OTT Releases This Week: ಈ ವಾರ ಓಟಿಟಿಗೆ ಬರ್ತಿರೋ ಇಂಟ್ರೆಸ್ಟಿಂಗ್ ಸಿನಿಮಾ, ಸೀರಿಸ್ ಲಿಸ್ಟ್

ಬಾಕ್ಸಾಫೀಸ್‌ನಲ್ಲಿ 'ವೆಟ್ಟೆಯಾನ್', 'ಮಾರ್ಟಿನ್' ಹಾಗೂ 'ಜಿಗ್ರಾ' ಸಿನಿಮಾಗಳ ಆರ್ಭಟ ಮುಂದುವರೆದಿದೆ. ದಸರಾ ಸಂಭ್ರಮ ಮುಗಿದು ಮತ್ತೊಂದು ವೀಕೆಂಡ್ ಹತ್ತಿರವಾಗ್ತಿದೆ. ಈ ವಾರ ಯಾವುದೇ ದೊಡ್ಡ ಸಿನಿಮಾ ತೆರೆಗೆ ಬರ್ತಿಲ್ಲ. ದೀಪಾವಳಿ ಸಡಗರಕ್ಕೆ ಸಿಡಿಯಲು ಒಂದಷ್ಟು ಚಿತ್ರಗಳು ಸಜ್ಜಾಗುತ್ತಿವೆ. ಇತ್ತ ಓಟಿಟಿಯಲ್ಲಿ ಒಂದಷ್ಟು ಸಿನಿಮಾ, ಸೀರಿಸ್ ವೀಕೆಂಡ್‌ಗೆ ವೀಕ್ಷಕರನ್ನು ರಂಜಿಸಲಿವೆ.

ಕಳೆದ ವಾರ ಕನ್ನಡದ 'ಪೆಪೆ' ಸಿನಿಮಾ ಪ್ರೈಂ ವೀಡಿಯೋಗೆ ಬಂದಿತ್ತು. ಕ್ಲಾಂತ ಎನ್ನುವ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಸದ್ಯ ಸ್ಟ್ರೀಮಿಂಗ್ ಆರಂಭಿಸಿದೆ. ಆದರೆ ಸದ್ಯಕ್ಕೆ ಹಣ ಪಾವತಿಸಿ ಈ ಚಿತ್ರ ನೋಡಲು ಅವಕಾಶವಿದೆ. ಶೀಘ್ರದಲ್ಲೇ ಉಚಿತವಾಗಿ ಸಿನಿಮಾ ವೀಕ್ಷಣೆಗೆ ಸಿಗಲಿದೆ. ಇನ್ನು ಈ ವಾರ ಪ್ರಮೋದ್ ಶೆಟ್ಟಿ ನಟನೆಯ 'ಲಾಫಿಂಗ್ ಬುದ್ಧ' ಸಿನಿಮಾ ರಿಲೀಸ್ ಆಗುವುದು ಬಹುತೇಕ ಖಚಿತ ಎನ್ನಲಾಗ್ತಿದೆ.

Laughing Buddha to Kadaisi Ulaga por This week Ott release movies and web series list

ಇನ್ನುಳಿದಂತೆ ಸಾಕಷ್ಟು ಇಂಗ್ಲೀಷ್ ವೆಬ್ ಸೀರಿಸ್‌ಗಳು ಓಟಿಟಿಯಲ್ಲಿ ರಿಲೀಸ್ ಆಗಲಿದೆ. ಹಿಂದಿ, ತಮಿಳು ಸಿನಿಮಾಗಳು ಲಿಸ್ಟ್‌ನಲ್ಲಿದೆ. ಕೆಲ ಚಿತ್ರಗಳು ಕನ್ನಡಕ್ಕೂ ಡಬ್ ಆಗಿ ಬರ್ತಿವೆ.

ಅಮೇಜಾನ್ ಪ್ರೈಂ

1. 'ಲಾಫಿಂಗ್ ಬುದ್ಧ'

ರಿಷಬ್ ಶೆಟ್ಟಿ ನಿರ್ಮಾಣದ 'ಲಾಫಿಂಗ್ ಬುದ್ಧ' ಸಿನಿಮಾ ಆಗಸ್ಟ್ ಕೊನೆ ವಾರ ತೆರೆಗೆ ಬಂದಿತ್ತು. ಭರತ್ ರಾಜ್ ಎಂಬುವವರು ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ಚಿತ್ರದಲ್ಲಿ ಪೊಲೀಸ್ ಕಾನ್ಸ್‌ಸ್ಟೇಬಲ್ ಗೋವರ್ಧನ್ ಆಗಿ ಪ್ರಮೋದ್ ಶೆಟ್ಟಿ ಮಿಂಚಿದ್ದರು. ಡೊಳ್ಳು ಹೊಟ್ಟೆಯ ಪಿಸಿ ನೋವು ನಲಿವಿನ ಕಥೆ ಚಿತ್ರದಲ್ಲಿದೆ. ಕಾಮಿಡಿ ಟಚ್ ಕೊಟ್ಟು ಸಿನಿಮಾ ಕಟ್ಟಿಕೊಡಲಾಗಿದೆ. ಪ್ರೇಕ್ಷಕರಿಂದ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕರೂ ದೊಡ್ಡದಾಗಿ ಸಿನಿಮಾ ಗೆಲ್ಲಲಿಲ್ಲ. ಓಟಿಟಿಯಲ್ಲಿ ಚಿತ್ರಕ್ಕೆ ರೆಸ್ಪಾನ್ಸ್ ಹೇಗಿರುತ್ತೆ ಕಾದು ನೋಡಬೇಕಿದೆ. ಪ್ರೈಂ ವೀಡಿಯೋಗೆ ಸಿನಿಮಾ ಬರಲಿದೆ.

