೀಗ 3 ಓಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಸಿನಿಮಾ ಬಿಡುಗಡೆಯಾಗಿದೆ. ಕನ್ನಡ ಹಾಗೂ ತೆಲುಗಿನಲ್ಲಿ ಏಕಕಾಲಕ್ಕೆ ಈ ಸಿನಿಮಾ ತೆರೆಗೆ ಬಂದಿತ್ತು.

ಜ್ಯೂನಿಯರ್

ಮಾಜಿ ಸಚಿವ ಜನಾರ್ಧನ ರೆಡ್ಡಿ ಒಉತ್ರ ಕಿರೀಟ ನಟನೆಯ ಚೊಚ್ಚಲ ಸಿನಿಮಾ ಇದು. ಹೊಸ ನಟನ ಸಿನಿ ಆರಂಗೇಟ್ರಂಗೆ ಬೇಕಾದಂತೆ ಈ ಚಿತ್ರವನ್ನು ತಿದ್ದಿ ತೀಡಲಾಗಿತ್ತು. ಕಿರೀಟಿ ಜೋಡಿಯಾಗಿ ಶ್ರೀಲೀಲಾ ಮಿಂಚಿದ್ದಾರೆ. ಕ್ರೇಜಿಸ್ಟಾರ್ ರವಿಚಂದ್ರನ್, ಸುಧಾರಾಣಿ, ಅಚ್ಯುತ್ ಕುಮಾರ್ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ. ರಾಧಾಕೃಷ್ಣ ರೆಡ್ಡಿ ಈ ಫ್ಯಾಮಿಲಿ ಆಕ್ಷನ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.

ವಾರಾಹಿ ಚಲನಚಿತ್ರಂ ಬ್ಯಾನರ್ ಅಡಿಯಲ್ಲಿ ಸಾಯಿ ಕೊರಪಾಟಿ 'ಜ್ಯೂನಿಯರ್' ಚಿತ್ರ ನಿರ್ಮಾಣ ಮಾಡಿದ್ದಾರೆ. ಬೆಂಗಳೂರಿನಲ್ಲಿ ನಡೆದಿದ್ದ ಚಿತ್ರದ ಮುಹೂರ್ತ ಸಮಾರಂಭಕ್ಕೆ ರಾಜಮೌಳಿ ಮುಖ್ಯ ಅತಿಥಿಯಾಗಿ ಬಂದು ಶುಭ ಹಾರೈಸಿದ್ದರು. ಡ್ಯಾನ್ಸ್, ಫೈಟ್, ಆಕ್ಟಿಂಗ್ ಎಲ್ಲವನ್ನು ಕಲಿತು ಕಿರೀಟಿ ಚಿತ್ರರಂಗ ಪ್ರವೇಶಿಸಿದ್ದರು. ಡ್ಯಾನ್ಸ್ ಹಾಗೂ ಸ್ಟಂಟ್ಸ್ ವಿಚಾರದಲ್ಲಿ ಕಮಾಲ್ ಮಾಡಿದ್ದಾರೆ.

Latest Released two Kannada movies now streaming in Ott

ತೆಲುಗಿನಲ್ಲಿ 'ಜ್ಯೂನಿಯರ್' ಸಿನಿಮಾ ಸದ್ದು ಮಾಡಿತ್ತು. ಕನ್ನಡದಲ್ಲಿ ಓಕೆ ಓಕೆ ಎನಿಸಿಕೊಂಡಿತ್ತು. ಸದ್ಯ 'ಜ್ಯೂನಿಯರ್' ಸಿನಿಮಾ ತೆಲುಗು ವರ್ಷನ್ ಅಮೇಜಾನ್ ಪ್ರೈಂ ಹಾಗೂ ಅಹಾ ಓಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಆದರೆ ಕನ್ನಡ ವರ್ಷನ್ ರೈಟ್ಸ್ ಪ್ರೈಂ ವೀಡಿಯೋ ಕೊಂಡುಕೊಂಡಿಲ್ಲ. 'ನಮ್ಮ ಫ್ಲಿಕ್ಸ್' ಓಟಿಟಿಯಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗುವಂತಾಗಿದೆ.

ಗೌರಿಶಂಕರ

ರವಿಚಂದ್ರನ್ ಹಾಗೂ ಅಪೂರ್ವ ನಟನಿಸಿದ್ದ 'ಗೌರಿಶಂಕರ' ಸಿನಿಮಾ ತೆರೆಗೆ ಬಂದಿದ್ದು ಬಹಳ ಜನರಿಗೆ ಗೊತ್ತೇ ಆಗಲಿಲ್ಲ. ಯಾವುದೇ ಪ್ರಚಾರ ಇಲ್ಲದೇ ಚಿತ್ರವನ್ನು ಬಿಡುಗಡೆ ಮಾಡಿದ್ದರು. ಪ್ರೇಕ್ಷಕರು ಕೂಡ 'ಗೌರಿಶಂಕರ'ನ ಕೈಹಿಡಿಯಲಿಲ್ಲ. ಇದೀಗ (ಅಕ್ಟೋಬರ್ 1) ಸಿನಿಮಾ ಸನ್‌ ನೆಕ್ಸ್ಟ್ ಓಟಿಟಿಯಲ್ಲಿ ಬಿಡುಗಡೆಯಾಗ್ತಿದೆ.

ಎರಡು ವರ್ಷಗಳ ಹಿಂದೆ 'ಗೌರಿಶಂಕರ' ಸಿನಿಮಾ ಶುರುವಾಗಿತ್ತು. ಚಿತ್ರೀಕರಣ ಸಹ ಮುಗಿದಿತ್ತು. ಆದರೆ ಟಿವಿ ರೈಟ್ಸ್ ಯಾರು ಕೊಂಡುಕೊಂಡಿರಲಿಲ್ಲ. ಇತ್ತೀಚೆಗೆ ಟಿವಿ ರೈಟ್ಸ್ ಮಾರಾಟ ಆಗಿದ್ದರಿಂದ ದಿಢೀರನೆ ಸಿನಿಮಾ ಬಿಡುಗಡೆ ಮಾಡಿದ್ದರು. ಮೂರೂವರೆ ಕೋಟಿ ವೆಚ್ಚದಲ್ಲಿ ಈ ಸಿನಿಮಾ ನಿರ್ಮಾಣ ಆಗಿತ್ತು. ಹಳೆಯ ಸಿನಿಮಾ ಆಗಿರುವುದರಿಂದ ಪ್ರಚಾರ ಮಾಡಿದ್ದರೂ ಜನರ ಬರುವುದು ಅನುಮಾನ ಅದಕ್ಕೆ ಮಾಡಲಿಲ್ಲ, ಎಂದು ನಿರ್ಮಾಪಕ ಎನ್‌. ಎಸ್ ರಾಜ್‌ಕುಮಾರ್ ಸುವರ್ಣ ನ್ಯೂಸ್‌ಗೆ ಮಾಹಿತಿ ನೀಡಿದ್ದರು. ಅನೀಸ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.

ತಮಿಳಿನ 'ಮದರಾಸಿ' ಸಿನಿಮಾ ಅಕ್ಟೋಬರ್ 1ರಂದು ಪ್ರೈಮ್ ವೀಡಿಯೋಗೆ ಬರ್ತಿದೆ. ರುಕ್ಮಿಣಿ ವಸಂತ್ ನಾಯಕಿಯಾಗಿ ನಟಿಸಿರುವ ಕನ್ನಡಕ್ಕೂ ಡಬ್ ಆಗಿ ಸ್ಟ್ರೀಮಿಂಗ್ ಆಗಲಿದೆ. 'ಲಿಟಲ್ ಹಾರ್ಟ್ಸ್' ಎಂಬ ತೆಲುಗು ಸಿನಿಮಾ ಈಟಿವಿವಿನ್ ಓಟಿಟಿಗೆ ಬರ್ತಿದೆ.

More from Filmibeat

Read more about: ravichandran sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X