2. ಕಲ್ಟ್(ಫ್ರೆಂಚ್ ಸೀರಿಸ್) ಅಕ್ಟೋಬರ್ 18

3. ದ ಡೆವಿಲ್ಸ್ ಅವರ್ ಸೀಸನ್ -2(ವೆಬ್ ಸೀರಿಸ್) ಅಕ್ಟೋಬರ್ 18

4. ಸ್ನೇಕ್ಸ್ ಅಂಡ್ ಲ್ಯಾಡರ್ಸ್ (ವೆಬ್ ಸೀರಿಸ್) ಅಕ್ಟೋಬರ್ 18

5. ದ ಆಫೀಸ್ ಆಸ್ಟ್ರೇಲಿಯಾ (ವೆಬ್ ಸೀರಿಸ್) ಅಕ್ಟೋಬರ್ 18

6. ಕಡೈಸಿ ಉಳಗ ಪೊರ್(ತಮಿಳು ಸಿನಿಮಾ) ಅಕ್ಟೋಬರ್ 18

7. ದ ಪ್ರದೀಪ್ಸ್ ಆಫ್ ಪಿಟ್ಸ್‌ಬರೊ(ವೆಬ್ ಸೀರಿಸ್) ಅಕ್ಟೋಬರ್ 17

ನೆಟ್‌ಫ್ಲಿಕ್ಸ್

1. ಸ್ವೀಟ್ ಬಾಬಿ(ಇಂಗ್ಲೀಷ್ ಸಿನಿಮಾ) ಅಕ್ಟೋಬರ್ 16

2. ಗುಂಡಮ್ (ವೆಬ್ ಸೀರಿಸ್) ಅಕ್ಟೋಬರ್ 17

3. ಮೈಟಿ ಮಾನ್‌ಸ್ಟರ್ ವಿಲೀಸ್(ವೆಬ್ ಸೀರಿಸ್) ಅಕ್ಟೋಬರ್ 14

4. ಜುರಾಸಿಕ್ ವರ್ಲ್ಡ್ ಕೆವೊಸ್ ಥಿಯರಿ ಸೀಸನ್-2 (ವೆಬ್ ಸೀರಿಸ್) ಅಕ್ಟೋಬರ್ 17

5. ರೆಚಲ್ ಬ್ಲೂಮ್ (ಇಂಗ್ಲೀಷ್ ಸಿನಿಮಾ) ಅಕ್ಟೋಬರ್ 15

6. ಫ್ಯಾಬುಲಸ್ ಲೈವ್ಸ್ vs ಬಾಲಿವುಡ್ ವೈಫ್ಸ್(ವೆಬ್ ಸೀರಿಸ್) ಅಕ್ಟೋಬರ್ 18

7. ವುಮೆನ್ ಆಫ್ ದ ಅವರ್(ಇಂಗ್ಲೀಷ್ ಸಿನಿಮಾ) ಅಕ್ಟೋಬರ್ 18

Laughing Buddha to Kadaisi Ulaga por This week Ott release movies and web series list

ಜಿಯೋ ಸಿನಿಮಾ

1. ಹ್ಯಾಪಿಸ್ ಪ್ಲೇಸ್ (ಇಂಗ್ಲೀಷ್ ಸೀರಿಸ್) ಅಕ್ಟೋಬರ್ 19

2. ಕ್ರಿಸ್ಪಿ ರಿಸ್ತೆ(ಹಿಂದಿ ಸಿನಿಮಾ) ಅಕ್ಟೋಬರ್ 18

3. ಹಿಸ್ಟಿರಿಯಾ (ಇಂಗ್ಲೀಷ್ ಸಿನಿಮಾ) ಅಕ್ಟೋಬರ್ 19

ಆಪಲ್ ಪ್ಲಸ್ ಟಿವಿ

1. ಸ್ರಿಂಕಿಂಗ್ ಸೀಸನ್-2(ಇಂಗ್ಲೀಷ್ ಸೀರಿಸ್) ಅಕ್ಟೋಬರ್ 16

ಬುಕ್‌ ಮೈ ಶೋ

1. ಬೀಟಲ್ ಜ್ಯೂಸ್(ಇಂಗ್ಲೀಷ್ ಸಿನಿಮಾ) ಅಕ್ಟೋಬರ್ 18

ಡಿಸ್ನಿ ಹಾಟ್‌ಸ್ಟರ್

1. ರೈವಲ್ಸ್(ಇಂಗ್ಲಿಷ್ ಸೀರಿಸ್) ಅಕ್ಟೋಬರ್ 18

2. 1000 ಬೇಬಿಸ್(ವೆಬ್ ಸೀರಿಸ್) ಅಕ್ಟೋಬರ್ 18

3. ರೋಡ್ ಡೈರಿ(ಇಂಗ್ಲೀಷ್ ಸಿನಿಮಾ) ಅಕ್ಟೋಬರ್ 18

4. ರೀತಾ ಸನ್ಯಲ್(ಹಿಂದಿ ವೆಬ್ ಸೀರಿಸ್) ಅಕ್ಟೋಬರ್ 14

More from Filmibeat

English summary
Here is details about 20 New OTT Releases to Catch Up on This Weekend
Read more about: ott sandalwood kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X